-->
ಪ್ರೀತಿಯ ಪುಸ್ತಕ : ಸಂಚಿಕೆ - 188

ಪ್ರೀತಿಯ ಪುಸ್ತಕ : ಸಂಚಿಕೆ - 188

ಪ್ರೀತಿಯ ಪುಸ್ತಕ
ಸಂಚಿಕೆ - 188
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ 

       
                              ಉಪ್ಪಿನ ನಿರೀಕ್ಷಕ
ಪ್ರೀತಿಯ ಮಕ್ಕಳೇ... ಪ್ರೇಮಚಂದರು ಹಿಂದಿಯ ಮಹಾನ್ ಲೇಖಕ. ಪ್ರಾಮಾಣಿಕ ಅಧಿಕಾರಿಯ ಬಗ್ಗೆ ಬರೆದ ಮನ ತಟ್ಟುವ ಕಥೆ ಇದು. ಇದು ಬ್ರಿಟಿಷ್ ಆಳ್ವಿಕೆಯ ಕಾಲದ ಕಥೆ. ಉಪ್ಪಿನ ವ್ಯವಹಾರಕ್ಕಾಗಿ ಹೊಸ ಕಛೇರಿಯೇ ಆರಂಭವಾಗಿತ್ತು. ಉಪ್ಪಿನ ಬಳಕೆ ಮೇಲೆ ನಿರ್ಬಂಧ ಹೇರಲಾಗಿತ್ತು. ಆದರೆ ಜನ ಕದ್ದುಮುಚ್ಚಿ ಉಪ್ಪಿನ ವ್ಯಾಪಾರ ಮಾಡುತ್ತಿದ್ದರು. ವಂಶೀಧರ್ ಮುಂಶಿಯವರು ತಮ್ಮ ತಂದೆಯ ಆಣತಿಯಂತೆ ನೌಕರಿ ಹುಡುಕಿಕೊಂಡು ಹೊರಟಾಗ, ಅವರಿಗೆ ‘ಉಪ್ಪಿನ ನಿರೀಕ್ಷಕ’ ಕೆಲಸ ಸಿಕ್ಕಿತು. ಬಹಳ ಪ್ರಾಮಾಣಿಕವಾಗಿ ದುಡಿಯುತ್ತಿದ್ದರು. ಒಂದು ಸಾರಿ ಊರಿನ ದೊಡ್ಡ ಜಮೀನ್ದಾರನೊಬ್ಬ ಉಪ್ಪಿನ ಅವ್ಯವಹಾರ ಮಾಡುವುದನ್ನು ಕಂಡು ಅವರನ್ನು ತಡೆಗಟ್ಟಿದರು. ಜಮೀನ್ದಾರ ಅಲೋಪಿದೀನ್ ಸಾವಿರಗಟ್ಟಲೆ ಲಂಚ ಕೊಡುವುದಾಗಿ ಹೇಳಿದರೂ ಅದಕ್ಕೆ ಬಲಿಯಾಗಲಿಲ್ಲ. ಆದರೆ ಅತ್ಯಂತ ಪ್ರಭಾವಶಾಲಿಯಾಗಿದ್ದ ಅಲೋಪಿದೀನ್ ಕೋರ್ಟಿನಲ್ಲಿ ಗೆದ್ದುಬಿಟ್ಟ, ಹಾಗೂ ವಂಶೀಧರ ಇದಕ್ಕಾಗಿ ಕೆಲಸವನ್ನೇ ಕಳೆದುಕೊಂಡರು. ಆದರೆ ಕೊನೆಯಲ್ಲಿ ವಂಶೀಧರರ ಪ್ರಾಮಾಣಿಕತೆಯೇ ಅವರನ್ನು ಗೆಲ್ಲಿಸಿದ್ದು ಹೇಗೆ ಎಂಬುದು ಒಂದು ಆಸಕ್ತಿದಾಯಕ ತಿರುವು. 

ಲೇಖಕರು : ಪ್ರೇಮಚಂದ್
ಚಿತ್ರಗಳು: ದುರ್ಗಾ ದತ್ತ ಪಾಂಡೆ
ಅನುವಾದ: ತಿಪ್ಪೇಸ್ವಾಮಿ
ಪ್ರಕಾಶಕರು: ನ್ಯಾಶನಲ್ ಬುಕ್ ಟ್ರಸ್ಟ್ ಇಂಡಿಯಾ
ಬೆಲೆ: ರೂ.15/-

ಇದು 6- 7-8 + ತರಗತಿಯ ಮಕ್ಕಳಿಗೆ ಸೂಕ್ತವಾಗಿದೆ
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: www.nbtindia.gov.in
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 70908 01340
*************************************** 





Ads on article

Advertise in articles 1

advertising articles 2

Advertise under the article