ಮಕ್ಕಳ ಕವನಗಳು : ಸಂಚಿಕೆ - 53 , ಕವನ ರಚನೆ : ಅನಿಶಾ ಕೆ, 8ನೇ ತರಗತಿ
Thursday, July 24, 2025
Edit
ಮಕ್ಕಳ ಕವನಗಳು : ಸಂಚಿಕೆ - 53
ಕವನ ರಚನೆ : ಅನಿಶಾ ಕೆ
8ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ತಾವರೆ ಹೊ ಕೂಡಾ ಇರುತ್ತದೆ,
ಕೆರೆಯ ನೀರು ಬತ್ತಿಹೋದ ಮೇಲೆ
ಹಂಸ ಅಲ್ಲಿಂದ ಹಾರಿ ಹೋಗುತ್ತದೆ
ತಾವರೆ ನೀರಿನ ಜೊತೆಗೆ ಸಾಯುತ್ತದೆ.
ಇದು ನಿಜವಾದ ಗೆಳೆತನ...
ಕಣ್ಣಿನಲ್ಲಿ ಕರುಣೆ ಇರಲಿ
ಮುಖದಲ್ಲಿ ನಗು ಇರಲಿ
ಹೃದಯದಲಿ ಶ್ರೀಮಂತಿಕೆ ಇರಲಿ
ಬಡವರು ಬಯಸೋದು ಅನ್ನ
ಶ್ರೀಮಂತರು ಬಯಸುವುದು ಚಿನ್ನ
ಸ್ನೇಹ ಎಂಬುವುದು ಸಾಗರದಂತೆ
ಕೋಪ ಕ್ಷಣಿಕ ಮಿಂಚಿನಂತೆ
ಬದುಕು ನಿಲ್ಲದ ಹರಿವ ನೀರಿನಂತೆ
................................................ ಅನಿಶಾ ಕೆ
8ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ನಗೋದು ಗೊತ್ತಿಲ್ಲ
ಸೂರ್ಯನಿಗೆ ಸುಡೋದು ಮಾತ್ರ ಗೊತ್ತು
ನೆನೆಸೋದು ಗೊತ್ತಿಲ್ಲ
ಗುರು ಹಿರಿಯರನ್ನು ನೆನಪಿಸಿ ಮಾತ್ರ ಗೊತ್ತು
ಮರೆಯೋದು ಗೊತ್ತಿಲ್ಲ
ಹೃದಯ ಒಂದು ನಿಷ್ಕಲ್ಮಶ ಭಾವ
ಪ್ರೀತಿ - ಒಲುಮೆ ಹಂಚಲೇ ಬೇಕು
ಮನಸ್ಸು ಅಂತ ಇದ್ದ ಮೇಲೆ
ನೋವು ಆಗಲೇ ಬೇಕು
ಬದುಕು ಅಂತ ಇದ್ದ ಮೇಲೆ
ನೆನಪು ಇರಲೇ ಬೇಕು
............................................... ಅನಿಶಾ ಕೆ
8ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ದಾರಿ ಕಾಣದಾಗ ಕೈಹಿಡಿದು ನಡೆಸುವನು ನನ್ನಪ್ಪ
ಕಷ್ಟದಲ್ಲಿದ್ದಾಗ ಧೈರ್ಯ ತುಂಬುವನು ನನ್ನಪ್ಪ
ಕಾಳಜಿ ನೀಡಿ ಜೋಪಾನ ಮಾಡುವನು ನನ್ನಪ್ಪ
ನಕ್ಕಾಗ ಎತ್ತಿ ಮುದ್ದಾಡುವನು ನನ್ನಪ್ಪ
ಯಾವಾಗಲೂ ನನ್ನ ಜೊತೆಯಲ್ಲೇ
ಇದ್ದು ಪ್ರೀತಿಯನ್ನು ಕೊಡುವನು
................................................ ಅನಿಶಾ ಕೆ
8ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಎಷ್ಟೇ ಕೋಪ ತೋರಿಸಿದರು
ಮನಸಲ್ಲಿ ನನಗೋಸ್ಕರ ಕನಸು
ಇಟ್ಟುಕೊಂಡಿರುವ ನನ್ನ
ಪ್ರೀತಿಯ ಅಪ್ಪಯ್ಯ
ಅಪ್ಪ ಮರಳಿ ಬರದವರು ನೀವು
ನಾ ಹೇಗೆ ಕರೆಯಲಿ ನಿನ್ನನ್ನು
ನನ್ನಲ್ಲಿ ಹೇಳದೆ ಹೋದವ ನೀನು
ನಾ ಇನ್ನ ನೋವನ್ನು ಯಾರಿಗೆ ಹೇಳಲಿ
ಮರೆಯಲಾಗದ ನಿಮ್ಮ ಪ್ರೀತಿಗಳು
ನಿಮ್ಮ ಮಾತುಗಳು
ನೀನು ನನ್ನಿಂದ ತುಂಬಾ ದೂರವಾದೆ
ನೀನು ಇದ್ದಾಗ ಇರುವ ಆ ಶಕ್ತಿ
ಧೈರ್ಯ ಅದು ಈಗ ಇಲ್ಲ ಅಪ್ಪ
................................................ ಅನಿಶಾ ಕೆ
8ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಮೋಸ ಮಾಡಬೇಡಿ
ಮನಸು ಕೊಡಲಾಗದ ಮನಸ್ಸಿಗೆ
ಮನಸ್ಸು ಕೊಡಬೇಡಿ
ಮನಸು ನಂಬಿ ಬಂದ ಮನಸ್ಸಿಗೆ
ನೋವು ಮಾಡಬೇಡಿ
ಮರಳಿನಲ್ಲಿ ಬರೆದ ಅಕ್ಷರವನ್ನು
ನೀರಾದರೂ ಅಳಿಸಬಹುದು
ಹೃದಯದಿಂದ ಮೂಡಿ ಬಂದ ಪ್ರೀತಿಯನ್ನು
ಯಾರಿಂದಲೂ ಅಳಿಸಲು ಸಾಧ್ಯವಿಲ್ಲ
................................................ ಅನಿಶಾ ಕೆ
8ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಹೂವಿನಂತಹ ಹೃದಯ
ಮುತ್ತಿನಂತಹ ಮಾತು ಸದಾ ಇರಲಿ
ನೀನು ನಡೆದ ಹಾದಿಯಲ್ಲಿ
ನಗೆ ಹೂವು ಅರಳುತ್ತಿರಲಿ
ಅಗಲುವಿಕೆ ಎಂಬ ಐದಕ್ಷರ ಮರೆತರು
ಸ್ನೇಹ ಎಂಬ ಪದ ಮರೆತರು
ಬಾಂಧವ್ಯ ದ ಮೂರಕ್ಷರವನ್ನು
ಹೇಗೆ ಮರೆಯಲಿ...?
................................................ ಅನಿಶಾ ಕೆ
8ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಬಲು ದೊಡ್ಡದು ಅಪ್ಪ ಅಮ್ಮನ ಪ್ರೀತಿ
ಓದು ಬರಹ ಕಲಿಸಿದ ಶಿಕ್ಷಕರಿಗಿಂತ
ನನ್ನ ಮೊದಲ ಗುರು ಅಪ್ಪ ಅಮ್ಮ
ಪರಿಶುದ್ಧ ಪ್ರೀತಿ ನೀಡಿ ಬೆಳೆಸಿದ ಅಪ್ಪ
ಎದೆಯ ಹಾಲನ್ನು ಕುಡಿಸಿದ ಅಮ್ಮ
ನಿಮ್ಮಿಬ್ಬರು ಕೊಡಿಸಿದ ಆ ಪ್ರೀತಿಗೆ
ನಾ ಚಿರಕರುಣಿ ಆಗಿರುತ್ತೇನೆ ನಿಮ್ಮ ಪಾದಕೆ
8ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************