-->
ಪ್ರೀತಿಯ ಪುಸ್ತಕ : ಸಂಚಿಕೆ - 170

ಪ್ರೀತಿಯ ಪುಸ್ತಕ : ಸಂಚಿಕೆ - 170

ಪ್ರೀತಿಯ ಪುಸ್ತಕ
ಸಂಚಿಕೆ - 170
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ 
                    
     

                        ವ್ಯಾಸನ ಮಹಾಭಾರತ
ಪ್ರೀತಿಯ ಮಕ್ಕಳೇ... ಮಹಾಭಾರತದ ಬಗ್ಗೆ ನಿಮಗೆ ಗೊತ್ತಿರಬಹುದು. ಐದು ಜನ ಪಾಂಡವರು, ನೂರು ಜನ ಕೌರವರು. ಅವರ ನಡುವೆ ಅಧಿಕಾರಕ್ಕಾಗಿ ಮನಸ್ತಾಪ, ಯುದ್ಧ.... ಕತೆಯೊಳಗೆ ಒಂದಷ್ಟು ಕತೆಗಳು. ಎಲ್ಲವೂ ಅದ್ಭುತ. ಅಲ್ಲವೇ..? 

ಈ ಪುಸ್ತಕದಲ್ಲಿ ಮಹಾಭಾರತದ ಕಥೆಯನ್ನು ವ್ಯಾಸ ಮುನಿ ಹೇಗೆ ಬರೆದ ಎಂಬುದರ ಒಂದು ಸೊಗಸಾದ ಚಿತ್ರಣವಿದೆ. ಅದಕ್ಕೆ ಸರಿಯಾದ ಚಿತ್ರಗಳು ಮನಸೆಳೆಯುವ ಹಾಗೆ ಇವೆ. ತಿಳಿ ಹಾಸ್ಯದ ಜೊತೆಗೆ ಈ ಕಥೆಯನ್ನು ಹೇಳಿದ್ದಾರೆ. ವ್ಯಾಸನ ತಲೆಯಲ್ಲಿ ಮಹಾಭಾರತದ ಕಥೆ ವೇಗವಾಗಿ ಓಡುತ್ತದಂತೆ, ಅವನಿಗೇ ಬರೆದುಕೊಳ್ಳಲು ಆಗದಷ್ಟು ವೇಗವಾಗಿ.. ಆಗ ಅವನು ಬರೆಯಲು ಜನ ಹುಡುಕುತ್ತಾನೆ. ಸಿಗುವುದು ನಮ್ಮ ಗಣಪ. ವ್ಯಾಸ ಮುನಿ ಮತ್ತು ಗಣಪನ ನಡುವೆ ಬರೆಯುವ ಮುನ್ನ ನಡೆಯುವ ಮಾತುಕತೆ, ಅವರು ಹಾಕುವ ಶರತ್ತುಗಳು ತಮಾಷೆಯ ಧಾಟಿಯಲ್ಲಿ ಇವೆ. ಕಥೆಗಳು ಬಾಯಿಂದ ಬಾಯಿಗೆ ಹೇಗೆ ಬೆಳೆಯುತ್ತವೆ ಎಂದು ಕೂಡಾ ನೀವು ಊಹಿಸಬಹುದು. ಓದಲು ಮರೆಯದಿರಿ. 
ಕಥೆ ಹೇಳಿದವರು: ಚಿತ್ರಾ ಕೃಷ್ಣನ್
ಚಿತ್ರಗಳು: ಅರುಣ್ ಕುಮಾರ್
ಅನುವಾದ: ಬಾಗೇಶ್ರೀ
ಪ್ರಕಾಶಕರು: ಪ್ರಥಮ್ ಬುಕ್ಸ್
ಬೆಲೆ: ರೂ.150/-
6+ ವಯಸ್ಸಿನ ಮಕ್ಕಳಿಗಾಗಿ ಈ ಪುಸ್ತಕ ಇದೆ. 
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: www.tulikabooks.com email: tulikabooks@vsnl.com
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************


Ads on article

Advertise in articles 1

advertising articles 2

Advertise under the article