-->
ಜಗಲಿ ಕಟ್ಟೆ : ಸಂಚಿಕೆ - 74

ಜಗಲಿ ಕಟ್ಟೆ : ಸಂಚಿಕೆ - 74

ಜಗಲಿ ಕಟ್ಟೆ : ಸಂಚಿಕೆ - 74
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 


ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ


ಎಲ್ಲರಿಗೂ ನಮಸ್ಕಾರ... ಶಾಲಾರಂಭವಾಗಿ ತಿಂಗಳೊಂದು ಕಳೆದರೂ ಮಳೆ ಎಂದಿಗಿಂತಲೂ ಇನ್ನೂ ಹಾಗೆ ಮುಂದುವರಿದಿದೆ. ಮಳೆಯಲ್ಲಿ ಒದ್ದೆಯಾಗುವ ಅದರಲ್ಲಿ ಖುಷಿ ಪಡುವ ಇಷ್ಟ ಯಾರಿಗಿಲ್ಲ ಹೇಳಿ. ಮಕ್ಕಳ ಸುಂದರ ಅನುಭವ ಅದು. ಹೀಗೆ ಬಾಲ್ಯವನ್ನು ಆನಂದಿಸುವ ಅನೇಕ ಮಕ್ಕಳನ್ನು ಕಾಣುತ್ತೇವೆ. ಆದರೆ ಇಲ್ಲಿ ಒಂದು ಘಟನೆ ಶಿಸ್ತಿಗೆ ವಿರುದ್ಧವಾದ ವರ್ತನೆ ಕಂಡು ಆಶ್ಚರ್ಯವಾಯಿತು. ಒಂದು ಬಾರಿ ಕಾರಲ್ಲಿ ಹೋಗ್ತಾ ಇದ್ದೆವು. ಅಂದಾಜು ನಾಲ್ಕು ಗಂಟೆ ಕಳೆದಿದೆ. ಶಾಲೆ ಬಿಟ್ಟು ಮಕ್ಕಳೆಲ್ಲ ಮನೆಗೆ ಹೋಗ್ತಾ ಇದ್ರು. ಜೋರಾದ ಮಳೆ. ದೂರದಲ್ಲಿ ಒಬ್ಬ ಹುಡುಗ ಖುಷಿಯಲ್ಲಿ ಮಳೆಯಲ್ಲಿ ನೆನೆದುಕೊಂಡು ಹಾಗೆ ಮನೆ ಕಡೆ ನಡೀತಾ ಇದ್ದ. ಬಹುಶಃ ಹೈಸ್ಕೂಲ್ ಹುಡುಗ ಸ್ಕೂಲ್ ಬ್ಯಾಗ್ ಕೂಡಾ ಹಾಕಿದ್ದ. ಆ ಹುಡುಗನನ್ನು ಹಾಗೆ ನೋಡ್ತಾ ಇದ್ದ ನಮಗೆ ತುಂಬಾನೆ ಚಿಂತೆ ಆಯ್ತು. ಆತನ ಬ್ಯಾಗಿನಲ್ಲಿರುವ ಅಷ್ಟು ಪುಸ್ತಕಗಳ ಗತಿ ಏನಾಗಿರಬಹುದು...? ಸರಕಾರದಿಂದ ಸಿಗುವ ಉಚಿತ ಪಠ್ಯಪುಸ್ತಕಗಳು, ತಂದೆ ತಾಯಿ ದುಡಿದು ತೆಗೆದು ಕೊಡುವ ನೋಟು ಬುಕ್ಕುಗಳ ಬಗ್ಗೆ ಗಮನವೇ ಇಲ್ಲವೇ... ಜೋರಾದ ಮಳೆಗೆ ಸ್ವಲ್ಪ ಹೊತ್ತು ನಿಂತು ಹೋಗಿದ್ದರೂ ಬ್ಯಾಗ್ ಒದ್ದೆ ಆಗುತ್ತಿರಲಿಲ್ಲ. ಇಂತಹ ವರ್ತನೆಯ ಮಕ್ಕಳು ಬೇರೆ ಬೇರೆ ಕಡೆ ಕಾಣಬಹುದು. ಮಳೆಯ ಕಾಲದಲ್ಲೂ ಛತ್ರಿ ಇಲ್ಲದೆ ಓಡಾಡುವ ಮಕ್ಕಳ ವರ್ತನೆ ಕಂಡು ನಿಜವಾಗ್ಲೂ ಖೇದವಾಯಿತು..!! ಕೇವಲ ಪುಸ್ತಕ ಮಾತ್ರವಲ್ಲದೆ ಆರೋಗ್ಯವನ್ನು ಕಳೆದುಕೊಳ್ಳಬಹುದಾದ ಪರಿಸ್ಥಿತಿಗೆ ಯಾರು ಕಾರಣರೆನ್ನುವುದೇ ಇಲ್ಲಿ ಪ್ರಶ್ನೆ...!!

ಶೈಕ್ಷಣಿಕ ವರ್ಷಾರಂಭದಲ್ಲಿ ಶಾಲೆಗೆ ಹೊಸತಾಗಿ ದಾಖಲಾತಿ ಹೊಂದಿದಾಗ ಮಕ್ಕಳ ಜೊತೆ ಆತ್ಮೀಯವಾಗಿ ಮಾತನಾಡುವುದಿದೆ. ಮಕ್ಕಳ ಹವ್ಯಾಸಗಳು, ಅಭಿರುಚಿಗಳು, ಅವರ ಮುಂದಿನ ಗುರಿ ಈ ಬಗ್ಗೆ ಸಾಮಾನ್ಯವಾಗಿ ಮಾತನಾಡುತ್ತಿರುತ್ತೇವೆ. ಈ ಸಂದರ್ಭದಲ್ಲಿ ಕೆಲವಾರು ವರ್ಷಗಳ ಹಿಂದಿನ ಮಕ್ಕಳಿಗೂ ಹಾಗೂ ಇಂದಿನ ಮಕ್ಕಳಿಗೂ ತುಂಬಾ ವ್ಯತ್ಯಾಸ ನನ್ನ ಗಮನಕ್ಕೆ ಬಂದಿದ್ದು ಮಾತ್ರ ಸತ್ಯ. ನಮ್ಮ ಶಾಲೆಗೆ ದಾಖಲಾತಿ ಹೊಂದಿದ ಅಷ್ಟು ಮಕ್ಕಳಲ್ಲಿ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಂತಹ ಮಕ್ಕಳ ಸಂಖ್ಯೆ ತೀರಾ ಕಡಿಮೆಯಾಗಿತ್ತು. ತೀರಾ ಕಡಿಮೆ ಅನ್ನುವುದಕ್ಕಿಂತಲೂ ಬೆರಳೆಣಿಕೆ ಎಂದರೂ ತಪ್ಪಾಗಲಾರದು. ಕಥೆ, ಕವನ, ಲೇಖನದಂತಹ ವಿಷಯಗಳ ಅರಿವೇ ಇಲ್ಲದವರಾಗಿ ಅಷ್ಟು ತರಗತಿಗಳನ್ನು ದಾಟಿ ಬಂದದ್ದು ಸೋಜಿಗ ಅನಿಸಿತು. ಒಂದು ಶಾಲೆಯಲ್ಲಿ ಕಲೆ ಮತ್ತು ಸಾಹಿತ್ಯಕ್ಕೆ ಹೆಚ್ಚು ಒತ್ತನ್ನು ನೀಡಿದರೆ ಆ ಶಾಲಾ ಮಕ್ಕಳು ಹೆಚ್ಚು ಪ್ರಬುದ್ಧರಾಗಿ ಬೆಳೆಯುತ್ತಾರೆ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳಿದ್ದರೂ ಇಂತಹ ಬೆಳವಣಿಗೆ ಕೆಲವಾರು ಕಡೆ ಆಗದಿರುವುದು ವಿಷಾದನೀಯ. ಶಾಲೆಗಳಲ್ಲಿ ಸೃಜನಾತ್ಮಕ ಬರವಣಿಗೆಗೆ ಹೆಚ್ಚು ಒತ್ತು ಕೊಡಬೇಕಾದ ಅನಿವಾರ್ಯತೆ ಎದ್ದು ಕಾಣಿಸಿತು. ಚಾಟ್ ಜಿಪಿಟಿ, ಎ ಐ ಗಳ ತಂತ್ರಜ್ಞಾನ ಯುಗದಲ್ಲಿರುವ ನಾವುಗಳು ಮಕ್ಕಳನ್ನು ಸೃಜನಾತ್ಮಕ ಚಿಂತನೆಯೆಡೆಗೆ ಕೊಂಡೊಯ್ಯುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************


ಕಳೆದ ಸಂಚಿಕೆಯ ಜಗಲಿಕಟ್ಟೆ - 73 ಅಂಕಣದಲ್ಲಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ.... ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಕಳೆದ ಕೆಲವು ವಾರಗಳಿಂದ ಪ್ರಕಟವಾದ ಜಗಲಿಯ ಬರಹಗಳ ಕುರಿತಾದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....


ನಮಸ್ತೇ,
     ಭಾವವಿಕಾಸದ ದಾರಿಯನ್ನು ಕಂಡುಕೊಳ್ಳುವ ಬಗೆಯನ್ನು ಭಾಮತಿ ಎನ್ನುವ ಸುಂದರ ಕಥೆಯೊಂದಿಗೆ ಶಿಕ್ಷಣಾಧಿಕಾರಿಯವರಾದ ಶ್ರೀ ಜ್ಞಾನೇಶ್ ಸರ್ ರವರು ಸುಂದರವಾಗಿ ನಿರೂಪಿಸಿದ್ದಾರೆ. ಧನ್ಯವಾದಗಳು ಸರ್....
     ಋಷಿ ಮುನಿಗಳು, ಸಾಧು ಸಂತರ ತಪಸ್ಸು, ಜ್ಞಾನ ಮುಂತಾದುವುಗಳ ಕುರಿತಾಗಿ ರಮೇಶ್ ಸರ್ ರವರು ತಮ್ಮ ಸಂಚಿಕೆಯಲ್ಲಿ ಸೊಗಸಾಗಿ ತಿಳಿಸಿದ್ದಾರೆ.
      ಕಳೆದ ವಾರದ ಅನಿಸಿಕೆಯಲ್ಲಿ ಮುಂದಿನ ವಾರ ರಾಮನ್ ಪರಿಣಾಮದ ಬಗ್ಗೆ ಖಂಡಿತವಾಗಿ ತಿಳಿಸೇ ತಿಳಿಸುತ್ತಾರೆಂದು ಭಾವಿಸಿ ಬರೆದಿದ್ದ ನನಗೆ ನಿರಾಶೆಯಾಗಿಲ್ಲ. ಯಾಕೆಂದರೆ ಭಾರತರತ್ನ ಸರ್ ಸಿ ವಿ ರಾಮನ್ ರವರ ಕುರಿತ ಲೇಖನ ದಿವಾಕರ ಸರ್ ರವರಿಂದ ಮೂಡಿ ಬಂದಿದೆ. ಅವರ ಸಂಶೋಧನೆ ಕುರಿತ ಲೇಖನಕ್ಕೆ ಮುಂದಿನ ವಾರಕ್ಕೆ ಕಾಯಬೇಕು. ಧನ್ಯವಾದಗಳು ಸರ್.
      ನಿಷ್ಟಾಪಿ ಸಸ್ಯಗಳ ಸಂಚಿಕೆಯಲ್ಲಿ ಪೊಂಗಾರೆ ಗಿಡದ ಕುರಿತಾದ ಬಹಳ ಚೆಂದದ ಮಾಹಿತಿ ವಿಜಯಾ ಮೇಡಂರವರಿಂದ. ಅಳಿವಿನಂಚಿನಲ್ಲಿರುವ ಈ ಸಸ್ಯವನ್ನು ಉಳಿಸಿ ಬೆಳೆಸುವ ಕರ್ತವ್ಯ ನಮ್ಮೆಲ್ಲರದು. ನನ್ನ ಹೆಸರಿನ ಮೂಲಕ ಸಂಭಾಷಣೆಯೊಂದಿಗಿನ ಲೇಖನಕ್ಕಾಗಿ ಧನ್ಯವಾದಗಳು ಮೇಡಂ.
     ಧಾರವಾಡ ಜಿಲ್ಲೆಯ ಅಮ್ಮಿನ ಬಾವಿ ಕುರಿತಾದ ಮಾಹಿತಿ ಇಂದಿನ ಪಯಣ ಸಂಚಿಕೆಯಲ್ಲಿ ರಮೇಶ್ ಅವರಿಂದ ತುಂಬಾ ಉತ್ತಮವಾಗಿ ಮೂಡಿ ಬಂದಿದೆ.
     ತಕಿಟ ತರಿಕಿಟ ತಿರುಗುವ ಚೆಂಡು ಎನ್ನುವ ಪುಸ್ತಕದ ಪರಿಚಯಕ್ಕಾಗಿ ಧನ್ಯವಾದಗಳು ವಾಣಿಯಕ್ಕ.
    ರಮೇಶ ಉಪ್ಪುಂದ ರವರ ಪದದಂಗಳ ಸಂಚಿಕೆ ಸೊಗಸಾಗಿ ಮೂಡಿಬರುತ್ತಿದೆ.
     ಈ ವಾರದ ಜಗಲಿಯಲ್ಲಿ ಸಾತ್ವಿತ್ ಗಣೇಶ್ ರವರ ಚಿತ್ರ ಸಂಚಿಕೆ ಆದ್ಯಂತ್ ರವರ ಕವಿತೆಗಳು ಚೆನ್ನಾಗಿ ಮಾಡಿಬಂದಿವೆ. ಅಪ್ಪಂದಿರ ದಿನಾಚರಣೆಯ ಕುರಿತಾಗಿ ಕೃಪಾ ರವರ ಲೇಖನ ಚೆನ್ನಾಗಿತ್ತು. ಮಕ್ಕಳೆಲ್ಲರಿಗೂ ಅಭಿನಂದನೆಗಳು.
    ಕೃಷಿ ಬದುಕು ವಿಜ್ಞಾನ ಶಿಕ್ಷಣಕ್ಕೆ ಹೇಗೆ ಅಗತ್ಯ ಕೃಷಿಯ ಜೊತೆಗೆ ಅಪ್ಪ ತನ್ನನ್ನು ವಿಜ್ಞಾನ ಶಿಕ್ಷಕನಾಗಿಸುವಲ್ಲಿ ಹೇಗೆ ಸಹಕರಿಸಿದರು ಎನ್ನುವುದನ್ನು ದಿವಾಕರ ಸರ್ ರವರು ಅಪ್ಪಂದಿರ ದಿನದ ವಿಶೇಷ ಲೇಖನದಲ್ಲಿ ಸೊಗಸಾಗಿ ತಿಳಿಸಿದ್ದಾರೆ.        
     ರಜೆಯ ಓದು ಸಂಚಿಯಲ್ಲಿ ಅಶ್ವಿನ್ ರಾವ್ ರವರು ಗಲಿವರನ ಯಾತ್ರೆಗಳು ಪುಸ್ತಕದ ವಿಶ್ಲೇಷಣೆಯೊಂದಿಗೆ ಮಕ್ಕಳಿಗೆ ಇಷ್ಟವಾಗುವ ಕಥೆಗಳನ್ನು ಹೊಂದಿರುವ ಪುಸ್ತಕದ ಕುರಿತು ಬೆಳಕು ಚೆಲ್ಲಿದ್ದಾರೆ.
     ಕೊನೆಯಾಗಿ ಎಲ್ಲರಿಗೂ ಮನದಾಳದ ಕೃತಜ್ಞತೆಗಳು.
................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************



ನಮಸ್ತೇ,
     ಬುದ್ಧ ಮತ್ತು ವಿಶಾಖಳ ಕಥೆಯೊಂದಿಗೆ ಭಾವವಿಕಾಸದ ಮತ್ತೊಂದು ಮಜಲನ್ನು ಸುಂದರವಾಗಿ ನಿರೂಪಿಸಿದ್ದೀರಿ ಸರ್... ಧನ್ಯವಾದಗಳು ಸರ್.
     ಮುನಿಗಳು, ಸಾಧುಗಳು ಹಾಗೂ ಸಂತರ ಕುರಿತಾಗಿ ಅರ್ಥವತ್ತಾದ ಲೇಖನ. ಧನ್ಯವಾದಗಳು ರಮೇಶ್ ಸರ್....
     ರಾಲೀ ಚದುರುವಿಕೆ ಹಾಗೂ ರಾಮನ್ ಪರಿಣಾಮದ ನಡುವಿನ ವ್ಯತ್ಯಾಸ ಹಾಗೂ ರಾಮನ್ ಪರಿಣಾಮವನ್ನು ಸರಳ ಉದಾಹರಣೆಗಳೊಂದಿಗೆ ವಿವರಿಸಿದ ರೀತಿ ತುಂಬಾ ಉತ್ತಮವಾಗಿತ್ತು. ಧನ್ಯವಾದಗಳು ಸರ್.
     ಸಂಭಾಷಣೆ ಶೈಲಿಯಲ್ಲಿ ಮೊಲದ ಗಿಡದ ಕುರಿತು ಮಾಹಿತಿ ಹಾಗೂ ಪರಿಚಯ ಸೊಗಸಾಗಿ ಮೂಡಿ ಬಂದಿದೆ. ವಾರಿಜ ಟೀಚರ್ ಮೂಲಕ ಮೂಡಿದ ಪರಿಚಯ ಮತ್ತಷ್ಟು ಸೊಗಸಾಗಿತ್ತು. ಧನ್ಯವಾದಗಳು ಮೇಡಂ.
    ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಪ್ರೇಕ್ಷಣೀಯ ಸ್ಥಳಗಳ ಕುರಿತಾಗಿ ಸುಂದರವಾದ ಮಾಹಿತಿಯನ್ನು ರಮೇಶ್ ಅವರು ನೀಡಿದ್ದಾರೆ.
     ಕಳ್ಳತನದಿಂದ ದುಡ್ಡನ್ನು ಪಡೆಯಬಹುದು ಎನ್ನುವುದನ್ನು ತರಗತಿಯ ಹುಡುಗನೊಬ್ಬ ಹೇಳಿದರೂ ತಾನು ಮಾತ್ರ ಆ ರೀತಿ ಮಾಡಲಾರೆ ಎಂಬ ಸತ್ಯವನ್ನು ಹೇಳಿದ ಘಟನೆ ಕುರಿತಾದ ಅನುಭವದ ಮಾತುಗಳು ಸುಪ್ರಿಯಾ ಮೇಡಮ್ ಅವರಿಂದ ಶಿಕ್ಷಕರ ಡೈರಿಯಲ್ಲಿ ಚೆನ್ನಾಗಿ ಮೂಡಿ ಬಂದಿದೆ.
     ಅಪ್ಪಂದಿರ ದಿನಾಚರಣೆಯ ಕುರಿತು ಸಾನ್ವಿ ಹಾಗೂ ನಿನಾದ ಕೈರಂಗಳ ರವರ ಬರಹ ಸೊಗಸಾಗಿ ಮೂಡಿ ಬಂದಿದೆ. ಓಂಕಾರ ನಾಗರಾಜ್, ಕ್ಷಿತಿ ಹಿಮಾನಿ ಹಾಗೂ ಸಿಂಚನ್ ರವರ ಅವರ ಚಿತ್ರಸಂಚಿಕೆ ಸೊಗಸಾಗಿತ್ತು. ಜನನಿಯವರ ಯೋಗ ದಿನಾಚರಣೆ ಕುರಿತಾದ ಲೇಖನ ಹಾಗೂ ದಿವ್ಯ ಜ್ಯೋತಿರವರ ವಿಶ್ವ ಸಂಗೀತ ದಿನಾಚರಣೆಯ ಕುರಿತ ಲೇಖನ ಚೆನ್ನಾಗಿ ಮೂಡಿ ಬಂದಿದೆ. ಮಕ್ಕಳೆಲ್ಲರಿಗೂ ಅಭಿನಂದನೆಗಳು.
     ಈ ಬಾರಿ ಪತ್ತೆದಾರಿಕೆಯನ್ನು ಹೊಂದಿರುವ ಪತ್ತೆದಾರ ಪ್ರಣವ ಪುಸ್ತಕದ ಪರಿಚಯ ಚೆನ್ನಾಗಿ ಮೂಡಿ ಬಂದಿದೆ ವಾಣಿಯಕ್ಕ.
    ರಮೇಶ್ ಉಪ್ಪುಂದರವರ ಪದದಂಗಳ ಚೆನ್ನಾಗಿ ಮುಂದುವರಿಯುತ್ತಿದೆ.
     ಕಾಡಿನ ಸಾಹಸದ ಕುರಿತಾದ ಜಂಗಲ್ ಬುಕ್ ನ ಜೊತೆಗೆ ಮತ್ತೆ 3 ಪುಸ್ತಕಗಳ ಕುರಿತಾಗಿ ಅಶ್ವಿನ್ ಸರ್ ರವರಿಂದ ಬಹಳ ಸೊಗಸಾದ ವಿಶ್ಲೇಷಣೆ.
   ಕೊನೆಯದಾಗಿ ಎಲ್ಲರಿಗೂ ಮನದಾಳದ ವಂದನೆಗಳು.
.................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************



ನಮಸ್ತೇ,
      ಅಭಿಮಾನ ಮಿತಿಯಲ್ಲಿ ಇರಬೇಕು. ಅತಿಯಾದರೆ ಮಾನವ ತನ್ನತನವನ್ನು ಕಳೆದುಕ್ಕೊಳ್ಳುತಾನೆ ಎನ್ನುವುದನ್ನು ಬಲರಾಮನ ಕಥೆಯ ಮೂಲಕ ಸುಂದರವಾಗಿ ವಿಶ್ಲೇಷಿದ್ದಾರೆ ಶಿಕ್ಷಣಾಧಿಕಾರಿಯವರಾದ ಜ್ಞಾನೇಶ್ ಸರ್ ರವರು.
     ಸುಭಾಷಿತವೊಂದರ ಮೂಲಕ ವಿದ್ಯೆ ಮತ್ತು ಧನವನ್ನು ಪಡೆಯುವ ವಿಧಾನ ಹಾಗೂ ಅವುಗಳ ಸದ್ಬಳಕೆಯ ಕುರಿತಾಗಿ ಉತ್ತಮವಾದ ಲೇಖನ ರಮೇಶ್ ಬಾಯಾರವರಿಂದ.
     ಪ್ರಕೃತಿಯಿಂದಲೇ ವಿಜ್ಞಾನ ಎನ್ನುವುದನ್ನು ದೃಢಪಡಿಸಿದೆ ಈ ವಾರದ ವೈಜ್ಞಾನಿಕ ಸಂಚಿಕೆ ಉತ್ತಮವಾದ ಸಂಚಿಕೆ. ಧನ್ಯವಾದಗಳು ಸರ್.
    ಅಂತರ ಗಂಗೆ ಎನ್ನುವ ಜಲಸಸ್ಯದ ಕುರಿತಾಗಿ ವಿವರವಾದ ಮಾಹಿತಿ ಸಿಕ್ಕಿದೆ. ಈ ಸಸ್ಯದ ಪರಿಸರ ಶುದ್ಧೀಕರಣ ಪ್ರಕ್ರಿಯೆ ಅದ್ಭುತ ಅನಿಸಿತು. ಧನ್ಯವಾದಗಳು ವಿಜಯಾ ಮೇಡಂ.
    ಕರ್ನಾಟಕದ ಗ್ವಾಲಿಯರ್ ಎಂದು ಕರೆಯಲ್ಪಡುವ ಹರಪನಹಳ್ಳಿಯ ಉಚ್ಚಂಗಿ ದುರ್ಗದ ಬೃಹತ್ ಕೋಟೆಗಳ ಪರಿಚಯ ತಮ್ಮಪಯಣ ಸಂಚಿಕೆಯಲ್ಲಿ ಸೊಗಸಾಗಿ ಮೂಡಿ ಬಂದಿದೆ. ಧನ್ಯವಾದಗಳು ರಮೇಶ್ ಸರ್.
     ರಜೆಯ ಆನಂದವನ್ನು ಹುಡುಗನೋರ್ವ ಹೇಗೆ ಕಳೆಯುತ್ತಾನೆ ಎನ್ನುವುದುರ ಕುರಿತಾದ ಪುಸ್ತಕ ರಜೆ ಬಂತು ಪರಿಚಯ ಚೆನ್ನಾಗಿತ್ತು ವಾಣಿಯಕ್ಕ.
     ಈ ವಾರದ ಜಗಲಿಯಲ್ಲಿ ಮಕ್ಕಳ ಬಹಳಷ್ಟು ಚಿತ್ರಗಳು ಹಾಗೂ ಕವನಗಳು ಪ್ರಕಟವಾಗಿವೆ. ಮಣಿಕಂಠ ಕುಲಾಲ್ ವಿನೀಶ್, ಅಮೂಲ್ಯ, ಜಯಶ್ರೀ, ಅಭಿಜ್ಞಾ ಮುಂತಾದವರ ಸೊಗಸಾದ ಕವನಗಳಿವೆ. ಚಂದನ, ವಂಶಿ, ಮನಶ್ರೀ ಕುಲಾಲ್, ವೈಷ್ಣವಿ, ಜ್ಯೋತಿ, ಶೈನಿ ಮೆಲೋಡಿ, ಜಿತೇಶ್ ಹಾಗೂ ಕಾರ್ತಿಕ್ ರವರ ಅದ್ಭುತವಾದ ಚಿತ್ರಗಳ ಸಂಚಿಕೆ ಮೂಡಿ ಬಂದಿದೆ. ಮಕ್ಕಳೆಲ್ಲರಿಗೂ ಅಭಿನಂದನೆಗಳು.
     ಈ ವಾರದ ಪದದಂಗಳ ಸಂಚಿಕೆ ಉತ್ತಮವಾಗಿತ್ತು.
     ಆಲಿಸ್ ಇನ್ ವಂಡರ್ ಲ್ಯಾಂಡ್ ಹಕಲ್ ಬೆರಿ ಪಿನ್ ನ ಸಾಹಸಗಳು, ಟ್ರೆಷರ್ ಐಲ್ಯಾಂಡ್ ನಂತಹ ಮಕ್ಕಳ ಪುಸ್ತಕಗಳ ಕುರಿತಾಗಿ ಸೊಗಸಾಗಿ 
ವ್ಯಾಖ್ಯಾನಿಸಿದ್ದಾರೆ ಅಶ್ವಿನ್ ರಾವ್ ಅವರು ತಮ್ಮ ರಜೆಯ ಓದು ಸಂಚಿಕೆಯಲ್ಲಿ.
     ಎಲ್ಲರಿಗೂ ವಂದನೆಗಳು.
................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************



ಎಲ್ಲರಿಗೂ ನಮಸ್ಕಾರಗಳು,
    ಬೈಜಿದ್ ನ ಮನಮಿಡಿಯುವ ಕಥೆಯೊಂದಿಗೆ ಮನಮುಟ್ಟುವ ಲೇಖನ ಶಿಕ್ಷಣಾಧಿಕಾರಿ ಜ್ಞಾನೇಶ್ ಸರ್ ರವರಿಂದ. ಧನ್ಯವಾದಗಳು ಸರ್....
     ಭರ್ತೃಹರಿಯ ನೀತಿ ಶತಕದ ಶ್ಲೋಕದ ವಿವರಣೆಯ ಮೂಲಕ ಕೆಲಸ ಸಾಧನೆ ಮಾಡುವವರ ಅಥವಾ ಕಾರ್ಯಸಾಧಕರ ವರ್ಗಗಳನ್ನು ಬಹಳ ಸೊಗಸಾಗಿ ವಿಶ್ಲೇಷಿಸಿದ್ದಾರೆ ರಮೇಶ್ ಬಾಯಾರ್ ಸರ್ ರವರು. ಧನ್ಯವಾದಗಳು ಸರ್.
     ಎಲೆಗಳಲ್ಲಿರುವ ಹಸಿರು ವರ್ಣಕ (ಕ್ಲೋರೋಪ್ಲಾಸ್ಟ್) ಯಾವ ರೀತಿ ಸೌರಕೋಶಗಳಂತೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಸೊಗಸಾಗಿ ತಿಳಿಸಿದ್ದೀರಿ ಸರ್. ಧನ್ಯವಾದಗಳು ಸರ್...
     ರಬ್ಬರ್ ತೋಟಗಳಲ್ಲಿ ಬಳ್ಳಿಯಂತೆ ಬೃಹದಾಕಾರವಾಗಿ ಹಬ್ಬಿಕೊಂಡು ಮಣ್ಣಿನ ಸಾರ ವರ್ಧನೆಯ ಜೊತೆಗೆ ಮಣ್ಣಿನ ಸಂರಕ್ಷಣೆಗೆ ಮುಕುಟಾ ಬ್ರಾಕ್ಟಿಯೇಟಾ ಕಾರಣವಾಗುವುದನ್ನು ಕಂಡಾಗ ಖುಷಿಯಾದರೂ ಜೀವ ವೈವಿಧ್ಯತೆಗೆ ಅಪಾಯ ಎನ್ನುವುದನ್ನು ತಿಳಿದು ಬೇಸರವಾಯಿತು. ಉತ್ತಮ ಮಾಹಿತಿಯನ್ನು ಹೊಂದಿದ ಲೇಖನ ಮೇಡಂ.
     ಪ್ರಕೃತಿ ರಮಣೀಯವಾದ ಸಿದ್ಧಾಪುರ ತಾಲೂಕಿನ ಉಂಚಳ್ಳಿ ಜಲಪಾತದ ಕುರಿತಾದ ಮಾಹಿತಿ ಉತ್ತಮವಾಗಿತ್ತು. ರಮೇಶ್ ಉಪ್ಪುಂದ ಸರ್ ರವರ 50ನೇಯ ಪಯಣ ಸಂಚಿಕೆಗೆ ಅಭಿನಂದನೆಗಳೊಂದಿಗೆ ಧನ್ಯವಾದಗಳು ಸರ್...
     ಪ್ರಶ್ನೆ ಕೇಳಿ ಮಗು ಕಲಿಯುವುದರ ಕುರಿತಾದ ಅನುಭವದ ಮಾತುಗಳು ಚೆನ್ನಾಗಿದ್ದುವು ರಮ್ಯಾ ಮೇಡಂ.
     ವ್ಯಾಸ ಮಹರ್ಷಿ ಮಹಾಭಾರತವನ್ನು ಹೇಗೆ ಬರೆದ ಎನ್ನುವುದರ ಕುರಿತಾದ ವ್ಯಾಸನ ಭಾರತದ ಪುಸ್ತಕ ಪರಿಚಯ ಚೆನ್ನಾಗಿತ್ತು ವಾಣಿಯಕ್ಕ.
     ದಿಗಂಬರ ಜೈನ ಪ್ರೌಢಶಾಲೆ ರಾಜ್ಯಕ್ಕೆ 5ನೇ ಸ್ಥಾನ ಗಳಿಸಿದ ಪರಿಯನ್ನು ನಿಮ್ಮೂರ ಶಾಲೆಯ ಸುದ್ದಿ ಸಂಚಿಕೆಯಲ್ಲಿ ಆ ಶಾಲೆಯ ಶಿಕ್ಷಕಿ ಶೋಭರವರು ಸೊಗಸಾಗಿ ಹಂಚಿಕೊಂಡಿದ್ದಾರೆ. ಶಾಲೆಯ ಈ ಸಾಧನೆಗೆ ಶಾಲಾ ಮುಖ್ಯೋಪಾಧ್ಯಯರೊಂದಿಗೆ ಎಲ್ಲರಿಗೂ ಅಭಿನಂದನೆಗಳು.
     ರಮೇಶ್ ರವರ ಪದದಂಗಳ ಸಂಚಿಕೆ ಚೆನ್ನಾಗಿ ಮೂಡಿಬರುತ್ತಿದೆ.
     ಈ ವಾರದ ಜಗಲಿಯಲ್ಲಿ ಪ್ರಕಟವಾದ ಪೂರ್ತಿ ಹಾಗೂ ಅವನಿ ಪಡುಕೋಣೆರವರ ಚಿತ್ರಗಳು ತುಂಬಾ ಸೊಗಸಾಗಿವೆ. ಮಕ್ಕಳಿಗೆ ಅಭಿನಂದನೆಗಳು.
     ಕೊನೆಯದಾಗಿ ಎಲ್ಲರಿಗೂ ಆತ್ಮೀಯ ವಂದನೆಗಳು.
................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************



ಎಲ್ಲರಿಗೂ ನಮಸ್ಕಾರಗಳು...
    ಬದುಕೇ ಎಲ್ಲಕ್ಕಿಂತ ಮಿಗಿಲಾದ ಸಂಪತ್ತು ಎಂಬುದನ್ನು ಬಹಳ ಸುಂದರವಾಗಿ ವಿಶ್ಲೇಷಿಸಿದ್ದಾರೆ ಶಿಕ್ಷಣಾಧಿಕಾರಿಯವರಾದ ಜ್ಞಾನೇಶ್ ಸರ್ ರವರು. ಉತ್ತಮ ಲೇಖನ.
    ಅನಸೂಯ ಪದದ ಗೂಢಾರ್ಥವನ್ನು ಅರ್ಥವಾಗುವ ರೀತಿಯಲ್ಲಿ ತಿಳಿಸಿದ ಸುಂದರ ಲೇಖನ ಧನ್ಯವಾದಗಳು ರಮೇಶ್ ಸರ್.
     ತುಂಬಾ ಕುತೂಹಲಕಾರಿ ವಿಜ್ಞಾನ ಸಂಚಿಕೆ ಎಲೆಗಳ ಸ್ಟೆಬಿಲೈಸರ್. ಉತ್ತರಕ್ಕಾಗಿ ಮುಂದಿನ ಸಂಚಿಕೆಗೆ ಕಾಯಬೇಕು. ಧನ್ಯವಾದಗಳು ಸರ್...
     ಅಳಿವಿನ ಅಂಚಿನಲ್ಲಿರುವ ಪ್ರಮುಖ ಗಿಡ ನಾಗಲಿಂಗ ಪುಷ್ಪದ ಮಾಹಿತಿ ಅತ್ಯುತ್ತಮವಾಗಿ ಮೂಡಿ ಬಂದಿದೆ. ಧನ್ಯವಾದಗಳು ವಿಜಯಾ ಮೇಡಂ.
     ಕುವೆಂಪುರವರ ಕಾವ್ಯರಚನೆಗೆ ಕಾರಣವಾದ ಮನೋಹರವಾದ ಮೈಸೂರಿನ ಕುಕ್ಕರೆ ಹಳ್ಳಿ ಕೆರೆಯ ಕುರಿತಾದ ಮಾಹಿತಿ ರಮೇಶ್ ಸರ್ ರವರ ಪಯಣ ಸಂಚಿಕೆಯಲ್ಲಿ ಸುಂದರವಾಗಿ ಮೂಡಿ ಬಂದಿದೆ.
    ಕ್ಯುಮುಲೋ ಪುಟ್ಟಿಯ ತೇಲಿಸ ಬನ್ನಿ ಎನ್ನುವ ಪುಸ್ತಕದ ಪರಿಚಯಕ್ಕಾಗಿ ಧನ್ಯವಾದಗಳು ವಾಣಿಯಕ್ಕ.
    ಅನುಪಮಾ ನಿರಂಜನರವರ ದಿನಕ್ಕೊಂದು ಕಥೆ ಪುಸ್ತಕಗಳ ಕುರಿತಾಗಿ ಉತ್ತಮ ವಿಶ್ಲೇಷಣೆ. ನಾನೂ ಓದಿದ ಪುಸ್ತಕಗಳಿವು. ಜೊತೆಗೆ ಮಕ್ಕಳಿಗಾಗಿ ಇರುವ ಇನ್ನೊಂದು ಪುಸ್ತಕ ಹೈದಿ ಎನ್ನುವ ಆಂಗ್ಲ ಕಾದಂಬರಿ ಕುರಿತಾಗಿ ಚೆನ್ನಾಗಿ ವಿವರಿಸಿದ್ದಾರೆ ಅಶ್ವಿನ್ ಸರ್ ರವರು. ಧನ್ಯವಾದಗಳು ಸರ್...
    ಈ ವಾರ ಮೂಡಿಬಂದ ಮಿಕ್ದಾದ್, ನಿಭಾ, ಶ್ರಾವ್ಯ, ಸಮರ್ಥ ಹಾಗೂ ರಶ್ಮಿಯವರ ಕವನಗಳು ಸೊಗಸಾಗಿವೆ. ಬೇಸಿಗೆ ರಜೆಯಲ್ಲಿ ಊಟಿ ಪ್ರವಾಸದ ಅನಭವದ ಲೇಖನ ಸಾನ್ವಿ ರವರಿಂದ ಚೆನ್ನಾಗಿತ್ತು. ಮಳೆಗಾಲದಲ್ಲಿ ಅಜ್ಜಿಮನೆಯಲ್ಲಿ ಪಡೆದ ಅನುಭವದ ಕುರಿತ ವೈಷ್ಣವಿ ರವರ ಲೇಖನ ಸೊಗಸಾಗಿತ್ತು. ಶರಧಿ ಹಾಗೂ ಝಾರ ಫಾತಿಮಾರವರ ಚಿತ್ರಗಳು ಅದ್ಭುತವಾಗಿ ಮೂಡಿ ಬಂದಿವೆ. ಮಕ್ಕಳೆಲ್ಲರಿಗೂ ಅಭಿನಂದನೆಗಳು.
     ಪದದಂಗಳ ಸಂಚಿಕೆ ಉತ್ತಮವಾಗಿ ಮೂಡಿ ಬರುತ್ತಿದೆ. ಸಂಚಿಕೆಯನ್ನು ನಿರಂತರವಾಗಿ ನೀಡುತ್ತಿರುವ ರಮೇಶ್ ಸರ್ ರವರಿಗೆ ಧನ್ಯವಾದಗಳು. 
     ಕೊನೆಯದಾಗಿ ಜಗಲಿಯ ಎಲ್ಲರಿಗೂ ಹೃತ್ಪೂರ್ವಕ ವಂದನೆಗಳು.
..................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************


ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ.. ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
*****************************************


Ads on article

Advertise in articles 1

advertising articles 2

Advertise under the article