-->
ಮಕ್ಕಳ ಕವನಗಳು : ಸಂಚಿಕೆ - 42 - ಕವನ ರಚನೆ : ರಿಧಾ ಡೋರಳ್ಳಿ, 6ನೇ ತರಗತಿ

ಮಕ್ಕಳ ಕವನಗಳು : ಸಂಚಿಕೆ - 42 - ಕವನ ರಚನೆ : ರಿಧಾ ಡೋರಳ್ಳಿ, 6ನೇ ತರಗತಿ

ಮಕ್ಕಳ ಕವನಗಳು : ಸಂಚಿಕೆ - 42
ಕವನ ರಚನೆ : ರಿಧಾ ಡೋರಳ್ಳಿ
6ನೇ ತರಗತಿ 
ಸೈಂಟ್ ಆಂತೋನಿಸ್ ಪಬ್ಲಿಕ್ ಸ್ಕೂಲ್ 
ಹುಬ್ಬಳ್ಳಿ, ಧಾರವಾಡ ಜಿಲ್ಲೆ


                ಮಳೆ

ಹನಿ-ಹನಿಯಿಂದ ಉದುರುತ
ಬಾನಲಿ ಮೋಡಗಳು ಚಲಿಸುತ
"ಗಡ-ಗಡ" ಎಂದು ನಡಗುತ
ಸ್ವಾತಿ ಮಳೆಯ ಸುರಿಸುತ

ಎಲ್ಲರ ನೋಟದಲಿ ಆನಂದಮಯ
ರೈತರ ಫಸಲಿಗೆ ಆಶ್ರಯಮಯ
ಮಕ್ಕಳಿಗೆ ಕೂಡ ನಿತ್ಯದ ಆಟ
ಕುಡ್ಡ-ಕಳ್ಳರಿಗೆ ಸರಿಯಾದ ಪಾಠ

ಭುವಿಯನ್ನು ಹಸಿರುಗೂಡಿಸಿ
ಸುಂದರ ಹೂಗಳನ್ನು ಅರಳಿಸಿ
ಅತ್ಯಾಚಾರ-ಹಿಂಸೆಯ ನಿಲ್ಲಿಸಿ
ತಂದಿದೆ ಹರುಷ ಮರಳಿಸಿ

ವಿಶ್ವದಾದ್ಯಂತ ಸುಖ ಶಾಂತಿ 
ಪುಟಾಣಿ ಮಕ್ಕಳಿಗೆ ಕಥೆ ನೀತಿ
ಭೂತಾಯಿಯೊಂದಿಗೆ ವಿಸ್ಮಯ ಪ್ರೀತಿ
ತಂದಿದೆ ಈ ಜಗಕ್ಕೊಂದು ಕೀರ್ತಿ

ಅದೇ ತಾನೆ ಧರೆಗಿಳಿದ ಇಳೆ
ಹನಿ-ಹನಿಯ ಉದುರಿಸುವ ಮಳೆ......!
....................................... ರಿಧಾ ಡೋರಳ್ಳಿ
6ನೇ ತರಗತಿ 
ಸೈಂಟ್ ಆಂತೋನಿಸ್ ಪಬ್ಲಿಕ್ ಸ್ಕೂಲ್ 
ಹುಬ್ಬಳ್ಳಿ, ಧಾರವಾಡ ಜಿಲ್ಲೆ
******************************************



         ಮಿನುಗುತಾರೆ

ನಿನ್ನ ನೆನಪು ಸದಾ ನಮ್ಮಲ್ಲಿ 
ನಿನ್ನ ನಗುಮುಖ ಹೇಗೆ ಮರೆಯಲಿ 
ಅಪ್ಪು ಎಂದು ಯಾರನ್ನು ಕರೆಯಲಿ
ನಿನ್ನ ಸಹನೆ ತ್ಯಾಗ ಜನರಲ್ಲಿ ಬೆಳೆಯಲಿ

ಮಿನುಗುತಾರೆಯಂತೆ ಮಿಂಚಿ ಮರೆಯಾದೆ
ನಿನ್ನ ಪ್ರೀತಿಯ ಅಭಿಮಾನಿಗಳನ್ನು 
ಬಿಟ್ಟು ಮೇಲೆ ಹೋದೆ
ಪುಸ್ತಕದ ಮಹತ್ವ ತಿಳಿಸಿಕೊಟ್ಟೆ
ಎಲ್ಲರೊಂದಿಗೆ ಸಿಹಿ ಜೇನಂತೆ ಬೆರೆತು ಹೋದೆ

ಇವತ್ತು ನಿನ್ನ ಹುಟ್ಟು ಹಬ್ಬದ ದಿನ
ಹಾಗಾಗಿ ಕನ್ನಡಿಗರಿಗೆ ಶುಭದಿನ
ನಿನ್ನನ್ನು ಹರಸಿ ಹಾರೈಸುವ ದಿನ
ನಿನ್ನನ್ನು ಮತ್ತೆ ಮತ್ತೆ ನೆನೆಯುವ ದಿನ

ಮತ್ತೆ ಹುಟ್ಟಿ ಬಾ, ನೀ ಈ ದಿನ
ಕಾಯುತ್ತಿದ್ದೇವೆ ನಿನಗಾಗಿ ಈ ಕರುನಾಡ ಜನ
ಮತ್ತೆ ಕದಿಯಲು ಬಾರೋ ಎಲ್ಲರ ಮನ
ಎಲ್ಲರ ಹೃದಯದಲ್ಲಿ ಉಳಿದಿರುವೆ ಈ ಕ್ಷಣ
....................................... ರಿಧಾ ಡೋರಳ್ಳಿ
6ನೇ ತರಗತಿ 
ಸೈಂಟ್ ಆಂತೋನಿಸ್ ಪಬ್ಲಿಕ್ ಸ್ಕೂಲ್ 
ಹುಬ್ಬಳ್ಳಿ, ಧಾರವಾಡ ಜಿಲ್ಲೆ
******************************************


          ಜೈ ಶ್ರೀ ರಾಮ್

ದಶರಥ ನಂದನ ಶ್ರೀರಾಮ 
ಸಕಲ ಹಿಂದೂಗಳ ತ್ರಿವಿಕ್ರಮ  
ಅಯೋಧ್ಯೆಯ ವೀರ ಪರಾಕ್ರಮ     
ನೆನೆದರೆ ಮನಸ್ಸಿಗೆ ಆರಾಮ

ಚೈತ್ರ ಮಾಸದ ಶುಕ್ಲ ಪಕ್ಷದ
ನವಮಿ ದಿವಸದ ಸಂಭ್ರಮ
ಧರೆಯಲಿ ಖ್ಯಾತಿಯ ದೇವರ ರೂಪದ 
ಶೂರ ಮಾಣಿಕ್ಯ ಶ್ರೀರಾಮ

ಜಾನಕಿ ಸೀತೆಗೆ ಈತನೆ ಎಲ್ಲಾ 
ಯಾರಿಗೂ ತಲೆಬಾಗುವವನಲ್ಲ 
ಪ್ರಜೆಗಳ ಮಾತಿಗೆ ತಪ್ಪುವವನಲ್ಲ
ವರವ ಪಾಲಿಸುವವನು ನಮಗೆಲ್ಲ

ಭರತ ಲಕ್ಷ್ಮಣರಿಗೆ ಅಣ್ಣನ ಪಾತ್ರ 
ಈತನೇ ತಾನೇ ನಮ್ಮ ಬಾಳಿಗೆ ಸೂತ್ರ 
ಎಲ್ಲರಿಗೂ ಈತನೇ ಪ್ರಿಯ ದೂತ 
ಇವನ ದ್ವೇಷಿ ಎಂದರೆ ರಾವಣ ಮಾತ್ರ 

14 ವರ್ಷದ ವನವಾಸ 
ಸೀತೆ ಲಕ್ಷ್ಮಣರಿಗೆ ಉಪವಾಸ 
ಭಜರಂಗಿ ಬಂದ ಕ್ಷಣವೇ ಎಲ್ಲಾ 
ರಾಮನಿಗೆ ಸಂತೋಷದ ಚೈತ್ರ ಮಾಸ

ರಾಮ ರಾಮ ಶ್ರೀ ರಾಮ
Koನಮ್ಮೆಲ್ಲರ ಸ್ಪೂರ್ತಿ ಜಯರಾಮ
ಜಯ ರಾಮ ಜಯ ರಾಮ
ರಾಮ ರಾಮ ಹರೇ ಹರೇ
....................................... ರಿಧಾ ಡೋರಳ್ಳಿ
6ನೇ ತರಗತಿ 
ಸೈಂಟ್ ಆಂತೋನಿಸ್ ಪಬ್ಲಿಕ್ ಸ್ಕೂಲ್ 
ಹುಬ್ಬಳ್ಳಿ, ಧಾರವಾಡ ಜಿಲ್ಲೆ
******************************************


Ads on article

Advertise in articles 1

advertising articles 2

Advertise under the article