-->
ಪ್ರೀತಿಯ ಪುಸ್ತಕ : ಸಂಚಿಕೆ - 166

ಪ್ರೀತಿಯ ಪುಸ್ತಕ : ಸಂಚಿಕೆ - 166

ಪ್ರೀತಿಯ ಪುಸ್ತಕ
ಸಂಚಿಕೆ - 166
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ 
                    
                       ಪುಚ್ಕುವಿಗೊಂದು ಬುಕ್ಕು
ಪ್ರೀತಿಯ ಮಕ್ಕಳೇ.. ಪುಟ್ಟ ಹುಡುಗಿ ಪುಚ್ಕುಗೆ ಪುಸ್ತಕವೆಂದರೆ ಬಹಳ ಪ್ರೀತಿ. ಸದಾ ಓದುತ್ತಿರುತ್ತಾಳೆ. ಒಂದಾದ ಮೇಲೆ ಒಂದರಂತೆ ಓದುತ್ತಿರುತ್ತಾಳೆ. ಅವಳು ಎಲ್ಲಾ ಪುಸ್ತಕಗಳನ್ನೂ ಓದಿ ಆಗಿದೆ. ಮನೆಯಲ್ಲಿ, ಶಾಲೆಯಲ್ಲಿ, ಉದ್ಯಾನದಲ್ಲಿ, ಮಂಚದ ಮೇಲೆ ಕುಳಿತಿರುವಾಗ.. ಓದುತ್ತಲೇ ಇರುತ್ತಾಳೆ. ಪುಸ್ತಕದ ಪ್ರೀತಿ ಹಿಡಿದರೆ ಹಾಗೆಯೇ. ನಿಮಗೂ ಹಾಗೆಯೇ ಆದೀತು. ಬೋಲ್ಟು, ಡೋಡ್ಲ ಅವಳನ್ನು ಯಾಕೆ ಓದುತ್ತೀಯಾ, ಕಾರ್ಟೂನ್ ನೋಡಲು ಬಾ ಅಂತ ಕರೆಯುತ್ತಿರುತ್ತಾರೆ. “ಪುಸ್ತಕಗಳಲ್ಲಿ ಅದಕ್ಕಿಂತ ಹೆಚ್ಚು ಮೋಜಿದೆ” ಎನ್ನುತ್ತಾಳೆ ಪುಚ್ಕು. ನಿಮಗೆ ಇಷ್ಟವಿದ್ದರೆ ಪುಚ್ಕು ಕಂಡು ಕೊಂಡ ಮೋಜು ನೀವೂ ಅನುಭವಿಸಬಹುದು. ದೊಡ್ಡ ಪುಸ್ತಕ, ದೊಡ್ಡ ದೊಡ್ಡ ಆಕರ್ಷಕವಾದ, ಭಾವನಾತ್ಮಕ ಚಿತ್ರಗಳೂ ಇವೆ. ಅಂದಹಾಗೆ, ಪುಚ್ಕುಗೆ ಈಗ ಹೊಸ ಪುಸ್ತಕಗಳು ಬೇಕು. ಗ್ರಂಥಾಲಯದಿಂದ ತಂದ ಎಲ್ಲಾ ಪುಸ್ತಕಗಳನ್ನು ಓದಿ ಆಗಿದೆ. ಗ್ರಂಥಾಲಯದಲ್ಲಿ ಪುಸ್ತಕಗಳು ಇವೆ, ಆದರೆ ಅವಳಿಗೆ ಎಟುಕದಷ್ಟು ಎತ್ತರದಲ್ಲಿವೆ. ಅವಳು ಹೇಗೆ ಆ ಪುಸ್ತಕಗಳನ್ನು ಪಡೆಯುತ್ತಾಳೆ ಎಂಬ ಸುಂದರ ಚಿತ್ರಣ ಇಲ್ಲಿದೆ. 

ಲೇಖಕರು : ದೀಪಾಂಜನಾ ಪಾಲ್
ಚಿತ್ರಗಳು : ರಾಜೀವ್ ಐಪ್  
ಅನುವಾದ : ಸುಭಾಷಿಣಿ ಎಂ.ಎಲ್
ಪ್ರಕಾಶಕರು: ಪ್ರಥಮ್ ಬುಕ್ಸ್

ಬೆಲೆ: ರೂ.80/-
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: 080 – 42052574/41159009; www.prathambooks.org; www.storyweaver.org.in. 

ಪ್ರಥಮ್ ಪ್ರಕಾರ ಇದು 3ನೇ ಹಂತದ ಪುಸ್ತಕ. ಸ್ವಇಚ್ಛೆಯಿಂದ ಓದುವ ಮಕ್ಕಳಿಗಾಗಿ; ಇನ್ನೊಬ್ಬರ ಸಹಾಯ ಇಲ್ಲದೆ ತಾವೇ ಓದುವ ಮಕ್ಕಳಿಗಾಗಿ. 
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************


Ads on article

Advertise in articles 1

advertising articles 2

Advertise under the article