-->
ಶಾಲಾ ನಾಯಕಿಯಾಗಿ... ಬರಹ : ಧನ್ಯ, 10ನೇ ತರಗತಿ

ಶಾಲಾ ನಾಯಕಿಯಾಗಿ... ಬರಹ : ಧನ್ಯ, 10ನೇ ತರಗತಿ

ಮಕ್ಕಳ ಲೇಖನ : ಶಾಲಾ ನಾಯಕಿಯಾಗಿ...
ಬರಹ : ಧನ್ಯ 
10ನೇ ತರಗತಿ 
ಲಿಟ್ಲ್ ಫ್ಲವರ್ ಪ್ರೌಢಶಾಲೆ ಕಿನ್ನಿಗೋಳಿ 
ಮಂಗಳೂರು ಉತ್ತರ, ದಕ್ಷಿಣ ಕನ್ನಡ ಜಿಲ್ಲೆ

             
ನಾನು ಶಾಲಾ ನಾಯಕಿಯಾಗಿ ಆಯ್ಕೆಯಾದ ಕ್ಷಣವು ನನ್ನ ಬದುಕಿನಲ್ಲಿ ಮರೆಯಲಾಗದ ತಿರುವು ಆಗಿದೆ. ನಾನು ಶಾಲಾ ನಾಯಕಿಯಾದಾಗ ನನ್ನೊಳಗೆ ನೇತೃತ್ವದ ಗುಣಗಳು ಬೆಳೆಯಲಾರಂಭಿಸಿದವು. ಈ ಜವಾಬ್ದಾರಿಯು ನನಗೆ ಕೇವಲ ಶಾಲೆಯಲ್ಲಿ ಅಷ್ಟೇ ಅಲ್ಲದೆ ಸಮುದಾಯದ ಮೇಲೆ ಪ್ರಭಾವ ಬೀರುವ ಅವಕಾಶಗಳನ್ನು ಕೊಟ್ಟಿತು. ಅದು ಕೇವಲ ಹುದ್ದೆಗಿಂತ ಹೆಚ್ಚು, ನಾಯಕತ್ವ, ಸೇವಾ ಮನೋ ಭಾವನೆ ಹಾಗೂ ಪ್ರೇರಣೆಯ ಸಂಕೇತ. 

ಈ ಹುದ್ದೆಯ ಮೂಲಕ ನನಗೆ ನನ್ನ ಒಳಗಿನ ಶಕ್ತಿಯನ್ನು ಅರಿಯುವ ಅವಕಾಶ ದೊರೆಯಿತು. ಶಾಲೆಯ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸುವಾಗ, ನಾನೊಬ್ಬ ನಾಯಕಿಯಾಗಿ ಹೇಗೆ ಎಲ್ಲ ವಿದ್ಯಾರ್ಥಿಗಳನ್ನು ಒಟ್ಟಾಗಿ ಕರೆದೊಯ್ಯಬಹುದು ಎಂಬುದನ್ನು ಕಲಿತೆ. ಪ್ರತಿಯೊಬ್ಬರ ಸಲಹೆ ಸೂಚನೆಗಳನ್ನು ಕೇಳಿ, ಎಲ್ಲರ ಅಭಿಪ್ರಾಯಗಳಿಗೆ ತಲೆಬಾಗಿ, ಸಮಾನತೆಯಿಂದ ನಡೆದು ನಾಯಕತ್ವದ ತತ್ವಗಳನ್ನು ಅನುಸರಿಸುವುದು. ಇವು ನನಗೆ ಪ್ರಮುಖ ನನ್ನ ಜೀವನದ ಪಾಠಗಳಾಗಿ ಉಳಿಯುವವು. 

ಇವು ನನಗೆ ಮುಂದೆ ದೇಶದ ರಾಜಕೀಯ ನಾಯಕತ್ವ ಪಡೆಯುವ ಅವಕಾಶವೆಂದು ನಾನು ತಿಳಿದುಕೊಂಡಿದ್ದೇನೆ. ನಾನು ಈ ಜವಾಬ್ದಾರಿಯುತ ಕೆಲಸ ಮಾಡುವಾಗ ನನ್ನೊಳಗೆ ದೇಶದ ಬಗ್ಗೆ, ಸಮಾಜದ ಬಗ್ಗೆ ಕಾಳಜಿ ಹೆಚ್ಚಾಯಿತು. ಪ್ರಾಮಾಣಿಕತೆ, ಶಿಸ್ತು, ಪರೋಪಕಾರ ಮತ್ತು ಧೈರ್ಯದಿಂದ ನಾನು ಇತರರ ಗಮನ ಸೆಳೆಯಬಲ್ಲೆ. ಇವೆಲ್ಲ ಭವಿಷ್ಯದಲ್ಲಿ ದೇಶದ ಒಬ್ಬ ಪ್ರಜ್ಞಾವಂತ ನಾಯಕಿಯಾಗಿ ಬೆಳೆಯಲು ಬೇಕಾದ ಗುಣಗಳು. 

ಶಾಲೆಯ ನಾಯಕತ್ವ ನನ್ನಲ್ಲಿ ಆತ್ಮವಿಶ್ವಾಸ ಸಹಾನುಭೂತಿ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸಿತು. ಇವುಗಳಲ್ಲಿ ಬೆಳೆದು ನಾನು ಮುಂದಿನ ದಿನಗಳಲ್ಲಿ ಸಮಾನತೆ, ಸಮೃದ್ಧಿ ಮತ್ತು ಶಾಂತಿಗೆ ಬದ್ಧನಾಗುವ ಒಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿ ಸಮಾಜದ, ದೇಶದ ನಾಯಕಿಯಾಗಿ ರೂಪುಗೊಳ್ಳಲು ಬಯಸುತ್ತೇನೆ. 

ಇಂದಿರಾ ಗಾಂಧಿ, ಡಾಕ್ಟರ್ ಬಿ.ಆರ್. ಅಂಬೇಡ್ಕರ್, ಅಬ್ದುಲ್ ಕಲಾಂ ರಂತಹ ಮಹಾನ್ ವ್ಯಕ್ತಿಗಳ ಪ್ರೇರಣೆಯಿಂದ ನಾನು ಒಂದು ಮಹಾನ್ ನಾಯಕಿಯಾಗಲು ಬಯಸುತ್ತೇನೆ. ಈ ಮೇಲಿನ ಎಲ್ಲ ಮಹಾನ್ ವ್ಯಕ್ತಿಗಳು ತಮ್ಮ ನಿರ್ಧಾರಗಳಲ್ಲಿ ದೃಢತೆ, ಸ್ಪಷ್ಟತೆ ಮತ್ತು ಜನಪರ ಕಾಳಜಿಯನ್ನು ಹೊಂದಿದ್ದರು. ಈ ಮಹಾನ್ ವ್ಯಕ್ತಿಗಳು ತಮ್ಮ ಹುದ್ದೆಯ ಮೂಲಕ ದೇಶದ ಜನರ ಜೀವನವನ್ನು ಉತ್ತಮಗೊಳಿಸಲು ಹಾಗೂ ದೇಶದ ನಾಗರಿಕರ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿದ್ದರು. ಅವರ ಹಾದಿಯಲ್ಲಿಯೇ ನಾನು ನಡೆಯಬೇಕೆಂದು ಶಾಲಾ ಹಂತದಲ್ಲಿ ನಾಯಕಿ ಆಗಿ ಕೆಲಸ ಮಾಡಲು ಸಂತೋಷ ಪಡುತ್ತೇನೆ. ಭವಿಷ್ಯದಲ್ಲಿ ದೇಶದ ಸುಸ್ಥಿರ ಅಭಿವೃದ್ಧಿಗೆ ನನ್ನ ಕೌಶಲ್ಯಗಳನ್ನು ಬಳಸಿ, ದೇಶದ ಅಭಿವೃದ್ಧಿಗಾಗಿ ದುಡಿಯಬೇಕೆಂದು ನಾನು ನಿರ್ಧರಿಸಿದ್ದೇನೆ. ಶಿಕ್ಷಣದ ಹಕ್ಕು, ಮಹಿಳಾ ಸಬಲೀಕರಣ ಮತ್ತು ಪರಿಸರ ಸಂರಕ್ಷಣೆಗಾಗಿ ದುಡಿಯಬೇಕೆಂದು ನನ್ನ ಆಸೆ. 

ನನ್ನ ಹಾಗೆ ವಿದ್ಯಾರ್ಥಿ ಜೀವನದಲ್ಲಿ ಅನೇಕ ವಿದ್ಯಾರ್ಥಿಗಳು ನಾಯಕ ಸ್ಥಾನವನ್ನು ಅಲಂಕರಿಸಿರಬಹುದು. ಅವರಿಗೂ ನನ್ನ ಮನಸ್ಸಿನ ವಿಚಾರಗಳು ಮನದಾಳಕ್ಕೆ ಮುಟ್ಟಲಿ ಎನ್ನುವುದು ನನ್ನ ಆಸೆ. ಭವಿಷ್ಯದಲ್ಲಿ ನಮ್ಮ ದೇಶ ವಿಶ್ವ ಪಟಲದಲ್ಲಿ ಪ್ರಥಮ ಸ್ಥಾನವನ್ನು ಪಡೆಯಲಿ ಎಂದು ಆಶಿಸುತ್ತೇನೆ. 
(ಮಾರ್ಗದರ್ಶಕ ಶಿಕ್ಷಕರು : ಐರಿನ್ ಫರ್ನಾಂಡಿಸ್)
...................................................... ಧನ್ಯ 
10ನೇ ತರಗತಿ 
ಲಿಟ್ಲ್ ಫ್ಲವರ್ ಪ್ರೌಢಶಾಲೆ ಕಿನ್ನಿಗೋಳಿ 
ಮಂಗಳೂರು ಉತ್ತರ, ದಕ್ಷಿಣ ಕನ್ನಡ ಜಿಲ್ಲೆ
*******************************************




Ads on article

Advertise in articles 1

advertising articles 2

Advertise under the article