-->
ಪ್ರೀತಿಯ ಪುಸ್ತಕ : ಸಂಚಿಕೆ - 165

ಪ್ರೀತಿಯ ಪುಸ್ತಕ : ಸಂಚಿಕೆ - 165

ಪ್ರೀತಿಯ ಪುಸ್ತಕ
ಸಂಚಿಕೆ - 165
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ 
                    


                 ಊಲಾ – ಚುನಾವಣೆ ಸಮಯ
ಲೇಖಕರು : ಎಸ್ಥರ್ ದುಫ್ಲೋ, ಇವರು ಬರೆದಿರುವ ಈ ಪುಸ್ತಕಗಳು ಮಕ್ಕಳಿಗೆ ತಮ್ಮ ಸುತ್ತಲಿನ ಲೋಕವನ್ನು ಓದುವ, ಅರ್ಥಮಾಡಿಕೊಳ್ಳುವ ಹಾದಿಯಲ್ಲಿ ಇಟ್ಟ ಒಂದು ಹೆಜ್ಜೆ. ಈ ಕತೆಯು ಮೂಲಭೂತ ಹಕ್ಕುಗಳನ್ನು ಸಾರ್ವತ್ರಿಕವಾಗಿ ಪಡೆಯುವ ಕುರಿತಂತೆ ಇರುವ ಐದು ಪುಸ್ತಕಗಳ ಸರಣಿಯ ಭಾಗ. 

ಪ್ರೀತಿಯ ಮಕ್ಕಳೇ... ಚುನಾವಣೆ ಬಗ್ಗೆ ನಿಮಗೆ ಗೊತ್ತಿರಬಹುದು. ನಿಮ್ಮ ಶಾಲೆಯಲ್ಲೂ ಚುನಾವಣೆಗಳು ನಡೆಯುತ್ತಿರಬಹುದು. ಈ ಪುಸ್ತಕದಲ್ಲಿ ಊಲಾಳ ಅಮ್ಮ ಚುನಾವಣೆಗೆ ನಿಲ್ಲುವ ಕಥೆ ಇದೆ. ಅವಳು ಈ ಸಾರಿ ಚುನಾವಣೆಗೆ ನಿಲ್ಲುವಂತಿಲ್ಲ. ಏಕೆಂದರೆ ಅವಳ ಅಪ್ಪನ ಪ್ರಕಾರ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನವನ್ನು ಒಬ್ಬ ಪುರುಷನಿಗೆ ಮೀಸಲು ಇಟ್ಟಿದ್ದಾರೆ. ಊರಿಗೆ ಒಳ್ಳೆಯದು ಮಾಡುವವರು ಚುನಾವಣೆಯಲ್ಲಿ ಗೆದ್ದು ಬಂದರೆ ಊರಿಗೆ ಒಳ್ಳೆಯದು. ಊಲಾ ಅಮ್ಮ ಒಬ್ಬ ಸಮರ್ಥ ವ್ಯಕ್ತಿ. ಈಗೇನು ಮಾಡುವುದು. ಊಲಾ ಮತ್ತು ಅವಳ ಸ್ನೇಹಿತರು ಹೇಗೆ ಅಮ್ಮನನ್ನು ಹೇಗೆ ಬೆಂಬಲಿಸುತ್ತಾರೆ ಎಂಬ ಸುಂದರ ಚಿತ್ರಣ ಇಲ್ಲಿದೆ.
 
ಚಿತ್ರಗಳು: ಶಾಯಿನ್ ಒಲೀವ್ಹಿಯೆ  
ಅನುವಾದ: ಎಸ್ ದಿವಾಕರ್  
ಪ್ರಕಾಶಕರು: ಪ್ರಥಮ್ ಬುಕ್ಸ್
ಬೆಲೆ: ರೂ.100/-
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: 080 – 42052574/41159009; www.prathambooks.org; www.storyweaver.org.in. 

ಪ್ರಥಮ್ ಪ್ರಕಾರ ಇದು 3ನೇ ಹಂತದ ಪುಸ್ತಕ. ಸ್ವಇಚ್ಛೆಯಿಂದ ಓದುವ ಮಕ್ಕಳಿಗಾಗಿ; ಇನ್ನೊಬ್ಬರ ಸಹಾಯ ಇಲ್ಲದೆ ತಾವೇ ಓದುವ ಮಕ್ಕಳಿಗಾಗಿ.
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************


Ads on article

Advertise in articles 1

advertising articles 2

Advertise under the article