ಪ್ರೀತಿಯ ಪುಸ್ತಕ : ಸಂಚಿಕೆ - 171
Friday, July 11, 2025
Edit
ಪ್ರೀತಿಯ ಪುಸ್ತಕ
ಸಂಚಿಕೆ - 171
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ಕ್ಯುಮುಲೋ ಪುಟ್ಟಿ ಯಾರು ಗೊತ್ತೇ, ಅವಳು ಒಂದು ಮೋಡ, ಅಲ್ಲಿ ಕಿಟಿಕಿ ಪರದೆ ಹಿಂದೆ ಬಚ್ಚಿಟ್ಟುಕೊಂಡಿದ್ದಾಳೆ. ಯಾಕೋ ಬೆವೆತು ಬಿಟ್ಟಿದ್ದಾಳೆ. ಯಾಕಿರಬಹುದು? ಅವಳು ಮೋಡದ ಪಾರ್ಕಿಗೆ ಹೋದಾಗ ಅವಳಿಗೆ ತೇಲುವುದಕ್ಕೆ ಆಗುವುದಿಲ್ಲ. ಬೇರೆ ಮೋಡಗಳು ತನ್ನನ್ನೇ ನೋಡುತ್ತಿವೆಯೇನೋ, ನಗುತ್ತವೇನೋ ಎಂಬ ಆತಂಕ ಈ ಪುಟ್ಟಿಗೆ. ನಿಮಗೂ ಅನೇಕ ಸಾರಿ ಹೀಗೆ ಆಗಿರಬಹುದು ಅಲ್ಲವೇ? ನನಗೂ ಕೆಲವೊಮ್ಮೆ ಆಗುತ್ತದೆ. ಏನೋ ಮಾಡಬೇಕು ಅಂತ ಆಸೆ, ಆದರೆ ಯಾರಾದರೂ ನಗುತ್ತಾರೇನೋ ಎಂಬ ಭಯ ಆಗುತ್ತಿರುತ್ತದೆ. ಆಮೇಲೆ ಕ್ಯುಮುಲೋ ಪುಟ್ಟಿಗೆ ಎಲ್ಲಿಂದಲೋ ಹೇಗೋ ಧೈರ್ಯ ಬರುತ್ತದೆ. ಯಾರೋ ಒಂದು ಗುಟ್ಟು ಹೇಳಿಕೊಡುತ್ತಾರೆ..ಅದೇನು ಅಂತ ಪುಸ್ತಕದಲ್ಲಿ ಇದೆ. ಓದಿ. ಪುಟ್ಟಪುಟ್ಟ ಮೋಡಗಳ ಸುಂದರ ಚಿತ್ರಗಳೂ ಇವೆ.
ಲೇಖಕರು : ಕುಳಲಿ ಮಾಣಿಕ್ಯವೇಲ್
ಚಿತ್ರಗಳು: ಅದಿತಿ ದಾಮ್ಲೆ
ಅನುವಾದ: ಜಿ.ಎನ್.ಮೋಹನ್
ಪ್ರಕಾಶಕರು: ಪ್ರಥಮ್ ಬುಕ್ಸ್
ಬೆಲೆ: ರೂ.70/-
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: 080 – 42052574/41159009; www.prathambooks.org; www.storyweaver.org.in.
ಪ್ರಥಮ್ ಪ್ರಕಾರ ಇದು 2ನೇ ಹಂತದ ಪುಸ್ತಕ. ಓದಲು ಕಲಿಯುತ್ತಿರುವ ಮಕ್ಕಳಿಗಾಗಿ; ಪದಗಳನ್ನು ಗುರುತಿಸಿ ಓದುವ, ಇತರರ ಸಹಾಯದಿಂದ ಹೊಸ ಪದಗಳನ್ನು ಓದುವ ಮಕ್ಕಳಿಗಾಗಿ ಇದೆ.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
*****************************************