-->
ಪ್ರೀತಿಯ ಪುಸ್ತಕ : ಸಂಚಿಕೆ - 181

ಪ್ರೀತಿಯ ಪುಸ್ತಕ : ಸಂಚಿಕೆ - 181

ಪ್ರೀತಿಯ ಪುಸ್ತಕ
ಸಂಚಿಕೆ - 181
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ 
                    
         
                          ನಂದಿನಿ ಎಂಬ ಜಾಣೆ
ಪ್ರೀತಿಯ ಮಕ್ಕಳೇ... ಸುತ್ತುಮುತ್ತಲಿನ ಆಗುಹೋಗುಗಳನ್ನು ಬಿಡುಗಣ್ಣಿನಿಂದ ನೋಡಲು ತೊಡಗುವ ವಯಸ್ಸಿನಲ್ಲಿ ಓದ ಬೇಕಾದ ಪುಸ್ತಕವಿದು. ಚಂದ್ರಾ ಸುಬ್ಯಹ್ಮಣ್ಯಂ ಅವರ ಬದುಕನ್ನು ಆಧರಿಸಿ ರೂಪಿಸಿದ ಕಥೆ ಕಿರು ಕಾದಂಬರಿ ಇದು. “ಇಲ್ಲಿ ನಾನೇ ಬಾಸ್, ನನ್ನ ನಿರ್ಧಾರಗಳನ್ನು ನಾನೇ ತೆಗೆದುಕೊಳ್ಳುತ್ತೇನೆ” ಎನ್ನುವ ದಿಟ್ಟ ಮಹಿಳೆ ನಂದಿನಿ. ಗಣಿಕೆಲಸಗಾರರ ಹೆಡ್ ಲ್ಯಾಂಪ್ ಹಾಕಿಕೊಳ್ಳುತ್ತಾಳೆ ಮತ್ತು ಹೊಲಕ್ಕೆ ಹೂ ಕೀಳು ಹೋಗುತ್ತಾಳೆ. ಹೂತೋಟದ ಜೊತೆಗೆ ಒಂಟಿಯಾಗಿ ತಾಯ್ತನ ಜವಾಬ್ದಾರಿಯನ್ನೂ ನಿಭಾಯಿಸುತ್ತಾಳೆ. ಖುಶಿಯಾಗಿರುತ್ತಾಳೆ, ರೂಢಿಗತವಲ್ಲದ ಕನಸುಗಳನ್ನು ಕಾಣುತ್ತಾಳೆ, ಸಾಧಿಸುವ ಹಠ ಹಿಡಿಯುತ್ತಾಳೆ. ತನ್ನ ಮಗ ನರೇಶನನ್ನು ಓದಿಸುತ್ತಾಳೆ. ಅವನ ಶಾಲೆಯಲ್ಲಿ ಹೀರೋ ಆಗುತ್ತಾಳೆ. ಓದುವಾಗ ನಿಮ್ಮ ಆಸುಪಾಸು ನೀವು ಕಂಡ ಇಂತಹ ಮಹಿಳೆಯರು ನೆನಪಾಗಬಹುದು. ಪ್ರೇರಣೆ ಕೊಡುವಂತೆ ಇದೆ. 

ಲೇಖಕರು : ಅಪರ್ಣಾ ಕಾರ್ತಿಕೇಯನ್
ಚಿತ್ರಗಳು : ಅಜಂತಾ ಗುಹತಕುರ್ತ 
ಅನುವಾದ : ವಿ.ಗಾಯತ್ರಿ
ಪ್ರಕಾಶಕರು : ಬಹುರೂಪಿ (ಇಂಗ್ಲಿಷಿನಲ್ಲಿ ಕರಡಿ ಟೇಲ್ಸ್ ಬಳಗ, ‘ಪೀಪಲ್ಸ್ ಆರ್ಕೇವ್ ಆಫ್ ರೂರಲ್ ಇಂಡಿಯಾ’ ಬಳಗದ ಪರಿಶ್ರಮದ ಫಲ ಈ ಪುಸ್ತಕ)
ಬೆಲೆ: ರೂ.150/-

ಇದು 7-8 + ತರಗತಿಯ ಮಕ್ಕಳಿಗೆ ಸೂಕ್ತವಾಗಿದೆ, 
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: Bahulipi: 7019182729/ 9535015489; contact.bahulipi@gmail.com; online book store – bahuroopi.in
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 70908 01340
*************************************** 



Ads on article

Advertise in articles 1

advertising articles 2

Advertise under the article