-->
ಜಗಲಿ ಕಟ್ಟೆ : ಸಂಚಿಕೆ - 72

ಜಗಲಿ ಕಟ್ಟೆ : ಸಂಚಿಕೆ - 72

ಜಗಲಿ ಕಟ್ಟೆ : ಸಂಚಿಕೆ - 72
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 


ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ


ಬೇಸಿಗೆ ರಜಾ ಸಂಭ್ರಮದಲ್ಲಿ ಯುದ್ಧದ ಕಾರ್ಮೋಡ ಕವಿದಿರುವುದು ಬೇಸರ ತರಿಸಿದ್ದರೂ ನಮ್ಮ ಸೈನಿಕರ ಪರಾಕ್ರಮ ಕಂಡು ನಮಗೆಲ್ಲಾ ಹೆಮ್ಮೆ ಅನಿಸುತ್ತಿದೆ ಅಲ್ಲವೇ...? ನಮ್ಮ ಸೈನಿಕರು ಶತ್ರುಗಳಿಗೆ ನೀಡಿದ ಪ್ರತಿಯೊಂದು ಏಟೂ ಕೂಡ ವಿರೋಧಿಗಳಿಗೆ ಭಯ ಹುಟ್ಟಿಸಿದೆ. ಪಹಲ್ಗಾಮ್ ನಲ್ಲಿ ನರರಾಕ್ಷಸರ ಧಾಳಿಗೆ ತುತ್ತಾದ ಮುಗ್ಧ ಜೀವಗಳಿಗೆ ಮುಕ್ತಿ ಸಿಕ್ಕ ಕ್ಷಣಗಳನ್ನು ಎನಿಸಿದಾಗ ಮೈ ಝುಮ್ಮೆನಿಸುತ್ತದೆ..!! ಗಡಿ ಕಾಯುವ ರಕ್ಷಕರು ದೇಶದ ಜನತೆಗಾಗಿ ತಮ್ಮ ಜೀವವನ್ನು ಮುಡಿಪಾಗಿಟ್ಟಿದ್ದಾರೆ. ಹೌದು ನಮ್ಮ ದೇಶದ ಬಗ್ಗೆ ಹೆಮ್ಮೆ ಅನಿಸುತ್ತದೆ. ಭಾರತದ ಬಗ್ಗೆ ಅಭಿಮಾನ ಮೂಡುತ್ತದೆ... 
      ನಮ್ಮ ಸೈನಿಕರ ಬಗ್ಗೆ, ದೇಶದ ಬಗ್ಗೆ ನೀವೂ ನಿಮ್ಮ ಹೃದಯದ ಮಾತುಗಳನ್ನು ನಮಗೆ ಬರೆದು ಕಳಿಸಿ... ಜಗಲಿಯ ಅಂಕಣದಲ್ಲಿ ನಾವೆಲ್ಲ ಸೇರಿ ಓದೋಣ. ದೇಶದ ಹಿರಿಮೆಯನ್ನು ಸಾರೋಣ ಆಗದೇ...
      ಮಕ್ಕಳ ಜಗಲಿಯಲ್ಲಿ ಪ್ರಕಟವಾಗುವ ಪ್ರತಿಯೊಂದು ಅಂಕಣಗಳು ಕೂಡ ತುಂಬಾ ಪ್ರೇರಣಾತ್ಮಕವಾಗಿದೆ. ಶಿಕ್ಷಣಾಧಿಕಾರಿ ಜ್ಞಾನೇಶ್ ಸರ್, ರಾಜ್ಯಪ್ರಶಸ್ತಿ ಪುರಸ್ಕೃತ ರಮೇಶ್ ಬಾಯಾರು ಸರ್, ನಿವೃತ್ತ ಪ್ರವಾಚಕರು ದಿವಾಕರ ಶೆಟ್ಟಿ , ವಿಜಯ ಶೆಟ್ಟಿ ಸಾಲೆತ್ತೂರು, ರಮೇಶ್ ನಾಯ್ಕ ಉಪ್ಪುಂದ, ವಾಣಿ ಪೆರಿಯೋಡಿ ಇವರೆಲ್ಲರ ಜೊತೆ ಓದಿದ ಪುಸ್ತಕ, ಶಿಕ್ಷಕರ ಸ್ಕೂಲ್ ಡೈರಿ ಬರೆಯುವ ಆತ್ಮೀಯರು ಜೊತೆಗೆ ಪ್ರತಿಯೊಂದು ವಾರದ ಕೊನೆಗೆ ಲೇಖನಗಳನ್ನು ಓದಿ ಪ್ರೋತ್ಸಾಹದ ಮಾತುಗಳನ್ನು ನೀಡುತ್ತಿರುವ ಶ್ರೀರಾಮ ಮೂರ್ತಿಯವರು... ಕತೆ, ಕವನ, ಲೇಖನ, ಚಿತ್ರಗಳ ಮೂಲಕ ಮಕ್ಕಳ ಜಗಲಿಯ ಸೊಗಸನ್ನು ಹೆಚ್ಚಿಸುತ್ತಿರುವ ಮಕ್ಕಳು, ಶಿಕ್ಷಕರು ಹಾಗೂ ಪೋಷಕರು ಜಗಲಿಯ ಬೆಳವಣಿಗೆಗೆ ಶಕ್ತಿಯಾಗಿದ್ದಾರೆ.
      ಕಳೆದ ವಾರದ ಸಂಚಿಕೆಯಲ್ಲಿ ಜಗಲಿಯ ವಿದ್ಯಾರ್ಥಿನಿ ಉಡುಪಿಯ ಸಪ್ತಮಿ 'ನೈತಿಕ ಶಿಕ್ಷಣದ ಪ್ರಾಮುಖ್ಯತೆ' ಕುರಿತಾಗಿ ಲೇಖನ ಬರೆದಿದ್ದರು. ನೈತಿಕ ಶಿಕ್ಷಣದ ಬಗ್ಗೆ ತುಂಬಾ ಸಮಯದಿಂದ ಭಾಷಣ, ಲೇಖನ, ಬೋಧನೆಗಳನ್ನು ಕೇಳುತ್ತಾ ಬಂದಿದ್ದರೂ ಮತ್ತೆ ಮತ್ತೆ ಇದರ ಅಗತ್ಯತೆಯನ್ನು ನಾವು ಕಂಡುಕೊಳ್ಳುತ್ತಾ ಇದ್ದೇವೆ. ಕಾರಣ ಇಂದಿನ ಸಮಾಜದಲ್ಲಿನ ವರ್ತನೆಗಳು. 
     ಇತ್ತೀಚಿಗೆ ನನ್ನ ಆತ್ಮೀಯರೊಬ್ಬರು ಮಾತನಾಡುತ್ತಾ, ತನ್ನ ಶಾಲೆಯ ಒಂದೇ ಒಂದು ಕಿಟಕಿಗಳ ಗಾಜುಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವುದಿಲ್ಲ. ಪುಡಿ ಮಾಡ್ತಾರೆ, ನೀರಿನ ಟ್ಯಾಪ್ ಗಳನ್ನು ತುಂಡರಿಸ್ತಾರೆ, ಗಿಡದ ಚಟ್ಟಿಗಳಿದ್ದರೆ ಪುಡಿ ಮಾಡ್ತಾರೆ, ದಾರಿಯುದ್ದಕ್ಕೂ ತಿಂದ ತಿಂಡಿ ಪಾಕೆಟ್ಟುಗಳನ್ನು, ಕುಡಿದ ಜ್ಯೂಸ್ ಬಾಟಲ್ ಗಳನ್ನು ಬಿಸಾಡಿಕೊಂಡು ವಿಕೃತ ಮನೋಭಾವವನ್ನು ಮೆರೆಯುತ್ತಾರೆ ಅಂದಾಗ ನೈತಿಕ ಮೌಲ್ಯಗಳ ನಾಶ ಯಾವ ರೀತಿ ಆಗುತ್ತಿದ್ಯೋ ಅನಿಸುತ್ತದೆ. 
        ಪ್ರಜ್ಞೆಯನ್ನು ಕಳಕೊಂಡ ಸ್ಥಿತಿಯಲ್ಲಿ ಇಂದಿನ ವ್ಯವಸ್ಥೆ ಮುಂದುವರೆಯುತ್ತಿರುವುದು ಬಹುಶಃ ಪ್ರತಿಯೊಬ್ಬರಿಗೂ ಕಂಡುಕೊಳ್ಳುವಂತ ದೃಶ್ಯ ಎದುರಾಗುವುದಂತು ಸಹಜ. ಊರಿನಲ್ಲಿ ಯಾವುದಾದರೂ ಒಂದು ಸಮಾರಂಭ ನೆರವೇರಿದಾಗ ಆ ಪ್ರದೇಶದ ಉದ್ದಕ್ಕೂ ರಾಶಿ ರಾಶಿಗಳು ಪ್ಲಾಸ್ಟಿಕ್ ಗಳು, ಮದುವೆ, ಇನ್ನಿತರ ಸಮಾರಂಭಗಳು ಜರುಗಿದಾಗ ಪೋಲಾಗುವ ಆಹಾರ, ಅಲ್ಲಲ್ಲಿ ರಾಶಿ ಹಾಕುವ ಐಸ್ ಕ್ರೀಮ್ ತಟ್ಟೆಗಳು, ನೀರಿನ ಬಾಟಲ್ ಗಳು ನಿರ್ದಿಷ್ಟ ಜಾಗದಲ್ಲಿ ಹಾಕುವ ಪರಿವೇ ಇಲ್ಲದೆ ಮೆರೆಯುವ ಮನಸುಗಳನ್ನು ಕಂಡಾಗ ಅಯ್ಯೋ ಅನಿಸುತ್ತದೆ..
      ಇವೆಲ್ಲ ವಿಷಯ ಸಣ್ಣದಾದರೂ ಒಂದೊಳ್ಳೆಯ ಪ್ರಜ್ಞೆಯನ್ನು ಬೆಳೆಸಿಕೊಂಡರೆ ಸಮಾಜಕ್ಕೆ ಒಳಿತಾಗುವ ಅನೇಕ ಕೆಲಸ ಕಾರ್ಯಗಳಲ್ಲಿ ನಾವು ಸಂಘಟಿತರಾಗಬಹುದು. ಅಗತ್ಯವಿಲ್ಲದ ಅನೇಕ ವಿಷಯಗಳನ್ನು ತುಂಬುವುದಕ್ಕಿಂತ ಇಂತಹ ಸಣ್ಣ ಸಣ್ಣ ವಿಚಾರಗಳ ಬಗ್ಗೆ ಪ್ರಜ್ಞೆಯನ್ನು ಮೂಡಿಸುವ ಕಾರ್ಯ ಪ್ರತಿಯೊಂದು ಮನೆಯಿಂದ, ಶಾಲೆಯಿಂದ, ಧಾರ್ಮಿಕ ಶ್ರದ್ಧಾ ಕೇಂದ್ರಗಳಿಂದ, ಊರಲ್ಲಿ ಜರಗುವ ಅನೇಕ ಸಭೆ ಸಮಾರಂಭಗಳಲ್ಲಿ ಈ ಬಗ್ಗೆ ಜಾಗೃತಿಗಳಾದರೆ ಪ್ರತಿಯೊಬ್ಬರು ಪ್ರಜ್ಞಾಸಹಿತರಾಗಿ ಬದುಕು ಸಾಗಿಸಬಹುದೇನೋ...
       ಮಕ್ಕಳೇ.... ಈ ಮೇಲೆ ತಿಳಿಸಿದ ಹಾಗೆ ನಮ್ಮ ಸೈನಿಕರು, ದೇಶದ ಕುರಿತಾಗಿ ಅಭಿಮಾನದ ಮಾತುಗಳನ್ನು ಹಾಗೂ ನೈತಿಕ ಮೌಲ್ಯಗಳನ್ನು ಅರಿತು ಪ್ರಜ್ಞಾವಂತರಾಗಿ ಬಾಳುವುದರ ಕುರಿತಾಗಿ ಬರೆಯುವ ಶಕ್ತಿಗೆ ತಮ್ಮ ಬೇಸಿಗೆ ಈ ರಜೆ ಹೊತ್ತಲ್ಲಿ ಪ್ರೇರಕರಾಗಿ ಎಂಬುದಾಗಿ ನನ್ನ ಕೋರಿಕೆ.
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************


ಕಳೆದ ಸಂಚಿಕೆಯ ಜಗಲಿಕಟ್ಟೆ - 71 ಅಂಕಣದಲ್ಲಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ.... ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಕಳೆದ ಕೆಲವು ವಾರಗಳಿಂದ ಪ್ರಕಟವಾದ ಜಗಲಿಯ ಬರಹಗಳ ಕುರಿತಾದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....


ಎಲ್ಲರಿಗೂ ನಮಸ್ಕಾರಗಳು,
     ನಮಗೆ ದೇವರು ಅವಯವಗಳನ್ನು ನೀಡಿರುವುದು ಅವುಗಳನ್ನು ಬಳಸಿ ಉತ್ತಮವಾದ ಕೆಲಸವನ್ನು ಮಾಡಲು ವಿನಃ ಸೋಮಾರಿಯಾಗಿ ಇರಲು ಅಲ್ಲ ಎಂಬುದನ್ನು ಸುಂದರವಾದ ಕಥೆಯ ಮೂಲಕ ಶಿಕ್ಷಣಾಧಿಕಾರಿಯವರಾದ ಶ್ರೀ ಜ್ಞಾನೇಶ್ ಸರ್ ರವರು ತಮ್ಮ ಸಂಚಿಕೆಯಲ್ಲಿ ಬಹಳ ಸೊಗಸಾಗಿ ತಿಳಿಸಿದ್ದಾರೆ. ಉತ್ತಮ ಲೇಖನ ಧನ್ಯವಾದಗಳು ಸರ್.
     ಸಂತ ಶಿಶುನಾಳ ಷರೀಫರ ಕೊಡಗನ ಕೋಳಿ ನುಂಗಿತ್ತಾ ಕವನದ ಉಳಿದ ಸಾಲುಗಳ ಅರ್ಥಗರ್ಭಿತ ಸಾರಾಂಶವನ್ನು ಸುಂದರವಾಗಿ ವಿವರಿಸಿದ್ದಾರೆ ರಮೇಶ್ ಸರ್ ರವರು. ಧನ್ಯವಾದಗಳು ಸರ್.
     ಇರುಳು ಕುರುಡುತನಕ್ಕೆ ಪ್ರಮುಖ ಕಾರಣಗಳೇನು ಎಂಬುದನ್ನು ಬಹಳ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ದಿವಾಕರ ಸರ್ ರವರು ತಮ್ಮ ವೈಜ್ಞಾನಿಕ ಸಂಚಿಕೆಯಲ್ಲಿ ತಿಳಿಸಿದ್ದಾರೆ.
     ಅನಂತ ಪುಷ್ಪ ಗಿಡದ ಕುರಿತಾದ ವಿವರವಾದ ಮಾಹಿತಿ ವಿಜಯಾ ಮೇಡಂರವರ ಈ ಸಲದ ನಿಷ್ಪಾಪಿ ಸಂಚಿಕೆಯಲ್ಲಿ ಉತ್ತಮವಾಗಿತ್ತು.
     ಈ ವಾರದ ಪಯಣ ಸಂಚಿಕೆಯಲ್ಲಿ ಸ್ವಾತಂತ್ರ್ಯ ಚಳವಳಿಯ ಊರಾದ ಗೌರಿಬಿದನೂರಿನ ವಿದುರಾಶ್ವಥದ ಕುರಿತಾದ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು ರಮೇಶ್ ಸರ್.
      ಹಳೆ ಪೆನ್ಸಿಲ್ ಗಳೆಲ್ಲ ಹೇಗೆ ಒಟ್ಟು ಸೇರಿದವು ಎಂಬುದನ್ನು ಬಹಳ ಸುಂದರವಾಗಿ ವಿವರಿಸುವ ಪೆನ್ಸಿಲ ರಾಯರ ಪುರ ಪ್ರವೇಶ ಎನ್ನುವ ಪುಸ್ತಕದ ಪರಿಚಯ ಚೆನ್ನಾಗಿ ಮೂಡಿ ಬಂದಿದೆ ವಾಣಿಯಕ್ಕ.
     ರಮೇಶ್ ರವರ ಪದದಂಗಳ ಸಂಚಿಕೆ ಉತ್ತಮವಾಗಿ ಮೂಡಿ ಬರುತ್ತಿದೆ.
     ಕೊನೆಯದಾಗಿ ಎಲ್ಲರಿಗೂ ಹೃತ್ಪೂರ್ವಕ ವಂದನೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************



ನಮಸ್ತೇ,
     ಪ್ರೀತಿಯಿಂದ ಎಲ್ಲವನ್ನೂ ಗೆಲ್ಲಬಹುದು ಆದರೆ ದ್ವೇಷ ಮತ್ಸರದಿಂದಲ್ಲ ಎನ್ನುವುದನ್ನು ಸುಂದರವಾದ ಕಥೆಯ ಮೂಲಕ ತಿಳಿಸಿದ ಶಿಕ್ಷಣಾಧಿಕಾರಿ ಶ್ರೀ ಜ್ಞಾನೇಶ್ ಸರ್ ರವರಿಗೆ ಧನ್ಯವಾದಗಳು.
     ರಮೇಶ್ ರವರಿಂದ ಕಾಯಕವೇ ಮೋಕ್ಷಕ್ಕೆ ದಾರಿ ಎನ್ನುವ ಷರೀಫರ ಕವನದ ಮುಂದಿನ ಸಾಲಿನ ಗೂಡಾರ್ಥದ ವಿವರಣೆ ಸೊಗಸಾಗಿ ಮೂಡಿಬಂದಿದೆ.
     ಬೆಳಕಿನ ಬಣ್ಣಗಳಲ್ಲಿ ಏಕವರ್ಣ ಹಾಗು ಬಹುವರ್ಣದ ಕುರಿತಾಗಿ ಬಹಳ ಸವಿಸ್ತಾರವಾಗಿ ದಿವಾಕರ್ ಸರ್ ಅವರು ತಮ್ಮ ವೈಜ್ಞಾನಿಕ ಸಂಚಿಕೆಯಲ್ಲಿ ತಿಳಿಸಿದ್ದಾರೆ.
      ಕೆಲವು ದಿನಗಳವರೆಗೆ ಬಾಡದೆ ಹಾಗೆ ಉಳಿಯುವ ಹೂವನ್ನು ಹೊಂದಿರುವ ಕನಕಾಂಬರಿ ಗಿಡದ ವಿವರವಾದ ಮಾಹಿತಿಯನ್ನು ವಿಜಯ ಮೇಡಂ ರವರು ತಮ್ಮ ಸಂಚಿಕೆಯಲ್ಲಿ ಸೊಗಸಾಗಿ ವಿವರಿಸಿದ್ದಾರೆ.
      ಅಣ್ಣಿಗೇರಿಯ ಪಂಪ ಸ್ಮಾರಕ ಭವನದ ಕುರಿತಾದ ಸುಂದರವಾದ ಮಾಹಿತಿಯನ್ನು ರಮೇಶ ಸರ್ ರವರು ತಮ್ಮ ಪಯಣ ಸಂಚಿಕೆಯಲ್ಲಿ ನೀಡಿದ್ದಾರೆ.
      ಕುತೂಹಲಕಾರಿ ಪುಸ್ತಕ ಕೊಂಚಿಗೆಯ ಸಾಹಸ ಪರಿಚಯ ಚೆನ್ನಾಗಿ ಮೂಡಿ ಬಂದಿದೆ. ಧನ್ಯವಾದಗಳು ವಾಣಿಯಕ್ಕ.
      ಈ ವಾರದ ಮಕ್ಕಳ ಕವನಗಳಲ್ಲಿ ರಿಧಾ ರವರ ಕವನಗಳು ಹಾಗೂ ಚಿತ್ರ ಸಂಚಿಕೆಯಲ್ಲಿ ಕೃಪಾಶಂಕರ ರವರ ಚಿತ್ರಗಳು ಚೆನ್ನಾಗಿದ್ದುವು. ರಿಧಾ ಹಾಗೂ ಕೃಪಾಶಂಕರವರಿಗೆ ಅಭಿನಂದನೆಗಳು. ಗೌತಮಿಯವರಿಂದ ವೀರಸೇನಾನಿ ಆಶಾರಾಮ್ ತ್ಯಾಗಿಯವರ ಕುರಿತಾದ ನಾಟಕ ರಚನೆ ಅದ್ಭುತವಾಗಿತ್ತು. ಅಭಿನಂದನೆಗಳು ಗೌತಮಿ.
      ಶಿಕ್ಷಕರ ಡೈರಿ ಸಂಚಿಕೆಯಲ್ಲಿ ಸುಪ್ರಿಯಾರವರು ಮಕ್ಕಳ ಶಿಸ್ತು ಹೇಗಿರಬೇಕು ಎನ್ನುವುದರ ಕುರಿತಾದ ಪೋಷಕರೊಂದಿಗಿನ ಸಂವಾದ ಅರ್ಥಪೂರ್ಣವಾಗಿತ್ತು.
      ರಮೇಶ್ ಸರ್ ರವರ ಪದದಂಗಳ ಸಂಚಿಕೆ ಉತ್ತಮವಾಗಿ ಮೂಡಿಬರುತ್ತಿದೆ.
     ಎಲ್ಲರಿಗೂ ವಂದನೆಗಳು....
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************



ನಮಸ್ತೇ,
    ಜೀವನದಲ್ಲಿ ಅನೇಕ ಕಷ್ಟಗಳು ಬರಬಹುದು. ಆದರೆ ಅವನೆಲ್ಲಾ ನೆನೆದು ದುಃಖ ಪಡುವ ಬದಲು ಅವನ್ನೆಲ್ಲ ಮರೆತು ಧೈರ್ಯದಿಂದ ಎದುರಿಸಿದಾಗ ಜೀವನ ಸುಂದರವಾಗುತ್ತದೆ ಎನ್ನುವುದನ್ನು ರಾಮಾಯಣದ ಸೀತೆಯ ದೃಷ್ಟಾಂತ ಮೂಲಕ ಶಿಕ್ಷಣಾಧಿಕಾರಿ ಜ್ಞಾನೇಶ್ ಸರ್ ರವರು ಸುಂದರವಾಗಿ ವಿವರಿಸಿದ್ದಾರೆ.
     ಎಲ್ಲವೂ ಭಗವಂತನದ್ದೇ ಎಲ್ಲವೂ ಅವನಿಂದಲೇ ಎನ್ನುವ ತತ್ವವನ್ನು ಸಾರುವ ಶಿಶುನಾಳ ಷರೀಫರ ಪದ್ಯದ ಕೊನೆಯ ಸಾಲುಗಳ ಗೂಡಾರ್ಥವನ್ನು ಬಹಳ ಸೊಗಸಾಗಿ ತಮ್ಮ ಸಂಚಿಕೆಯಲ್ಲಿ ರಮೇಶ್ ಸರ್ ರವರು ಸೊಗಸಾಗಿ ತಿಳಿಸಿದ್ದಾರೆ.
     ಬೆಳಕಿನ ಚದುರುವಿಕೆಯ ಆಧಾರದ ಮೇಲೆ ಸಾಮಾನ್ಯ ಬೆಳಕು ಮತ್ತು ಲೇಸರ್ ಬೆಳಕಿಗಿರುವ ವ್ಯತ್ಯಾಸವನ್ನು ಬಹಳ ಅರ್ಥವತ್ತಾಗಿ ದಿವಾಕರ ಸರ್ ರವರು ತಿಳಿಸಿದ್ದಾರೆ.
     ವಿಜಯಾ ಮೇಡಂರವರ ಈ ಸಲದ ಸಂಚಿಕೆಯಲ್ಲಿ ಮೂಂಡಿ ಗಿಡದ ಪರಿಚಯ ಸೊಗಸಾಗಿತ್ತು. ನಮ್ಮ ಊರಿನಲ್ಲಿ ಕಡೆಗಣಿಸದೆ ಉಪಯೋಗಿಸಲ್ಪಡುವ ಸಸ್ಯವವೆಂದರೆ ತಪ್ಪಲ್ಲ.
     ಬೈಂದೂರಿನ ಶನೇಶ್ವರ ದೇವಸ್ಥಾನ ಕುರಿತಾಗಿ ಬಹಳ ಸುಂದರವಾದ ಮಾಹಿತಿಯನ್ನು ರಮೇಶ್ ಸರ್ ಅವರು ತಮ್ಮ ಪಯಣ ಸಂಚಿಕೆಯಲ್ಲಿ ನೀಡಿದ್ದಾರೆ ಧನ್ಯವಾದಗಳು ಸರ್. 
      'ಅಜ್ಜಮ್ಮನ ಅದ್ಭುತ ಯಂತ್ರಗಳು' ಪುಸ್ತಕದ ಪರಿಚಯ ಚೆನಾಗಿತ್ತು ವಾಣಿಯಕ್ಕ.
     ರವೇಶ್ ಸರ್ ರವರ ಪದದಂಗಳ ಸಂಚಿಕೆ ಚೆನ್ನಾಗಿ ಮೂಡಿ ಬರುತ್ತಿದೆ.
      ಎಲ್ಲರಿಗೂ ಧನ್ಯವಾದಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************




ನಮಸ್ತೇ,
     ಚಂಚಲ ಮನಸ್ಸಿನಿಂದ ಯಾವುದನ್ನು ಸಾಧಿಸಲು ಆಗುವುದಿಲ್ಲ ಬದಲಾಗಿ ಸ್ಥಿರ ಚಿತ್ತ ಅಥವಾ ಏಕಾಗ್ರತೆಯಿಂದ ಯಾವುದನ್ನು ಬೇಕಾದರೂ ಸಾಧಿಸಬಹುದು ಎಂಬುದನ್ನು ಶಿಕ್ಷಣಾಧಿಕಾರಿಯವರಾದ ಜ್ಞಾನೇಶ್ ಸರ್ ರವರ ಲೇಖನ ಉತ್ತಮವಾಗಿತ್ತು.
     ಕಲರಿನ ಖದರನ್ನು ಸುಂದರವಾಗಿ ಹಾಸ್ಯಮಯವಾಗಿ ವರ್ಣಿಸಿದ ರೀತಿ ಅದ್ಭುತವಾಗಿತ್ತು. ಸುಂದರ ಲೇಖನ. ಧನ್ಯವಾದಗಳು ರಮೇಶ್ ಸರ್ ರಿಗೆ.
     ವರ್ಣಮಯ ಜಗತ್ತಿನ ವರ್ಣರಂಜಿತ ವಿದ್ಯಮಾನಗಳನ್ನು ಬಹಳ ಸುಂದರವಾಗಿ ವಿವರಿಸಿದ ದಿವಾಕರ ಸರ್ ರವರಿಗೆ ವಂದನೆಗಳು.
      ಜೀವ ಸಂಕುಲಗಳ ಉಳಿವಿನ ಕಾಳಜಿಯೊಂದಿಗೆ ಕೂರಜ್ಜಿ ಸಸ್ಯದ ಅತ್ಯುತ್ತಮ ಮಾಹಿತಿ ಈ ವಾರದ ಸಂಚಿಕೆಯಲ್ಲಿ ವಿಜಯಾ ಮೇಡಂ ರವರಿಂದ.
      ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಅದ್ಭುತ ವರ್ಣನೆಯೊಂದಿಗೆ ವಿವರವಾದ ಮಾಹಿತಿ ರಮೇಶ್ ರವರ ಪಯಣ ಸಂಚಿಕೆಯಲ್ಲಿ. ಉತ್ತಮ ಸಂಚಿಕೆ.
    ಮಂಚಿಯಲ್ಲಿ ನಡೆದ ಬೇಸಿಗೆ ಶಿಬಿರದ ಕುರಿತಾಗಿ ವೈಷ್ಣವಿ ಕಾಮತ್ ಅವರಿಂದ ಅನುಭವದ ಬುತ್ತಿ ತುಂಬಾ ಚೆನ್ನಾಗಿತ್ತು. ಅಭಿನಂದನೆಗಳು ವೈಷ್ಣವಿ. ಅದೇ ರೀತಿ ಇನ್ನೊಂದು ಶಿಬಿರದ ಕುರಿತು ಅಭಿನವ್ ತಮ್ಮ ಅನುಭವವನ್ನು ಚೆನ್ನಾಗಿ ಹಂಚಿಕೊಂಡಿದ್ದಾರೆ. ಅಭಿನಂದನೆಗಳು ಅಭಿನವ್.
     ವಾಣಿಯಕ್ಕನವರಿಂದ ಸಣ್ಣ ಮಕ್ಕಳಿಗಾಗಿ ಇರುವ ಹಳದಿ ಜೀರುಂಡೆ 
ಲಾರಾ ಎನ್ನುವ ಪುಸ್ತಕದ ಪರಿಚಯ ಸೊಗಸಾಗಿತ್ತು.
     ಬಂಜಾರಾ ಜನಾಂಗದ ಕುರಿತಾಗಿರುವ "ಕೊಳ್ಳ" ಕಾದಂಬರಿಯ ವಿಶ್ಲೇಷಣೆ ಸುಭಾಷ್ ಚವ್ಹಾಣ್ ರವರಿಂದ ತುಂಬಾ ಉತ್ತಮವಾಗಿ ಮೂಡಿಬಂದಿದೆ. ಸುಂದರ ವಿಶ್ಲೇಷಣೆ. ಧನ್ಯವಾದಗಳು ಸರ್...
      ಪದದಂಗಳ ಸಂಚಿಕೆ ಚೆನ್ನಾಗಿ ಮೂಡಿ ಬರುತ್ತಿದೆ. ಕ್ಲಿಷ್ಟಕರವಾದ ಪದದಂಗಳ ಸಂಚಿಕೆಯನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ರಮೇಶ್ ರವರಿಗೆ ಧನ್ಯವಾದಗಳು.
      ಮಕ್ಕಳ ಕವನಗಳಲ್ಲಿ ಶ್ರುತಿಕಾರವರ ಕವನಗಳು ಸೊಗಸಾಗಿವೆ. ಅಭಿವಂದನೆಗಳು ಶ್ರುತಿಕಾ.
  ಕೊನೆಯದಾಗಿ ಮತ್ತೊಮ್ಮೆ ಜಗಲಿಯ ಎಲ್ಲರಿಗೂ ಮನದಾಳದ ವಂದನೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************



ಎಲ್ಲರಿಗೂ ನಮಸ್ಕಾರಗಳು,
     ಆತ್ಮ ಸಂತೋಷದ ಕುರಿತಾಗಿ ವಿವರವಾದ ಮಾಹಿತಿ ಶಿಕ್ಷಣಾಧಿಕಾರಿಯವರಾದ ಶ್ರೀ ಜ್ಞಾನೇಶ್ ಸರ್ ಅವರಿಂದ. ಧನ್ಯವಾದಗಳು ಸರ್.
     ಕಷ್ಟ ಬಂದಾಗ ಕುಗ್ಗದೆ ಸುಖ ಬಂದಾಗ ಹಿಗ್ಗದೆ ಇವೆರಡನ್ನು ಸಮಾನವಾಗಿ ಕಂಡಾಗ ಜೀವನ ಸುಮಧುರ ಎನ್ನುವುದನ್ನು ಬಹಳ ಅರ್ಥಗರ್ಭಿತವಾಗಿ ರಮೇಶ್ ಸರ್ ಅವರು ತಮ್ಮ ಸಂಚಿಕೆಯಲ್ಲಿ ತಿಳಿಸಿದ್ದಾರೆ.
     ದ್ಯುತಿಸಂಶ್ಲೇಷಣಾ ಕ್ರಿಯೆ ಜರಗಿದಾಗ ಆಹಾರ ಉತ್ಪತ್ತಿಯಾಗುವುದರೊಂದಿಗೆ ಬಿಡುಗಡೆಯಾಗುವ ಆಮ್ಲಜನಕವು ನೀರಿನ ಮೂಲದಿಂದಲೇ ಉತ್ಪತ್ತಿಯಾಗುದೆಂಬ ವೈಜ್ಞಾನಿಕ ಸತ್ಯವನ್ನು ತಿಳಿಸಿದ ತಮಗೆ ಧನ್ಯವಾದಗಳು ಸರ್.
     ವಿಜಯ ಮೇಡಂ ರವರ ನಿಷ್ಪಾಪಿ ಸಸ್ಯಗಳ ಸಂಚಿಕೆಗೆ ನೂರರ ಸಂಭ್ರಮ. ಸುಂದರವಾದ ಹಾಗೂ ಜೀವಸಂಕುಲಗಳ ಉಳಿವಿಗೆ ಪೂರಕವಾಗಿರುವ, ಹಾಗೂ ಹಲವು ಸಸ್ಯಗಳ ಪರಿಚಯದೊಂದಿಗೆ ಅವುಗಳ ವಿಶೇಷತೆ ಹಾಗೂ ಪ್ರಯೋಜನಗಳನ್ನು ವೈಶಿಷ್ಟ್ಯ ಪೂರ್ಣವಾಗಿ ತಿಳಿಸುತ್ತಿರುವ ನಿಮಗೆ ನನ್ನ ವೈಯಕ್ತಿಕ ಅಭಿನಂದನೆಗಳು.
     ಮಾವಿನ ಮರದಲ್ಲಿ ಅಥವಾ ಇನ್ನಿತರ ಮರಗಳಲ್ಲಿ ಆಸರೆಯಾಗಿ ಹಬ್ಬಿಕೊಂಡು ಬೆಳೆಯುವ ಅಡಕೆ ಬಳ್ಳಿಯ ಸುಂದರ ಪರಿಚಯದೊಂದಿಗೆ ಅದರ ಪ್ರಯೋಜನಗಳನ್ನು ಕಂಡಾಗ ಇದು ಕಳೆ ಗಿಡವೆಂದು ಭಾವಿಸಿದ ನನಗೆ ಕಳೆಗಿಡವಲ್ಲವೆಂದು ತಿಳಿಯಿತು. ಧನ್ಯವಾದಗಳು ಮೇಡಂ.
     ನರಸಿಂಹ ಗಡವೆಂದು ಕರೆಯಲ್ಪಡುವ ಕೂರ್ಮಗಡವೆಂಬ ದ್ವೀಪದ ಕುರಿತಾದ ಸುಂದರವಾದ ವಿವರಣೆಯೊಂದಿಗೆ ಸ್ಥಳ ಪರಿಚಯ ಈ ವಾರದ ಪಯಣ ಸಂಚಿಕೆಯಲ್ಲಿ ಚೆನ್ನಾಗಿ ಮೂಡಿ ಬಂದಿದೆ. ಧನ್ಯವಾದಗಳು ರಮೇಶ್ ಉಪ್ಪುಂದರಿಗೆ.
     ಬಿಬರ್ ಮಾಟಗಾತಿಗೊಂದು ಪುಟ್ಟ ಸಹಾಯ ಎನ್ನುವ ಮಕ್ಕಳಿಗಾಗಿ ಇರುವ ಸುಂದರ ಪುಸ್ತಕದ ಪರಿಚಯ ಧನ್ಯವಾದಗಳು ವಾಣಿಯಕ್ಕ.
     ಹೆತ್ತವರ ಸಕಾರತ್ಮಕ ನಡೆ ನುಡಿಗಳು ಮಕ್ಕಳಲ್ಲಿ ಹೇಗೆ ಪ್ರಭಾವವನ್ನು ಬೀರುತ್ತವೆ ಎನ್ನುವುದರ ಕುರಿತಾಗಿ ರಮ್ಯ ಮೇಡಂ ರವರಿಂದ ಶಿಕ್ಷಕರ ಡೈರಿಯಲ್ಲಿ ಉತ್ತಮವಾದ ಅನುಭವದ ಮಾತುಗಳು. ಧನ್ಯವಾದಗಳು ಮೇಡಂ.
     ಹಲವು ಕಾರಣಗಳಿಂದ ಶಾಲೆ ತಪ್ಪಿಸಿ ಶಾಲೆಯಿಂದ ಹೊರಗುಳಿದ ಮಕ್ಕಳ ಕುರಿತಾದ ಸುಂದರ ಪುಸ್ತಕದ ಸುಂದರ ವಿಶ್ಲೇಷಣೆ ನಾ ಓದಿದ ಪುಸ್ತಕ ಸಂಚಿಕೆಯಲ್ಲಿ ಸುಪ್ರಿಯ ಮೇಡಂರವರಿಂದ ಸೊಗಸಾಗಿ ಮೂಡಿಬಂದಿದೆ.
     ಈ ವಾರದ ಜಗಲಿಯಲ್ಲಿ ಪ್ರಕಟವಾದ ಸಾತ್ವಿಕ್ ಅವರ ಕಥೆಗಳು, ದಿವ್ಯಶ್ರೀ ಕವನಗಳು, ಹರ್ಷಾಲಿಯವರ ಮುದ್ದಾದ ಚಿತ್ರಗಳು ಎಲ್ಲವೂ ಸುಂದರವಾಗಿ ಮೂಡಿ ಬಂದಿವೆ. ಎಲ್ಲಾ ಮಕ್ಕಳಿಗೂ ವಯಕ್ತಿಕವಾಗಿ ಅಭಿನಂದನೆಗಳು.
      ರಮೇಶ್ ಉಪ್ಪುಂದ ರವರ ಕ್ಲಿಷ್ಟಕರಕರ ಪದದಂಗಳ ಸಂಚಿಕೆ ಸಂಚಿಕೆಯೊಂದಿಗೆ ಕೊನೆಗೊಂಡ ಈ ವಾರದ ಜಗಲಿಯ ಸುಂದರತೆಗೆ ಕಾರಣವಾದ ಎಲ್ಲರಿಗೂ ನನ್ನ ಹೃತ್ಪೂರ್ವಕ ವಂದನೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************


ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ.. ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************


Ads on article

Advertise in articles 1

advertising articles 2

Advertise under the article