ಪ್ರೀತಿಯ ಪುಸ್ತಕ : ಸಂಚಿಕೆ - 157
Friday, April 4, 2025
Edit
ಪ್ರೀತಿಯ ಪುಸ್ತಕ
ಸಂಚಿಕೆ - 157
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ಇತ್ತೀಚೆಗಿನ ದಿನಗಳಲ್ಲಿ ಪೆನ್ಸಿಲ್ ಸ್ವಲ್ಪ ಅಪರೂಪವಾಗಿಬಿಟ್ಟಿದೆ. ಹಿಂದೆಲ್ಲಾ, ತರತರಹದ ಪೆನ್ಸಿಲುಗಳು ಮಕ್ಕಳ ಕೈಯಲ್ಲಿ ಕುಣಿದಾಡುತ್ತಿದ್ದವು. ಬಣ್ಣ ಬಣ್ಣದ ಪೆನ್ಸಿಲುಗಳು. ಆದರೆ ಯಾಕೋ ಗೊತ್ತಿಲ್ಲ. ಎಲ್ಲೋ ಕಾಣೆಯಾಗಿದೆ. ಮಕ್ಕಳಿಗೂ ಇವರ ನೆನಪಿಲ್ಲ. ಮಾರುಕಟ್ಟೆಯಲ್ಲಿ ಹೊಸದಾಗಿ ಹುಟ್ಟಿಕೊಂಡ ಜಿಂಗ್ರಿಬಿಲ್ಲಿ ಬಣ್ಣ ಬಣ್ಣದ ಪೆನ್ ಪೆನ್ಸಿಲುಗಳಿಗೆ ಮಕ್ಕಳು ಮಾರು ಹೋಗಿದ್ದರು. ಅದಕ್ಕೆ ಮೆಂಡರ್ ಬೇಡವಂತೆ, ಟಿಕ್ ಟಿಕ್ ಮಾಡಿದರೆ ಲೆಡ್ಡು ಕುಣಿಯುತ್ತಾ ಹೊರಬರುವುದಂತೆ ಎಂದು ಮಕ್ಕಳು ಸುದ್ದಿ ಮಾಡಿದರು. ವಿಶೇಷವೆಂದರೆ ಪೆನ್ಸಿಲುಗಳು ಮಾತ್ರ ತಮ್ಮ ಮಹತ್ವವನ್ನು ಮರೆಯಲಿಲ್ಲ. ಊರಾಚೆಗೆ ತಿಪ್ಪೆಗಳಲ್ಲಿ ಬಂದು ಬಿದ್ದಿದ್ದರೂ ಪೆನ್ಸಿಲ್ ರಾಯರು ಕಂಗೆಡದೆ ತಪಸ್ಸು ಮುಂದುವರಿಸಿದರು. ಅಂತೂ ಎಲ್ಲೋ ತಳ ಸೇರಿದ್ದ ಪೆನ್ಸಿಲುಗಳೆಲ್ಲಾ ಜೊತೆ ಸೇರಿ ರಂಗಪ್ರವೇಶ ಮಾಡುವಂತಾಯಿತು. ಅಬ್ಬಾ.. ಇದು ಹೇಗೆ ಸಾಧ್ಯವಾಯಿತು? ಬೇಗ ಬೇಗ ಓದಿ ನೋಡಿ. ಜೊತೆಗೆ ನಿಮ್ಮ ಹತ್ತಿರ ಮರದಿಂದ ತಯಾರಾದ ಪೆನ್ಸಿಲುಗಳು ಇವೆಯೇ, ಪ್ಲಾಸ್ಟಿಕ್ ಪೆನ್ ಪೆನ್ಸಿಲುಗಳು ಇರುವುದೇ ಒಮ್ಮೆ ನೋಡಿಕೊಳ್ಳಿ.. ಸರಿಯಾದ ಆಯ್ಕೆ ಮಾಡಿಕೊಳ್ಳಿ.
ಲೇಖಕರು: ಸಂತೋಷ್ ಗುಡ್ಡಿಯಂಗಡಿ
ಚಿತ್ರಗಳು: ನಾಗನಾಥ್ ಜಿ.ಎಸ್
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಶನ್ಸ್ ; ಇದು ಕಿಂಡರ್ ಕಥಾ ಮಾಲಿಕೆಯಲ್ಲಿ ಪ್ರಕಟವಾದ ಪುಸ್ತಕಗಳಲ್ಲಿ ಒಂದು
ಬೆಲೆ: ರೂ.70/-
5-6 ತರಗತಿಯ ಮಕ್ಕಳು ಓದಬಹುದು; ಕಿರಿಯರಿಗೂ ಓದಿ ಹೇಳಬಹುದು... ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: ನವಕರ್ನಾಟಕ ಪಬ್ಲಿಕೇಶನ್ಸ್, navakarnataka@gmail.com; www.navakrnataka.com
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************