ಪ್ರೀತಿಯ ಪುಸ್ತಕ : ಸಂಚಿಕೆ - 177
Saturday, August 23, 2025
Edit
ಪ್ರೀತಿಯ ಪುಸ್ತಕ
ಸಂಚಿಕೆ - 177
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.. ಕೆಲವೊಮ್ಮೆ ಮಕ್ಕಳಿಗೆ ಸುತ್ತುಮುತ್ತು ಇರುವ ಕೀಟಗಳ ಕಂಡರೆ ಭಯ ಆಗುತ್ತದೆ ಅಥವಾ ಅವುಗಳ ಮೇಲೆ ಸಿಟ್ಟು ಬರುತ್ತದೆ. ಕಚ್ಚುತ್ತವೆ, ಕುಟುಕುತ್ತವೆ, ನೋವಾಗುತ್ತದೆ, ನವೆಯಾಗುತ್ತದೆ ಅಂತ ಹೇಳುತ್ತಾರೆ. ಅಷ್ಟೇ ಅಲ್ಲಿ ಇಲ್ಲಿ ಕಾಣುವ ಕೀಟಗಳನ್ನು ಹೊಸಕಿ ಸಾಯಿಸಲು ಶುರುಮಾಡುತ್ತಾರೆ. ಈ ರೋಸ ಮತ್ತು ರಾಕಿ ಕೂಡಾ ಹಾಗೆಯೇ ಮಾಡುತ್ತಾರೆ.
“ಮೇ..ಮೇ..ಮೇ..” ಅಂತ ರಾಕಿ ಇರುವೆಗಳನ್ನು ಕಂಡು ಅರಚುತ್ತದೆ. ರೋಸ್ ಇರುವೆಗಳ ಮೇಲೆ ತಕತಕ ಕುಣಿದು ಅವುಗಳನ್ನು ಸಾಯಿಸುತ್ತಾಳೆ. ಹೀಗೆ ಮಾಡುತ್ತಿರಬೇಕಾದರೆ ಅಮ್ಮ ರೋಸ್ ಗೆ ಕೀಟಗಳು ನಮಗೆ ಯಾಕೆ ಮುಖ್ಯ ಅಂತ ಪಾಠ ಕಲಿಸುತ್ತಾರೆ. “ಜೇನು ಬೇಕಾ?” ಅಂತ ಕೇಳುತ್ತಾರೆ. ರೋಸ್ ‘ಬೇಕು’ ಅಂದಾಗ ಜೇನು ಸಿಗುವುದು ಎಲ್ಲಿಂದ, ಯಾರು ಸಂಗ್ರಹಿಸುತ್ತಾರೆ ಅಂತ ತಿಳಿಸಿ ಹೇಳುತ್ತಾರೆ. ನೀವೂ ಯೋಚನೆ ಮಾಡಿ ನಮಗೆ ಕೀಟಗಳು ಯಾಕೆ ಮುಖ್ಯ ಅಂತ.
ಲೇಖಕರು : ಆನ್ನಿ ಬೆಸೆಂಟ್
ಚಿತ್ರಗಳು: ಸಂಧ್ಯಾ ಪ್ರಭಾತ್
ಅನುವಾದ: ಕೊಳ್ಳೇಗಾಲ ಶರ್ಮ
ಪ್ರಕಾಶಕರು: ಪ್ರಥಮ್ ಬುಕ್ಸ್
ಬೆಲೆ: ರೂ.70/-
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: 080 – 42052574/41159009; www.prathambooks.org; www.storyweaver.org.in.
ಪ್ರಥಮ್ ಪ್ರಕಾರ ಇದು 2ನೇ ಹಂತದ ಪುಸ್ತಕ. ಓದಲು ಕಲಿಯುತ್ತಿರುವ ಮಕ್ಕಳಿಗಾಗಿ; ಪದಗಳನ್ನು ಗುರುತಿಸಿ ಓದುವ, ಇತರರ ಸಹಾಯದಿಂದ ಹೊಸ ಪದಗಳನ್ನು ಓದುವ ಮಕ್ಕಳಿಗಾಗಿ ಇದೆ.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 70908 01340
******************************************