ರಜೆಯ ಸವಿನೆನಪು - ಬರಹ : ಅಭಿನವ್. ಪಿ.ಎನ್ , 7ನೇ ತರಗತಿ
Friday, April 25, 2025
Edit
ಬೇಸಿಗೆ ಶಿಬಿರದ ಅನುಭವ : ರಜೆಯ ಸವಿನೆನಪು
ಬರಹ : ಅಭಿನವ್. ಪಿ.ಎನ್
7ನೇ ತರಗತಿ
ಸ.ಉ.ಹಿ.ಪ್ರಾ ಶಾಲೆ ಮುಂಡೂರು.
ಪುತ್ತೂರು ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ
ಶಾಲೆಗೆ ರಜೆ ಸಿಕ್ಕಿದಾಗ ಆದ ಖುಷಿಯೇ ಬೇರೆ. ಆದರೆ ಮನೆಗೆ ಬಂದಾಗ ತಿಳಿಯಿತೇನೆಂದರೆ ಅಮ್ಮನಿಗೆ SSLC ಮೌಲ್ಯ ಮಾಪನಕ್ಕೆ ಹೋಗಲಿಕ್ಕಿದೆ. ಮತ್ತು ಅಪ್ಪನಿಗೆ ರಜೆ ಇಲ್ಲ ಎಂದು ತಿಳಿಯಿತು. ಇದನ್ನು ಕೇಳಿದ ತಕ್ಷಣವೇ ತುಂಬಾ ಬೇಸರವಾಯುತು.
ಆಗ ಅಮ್ಮ ಹೇಳಿದರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮುಂಡೂರು ಇಲ್ಲಿ ಬೆಳಿಗ್ಗೆ 6:00 ರಿಂದ 7:30ರವರೆಗೆ ಬೇಸಿಗೆ ಶಿಬಿರ ಇದೆ ಎಂದು. ಆಗ ನನಗೆ ತುಂಬಾ ಖುಷಿಯಾಯಿತು. ನಾನು ಈ ಶಿಬಿರದಲ್ಲಿ ಪಾಲ್ಗೊಂಡೆನು. ಈ ಶಿಬಿರವು 10 ದಿನಗಳ ಕಾಲ ಇತ್ತು. ದಿನ ಕಳೆದದ್ದು ಗೊತ್ತೇ ಆಗಲಿಲ್ಲ. ನಾನು ಬೆಳಗ್ಗೆ ಐದು ಗಂಟೆಗೆ ಎದ್ದು ನಮ್ಮ ಶಾಲೆಯವರೆಗೆ ಸೈಕಲಲ್ಲಿ ಹೋಗುತ್ತಿದ್ದೆ. ನಮ್ಮ ಮನೆಯಿಂದ ನಮ್ಮ ಶಾಲೆಯವರೆಗೆ 2 km ಅಂತರವಿದೆ. ನನಗೆ ಅದು ತುಂಬಾ ದೂರ ಎಣಿಸಲಿಲ್ಲ. ನಾನು ದಿನಾಲು ಎದ್ದು ಹೋಗಿ ಬರುತ್ತಿದ್ದೆ. ನಮಗೆ ಅಲ್ಲಿ ಯೋಗ ಅಭ್ಯಾಸವನ್ನು ಕಲಿಸುತ್ತಿದ್ದರು. ನಮಗೆ ಯೋಗ ಶಿಕ್ಷಕರಾಗಿ ಶ್ರೀಯುತ ಅಶೋಕ್ ಅಂಬಟ ಸರ್ ಬಂದಿದ್ದರು. ಅವರ ಜೊತೆ ಶಿಬಿರದ ನಿರ್ವಾಹಕರಾಗಿರುವ ಶ್ರೀಯುತ ಪ್ರಕಾಶ್ ಡಿಸೋಜ ರವರು ಇದ್ದರು .
ಅಶೋಕ್ ಸರ್ ರವರು ದಿನಾಲೂ ಬೆಳಗ್ಗೆ ಯೋಗಾಸನವನ್ನು ಮಾಡಿಸುತ್ತಿದ್ದರು. ಮತ್ತೆ ಸ್ವಲ್ಪ ಹೊತ್ತು ಅದರಿಂದಾಗುವ ಉಪಯೋಗ ವನ್ನು ಹೇಳುತ್ತಿದ್ದರು. ಪೂರ್ತಿ ಆರರಿಂದ ಏಳು ಗಂಟೆಯವರೆಗೆ ನಮಗೆ ಯೋಗಾ ತರಗತಿಯನ್ನು ನೀಡುತ್ತಿದ್ದರು. ಉಳಿದ ಅರ್ಧ ಗಂಟೆಯಲ್ಲಿ ನಮಗೆ ಹಾಡು ಕಲಿಸುತ್ತಾ ಡ್ಯಾನ್ಸ್ ಕಲಿಸುತ್ತಾ ಇದ್ದರು. ಕೆಲವೊಂದು ದಿನ ಉಳಿದ ಅರ್ಧ ಗಂಟೆಯನ್ನು ತೆಗೆದುಕೊಳ್ಳಲು ಸಂಪನ್ಮೂಲ ವ್ಯಕ್ತಿಯ ನ್ನು ಕರೆಸುತ್ತಿದ್ದರು. ಅವರು ನಮಗೆ ಮನೋರಂಜನಾ ಆಟ, ಮೈಂಡ್ ಗೇಮ್, ಡ್ರಾಯಿಂಗ್, ಕ್ರಾಪ್ಟ್ ಆಟಿಕೆಗಳ ತಯಾರಿ ಇತ್ಯಾದಿಗಳನ್ನು ಕಲಿಸಿ ಕೊಡುತ್ತಿದ್ದರು.. ನನ್ನ ಶಾಲೆಯ ಶಿಕ್ಷಕರಾದ ಅಬ್ದುಲ್ ಬಶೀರ್ ಸರ್, ರಾಮಚಂದ್ರ ಸರ್, ರವೀಂದ್ರ ಶಾಸ್ತ್ರೀ ಸರ್ ಸಂಪನ್ಮೂಲ ವ್ಯಕ್ತಿಯಾಗಿ ಬಂದದ್ದು ನನಗೆ ಬಹಳ ಖುಷಿ ಕೊಟ್ಟಿದೆ. ಜೊತೆಗೆ ಅಮ್ಮನೂ ಒಂದು ದಿನ ಸಂಪನ್ಮೂಲ ವ್ಯಕ್ತಿ ಯಾಗಿ ಬಂದಿದ್ದರು. ಅವರು ನಮಗೆ ಮೈಂಡ್ ಗೇಮ್ ನ್ನು ಮಾಡಿಸಿದರು. ಅದರ ಜೊತೆಗೆ ನನ್ನ ಫ್ರೆಂಡ್ ನ ಅಮ್ಮ ಅನಿತಾ ಮೇಡಂರವರೂ ಸಂಪನ್ಮೂಲ ವ್ಯಕ್ತಿಯಾಗಿ ಬಂದಿದ್ದರು. ಎಲ್ಲರಿಗೂ ತುಂಬಾ ಖುಷಿಯಾಯಿತು. ಅಂತೂ ಇಂತೂ ಕೊನೆಗೆ 10ನೇ ದಿನ ಬಂದೇಬಿಟ್ಟಿತು.
ಮಾರನೇ ದಿನ 23 ತಾರೀಕು ಅಂದು ಸಮಾರೋಪ ಸಮಾರಂಭವಿತ್ತು. ಅದರಲ್ಲಿ ನಿರೂಪಣೆ ಯನ್ನು ನನಗೆ ಕೊಟ್ಟರು. ನಾನು ಒಪ್ಪಿಕೊಂಡೆ. ಮನೆಗೆ ಬಂದು ನೋಡುವಾಗ ಅಮ್ಮನ ಮೊಬೈಲಲ್ಲಿ ಮಾರನೇ ದಿನ ಬರುವ ಅತಿಥಿಗಳ ಹೆಸರಿತ್ತು. ಅಷ್ಟು ಮಂದಿ ಹೆಸರು ನೋಡಿ ನನಗೆ ಆಶ್ಚರ್ಯವಾಯಿತು. ಒಮ್ಮೆ ಅನಿಸಿತು ನಾನು ಈ ನಿರೂಪಣೆಯನ್ನು ಏಕೆ ತೆಗೆದುಕೊಂಡೆ ಎಂದು. ಮತ್ತೊಮ್ಮೆ ಅನಿಸಿತು ನನಗೆ ಇಷ್ಟು ದೊಡ್ಡ ಕಾರ್ಯಕ್ರಮದ ನಿರೂಪಣೆ ಸಿಕ್ಕಿದೆ ಇದು ನನ್ನ ಭಾಗ್ಯ ಎಂದು ತಿಳಿದುಕೊಂಡೆ. ನನ್ನ ಅಮ್ಮನಲ್ಲಿ ನಿರೂಪಣೆಗೆ ತಯಾರಾಗಲು ಸಹಾಯ ಕೇಳಿದೆ. ನನಗೆ ಅಮ್ಮ ಸಹಾಯ ಮಾಡಿದರು. ನನಗೆ ಕಲಿಯಲು ಒಂದೇ ದಿವಸವಿದ್ದದ್ದು ಹೇಗೋ ತಯಾರಾದೆ. ಆದರೆ ನನ್ನ ಭಯ ಹೋಗಿರಲಿಲ್ಲ.
ಕೊನೆಗೆ ಶಾಲೆಗೆ ಬಂದು ನೋಡುವಾಗ ಎಲ್ಲಾ ಹೆಚ್ಚಿನವರು ಬಂದಿದ್ದರು. ಕಾರ್ಯಕ್ರಮ ಸಮಯಕ್ಕೆ ಸರಿಯಾಗಿ ಶುರುವಾಯಿತು. ವೇದಿಕೆ ಗೆ ಅತಿಥಿ ಗಳನ್ನು ಆಹ್ವಾನಿಸಿದೆ. ವೇದಿಕೆಯಲ್ಲಿದ್ದ ನಮ್ಮ ಮುಖ್ಯ ಶಿಕ್ಷಕಿ ವಿಜಯ ಪಿ. ಮೇಡಂ ರವರನ್ನು ನೋಡಿ ನನಗೆ ತುಂಬಾ ಖುಷಿಯಾಯಿತು. ಅತಿಥಿಗಳಾಗಿದ್ದ ನಿವೃತ್ತ ಮುಖ್ಯ ಶಿಕ್ಷಕರು ಶ್ರೀಯುತ ಹುಕ್ರ ಸರ್, ಹಿರಿಯರಾಗಿದ್ದ ಶ್ರೀಯುತ ಬಾಲಕೃಷ್ಣ ಸರ್ ರವರು ಯೋಗದ ಉಪಯೋಗ ದ ಬಗ್ಗೆ ತಿಳಿಸಿದರು. ಅಧ್ಯಕ್ಷ ರಾದ ರಮೇಶ್ ಗೌಡ ಪಜಿಮಣ್ಣು ಮಾತನಾಡಿ, ಯೋಗಾಭ್ಯಾಸ ವನ್ನು ಮುಂದುವರಿಸುವಂತೆ ಸೂಚಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಬಂದಿದ್ದರು. ಶಿಬಿರಾರ್ಥಿಗಳಾದ ಧನ್ವಿತಾ, ಅನ್ವಿತಾ , ವೇದಿತಾ, ತ್ರಿಷಾ ಪ್ರಾರ್ಥಿಸಿದರು. ಸೊನಾಲಿ ರೈ. ಪಿ ಸ್ವಾಗತಿಸಿ, ಸಮರ್ಥ್ ಡಿ ಕುಲಾಲ್ ರವರು ವಂದಿಸಿದರು ಇಲ್ಲಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಮನೆಗೆ ಬಂದಾಗ ಬೇಸರವಾಯುತು. ಇವತ್ತಿಗೆ ಬೇಸಿಗೆ ಶಿಬಿರ ಮುಗಿತೆಂದು. ಆಮೇಲೆ ನಾನು ದಿನಾಲು ಬೇಗ ಎದ್ದು ಯೋಗಾಭ್ಯಾಸ ಮಾಡುತ್ತಿದ್ದೇನೆ. ಇದರಿಂದ ತಂದೆ ತಾಯಿಗೂ ತುಂಬಾ ಖುಷಿಯಾಯಿತು. ಆನಂತರ ಈಗಲೂ ನಾನು ಸೈಕಲ್ ನಲ್ಲಿ ನಮ್ಮ ಶಾಲೆಯವರೆಗೆ ಹೋಗಿ ಬರುತ್ತಿದ್ದೇನೆ.
ಅದರ ಖುಷಿಯೇ ಬೇರೆ. ಧನ್ಯವಾದಗಳು.
7ನೇ ತರಗತಿ
ಸ.ಉ.ಹಿ.ಪ್ರಾ ಶಾಲೆ ಮುಂಡೂರು.
ಪುತ್ತೂರು ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************