-->
ಪ್ರೀತಿಯ ಪುಸ್ತಕ : ಸಂಚಿಕೆ - 169

ಪ್ರೀತಿಯ ಪುಸ್ತಕ : ಸಂಚಿಕೆ - 169

ಪ್ರೀತಿಯ ಪುಸ್ತಕ
ಸಂಚಿಕೆ - 169
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ 
                    
     
                             ರಜೆ ಬಂತು 
ಪ್ರೀತಿಯ ಮಕ್ಕಳೇ... ರಜೆ ಅಂದರೆ ಮಕ್ಕಳಿಗೆ ಅದೆಷ್ಟು ಪ್ರೀತಿ. ಕುಣಿದು ಕುಪ್ಪಳಿಸುವ ಆನಂದ. ಅದರಲ್ಲೂ ಈ ಪುಸ್ತಕದಲ್ಲಿಯ ಹುಡುಗ ಘಟಿಕ್ ರಜೆಗಾಗಿ ಚಡಪಡಿಸುವ ಹಾಗೆ ಆಗಿತ್ತು. ಅವನು ತುಂಬಾ ತುಂಟ ಹುಡುಗ. ತನ್ನ ತಮ್ಮ ಮಾಖನ್ ಜೊತೆ ಜಗಳವಾಡುತ್ತಿದ್ದ ಎಂದು ಅವನ ಅಮ್ಮನಿಗೆ ಚಿಂತೆಯಾಗಿತ್ತು. ಅದೇ ಸಂದರ್ಭದಲ್ಲಿ ಊರಿಗೆ ಬಂದ ಅವಳ ಅಣ್ಣ ಘಟಿಕನ್ನು ತನ್ನ ಊರಾದ ಕಲಕತ್ತೆಗೆ ಕರೆದುಕೊಂಡು ಹೋಗಿ ಓದಿಸುವುದಾಗಿ ಹೇಳಿದ. ಅಮ್ಮನಿಗೆ ದೊಡ್ಡದೊಂದು ಭಾರ ಇಳಿದಂತಾಯಿತು. ಹಳ್ಳಿಯ ವಿಶಾಲ ಜಾಗದಲ್ಲಿ ಕುಣಿದಾಡುತ್ತಿದ್ದ ಘಟಿಕ್ ಗೆ, ಕಲಕತ್ತೆಯ ಪರಿಸರ ಹಿಡಿಸಲೇ ಇಲ್ಲ. ಜೊತೆಗೆ ಅವನ ಅವನ ಅತ್ತೆಗೆ ಅವನು ಬಂದಿದ್ದು ಇಷ್ಟವೇ ಆಗಲಿಲ್ಲ. ಮನೆಗೆ ಹೋಗೋಣವೆಂದರೆ ಮಾಮ, ರಜೆ ಬರಲಿ ಅಂದಿದ್ದ. ಘಟಿಕ್ ಏನೇನು ಅನುಭವಿಸಿದ, ಕೊನೆಗೆ ಅವನಿಗೆ ಯಾವಾಗ ರಜೆ ಸಿಕ್ಕಿತು ಅನ್ನುವ ವಿವರ ತಿಳಿಯಲು ಪುಸ್ತಕ ಓದಿ.  

ಲೇಖಕರು : ರವೀಂದ್ರನಾಥ ಠಾಕೂರ್
ಚಿತ್ರಗಳು : ಪಾರ್ಥ ಸೆನ್ ಗುಪ್ತಾ  
ಅನುವಾದ : ಆನಂದ ಪಾಟೀಲ
ಪ್ರಕಾಶಕರು : ನ್ಯಾಶನಲ್ ಬುಕ್ ಟ್ರಸ್ಟ್, ಇಂಡಿಯಾ
ಬೆಲೆ: ರೂ.30/-

5-6ನೇ ತರಗತಿಯ ಮಕ್ಕಳು ಓದಿಕೊಳ್ಳಬಹುದು. 
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: www.nbtindia.gov.in 
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************


Ads on article

Advertise in articles 1

advertising articles 2

Advertise under the article