ಮಕ್ಕಳ ಕಥೆಗಳು - ಸಂಚಿಕೆ : 14 - ಕಥೆ : ಮೊಲದ ಬೇಸಿಗೆ ರಜೆ ರಚನೆ : ದಿಯಾ ಉದಯ್ ಡಿ ಯು, 7ನೇ ತರಗತಿ
Tuesday, May 6, 2025
Edit
ಮಕ್ಕಳ ಕಥೆಗಳು - ಸಂಚಿಕೆ : 14
ಕಥೆ : ಮೊಲದ ಬೇಸಿಗೆ ರಜೆ
ರಚನೆ : ದಿಯಾ ಉದಯ್ ಡಿ ಯು
7ನೇ ತರಗತಿ
ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ
ಕಿಲ್ಪಾಡಿ ಮೂಲ್ಕಿ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
ಒಂದು ಕಾಡಿನಲ್ಲಿ ಒಂದು ಮೊಲವಿತ್ತು. ಅದರ ಹೆಸರು ಸ್ವೀಟು. ಸ್ವೀಟುವಿಗೆ ಶಾಲೆಗೆ ಹೋಗುವುದೆಂದರೆ ಬಹಳ ಇಷ್ಟ. ಅದೇನೂ ತುಂಬಾ ಉಷಾರು ಎಂದಲ್ಲ, ಓದಿನಲ್ಲಿ ಅಷ್ಟಕಷ್ಟೇ. ಆದರೆ ಅದಕ್ಕೆ ಒಳ್ಳೆಯ ಅಂಕಗಳನ್ನು ಪಡೆಯಬೇಕು ಎಂಬ ಆಸೆ ಏನೋ ಇತ್ತು. ಕಲಿಯುವಾಗ ಎಲ್ಲವನ್ನೂ ಓದಲು ಮೊಬೈಲ್ ಬಿಡುತ್ತಿರಲಿಲ್ಲ. ಟಿವಿಯಲ್ಲಿ ಬರುವ ಕಾಮಿಡಿ, ಸಿನಿಮಾಗಳೂ ಇಷ್ಟವಾಗುತ್ತಿದ್ದವು. ವರ್ಷದ ಕೊನೆಗೆ ಎಲ್ಲಾ ಪರೀಕ್ಷೆಗಳು ಮುಗಿದು ಅದಕ್ಕೆ ಮಕ್ಕಳ ಹಾಗೆ ಶಾಲೆಯಲ್ಲಿ ಬೇಸಿಗೆ ರಜೆ ಕೊಟ್ಟರು.
ಸ್ವೀಟು ಊರಲ್ಲಿ ಇರುವ ಅದರ ಅಜ್ಜಿ ಮನೆಗೆ ಹೋಯಿತು. ಅಲ್ಲಿ ಅದು ಆರಾಮಾಗಿ ಟಿವಿ ನೋಡುತ್ತಾ, ತಿಂದು ಮಲಗುತ್ತಾ ಇತ್ತು. ಆದರೆ ಅದರ ಅಜ್ಜಿ, ಅಜ್ಜ ಮತ್ತು ಅದರ ತಂದೆ, ತಾಯಿ ತುಂಬಾ ಬುದ್ಧಿ ಹೇಳುತ್ತಿದ್ದರು. ಪ್ರತಿನಿತ್ಯ ಓದಬೇಕು, ಬರೆಯಬೇಕು, ಏನಾದರೂ ಉತ್ತಮ ಹವ್ಯಾಸಗಳು ಇರಬೇಕು ಎಂದು ಮಾಮ ಕೂಡಾ ಹೇಳುತ್ತಿದ್ದರು. ಇದು ಸ್ವೀಟುವಿಗೆ ಹಿಂಸೆ ಅನ್ನಿಸುತ್ತಿತ್ತು. "ಹಿರಿಯರೆಲ್ಲಾ ಸೇರಿ ನನಗೆ ರಜೆಯ ಸಮಯದಲ್ಲಿ ಹಿಂಸೆ ಕೊಡುತ್ತಾರೆ. ಶಾಲೆ ಇದ್ದರೆ ಚಂದ" ಎಂದು ಅದು ಯೋಚಿಸುತ್ತಿತ್ತು.
ಸ್ವೀಟು ಓದೋದಿಲ್ಲ, ಬರೆಯುವುದಿಲ್ಲ ಎಂದು ಹೇಳಿದ ಹಿರಿಯರಿಗೆ "ಹೇಗಾದರೂ ಮಾಡಿ ತಾನು ಏನಾದರೂ ಸಾಧಿಸಿ ತೋರಿಸಬೇಕು" ಎಂದು ಅದು ಯೋಚನೆ ಮಾಡಿ, ಒಂದೊಂದೇ ಸಣ್ಣ ಸಣ್ಣ ಕಥೆ ಬರೆಯಲು ಪ್ರಾರಂಭ ಮಾಡಿತು. ಕಾರ್ಟೂನಿನಲ್ಲಿ ನೋಡಿದ ಮತ್ತು ಅದರ ಹಾಗೆಯೇ ಇರುವ, ಬೇರೊಂದು ಹೊಸದಾದ ಅಜ್ಜಿ , ಅಜ್ಜ, ಅಪ್ಪ, ಮಾಮ, ಅತ್ತೆ , ಅಕ್ಕ , ತಂಗಿ, ನಾಯಿ, ಬೆಕ್ಕು, ಬೇಲಿ,ಶಾಲೆ, ಸಮವಸ್ತ್ರ, ಅಮ್ಮ ಹೀಗೆ ಹತ್ತು ಹಲವು ವಿಷಯಗಳ ಬಗ್ಗೆಯೂ ಕಥೆ ಬರೆಯಿತು. ಸ್ವಲ್ಪ ದಿನಗಳ ನಂತರ ಶಾಲೆ ಶುರುವಾಯಿತು. ಅದಾದ ನಂತರ ಹಲವು ದಿನಗಳ ಬಳಿಕ ಸ್ವೀಟುವಿನ ಕಥೆಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿ ಅದನ್ನು ಓದಿದವರು ಇಷ್ಟ ಪಟ್ಟರು. ಮತ್ತೆ ಅದರ ಕತೆ ಪುಸ್ತಕವೂ ಪ್ರಕಟವಾಯಿತು. ಸ್ವೀಟುವನ್ನು ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕರು ಎಲ್ಲರೂ ಹೊಗಳಿದರು. ಊರಿನವರು ಸನ್ಮಾನ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ ನ ಕವಿಗಳೂ ಕೂಡಾ ಅಭಿನಂದಿಸಿದರು. ಮನೆಗೆ, ಪೋಷಕರಿಗೆ. ಶಾಲೆಗೆ, ಊರಿಗೆ ಕೀರ್ತಿ ತಂದಿತ್ತು ಸ್ವೀಟು. ಎಲ್ಲರ ಮುಂದೆ ಖುಷಿಯಲ್ಲಿ ಹಿಗ್ಗಿತು.
ನೀತಿ : ಬದುಕಿನಲ್ಲಿ ಛಲವಿದ್ದರೆ ಏನು ಬೇಕಾದರೂ ಸಾಧಿಸಬಹುದು.
7ನೇ ತರಗತಿ
ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ
ಕಿಲ್ಪಾಡಿ ಮೂಲ್ಕಿ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
******************************************