ಮಕ್ಕಳ ಕವನಗಳು : ಸಂಚಿಕೆ - 50
Wednesday, July 9, 2025
Edit
ಮಕ್ಕಳ ಕವನಗಳು : ಸಂಚಿಕೆ - 50
ಜಗಲಿಯ ಮಕ್ಕಳ ಸ್ವರಚಿತ ಕವನಗಳು
ಕವನ ರಚನೆ ಮಾಡಿರುವ ವಿದ್ಯಾರ್ಥಿಗಳು :
◾ ಕೆ. ಮಿಕ್ದಾದ್, ದ್ವಿತೀಯ ಪಿಯುಸಿ
◾ ನಿಭಾ ಶೆಟ್ಟಿ, ದ್ವಿತೀಯ ಪಿಯುಸಿ
◾ ಶ್ರಾವ್ಯ, 8ನೇ ತರಗತಿ
◾ ಸಮರ್ಥ ದೇಸಾಯಿ, 7ನೇ ತರಗತಿ
◾ ರಶ್ಮಿ ಎಂ, 6ನೇ ತರಗತಿ
ಬೆಳಕ ಹಾಯಿಸದೆ ನನ್ನೆಡೆಗೆ..
ಅನುಭವದ ನೋವಿನಲಿ ಅಲೆದಾಡುತಿಹ,
ಮನವ ಹಿಂಡಿ ತೆಗೆದೆ ನಾ ಈ ಘಳಿಗೆ..
ಇರುಳೂ ಮೂಡಲಿ ರವಿಯೇ ಬೆಳಗಲಿ,
ಇಳೆಯು ಪ್ರತಿ ಕ್ಷಣ ಕತ್ತಲಯೆನೆಗೆ..
ನೀನಿಲ್ಲದೆ ನನ್ನ ದಾರಿ ಕತ್ತಲೆ..
ನೀನಿಲ್ಲದೆ ನನ್ನ ಜೀವನ ಕತ್ತಲೆ..
ಯಾಕೆ?
ನೀನಿಲ್ಲದೆ ದೋಚಿದೆಲ್ಲವೂ ಕತ್ತಲೆಯೆನಗೆ..
ಮೋಂಬತ್ತಿಯೇ..
ಇರುಳಲಿ ಚಂದಿರನಾಗಿ ಬಾ..
ದಿನದಲಿ ನೇಸರನಂತೆ ಬಾ..
ನಯನ ಮನೋಹರವೆನಿಸಿ ನೆವನಗಳಾಡದೆ
ಆತ್ಮ ನೀಡು ಈ ಸತ್ತಂತಿಹ ಜೀವಕೆ..
ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗ.
ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು.
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************
ತಂಪಾಗಿದೆ ಇಳೆ
ಪ್ರಕೃತಿಗೆ ತಂದಿದೆ ಕಳೆ
ತುಂಬಿ ಹರಿಯುತ್ತಿದೆ ನದಿ ಕೆರೆ ಹೊಳೆ
ಶುದ್ಧವಾಗಿದೆ ಧೂಳು ಹಿಡಿದಿದ್ದ ಕಲ್ಲು
ಮರುಜೀವ ಪಡೆದಿದೆ ಹಸುರಾದ ಹುಲ್ಲು
ಮಳೆಯನ್ನು ಹಿಂಬಾಲಿಸಿದೆ ಕಾಮನಬಿಲ್ಲು
ಮನ ಸೆಳೆವ ವಾತಾವರಣ ಎಲ್ಲೆಲ್ಲೂ
ಗುಡುಗು ಮಿಂಚಿನೊಂದಿಗೆ ಸುರಿದಿದೆ ಮಳೆ
ಜೊತೆಗೆ ಸದ್ದು ಮಾಡಲು ಸಿದ್ಧವಾಗಿದೆ ಕೈಯ ಬಳೆ
ಮರಳಿ ಎದ್ದು ನಿಂತಿದೆ ಬಾಡಿ ಹೋಗಿದ್ದ ಬೆಳೆ
ಮಳೆಯು ತೊಳೆದಂತಾಗಿದೆ ಮನಸ್ಸಿನ ಕೊಳೆ
ದ್ವಿತೀಯ ಪಿಯುಸಿ (ವಾಣಿಜ್ಯ ವಿಭಾಗ)
ವಿವೇಕಾನಂದ ಪದವಿಪೂರ್ವ ಕಾಲೇಜು
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************
ನನ್ನನು ಸೋಲಿಸಿತು
ಹಚ್ಚ ಹಸುರಿನ ಪರಿಸರ
ಪ್ರಾಣಿ ಪಕ್ಷಿಯಿಂದ ಮೆರೆತಿದೆ
ಪರಿಸರ ನಾಶ ಮಾಡದಿರಿ
ಪರಿಸರ ಇಲ್ಲದೇ ನಾವಿಲ್ಲ
ಪ್ರತಿಯೊಂದು ಜೀವಿಗೂ ಬೇಕು
ಬೇಕೆ ಬೇಕು ಪರಿಸರ
ಉಳಿಸಿ ಉಳಿಸಿರಿ ಮರಗಳನ್ನು
ಬೆಳೆಸಿ ಬೆಳೆಸಿರಿ ಗಿಡಗಳನ್ನು
ಉಳಿಸಿ ಬೆಳೆಸಿರಿ ಪ್ರಕೃತಿಯನ್ನು
ಮಾಡಿ ಪರಿಸರ ಸೌಂದರ್ಯ
8ನೇ ತರಗತಿ
ಸರಕಾರಿ ಮಾದರಿ ಉನ್ನತ ಹಿರಿಯ
ಪ್ರಾಥಮಿಕ ಶಾಲೆ ಹಾರಾಡಿ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************
ಹಗಲಿನ ಬಾನಿನ ಬಣ್ಣದ ಚುಕ್ಕಿ
ಆಗಸದಲ್ಲಿ ದಿನವೂ ನೀನು ಹಾರತೀಯಾ
ಗೆಳೆಯರ ಜೊತೆ ಆಟ ಆಡತೀಯಾ
ನಿನ್ನನ್ನು ಹಿಡಿಯಲು ಹೋದರೆ
ಸಿಗದೆ ನನಗೆ ಸತಾಯಿಸುತೀಯಾ
ನಿನ್ನ ಜೊತೆ ಆಡಲು ತುಂಬಾ ಇಷ್ಟ
ಕೆಳಗೆ ನೀ ಬಾ ಆಗದು ಕಷ್ಟ
ಕಾಳು ಕಡಿ ತಿನ್ನಲು ಕೊಡುವೆ
ಇರಲು ನಿನಗೆ ಮನೆ ಮಾಡಿರುವೆ
ನಿನಗೆ ನಾನು ಓದಲು ಕಲಿಸುವೆ
ಕ್ರಿಕೇಟ್ ಆಟವನೂ ಕಲಿಸುವೆ
ನನಗೆ ಹಾರಲು ಕಲಿಸುವೆಯಾ?
7ನೇ ತರಗತಿ
ಬಿ.ಎಂ.ಎಲ್ ಪ್ರಾಥಮಿಕ ಶಾಲೆ
ಮಸ್ಕಿ , ರಾಯಚೂರು ಜಿಲ್ಲೆ
****************************************
ನಿಲ್ಲುವವನು ಜಾಣ
ಕಷ್ಟಗಳಿಗೆ ಹೆದರುವವನು
ದೊಡ್ಡ ಕೋಣ
ಗಣಿತ ಎಂದರೆ ನನಗೆ ಇಷ್ಟ
ರೂಪಶ್ರೀ ಟೀಚರ್ ಕೊಡುವ
ಕೆಲಸ ನನಗೆ ಇಷ್ಟ
ಅವರು ಹೇಳಿದನ್ನು ಮಾಡದಿದ್ದರೆ
ನನಗೆ ದಿನನಿತ್ಯ ನಷ್ಟ
ನಾನು ಇಂಗ್ಲಿಷಲ್ಲಿ ಸೂಪರು
ಕಾರಣ ನಮಗೆ ಹರಿಣಾಕ್ಷಿ ಟೀಚರು
6ನೇ ತರಗತಿ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ
ಪ್ರಾಥಮಿಕ ಶಾಲೆ ದೇವಶ್ಯಪಡೂರು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************
ಹತ್ತು ಬಾ ಚಿಣ್ಣರಿ
ಈ ನಿನ್ನ ನಗು
ನೋಡಿ ನಾನಾದೆ ಮಗು
ಕನ್ನಡದ ಜ್ಞಾನಿ
ತುಂಬ ದೊಡ್ಡ ಧ್ವನಿ
ಗುರುವೆ ನನ್ನ ಭಕ್ತಿ
ಗುರುವೆ ನನ್ನ ಶಕ್ತಿ
ತಪ್ಪಾದರೆ ಶಿಕ್ಷಿಸುವ
ನೋವಿನಲ್ಲಿ ಸ್ಪಂದಿಸುವ
ಸಾಧನೆಗೆ ಬೆನ್ನು ತಟ್ಟುವ ಶಿಕ್ಷಕರು
6ನೇ ತರಗತಿ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ
ಪ್ರಾಥಮಿಕ ಶಾಲೆ ದೇವಶ್ಯಪಡೂರು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************