ಮಕ್ಕಳ ಕವನಗಳು : ಸಂಚಿಕೆ - 41: ಕವನ ರಚನೆ : ಭೂಮಿಕಾ ಶೇಟ್, 8ನೇ ತರಗತಿ
Sunday, March 30, 2025
Edit
ಮಕ್ಕಳ ಕವನಗಳು : ಸಂಚಿಕೆ - 41
ಕವನ ರಚನೆ : ಭೂಮಿಕಾ ಶೇಟ್
8ನೇ ತರಗತಿ
ಸರಕಾರಿ ಸಂಯುಕ್ತ ಪ್ರೌಢಶಾಲೆ
ವಳಕಾಡು, ಉಡುಪಿ ಜಿಲ್ಲೆ
ಮಕ್ಕಳ ಜಗಲಿಯ ಪ್ರತಿಯೊಬ್ಬರಿಗೂ ಯುಗಾದಿ ಹಬ್ಬದ ಶುಭಾಶಯಗಳು...
ಮರಳಿ ಬರುತ್ತಿದೆ ಯುಗಾದಿ!
ಹೊಸ ಬದುಕಿನ ಹೊಸ ಜೀವದ
ಹೊಸ ಹಬ್ಬವಿದು ಯುಗಾದಿ!
ಚೈತ್ರ ಮಾಸದ ಶುಭಾರಂಭ
ಹಿಂದುಗಳ ಹೊಸ ವರ್ಷಾರಂಭ
ಹೊಸದಾದ ಸಂವತ್ಸರ ಪ್ರಾರಂಭ
ಹೊಸ ಬದುಕು ಆರಂಭ !
ಗಿಡಗಳು ಚಿಗುರುವ ಕಾಲ
ಅದೇ ವಸಂತ ಕಾಲ
ಹಸಿಹಸಿರೆಲೆಯ ಆ ಮಾವಿನ ಎಲೆ
ಕಹಿಕಹಿಯಾದ ಆ ಬೇವಿನ ಎಲೆ
ಸಿದ್ಧವಾದ ತಳಿರು ತೋರಣ
ಬಾಗಿಲಿಗೆ ಹೊಸದೊಂದು ತಾಣ
ಚುಕ್ಕೆ ಚುಕ್ಕೆಗಳನ್ನಿಡುತ್ತ ಇಟ್ಟ ರಂಗೋಲಿ!
ಅಂಗಳಕ್ಕೊಂದು ಹೊಸ ತಂಗಾಳಿ!
ಹಳೆ ಕಹಿ ನೆನಪಿಗೆ ಕುಗ್ಗದಿರು
ಹೊಸ ಸವಿನೆನಪಿಗೆ ಹಿಗ್ಗದಿರು
ಕಷ್ಟ ಸುಖಗಳನು ಸಮನಾಗಿ ಸ್ವೀಕರಿಸು!
ಬೇವು - ಬೆಲ್ಲವನು ಸಮನಾಗಿ ತಿನಿಸು!
ಬೇವು ಬೆಲ್ಲದ ಒಕ್ಕೂಟ
ನಮ್ಮ ಬದುಕಿಗೊಂದು ಪಾಠ
ನಗುನಗುತ ಹಬ್ಬವನು ಆಚರಿಸೋಣ
ಹಳೆ ಕಹಿ ನೆನಪನು ಮರೆಯೋಣ!
8ನೇ ತರಗತಿ
ಸರಕಾರಿ ಸಂಯುಕ್ತ ಪ್ರೌಢಶಾಲೆ
ವಳಕಾಡು, ಉಡುಪಿ ಜಿಲ್ಲೆ
******************************************