ಪ್ರೀತಿಯ ಪುಸ್ತಕ : ಸಂಚಿಕೆ - 175
Saturday, August 9, 2025
Edit
ಪ್ರೀತಿಯ ಪುಸ್ತಕ
ಸಂಚಿಕೆ - 175
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.. ಮನೆಗೆ ಬೀಗ ಹಾಕಿ ಹೊರಗೆ ಹೋಗಿ ಕೆಲವು ದಿನಗಳ ನಂತರ ಮನೆಗೆ ಬಂದರೆ ಮನೆ ಹೇಗಿರುತ್ತದೆ? ಗೊತ್ತಲ್ಲಾ. ಅಂತಹುದೇ ಒಂದು ಕಥೆ ಇದು. ತಾರಾ ಮತ್ತು ಅವಳ ಮನೆಯವರು ಪ್ರವಾಸ ಹೋಗಿ ಮನೆಗೆ ಬಂದಿದ್ದಾರೆ.. ಹಸಿವೆಯೂ ಆಗಿದೆ.. ಬಾಗಿಲು ತೆರೆದರೆ ಮುಗ್ಗುಲು ವಾಸನೆ ಹೊಡೀತಿದೆ. ಧೂಳು, ಜೇಡರ ಬಲೆಗಳು ಆರಾಮವಾಗಿ ಸೇರಿಕೊಂಡಿದ್ದವು. ಮಾಧವನಿಗೆ ಮನೆಯಲ್ಲಿ ಭೂತ ಸೇರಿಕೊಂಡಿದೆಯೇನೋ ಅಂತ ಅನಿಸಿಬಿಟ್ಟಿದೆ. ಮನೆತುಂಬಾ ವಾಸನೆ ಹರಿದಾಡುವ ಚಿತ್ರವೂ ನೀವು ನೋಡಬಹುದು. ಹುಡುಕಿ ಹುಡುಕಿ ಕೊನೆಗೆ ವಾಸನೆಯ ದೊಡ್ಡ ಮೂಲ, ಫ್ರಿಡ್ಜ್ ಅಂತ ಗೊತ್ತಾಯಿತು. ತೆರೆದು ನೋಡಿದರೆ.. ಇಟ್ಟ ವಸ್ತುಗಳು ಕೆಟ್ಟು ಹೋಗಿ ನಾರುತ್ತಿದ್ದವು. ಏನು ಹಾಳಾಗಿದ್ದವು, ಏನೇನು ಹಾಳಾಗದೆ ಉಳಿದಿರಬಹುದು ನೀವೇ ಊಹಿಸಿ. ಉಳಿದ ವಸ್ತುಗಳಿಂದ ಏನೋ ಅಡುಗೆ ಮಾಡಿದರು. ಇಣುಕಿ ನೋಡುತ್ತೀರಾ, ಏನು ಮಾಡಿದರು ಅಂತ?
ಲೇಖಕರು : ಅಶ್ವಿತಾ ಜಯಕುಮಾರ್
ಚಿತ್ರಗಳು: ತಾರಿಕ್ ಅಜಿಜ್
ಅನುವಾದ: ಹೇಮಾ ಹೆಬ್ಬಗೋಡಿ
ಪ್ರಕಾಶಕರು: ಪ್ರಥಮ್ ಬುಕ್ಸ್
ಬೆಲೆ: ರೂ.75/-
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: 080 – 42052574/41159009; www.prathambooks.org; www.storyweaver.org.in.
ಪ್ರಥಮ್ ಪ್ರಕಾರ ಇದು 3ನೇ ಹಂತದ ಪುಸ್ತಕ. ಸ್ವಇಚ್ಛೆಯಿಂದ ಓದುವ ಮಕ್ಕಳಿಗಾಗಿ; ಇನ್ನೊಬ್ಬರ ಸಹಾಯ ಇಲ್ಲದೆ ತಾವೇ ಓದುವ ಮಕ್ಕಳಿಗಾಗಿ.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************