ಪ್ರೀತಿಯ ಪುಸ್ತಕ : ಸಂಚಿಕೆ - 186
Saturday, October 25, 2025
Edit
ಪ್ರೀತಿಯ ಪುಸ್ತಕ
ಸಂಚಿಕೆ - 186
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.. ನಿಮಗೆ ಸ್ಪೂರ್ತಿ ಕೊಡಬಹುದಾದಂತಹ ಒಂದು ಕಥೆ ಇದು. ಇದನ್ನು ಒಂದು ಪುಟ್ಟ ಕಾದಂಬರಿ ಅನ್ನಬಹುದು. 13 ವರುಷದ ದಿವ್ಯಾ ಈಜುಗಾರ್ತಿ. ಗ್ರಾಮದ ಕೊಳದಲ್ಲಿ ಆಡುತ್ತಿರುತ್ತಾಳೆ. ಆಗಾಗ ಸ್ನೇಹಿತರ ಜೊತೆಗೆ ಜಗಳವಾಡುತ್ತಲೂ ಇರುತ್ತಾಳೆ. ಮನಸ್ಸನ್ನು ತಿಳಿಗೊಳಿಸುವ ಪ್ರಯತ್ನ ಕೂಡಾ ಮಾಡುತ್ತಿರುತ್ತಾಳೆ. ಈಜುವುದರಲ್ಲಿ ಬಹಳ ಮುಂದೆ ಹೋಗುವ ಅವಕಾಶವೊಂದು ಅವಳಿಗೆ ಸಿಗುತ್ತದೆ. ಪುಟ್ಟ ಹಳ್ಳಿಯಿಂದ ಅವಳನ್ನು ದೂರ ದೂರಕ್ಕೆ ಕರೆದೊಯ್ಯುತ್ತದೆ. ಅಲ್ಲಿ ಅವಳಿಗೆ ಮತ್ತೊಬ್ಬ ಈಜುಗಾರ್ತಿ ಅಂಬಿಕಾಳ ಗೆಳೆತನ ಸಿಗುತ್ತದೆ. ಆ ಗೆಳೆತನದಲ್ಲೂ ಏನೋ ಸಮಸ್ಯೆ ಆಗುತ್ತದೆ. ಆದರೆ ಕಥೆಯ ತಲೆಬರಹ ಹೇಳುವಂತೆ ಕೊನೆಗೂ ಅವಳು ಗೆಲ್ಲುತ್ತಾಳೆ. ಹೇಗೆ ಗೆಲ್ಲುತ್ತಾಳೆ? ಯಾವ ರೀತಿ ಗೆಲ್ಲುತ್ತಾಳೆ ಓದಿ ನೋಡಿ.
ಲೇಖಕರು : ನಿವೇಧಾ ಗಣೇಶ್
ಅನುವಾದ: ಸಂತೋಷ್ ತಾಮ್ರಪರ್ಣಿ
ಪ್ರಕಾಶಕರು: ಬಹುರೂಪಿ (ಇಂಗ್ಲಿಷಿನಲ್ಲಿ ಕರಡಿ ಟೇಲ್ಸ್ ಬಳಗ, ‘ಪೀಪಲ್ಸ್ ಆರ್ಕೇವ್ ಆಫ್ ರೂರಲ್ ಇಂಡಿಯಾ’ ಬಳಗದ ಪರಿಶ್ರಮದ ಫಲ ಈ ಪುಸ್ತಕ)
ಬೆಲೆ: ರೂ.125/-
ಇದು 6- 7-8 + ತರಗತಿಯ ಮಕ್ಕಳಿಗೆ ಸೂಕ್ತವಾಗಿದೆ,
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: Bahulipi: 7019182729/ 9535015489; contact.bahulipi@gmail.com; online book store – bahuroopi.in
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 70908 01340
***************************************