ಮಕ್ಕಳ ಕವನಗಳು : ಸಂಚಿಕೆ - 55 : ಕವನ ರಚನೆ : ಅಮೂಲ್ಯ ಕೆ ವಿ, 9ನೇ ತರಗತಿ
Tuesday, August 26, 2025
Edit
ಮಕ್ಕಳ ಕವನಗಳು : ಸಂಚಿಕೆ - 55
ಕವನ ರಚನೆ : ಅಮೂಲ್ಯ ಕೆ ವಿ
9ನೇ ತರಗತಿ
ನಿರ್ಮಲಾ ಬಾಲಿಕಾ ಪ್ರೌಢ ಶಾಲೆ
ಸಾಗರ ತಾಲೂಕು, ಶಿವಮೊಗ್ಗಜಿಲ್ಲೆ
ಮನೆಗೆ ಹರುಷವನು ತಂದನು
ಬಂದನು ಮನೆಗೆ ಪಂಚೆ - ಪೇಟವ ತೊಟ್ಟು
ತಂದನು ಮನೆಗೆ ಹಬ್ಬದ ಗತ್ತು
ಮನೆಯಲಿ ತುಂಬಿತು ಅಡುಗೆಯ ಘಮ
ಬಂದಳು ನನ್ನ ಸ್ನೇಹಿತೆ ಸುಮ
ಇವನಿಗಿಷ್ಟ ಕಡುಬು, ಚಕ್ಕುಲಿ, ಕೋಡುಬಳೆ
ಹಬ್ಬಕ್ಕೆ ಎಂದು ಹಾಕಿಕೊಂಡೆ ಹಸಿರುಬಳೆ
ಮನೆಯಲ್ಲಿ ಕೊಟ್ಟರು ಲಾಡು
ಇದು ನನ್ನ ಮನದಾಳದ ಹಾಡು
ಹಬ್ಬವು ಕಳೆಯಿತು, ಗಣಪನು ಹೊರಟನು
ಮನದಲಿ ತುಂಬಿತು ಬೇಜಾರು.
9ನೇ ತರಗತಿ
ನಿರ್ಮಲಾ ಬಾಲಿಕಾ ಪ್ರೌಢ ಶಾಲೆ
ಸಾಗರ ತಾಲೂಕು, ಶಿವಮೊಗ್ಗಜಿಲ್ಲೆ
*****************************************
ಚಿತ್ರ : ಅಮೂಲ್ಯ ಕೆ ವಿ, 9ನೇ ತರಗತಿ