ಪ್ರೀತಿಯ ಪುಸ್ತಕ : ಸಂಚಿಕೆ - 160
Saturday, April 26, 2025
Edit
ಪ್ರೀತಿಯ ಪುಸ್ತಕ
ಹಳದಿ ಜೀರುಂಡೆ ಲಾರಾ
ಪ್ರೀತಿಯ ಮಕ್ಕಳೇ... ಪುಟ್ಟ ಮಕ್ಕಳಿಗಾಗಿ ಇದೊಂದು ಮುದ್ದಾದ ಪುಸ್ತಕ. ಪುಟ ತುಂಬಾ ಚಿತ್ರಗಳು, ಕಿರಿದಾದ ಪಠ್ಯ ಇದೆ. ಚಿತ್ರ ನೋಡುತ್ತಲೇ ಒಂದಷ್ಟು ಕಾಲ ಕಳೆಯಬಹುದು.
..................................... ವಾಣಿ ಪೆರಿಯೋಡಿ


ಸಂಚಿಕೆ - 160
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕೆಂಪು ಕೆಂಪು ಲೋಕದಲ್ಲಿ
ಹೊಳೆವ ಹಳದಿ ಹುಳು;
ಲಾರಾ ಜೀರುಂಡೆಗೆ ಆಸೆಯಂತೆ
ಇರಬೇಕು ತಾನೂ ಎಲ್ಲರಂತೆ
ಓಹೋ, ಈ ಹಳದಿ ಜೀರುಂಡೆ ಲಾರಾಗೆ ತಾನು ಯಾಕೆ ಎಲ್ಲರಂತೆ ಕೆಂಪು ಇಲ್ಲ ಎಂಬ ತಳಮಳ. ಅದಕ್ಕಾಗಿ ಅಮ್ಮನ ಹತ್ತಿರ ಅಳು. ಏನು ಮಾಡೋದು? ಅಮ್ಮ ಮಗಳ ಆಸೆಯಂತೆ ಲಾರಾ ರಕ್ಕೆಗಳಿಗೆ ಕೆಂಪು ಬಣ್ಣ ಹಚ್ಚಿದರು. ಆದರೆ ಆಗ ಏನಾಯಿತು? ಅಯ್ಯೋ ಇದು ಸರಿಯಿಲ್ಲ, ಮತ್ತೆ ಹಳದಿಯೆ ಬೇಕು ಅನಿಸುವ ಹಾಗೆ ಆಯಿತು. ಇದೆಲ್ಲಾ ಹೇಗಪ್ಪಾ ಆಯಿತು ಅಂತ ಅನಿಸಿದರೆ ಪುಸ್ತಕ ಓದಿ.
ಲೇಖಕಿ, ಚಿತ್ರಕಾರ್ತಿ, ವಿನ್ಯಾಸಗಾರ್ತಿ: ಮಾರ್ತಾ ಇವಾನ್ಸ್, ಕ್ಯಾಥರೀನ್ ಹೋಲ್ಟ್ಸ್ ಹೌಸನ್, ನಡೀನ್ ಕ್ರಿಯಲ್
ಅನುವಾದ: ಶ್ವೇತಾರಾಣಿ ಎಚ್.ಕೆ,
ಪ್ರಕಾಶಕರು: ಮೊಗ್ಗು, ಋತುಮಾನ ಪುಸ್ತಕ
ಬೆಲೆ: ರೂ.175/-
3+ ವಯಸ್ಸಿನ ಮಕ್ಕಳಿಗಾಗಿ ಇದೆ
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: moggubooks.com; 9480035877/9480009997/ 9591368966
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************