ಪ್ರೀತಿಯ ಪುಸ್ತಕ : ಸಂಚಿಕೆ - 172
Saturday, July 19, 2025
Edit
ಪ್ರೀತಿಯ ಪುಸ್ತಕ
ಸಂಚಿಕೆ - 172
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ಈ ಪುಸ್ತಕದಲ್ಲಿ, ಮುದ್ದಾದ ಎರಡು ಹಾಡುಗಳು ಸುಂದರವಾದ ಚಿತ್ರಗಳ ಜೊತೆಗೆ ಇವೆ. ನಾವು ಚಿಕ್ಕವರಿರುವಾಗ ಕೇಳಿಸಿಕೊಳ್ಳುತ್ತಾ ಬೆಳೆದ ಹಾಡುಗಳು ಇದರಲ್ಲಿ ಇವೆ. ನಿಮಗೂ ಓದಿದರೆ ಖಂಡಿತಾ ಖುಷಿಯಾಗುವ ರೀತಿಯಲ್ಲಿ ಇದೆ. ರಾಜರತ್ನಂ ಅವರು ಮಕ್ಕಳಿಗೆ ಅನೇಕ ಪದ್ಯಗಳನ್ನು ಬರೆದಿದ್ದಾರೆ. ಇವನ್ನು ರಾಗ ಹಾಕಿ ಹಾಡಬಹುದು. ಪೀಪೀ ಊದುವುದು ಕೇಳಿದರೆ ನೆನಪಾಗುವುದು, ‘ಬಣ್ಣದ ತಗಡಿನ ತುತ್ತೂರಿ, ಕಾಸಿಗೆ ಕೊಂಡನು ಕಸ್ತೂರಿ’.. ಖುಷಿಯಿಂದ ಊದುತ್ತಾ, ಜಂಭ ಪಟ್ಟುಕೊಳ್ಳುವ ಕಸ್ತೂರಿಗೆ ಏನಾಯಿತು, ಹಾಡಿನಲ್ಲಿ ವಿವರ ಇದೆ. ಪಾಪು ಅಳುವುದು ಕೇಳಿಸಿಕೊಂಡರೆ ನೆನಪಾಗುವುದೇ, ‘ನಮ್ಮ ಮನೆಯಲೊಂದು ಪಾಪು ಇರುವುದು, ಎತ್ತಿಕೊಳದೆ ಹೋದರದಕೆ ಕೋಪ ಬರುವುದು. ಕೋಪ ಬಂದಾಗ ಏನು ಮಾಡುತ್ತದೆ ನೀವೂ ಊಹಿಸಬಹುದು. ಖುಷಿ ಖುಷಿಯ ಪುಸ್ತಕ..
ಲೇಖಕರು : ಜೆ.ಪಿ ರಾಜರತ್ನಂ
ಚಿತ್ರಗಳು: ಸತ್ಯ ಕೃಷ್ಣ ಪ್ರಕಾಶ್ ಕೆ
ಪ್ರಕಾಶಕರು: ಪ್ರಥಮ್ ಬುಕ್ಸ್
ಬೆಲೆ: ರೂ.70/-
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: 080 – 42052574/41159009; www.prathambooks.org; www.storyweaver.org.in.
ಪುಟ್ಟ ಮಕ್ಕಳಿಗೆ ಓದಿ ಹೇಳಬಹುದಾದ ಪುಸ್ತಕ ಇದು. 2-3 ನೇ ತರಗತಿಯ ಮಕ್ಕಳು ಓದಿಕೊಳ್ಳಬಹುದು. ಇನ್ನೂ ದೊಡ್ಡ ಮಕ್ಕಳಿಗೂ ಇಷ್ಟ ಆಗುವಂತೆ ಇದೆ.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************