-->
ಮಕ್ಕಳ ಕಥೆಗಳು - ಸಂಚಿಕೆ : 13 - ಸ್ವರಚಿತ ಕಥೆ : ಸಾತ್ವಿಕ್ ಗಣೇಶ್, 10ನೇ ತರಗತಿ

ಮಕ್ಕಳ ಕಥೆಗಳು - ಸಂಚಿಕೆ : 13 - ಸ್ವರಚಿತ ಕಥೆ : ಸಾತ್ವಿಕ್ ಗಣೇಶ್, 10ನೇ ತರಗತಿ

ಮಕ್ಕಳ ಕಥೆಗಳು - ಸಂಚಿಕೆ : 13
ಸ್ವರಚಿತ ಕಥೆ : ಸಾತ್ವಿಕ್ ಗಣೇಶ್
10ನೇ ತರಗತಿ 
ಸರಕಾರಿ ಪದವಿ ಪೂರ್ವ ಕಾಲೇಜು ವೇಣೂರು
ಬೆಳ್ತಂಗಡಿ ತಾಲೂಕು, ದಕ್ಷಿಣಕನ್ನಡ ಜಿಲ್ಲೆ

               

ಒಂದಾನೊಂದು ಊರಿನಲ್ಲಿ ಒಂದು ಮುದ್ದಾದ ಬೆಕ್ಕಿನ ಸಂಸಾರವಿತ್ತು. ಅದರಲ್ಲಿ ತುಂಟ ಬೆಕ್ಕಿನ ಮರಿಯೊಂದು ಇತ್ತು. ಅದರ ಹೆಸರು ಸೋಮು ಎಂದಾಗಿತ್ತು. ಅಮ್ಮ ಬೆಕ್ಕಿನ ಹೆಸರು ಚಿನ್ನು ಎಂದು. ಸೋಮುಗೆ ಎಲ್ಲರ ಪ್ರೀತಿಯು ಅತಿಯಾಗಿತ್ತು. ಚಿನ್ನು ಅದನ್ನು ಬಹಳ ಜಾಗ್ರತೆಯಿಂದ ನೋಡಿಕೊಳ್ಳುತ್ತಿತ್ತು. ಅವರ ಮನೆಯ ಪಕ್ಕದಲ್ಲಿ ಒಂದು ಕಳ್ಳ ಬೆಕ್ಕು ಇತ್ತು. ಅದು ಇವುಗಳನ್ನು ಕಚ್ಚಲು ಕಾದು ಕುಳಿತಿತ್ತು. 

ಚಿನ್ನುವಿನ ಕಣ್ಣು ತಪ್ಪಿಸಿ ಹೊರಗೆ ಹೋಗಿ ಏನಾದರೂ ಆಟ ಆಡಬೇಕೆಂದು ಸೋಮನ ಆಸೆ. ಅಕ್ಕ ಹೊರಗಡೆ ಹೋದಾಗ ಅಮ್ಮ ಏನೂ ಜೋರು ಮಾಡದ ಅಮ್ಮ ನನ್ನನ್ನು ಜೋರು ಮಾಡುವುದು ಎಂದು ಅದಕ್ಕೆ ಯೋಚನೆಯಾಗುತ್ತಿತ್ತು. ಒಮ್ಮೆ ಮೆಲ್ಲನೆ ಅಮ್ಮ ಮಲಗಿದ ಸಮಯದಲ್ಲಿ ಅಮ್ಮನಿಗೆ ಕಾಣಿಸದೇ ಹೊರಗಡೆ ಹೋಗಿ ಆಟವಾಡಿ ಬಂತು. ನಾಯಿ ಮರಿಯು ಅದರ ಸ್ನೇಹ ಬೆಳೆಸಿತು. ಅವುಗಳು ಸ್ನೇಹಿತರಾದರು. ಚಿನ್ನುವು ಇದನ್ನೆಲ್ಲಾ ನೋಡುತ್ತಿದ್ದರೂ ಸುಮ್ಮನೇ ಏನು ತಿಳಿಯದಂತೆ ಇರುತ್ತಿದ್ದಳು. ಹೀಗೇ ದಿನಗಳು ಕಳೆದವು. ಒಂದು ದಿವಸ ಹೊರಗೆ ಹೆಜ್ಜೆ ಇಡುತ್ತಿದ್ದಂತೆ ಒಮ್ಮಿಂದೊಮ್ಮೆಲೆ ಹಾರಿ ಬಂದು ಸೋಮುವಿನ ಎದುರು ಕಳ್ಳ ಬೆಕ್ಕು ಅಡ್ಡಗಟ್ಟಿತು. ಇದನ್ನು ನೋಡಿದ ಸೋಮುವಿಗೆ ಇದ್ದ ಧೈರ್ಯವೆಲ್ಲಾ ಹಾರಿಹೋಯಿತು.

ಕಳ್ಳ ಬೆಕ್ಕು ಮೈ ಮೇಲೆ ಹಾರಲು ಚಿನ್ನುವು ಬಂದು ಅದರ ಮೇಲೊರಗಿತು. ಬೆಕ್ಕಿನ ಬೊಬ್ಬೆಯನ್ನು ಕೇಳಿ ನಾಯಿಯೂ ಕೂಡ ಅದರೊಂದಿಗೆ ಹೋರಾಡಿ ಸೋಮುವನ್ನು ರಕ್ಷಿಸಿತು. ಕಳ್ಳ ಬೆಕ್ಕು ಅಲ್ಲಿಂದ ಪಲಾಯನ ಮಾಡಿತು. 

ಅಮ್ಮನನ್ನು ನೋಡಿದ ಮರಿಯು ನೀನು ನಿದ್ದೆ ಮಾಡಿಲ್ಲವೇ ಎಂದು ಕೇಳಿತು. ನೀನು ಹೊರಗಡೆ ಹೋಗುವುದು ನನಗೆ ತಿಳಿದಿಲ್ಲಾ ಎಂದು ಭಾವಿಸಿದೆಯಾ? ನಿನ್ನ ರಕ್ಷಣೆಗೆ ನಿನ್ನ ಹಿಂದೆಯೇ ಇದ್ದೆ ಮಗಾ ಎಂದಿತು. ನೀನಿನ್ನೂ ಚಿಕ್ಕವ ನಿನ್ನಲ್ಲಿ ಹೊರಗೆ ಹೋಗಬಾರದೆಂದು ಯಾಕೆ ಹೇಳಿದೆ ಎಂದು ತಿಳಿಯಿತೇ ಎಂದು ಕೇಳಿತು. ಅಮ್ಮಾ ಕ್ಷಮಿಸಿ ತಿಳಿಯಿತು. ನಿನ್ನ ಪ್ರೀತಿ ,ಕಾಳಜಿ ಮತ್ತು ಮಾತೃ ಪ್ರೇಮವನ್ನು ತಿಳಿಯದೇ ಹೋದೆನು ಕ್ಷಮಿಸಮ್ಮ ಎಂದು ಅಮ್ಮನ ಮಡಿಲಿಗೆ ಒರಗಿತು. ತನ್ನ ಮರಿಯನ್ನು ಪ್ರೀತಿಯಿಂದ ನೆಕ್ಕಿ ತನ್ನ ಮಡಿಲಲ್ಲಿ ತಬ್ಬಿ ಮಲಗಿಸಿತು. ನೆಮ್ಮದಿಯಿಂದ ಮರಿಯು ಅಮ್ಮನ ಹಾಲು ಕುಡಿದು ಮಲಗಿತು.
....................................... ಸಾತ್ವಿಕ್ ಗಣೇಶ್
10ನೇ ತರಗತಿ 
ಸರಕಾರಿ ಪದವಿ ಪೂರ್ವ ಕಾಲೇಜು ವೇಣೂರು
ಬೆಳ್ತಂಗಡಿ ತಾಲೂಕು, ದಕ್ಷಿಣಕನ್ನಡ ಜಿಲ್ಲೆ
******************************************
                       

ಜೀವನವು ಒಂದು ಚಕ್ರವಿದ್ದಂತೆ. ಆ ಚಕ್ರವೂ ದಿನದಿಂದ ದಿನಕ್ಕೆ ತಿರುಗುತ್ತದೆ. ಒಂದು ಚಿಕ್ಕದಾಗಿ ಚೊಕ್ಕವಾಗಿ ಒಂದು ಬಡ ಹಳ್ಳಿಯುತ್ತು. ಅಲ್ಲೇ ಸ್ವಲ್ಪ ದೂರದಲ್ಲಿ ಎಲ್ಲಾ ಸವಲತ್ತನ್ನು ಹೊಂದಿದ ಹಳ್ಳಿಯಿತ್ತು. ಅಲ್ಲಿಯ ಜನರಿಗೆ ತಾವೇ ಮೇಲೆ ಎಂಬ ಭಾವನೆ. ಬಡ ಹಳ್ಳಿಯ ಜನರಿಂದ ಪುಕ್ಕಟೆಯಾಗಿ ಕೆಲಸ ಮಾಡಿಸುತ್ತಿದ್ದರು. ಇದನ್ನು ನೋಡಿದ ಬಡ ಯುವಕನಿಗೆ ನಾನೂ ಕೂಡ ಮುಂದೊಂದು ದಿನ ನಮ್ಮ ಹಳ್ಳಿಯನ್ನು ಅದೇ ರೀತಿ ಎಲ್ಲಾ ಸವಲತ್ತನ್ನು ಮಾಡುವೆ ಎಂಬ ನಂಬಿಕೆ ದೃಢವಾಗಿತ್ತು.

ಯುವಕನ ನಿರ್ಧಾರ ಗಟ್ಟಿಯಾಗಿತ್ತು. ಮತ್ತು ಬಹಳ ಬುದ್ದಿವಂತ. ಅವನ ಯೋಚನೆ ಒಳ್ಳೆಯದೇ ಆಗಿತ್ತು. ವ್ಯಾಸಂಗದಲ್ಲಿ ಅತಿ ಬುದ್ದಿವಂತ. ಅಲ್ಲಿ ಇಲ್ಲಿ ಕೆಲಸ ಮಾಡಿ ಅದರೊಂದಿಗೆ ಓದಿ ಉನ್ನತ ಶಿಕ್ಷಣ ಪಡೆದು ಒಳ್ಳೆಯ ಕೆಲಸ ಪಡೆದನು. ನಿರಂತರ ಪ್ರಯತ್ನದ ಫಲವಾಗಿ ಒಬ್ಬ ಕೋಟ್ಯಾಧಿಪತಿಯಾದ. ತಾನು ಹುಟ್ಟಿ ಬೆಳೆದ ಹಳ್ಳಿಯ ಮಣ್ಣನ್ನು ಎಲ್ಲಾ ಸವಲತ್ತು ಇರುವಂತೆ ಮಾಡಬೇಕೆಂಬ ಹಂಬಲ ಮತ್ತಷ್ಟು ಮುಗಿಲೆತ್ತರಕ್ಕೆ ಏರಿತು. ದಿನಗಳು ಉರುಳಿದವು ಉರುಳುವುದು ಸಹಜವೇ ಬಿಡಿ ಇದನ್ನು ಸರಿಯಾಗಿ ಬಳಸುವುದು ಮಾನವನ ಕರ್ತವ್ಯ ಎಂಬುದು ಅವನ ನಂಬಿಕೆಯಾಗಿತ್ತು.

ಹಾಗೆಯೇ ಅವನು ಬೇರೆ ರಾಜ್ಯಕ್ಕೆ ಹೋದರೆ ಉತ್ತಮ ಮಾಹಿತಿ ಪಡೆಯಬಹುದೆಂದು ಹೊರಟನು. ಅಲ್ಲಿಯವರಿಂದ ವಿಷಯ ತಿಳಿದು ಒಳ್ಳೆಯ ಗಿಡಗಳನ್ನು ಪಡೆದು ತನ್ನ ಹಳ್ಳಿಗೆ ಮರಳಿ ಬಂದನು. ಬಂದು ತನ್ನ ಹಳ್ಳಿಯಲ್ಲಿ ಶಾಲೆ, ಆಸ್ಪತ್ರೆ, 
ಸಾರ್ವಜನಿಕ ಶೌಚಾಲಯ ಮಾಡಿಸಿದನು ಔಷಧೀಯ ಗಿಡ, ಹಣ್ಣಿನ ಗಿಡ ಹೀಗೆ ತಂದ ಹಲವಾರು ಗಿಡಗಳನ್ನು ನೆಟ್ಟನು. ತನ್ನ ಹಳ್ಳಿಯನ್ನು ಆರೋಗ್ಯದಿಂದ ಕೂಡಿ ಎಲ್ಲಾ ಸವಲತ್ತು ಲಭಿಸುವಂತೆ ಮಾಡಿದ. ತಾನು ಕಲಿತ ವಿದ್ಯೆ ನಮ್ಮನ್ನು ಯಾವಾಗಲೂ ಕೈ ಬಿಡುವುದಿಲ್ಲ ಎಂಬುದು ಅವನ ನಂಬಿಕೆ ದೃಢವಾಗಿತ್ತು. ಅವನ ನಂಬಿಕೆಯು ಅವನ ಗುರಿಯನ್ನು ತಲುಪುವಲ್ಲಿ ಸಹಾಯವಾಯಿತು.

ನಮಗೆ ನಮ್ಮ ಮೇಲೆ ಇರುವ ನಂಬಿಕೆ ಮಹತ್ತರವಾದುದು. ಅದನ್ನು ಕಳೆದು ಹೋಗದಂತೆ ಕಾಪಾಡುವುದು ನಮ್ಮ ಕರ್ತವ್ಯ. ನಂಬಿಕೆಯು ಜೀವನದ ಒಂದು ಭಾಗವಾಗಿದೆ.
....................................... ಸಾತ್ವಿಕ್ ಗಣೇಶ್
10ನೇ ತರಗತಿ 
ಸರಕಾರಿ ಪದವಿ ಪೂರ್ವ ಕಾಲೇಜು ವೇಣೂರು
ಬೆಳ್ತಂಗಡಿ ತಾಲೂಕು, ದಕ್ಷಿಣಕನ್ನಡ ಜಿಲ್ಲೆ
******************************************


Ads on article

Advertise in articles 1

advertising articles 2

Advertise under the article