-->
ಪ್ರೀತಿಯ ಪುಸ್ತಕ : ಸಂಚಿಕೆ - 167

ಪ್ರೀತಿಯ ಪುಸ್ತಕ : ಸಂಚಿಕೆ - 167

ಪ್ರೀತಿಯ ಪುಸ್ತಕ
ಸಂಚಿಕೆ - 167
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ 
                    
     

                ತಕ್ಕಿಟ ತರಿಕಿಟ ತಿರುಗುವ ಚೆಂಡು
ಪ್ರೀತಿಯ ಮಕ್ಕಳೇ.. ಚೆಂಡಾಟ ಎಷ್ಟು ಚಂದ ಅಲ್ಲವೇ? ಈ ಪುಸ್ತಕದ ಹೆಸರು ನೋಡಿ. ತಕ್ಕಿಟ ತರಿಕಿಟ ತಿರುಗುವ ಚೆಂಡು. ಹೇಗೆ ಒಂದು ಲಯದಿಂದ ಕೂಡಿದೆ ಅಲ್ಲವೇ? ಚೆಂಡಾಟ ಹಾಗೆಯೇ ಇರುತ್ತದೆ ತಾನೇ. ಈ ಪುಸ್ತಕದಲ್ಲಿ ಚೆಂಡು ತಿರುಗಾಡುವಾಗ ಕುಣಿದು ಕುಪ್ಪಳಿಸುವ ರೀತಿ ಲಯಗಳನ್ನು ಜೋಡಿಸಿದ್ದಾರೆ. ಓದಲು ತುಂಬಾ ಮಜಾ ಅನಿಸುತ್ತದೆ. ದೊಡ್ಡ ಕೆಂಪು ಚೆಂಡಿನೊಂದಿಗೆ ಅಬುವಿನ ಆಟದ ಸೊಗಸು ನೋಡಲು ನೀವು ಈ ಪುಸ್ತಕ ತಿರುವಲೇ ಬೇಕು. ಚಿತ್ರಗಳು ಕೂಡಾ ಅಷ್ಟೇ ಮಜವಾಗಿವೆ. ಚೆಂಡಿನ ಕುಣಿತಕ್ಕೆ ಸರಿಯಾಗಿ ಇವೆ ಈ ಚಿತ್ರಗಳು. ಇದನ್ನು ಓದಿದ ಮೇಲೆ ನಿಮ್ಮ ಚೆಂಡು ಕೂಡಾ ಲಯದಲ್ಲಿ ಕುಣಿದು ಕುಪ್ಪಳಿಸಬಹುದು. 

ಲೇಖಕರು : ಜೇಕಬ್ ಸ್ಯಾಮ್ ಸನ್ ಮುತ್ತಡ
ಚಿತ್ರಗಳು : ಅಶೋಕ್ ರಾಜಗೋಪಾಲನ್
ಅನುವಾದ : ಅಶ್ವಿನಿ ಭಟ್ 
ಪ್ರಕಾಶಕರು : ತುಲಿಕಾ
ಬೆಲೆ : ರೂ.75/-

2+ ವಯಸ್ಸಿನ ಮಕ್ಕಳಿಗಾಗಿ ಇದೆ. 
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: www.tulikabooks.com email: tulikabooks@vsnl.com
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************


Ads on article

Advertise in articles 1

advertising articles 2

Advertise under the article