ಪ್ರೀತಿಯ ಪುಸ್ತಕ : ಸಂಚಿಕೆ - 190
Friday, November 21, 2025
Edit
ಪ್ರೀತಿಯ ಪುಸ್ತಕ
ಸಂಚಿಕೆ - 190
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ಹಳ್ಳಿಯ ಐವತ್ತು-ಅರವತ್ತು ಹೆಂಗಸರು ಅರಳೀಮರದ ಕೆಳಗೆ ಸಭೆ ಸೇರಿದರು. ಗಂಡಸರಿಗೆ ಗಾಬರಿ, ಇವರು ಏನು ಮಾಡುತ್ತಾರೋ ಎಂದು. ಅವರಿಗೆ ಕಟ್ಟಿಗೆ ಮತ್ತು ಮೇವಿನ ಕೊರತೆ ಇತ್ತು. ಹಿಂದಿನ ದಿನ ಪಕ್ಕದ ಘಾಂಘರ್ ಗ್ರಾಮದಿಂದ ಕಟ್ಟಿಗೆ ಮೇವು ತರಲು ಹೋದಾಗ ಆ ಗ್ರಾಮದವರು ಇವರನ್ನು ಅವಮಾನ ಮಾಡಿದ್ದರು, ಕೆಟ್ಟದಾಗಿ ಜಗಳ ಮಾಡಿದ್ದರು. ಅದಕ್ಕಾಗಿ ಈ ಸಮಸ್ಯೆ ನಿವಾರಣೆಗಾಗಿ ಲೀಲಾಳ ನಾಯಕತ್ವದಲ್ಲಿ ಮಹಿಳೆಯರು ಸೇರಿದ್ದರು. ಗಂಡಸರಿಗೆ ಈ ಸಮಸ್ಯೆ ಹೆಚ್ಚು ಕಾಡಿರಲಿಲ್ಲ. ಮಹಿಳೆಯರಿಗಂತೂ ಇದು ಅತ್ಯಂತ ತುರ್ತಿನ ವಿಷಯವಾಗಿತ್ತು. ಮುಂದಿನ ದಾರಿ ಏನು ಎಂಬುದನ್ನು ಗಂಭೀರವಾಗಿ ಚರ್ಚಿಸಬೇಕಾಗಿತ್ತು. ಘಾಂಘರ್ ಗ್ರಾಮದವರಿಗೆ, ಅವರ ಪಕ್ಕದಲ್ಲೇ ಅಡವಿ ಇದ್ದು, ಅದರ ಮೇಲೆ ಅಧಿಕಾರವಿತ್ತು. ಆದರೆ ಲೀಲಾ ಊರಾದ ಥಲಿಯವರಿಗೆ ಏನೂ ಇರಲಿಲ್ಲ. ಈ ಹೆಣ್ಣು ಮಕ್ಕಳು ತಮ್ಮ ಆಸುಪಾಸಿನ ಜಮೀನನ್ನು ಹೇಗೆ ಫಲವತ್ತಾಗಿ ಮಾಡಿದರು ಎಂಬುದೇ ಇಲ್ಲಿಯ ಕಥೆ. ಮನಸ್ಸು ಮಾಡಿದರೆ ಎಂತಹಾ ಚಮತ್ಕಾರವನ್ನೂ ಮಾಡಬಹುದು ಅನ್ನುವುದಕ್ಕೆ ಲೀಲಾಳ ನಾಯಕತ್ವ ಮತ್ತು ಜನರ ಬೆಂಬಲವೇ ಸಾಕ್ಷಿ.
ಲೇಖಕರು : ಕೇಶವ ಚಂದ್ರ
ಚಿತ್ರಗಳು : ರಮಾ ಕನೌಜಿಯಾ
ಅನುವಾದ : ಚಿದಾನಂದ ಸಾಲಿ
ಪ್ರಕಾಶಕರು : ನ್ಯಾಶನಲ್ ಬುಕ್ ಟ್ರಸ್ಟ್, ಇಂಡಿಯಾ
ಬೆಲೆ : ರೂ.15/-
ಇದು 6- 7-8 + ತರಗತಿಯ ಮಕ್ಕಳಿಗೆ ಸೂಕ್ತವಾಗಿದೆ
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: www.nbtindia.gov.in
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 70908 01340
***************************************