ದೀಪಾವಳಿ ವಿಶೇಷ : ಮಕ್ಕಳ ಕವನಗಳು : ಸಂಚಿಕೆ - 60 ಕವನ ರಚನೆ : ಧನ್ವಿತಾ ಕಾರಂತ್, ಪ್ರಥಮ ಪಿಯುಸಿ
Tuesday, October 21, 2025
Edit
ದೀಪಾವಳಿ ವಿಶೇಷ
ಮಕ್ಕಳ ಕವನಗಳು : ಸಂಚಿಕೆ - 60
ಕವನ ರಚನೆ : ಧನ್ವಿತಾ ಕಾರಂತ್
ಪ್ರಥಮ ಪಿಯುಸಿ
ಶ್ರೀ ಸತ್ಯಸಾಯಿ ಲೋಕಸೇವಾ
ಪದವಿ ಪೂರ್ವ ಕಾಲೇಜು ಅಳಿಕೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಬೆಳಗಿದೆ ದೀಪಗಳಾವಳಿಯು
ಮೋಡದ ನಡುವಿನ ಮಿಂಚಿನ ತೆರದಲಿ
ಹರಿದಿದೆ ಸಂಭ್ರಮದೋಕುಳಿಯು
ಝಗಮಗಿಸಿದೆ ಜಗ ಚುಕ್ಕಿಗಳಂತೆ
ಮನೆಮನದಲಿ ಖುಷಿಯಾಗರವು
ಗಗನದಿ ಬೆಳಕಿನ ರಂಗಿನ ಚಿತ್ರ
ಮೂಡಿದೆ ವರ್ಣದ ಸಾಗರವು
ಹೊಸತನು ಧರಿಸುತ ಸಿಹಿಯನು ಸವಿಯುತ
ಗೋವಿನ ಪೂಜೆಯ ಮಾಡೋಣ
ಶುಭವನು ಕರುಣಿಸು ಮನವನು ಅರಳಿಸು
ಎನ್ನುತ ಜೊತೆಯಲಿ ನಲಿಯೋಣ
ಬಲಿಯದು ಭಕ್ತಿಗೆ ಮೆಚ್ಚಿದ ಶ್ರೀಹರಿ
ವಾಮನ ರೂಪವ ನೆನೆಯೋಣ
ಭಾಗ್ಯಲಕ್ಷ್ಮಿಗೆ ಆರತಿ ಬೆಳಗುತ
ಭಾಗ್ಯವ ನೀಡಲು ಬೇಡೋಣ
ಹರಡಿಹ ಕತ್ತಲ ಸರಿಸುತ ವಿಶ್ವದಿ
ಪ್ರೀತಿಯ ಜ್ಯೋತಿಯ ಬೆಳಗೋಣ
ನವಗೀತೆಗೆ ಶ್ರುತಿಯಾಗುತ ನಾವು
ದೀಪೋತ್ಸವದಲಿ ಮೀಯೋಣ
ಪ್ರಥಮ ಪಿಯುಸಿ,
ಶ್ರೀ ಸತ್ಯಸಾಯಿ ಲೋಕಸೇವಾ
ಪದವಿ ಪೂರ್ವ ಕಾಲೇಜು ಅಳಿಕೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************