ಪ್ರೀತಿಯ ಪುಸ್ತಕ : ಸಂಚಿಕೆ - 185
Sunday, October 19, 2025
Edit
ಪ್ರೀತಿಯ ಪುಸ್ತಕ
ಸಂಚಿಕೆ - 185
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ಹದಿಹರೆಯದ ಹುಡುಗಿಯರಿಗಾಗಿ ಇರುವ ಋತುಚಕ್ರ ಸ್ನೇಹಿ ಕೈಪಿಡಿ ಇದು. ಚಿತ್ರಕಥೆಯ ರೂಪದಲ್ಲಿ ಈ ಪುಸ್ತಕವನ್ನು ರೂಪಿಸಿದ್ದಾರೆ. ಪಿಂಕಿ, ಜಿಯಾ ಮತ್ತು ಮೀರಾ ಬೆಳವಣಿಗೆಯ ಅನುಭವ ಮತ್ತು ಮುಟ್ಟಿನ ಬಗ್ಗೆ ಇರುವ ಸತ್ಯವನ್ನು ಶೋಧಿಸುವ ಸಾಹಸದಲ್ಲಿ ಇದ್ದಾರೆ. ರೋಮಾಂಚಕ ಮತ್ತು ಮಾಹಿತಿ ತುಂಬಿದ ಪ್ರಯಾಣವಿದು. ಸರಳವಾಗಿ ವಿಚಾರಗಳನ್ನು ವಿವರಿಸಿದ್ದಾರೆ. ಹೆಣ್ಣು ಮಕ್ಕಳನ್ನು ಕಾಡುವ ಅನೇಕ ಪ್ರಶ್ನೆಗಳಿಗೆ ಇದರಲ್ಲಿ ಉತ್ತರವಿದೆ. ದೈಹಿಕ ಬದಲಾವಣೆಗಳು, ಮುಟ್ಟು ಎಂದರೇನು, ಮುಂದಿನ ಮುಟ್ಟು ಯಾವಾಗ, ಮುಟ್ಟಿನ ದಿನಗಳಲ್ಲಿ ಆರೈಕೆ, ಸ್ವಚ್ಛತೆ ಇತ್ಯಾದಿಗಳ ಕುರಿತು ಹಂತ ಹಂತವಾದ ವಿವರಣೆ ಇದೆ. ಮಕ್ಕಳು ಸಣ್ಣ ಗುಂಪಿನಲ್ಲಿ ಕುಳಿತು ತಮ್ಮ ಅನುಭವಗಳನ್ನು ಹೇಳಿಕೊಳ್ಳುತ್ತಾ ಓದಬಹುದಾದ ಪುಸ್ತಕವಿದು. ಇಂದಿನ ದಿನಗಳಲ್ಲಿ ಇಂತಹ ಮಾಹಿತಿಗಳನ್ನು ಗಂಡು ಹುಡುಗರೂ ತಿಳಿದುಕೊಳ್ಳುವುದು ಒಳ್ಳೆಯದು. ಹುಡುಗರಿಗೆ ತಮ್ಮ ಸಹಜೀವಿಯಾದ ಹೆಣ್ಣಿನ ಬಗ್ಗೆ ಅರಿವು ಸಿಗುತ್ತದೆ ಮತ್ತು ಸಂವೇದನೆ ಬೆಳೆಯಲು ಸಾಧ್ಯ.
ಲೇಖಕರು : ಅದಿತಿ ಗುಪ್ತಾ, ತುಹಿನ್ ಪೌಲ್
ಚಿತ್ರಗಳು: ಅದಿತಿ ಗುಪ್ತಾ, ತುಹಿನ್ ಪೌಲ್
ಪ್ರಕಾಶಕರು: ಮೆನ್ ಸ್ಟ್ರುಪೀಡಿಯಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್
ಬೆಲೆ: ರೂ.395/-
ಇದು 9+ ವರುಷದ ಮಕ್ಕಳಿಗಾಗಿ ಇದೆ. ದೊಡ್ಡವರು ಮಕ್ಕಳ ಜೊತೆಗೆ ಸೇರಿಕೊಂಡು ಓದಬಹುದು.
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: www.menstruedia.com; contact@menstrupedia.com
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 70908 01340
***************************************