ಪ್ರೀತಿಯ ಪುಸ್ತಕ : ಸಂಚಿಕೆ - 184
Saturday, October 11, 2025
Edit
ಪ್ರೀತಿಯ ಪುಸ್ತಕ
ಸಂಚಿಕೆ - 184
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ಪುಟ್ಟ ಪುಸ್ತಕ.. ಚಿತ್ರಗಳನ್ನು ನೋಡುತ್ತಾ ಚಂದ ಓದಬಹುದು. ಮಂಗಣ್ಣ ಬಣ್ಣ ಬಣ್ಣದ ಬಗೆ ಬಗೆಯ ಟೋಪಿ ಹಿಡಿದುಕೊಂಡು ಬರುತ್ತದೆ. ಬೇರೆ ಬೇರೆ ಪ್ರಾಣಿಗಳಿಗೆ ಒಂದೊಂದು ತರಹದ ಟೋಪಿ ಕೊಡುತ್ತದೆ. ಎಲ್ಲರೂ ಟೋಪಿ ಹಾಕಿಕೊಂಡು ಖುಶಿ ಪಡುತ್ತಾರೆ.. ಮಂಗಣ್ಣನೂ ಒಂದು ಟೊಪ್ಪಿ ಹಾಕಿಕೊಳ್ಳುತ್ತದೆ..ಆದರೆ ಮಂಗಣ್ಣನ ಟೊಪ್ಪಿ ಅಲ್ಲಿಂದಲೇ ಮಾಯವಾಗುತ್ತದೆ..ಅಯ್ಯೋ..ಮಂಗಣ್ಣನ ಟೋಪಿ ಎಲ್ಲಿಗೆ ಹೋಯಿತು..? ನಿಮಗೆ ಗೊತ್ತಾಯಿತೇ ಎಲ್ಲಿ ಹೋಯಿತು ಅಂತ. ಯಾರೋ ಹಾರಿಸಿಕೊಂಡು ಹೋದರಲ್ಲಾ..ಬೇಗ ಬೇಗ ಹುಡುಕಿ ನೋಡಿ ಎಲ್ಲಿ ಹೋಯಿತು ಅಂತ..ಮಂಗಣ್ಣ ಮಾತ್ರ ಟೋಪಿ ಹೋದರೂ ಆರಾಮವಾಗಿ ಇದ್ದು ಬಿಟ್ಟಿತ್ತು..ಹೀಗಿದೆ ಈ ಮುದ್ದು ಮುದ್ದು ಪುಸ್ತಕ
ಲೇಖಕರು : ಮಿನಿ ಶ್ರೀನಿವಾಸನ್
ಚಿತ್ರಗಳು: ನೀತಿ ಬ್ಯಾನರ್ಜಿ
ಅನುವಾದ: ಹೇಮಾ ಖುರ್ಸಾಪೂರ
ಪ್ರಕಾಶಕರು: ಪ್ರಥಮ್ ಬುಕ್ಸ್
ಬೆಲೆ: ರೂ.135/-
ಪ್ರಥಮ್ ಪ್ರಕಾರ ಇದು 1ನೇ ಹಂತದ ಪುಸ್ತಕ. ಈಗ ತಾನೇ ಓದಲು ಆರಂಭಿಸಿರುವ/ಜೋರಾಗಿ ಓದಲು, ಕತೆಗಳನ್ನು ಕೇಳಲು ಹಾಗು ಓದುವುದನ್ನು ಪ್ರಾರಂಭಿಸಲು ಕಾತರರಾಗಿರುವ ಸಣ್ಣ ಮಕ್ಕಳಿಗಾಗಿ..
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: 080 – 42052574/41159009; www.prathambooks.org; www.storyweaver.org.in.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 70908 01340
***************************************