ಮಕ್ಕಳ ಕವನಗಳು : ಸಂಚಿಕೆ - 54, ಕವನ ರಚನೆ : ಮಣಿಕಂಠ ಎಸ್ ಎಂ ಕುಲಾಲ್, 9ನೇ ತರಗತಿ
Tuesday, July 29, 2025
Edit
ಮಕ್ಕಳ ಕವನಗಳು : ಸಂಚಿಕೆ - 54
ಕವನ ರಚನೆ : ಮಣಿಕಂಠ ಎಸ್ ಎಂ ಕುಲಾಲ್
9ನೇ ತರಗತಿ
ಹೋಲಿ ರೆಡೀಮರ್ ಸ್ಕೂಲ್
ಹೊಸನಗರ, ಶಿವಮೊಗ್ಗ ಜಿಲ್ಲೆ
ಆ ನಗುವೆ ಅಜರಾಮರವಾಗಿದೆ
ಎಲ್ಲವನ್ನು ಗೆಲ್ಲುವ ಶಕ್ತಿ
ಆ ನಗುವಿನಲ್ಲಿ ಅಡಗಿದೆ
ನಗುನಗುತ ಎಲ್ಲಾ ಧರ್ಮ ಸಾಧನೆ ಮಾಡಿ
ಆ ಪರಮಾತ್ಮನಿಗೆ ಹತ್ತಿರವಾದರೂ
ಈ ಪರಮಾತ್ಮ
ಈ ನಗು ಮುಖದ ಒಡೆಯ
ದೊಡ್ಡ ಮನೆಯ
ಹೆಮ್ಮೆಯ ರಾಜಕುಮಾರ
..................... ಮಣಿಕಂಠ ಎಸ್ ಎಂ ಕುಲಾಲ್
9ನೇ ತರಗತಿ
ಹೋಲಿ ರೆಡೀಮರ್ ಸ್ಕೂಲ್
ಹೊಸನಗರ, ಶಿವಮೊಗ್ಗ ಜಿಲ್ಲೆ
*****************************************
ಕಲಿಯೋಣ ಕನ್ನಡ ಕಸ್ತೂರಿ
ನಲಿಯುತ ಹಾಡುತ ಕುಣಿಯೋಣ
ಜಿಪಿ ರಾಜರತ್ನಂ ರವರಾ
ಬಣ್ಣದ ತಗಡಿನಾ ತುತ್ತೂರಿ
ಕಲಿಯಬೇಕು ಗೆಳೆಯ
ಸವಿ ಕನ್ನಡ ನುಡಿಯ
ಅದರಲ್ಲಿ ತುಂಬಿದೆ
ಸಾಹಿತ್ಯದ ಜೇನಿನ ಸಿಹಿಯ
ಕಲಿಯುವ ಕಲಿಸುವ
ಕನ್ನಡ ಉಳಿಸುವ
..................... ಮಣಿಕಂಠ ಎಸ್ ಎಂ ಕುಲಾಲ್
9ನೇ ತರಗತಿ
ಹೋಲಿ ರೆಡೀಮರ್ ಸ್ಕೂಲ್
ಹೊಸನಗರ, ಶಿವಮೊಗ್ಗ ಜಿಲ್ಲೆ
*****************************************
:
ಮಮತೆಯಲ್ಲಿ ಹೆತ್ತಮ್ಮನಿಗಿಂತ ಜಾಸ್ತಿ ಇವಳು
ಕೈ ತುತ್ತು ನೀಡಿ ಹರಸಿದವಳು
ಕೈ ಹಿಡಿದು ನಡೆದವಳು
ಪ್ರತಿ ಹೆಜ್ಜೆಯಲ್ಲೂ
ನಾನಿರುವೆ ಜೊತೆಯಲ್ಲಿ ಅಂದವಳು
ನಾಹಠ ಮಾಡಿ ಅತ್ತಾಗ
ಕೆನ್ನೆ ಸವರಿ ಸಮಾಧಾನಿಸಿದವಳು
ಮಡಿಲಲ್ಲಿ ಮಲಗಿಸಿ ಲಾಲಿ ಹಾಡಿದವಳು
ನಾ ಹೆದರಿ ಮುದುರಿ ಕುಳಿತಾಗ
ಧೈರ್ಯ ತುಂಬಿ ಜೊತೆ ನಿಂತವಳು
ನಾಬಿದ್ದು ಮಂಡಿ ಪೆಟ್ಟಾದಾಗ
ಕಣ್ಣೀರು ಮಿಡಿದವಳು
ನನ್ನಲ್ಲಿರುವ ಅಂಜಿಕೆಯ
ಅಟ್ಟಾಡ್ಸಿ ಓಡಿಸಿದವಳು
ನಾ ಮಾಡಿದ ತಪ್ಪುಗಳಾ
ತಿದ್ದಿ ತೀಡಿದವಳು
ನನಗಾಗಿ ಅಮ್ಮನಿಂದ ಪೆಟ್ಟು ತಿಂದವಳು
ನನಗಿಂತಾ ಮುಂಚೆ ಹುಟ್ಟಿ ಬಂದವಳು
ನನ್ನ ಎರಡನೆಯ ಅಮ್ಮ ಇವಳು
ನನ್ನ ಮುದ್ದಿನಾ ಸಹೋದರಿ ಇವಳು
..................... ಮಣಿಕಂಠ ಎಸ್ ಎಂ ಕುಲಾಲ್
9ನೇ ತರಗತಿ
ಹೋಲಿ ರೆಡೀಮರ್ ಸ್ಕೂಲ್
ಹೊಸನಗರ, ಶಿವಮೊಗ್ಗ ಜಿಲ್ಲೆ
*****************************************
ಮುತ್ತಿನಂತೆ ಜೋಡಿಸಿ
ಅಮ್ಮನಂತೆ ಲಾಲಿಸಿ
ನುಡಿಯ ಕಲಿಸಿದಾ
ಗುರುವಿನಾಚರಣಕ್ಕೆ ನಮನ
ಎಡವಿ ಬಿದ್ದಾಗ ಹಿಡಿದು ನಡೆಸಿ
ಸರಿ ತಪ್ಪುಗಳಾ ತೋರಿಸಿ
ಕೆಟ್ಟದ್ದು ಅಳಿಸಿ ಒಳ್ಳೆಯದು ಕಲಿಸಿ
ಈ ಮಣ್ಣಿನಾ ಮುದ್ದೆಗೆ
ಮೂರ್ತಿಯ ಆಕಾರ ನೀಡಿ
ಜಗತ್ತಿಗೆ ತೋರಿದಾ
ಗುರುವಿನಾ ಚರಣಕ್ಕೆ ನಮನ
ಬದುಕಿಗೊಂದು ಭಾಷೆ ಕಲಿಸಿ
ಕಗ್ಗಲ್ಲಾದ ಶಿಲೆಯ ತಿದ್ದಿ ತೀಡಿ
ಉಳಿಪೆಟ್ಟು ನೀಡಿ
ಸುಂದರ ಶಿಲ್ಪವನ್ನಾಗಿಸಿದಾ
ಗುರುವಿನಾ ಚರಣಕ್ಕೆ ನಮನ
ಸಾಧನೆಯ ಹಾದಿಯಲ್ಲಿ
ನಾ ದಿಕ್ಕೆಟ್ಟು ನಿಂತಾಗ
ಬೆನ್ನುತಟ್ಟಿ ಪ್ರೊತ್ಸಾಹಿಸಿ
ಗುರಿಯ ತಲುಪುವ ಛಲವ ಬೆಳೆಸಿದಾ
ಗುರುವಿನಾಚರಣಕ್ಕೆ
'ಕೋಟಿ ಕೋಟಿ ನಮನ
9ನೇ ತರಗತಿ
ಹೋಲಿ ರೆಡೀಮರ್ ಸ್ಕೂಲ್
ಹೊಸನಗರ, ಶಿವಮೊಗ್ಗ ಜಿಲ್ಲೆ
*****************************************