ಮಕ್ಕಳ ಕವನಗಳು : ಸಂಚಿಕೆ - 38
Friday, March 14, 2025
Edit
ಮಕ್ಕಳ ಕವನಗಳು : ಸಂಚಿಕೆ - 38
............................................... ಸಿಂಚನ
ಜಗಲಿಯ ಮಕ್ಕಳ ಸ್ವರಚಿತ ಕವನಗಳು
ಕವನ ರಚನೆ ಮಾಡಿರುವ ವಿದ್ಯಾರ್ಥಿಗಳು :
◾ ರಕ್ಷಿತಾ, 10ನೇ ತರಗತಿ
◾ ಸಿಂಚನ, 10ನೇ ತರಗತಿ
◾ ಮನ್ವಿತಾ, 8ನೇ ತರಗತಿ
◾ ಮನಸ್ ಜೋಗಿ, 3ನೇ ತರಗತಿ
◾ ವಿನೀಶ್, 7ನೇ ತರಗತಿ
ನಿನ್ನ ಪ್ರೀತಿಯ ಕಂದ ನಾನಮ್ಮ
ಗರ್ಭದಿ ನನ್ನಿರಿಸಿ ನವ ಮಾಸ ಬೆಳೆಸಿ
ನನ್ನ ಮುದ್ದಿನ ಅಮ್ಮ
ಅಮ್ಮ ಅಮ್ಮ ಅಮ್ಮ...
ನೀನಿಲ್ಲದೊಂದು ಕ್ಷಣ ನಾನಿರಲಾರೆನು
ನಿನ್ನ ಬಿಟ್ಟು ಬದುಕಲಾರೆ ಪ್ರತೀ ನಿಮಿಷವು
ಅಮ್ಮ ನಿನ್ನ ಕೈತುತ್ತು ಕೊಡುವೆ ಪ್ರೀತಿ ಮುತ್ತು
ನೀ ಸಿಕ್ಕ ನನ್ನ ಭಾಗ್ಯ ಅದುವೇ ನನ್ನ ಸಂಪತ್ತು||
ಮನೆಯೇ ಮೊದಲ ಪಾಠಶಾಲೆ
ಮನೆಯ ಮೊದಲ ಗುರು ನೀನೆ
ನಿನ್ನ ಪ್ರೀತಿ ಮಮತೆಗೆ ನಾ ಬೆರಗಾದೆನು
ಕಾಣದ ದೇವರ ನಿನ್ನಲ್ಲಿ ಕಂಡೆ ನಾ||
ನಿನ್ನ ಪ್ರೀತಿಯ ಅಕ್ಕರೆ
ನನಗಾಯಿತು ಸಕ್ಕರೆ
ನಿನ್ನ ಜೀವನ ಪಾಠವೇ
ನನ್ನ ಬಾಳ ಜೀವವೇ
ನಿನಗಿಂತ ಮಿಗಿಲಾದವರು ಯಾರು ಇಲ್ಲ
ನಿನ್ನ ಮರೆಯಲಾರೆನು ಏಳೇಳು ಜನ್ಮವೆಲ್ಲ||
10ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಎಲ್ಲವನು ಸಹಿಸಿದರು ಅಮ್ಮ
ಕಷ್ಟ ಬಂದಾಗ ಎದುರಿಸಿದರು ಅಮ್ಮ
ನನ್ನ ಬೆಳೆಸಿದರು ಅಮ್ಮ
ಎಲ್ಲರೊಂದಿಗೆ ಪ್ರೀತಿಯಿಂದಿರುವರು ಅಮ್ಮ
ಮನೆಯ ಜವಾಬ್ದಾರಿ ವಹಿಸುವರು ಅಮ್ಮ
ಯಾರಿಗೂ ನೋವಾಗದಂತೆ
ಮಾತಾಡುವರು ಅಮ್ಮ
ನಿಮ್ಮ ಋಣವನ್ನ ಹೇಗೆ ತೀರಿಸಲಮ್ಮ
............................................... ಸಿಂಚನ
10ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಎಲ್ಲದರಲ್ಲು ಜೊತೆಗಿರುತ್ತಾರೆ ಅಪ್ಪ
ಚೆನ್ನಾಗಿ ಕಲಿಯಬೇಕೆನ್ನುತ್ತಾರೆ ಅಪ್ಪ
ನನಗೆ ಎಲ್ಲದರಲ್ಲೂ ಸಹಾಯ ಮಾಡುತ್ತಾರೆ ಅಪ್ಪ
ಕೆಟ್ಟದ್ದನ್ನು ಕಲಿಯಬಾರದೆನ್ನುತ್ತಾರೆ ಅಪ್ಪ
ಜೀವನದಲ್ಲಿ ಮುಂದೆ ಬರಬೇಕೆನ್ನುತ್ತಾರೆ ಅಪ್ಪ
ನಾನು ಕೇಳಿದ್ದನ್ನು ತಂದು ಕೊಡುತ್ತಾರೆ ಅಪ್ಪ
ನನ್ನ ಮುದ್ದು ಅಪ್ಪ
............................................... ಸಿಂಚನ
10ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ನೀವು ನಮ್ಮೊಂದಿಗಿರುವರೆ
ಜನ್ಮ ಕೂಟ್ಟವರು ಅಮ್ಮ
ಹಣಿಬರಹ ಬರೆದವರು ಬ್ರಹ್ಮ
ವಿದ್ಯಾ ಲಕ್ಷ್ಮೀ ಸರಸ್ವತಿ
ನಾವು ನಿಮಗೆ ಶರಣಾಗತಿ
ಓ ನನ್ನ ದೇವರೇ
ನೀವು ನಮ್ಮೊಂದಿಗಿರುವರೆ
............................................... ಸಿಂಚನ
10ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ನಾವು ನೋಡುತ್ತೇವೆ ಮೈಮರೆಯುತಾ
ಗರಿಬಿಚ್ಚಿ ಕುಣಿಯುವ ಕುಣಿತ
ನಾವು ನೋಡುತ್ತೇವೆ ಬೆರಗಾಗುತಾ
ನವಿಲಿನ ಗರಿ ಹುಡುಕುತ್ತಾ
ಹೊರಟೆವು ನೇರ ತೋಟದತ್ತ
ದಿನಾಲು ನವಿಲಿನ ಸುಂದರ ನೃತ್ಯ
10ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಅದರಲ್ಲಿ ಬೆಳೆಯುವ
ಮರಗಿಡಗಳು ಅಂದ.
ಪರಿಸರ ನೋಡಲು ಹಸಿರು
ಪರಿಸರದಲ್ಲಿ ಬೀಸುವ ತಂಪು ಗಾಳಿ
ಪರಿಸರದ ಬಗೆ ಬಗೆ ಮರಗಳು
ಪರಿಸರದಲ್ಲಿ ಪ್ರಾಣಿ ಪಕ್ಷಿಗಳು
ದೂರ ದೂರಕ್ಕೆ ಮನಸುನಲ್ಲಿದು.
ಎಲ್ಲೆಡೆಯು ಪಸರಿಸಿದೆ ಪರಿಸರದ ಸೊಬಗು
ಮರ-ಗಿಡ ಬೆಳೆಸಿ ಪರಿಸರ ಉಳಿಸಿ
8ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಅದರಲ್ಲಿ ಬರುತ್ತದೆ Animals & birds
ಅದರ ಜೊತೆಗೆ ಬರುತ್ತದೆ trees & plants
ಕೆಲವೊಮ್ಮೆ ಟೀಚರ್
ಬಿಡಿಸಲು ಕೊಡುತ್ತಾರೆ diagrams
ಸಿಗುತ್ತದೆ ಒಳ್ಳೆಯ Marks
ಗೆಳೆಯರಿಂದ ಸಿಗುತ್ತದೆ feelings
ಆಗ ನನಗಾಗುತ್ತದೆ Happiness
....................................... ಮನಸ್ ಜೋಗಿ
3ನೇ ತರಗತಿ
ಸರಸ್ವತಿ ವಿದ್ಯಾಲಯ ಸಿದ್ದಾಪುರ
ಕುಂದಾಪುರ ತಾಲೂಕು ಉಡುಪಿ ಜಿಲ್ಲೆ
******************************************
ಅದು ಕೂಗುತ್ತದೆ ಕೇಳಿ
ಅದು ತಿನ್ನುತ್ತದೆ ಕಾಳು ಹೆಕ್ಕಿ
ಅದು ಒಂದು ಜಾತಿಯ ಹಕ್ಕಿ
ಅದರ ಪಲ್ಯ ಮಾಡಿದರೆ ತಿನ್ನುವೆ ನೆಕ್ಕಿ
....................................... ಮನಸ್ ಜೋಗಿ
3ನೇ ತರಗತಿ
ಸರಸ್ವತಿ ವಿದ್ಯಾಲಯ ಸಿದ್ದಾಪುರ
ಕುಂದಾಪುರ ತಾಲೂಕು ಉಡುಪಿ ಜಿಲ್ಲೆ
******************************************
ಅದು ಮಾಡೋದಿಲ್ಲ ನೋಯ್ಸ್
ಅದಕ್ಕೆ ಇಲ್ಲ ವಾಯ್ಸ್
ಮಾಡುವೆ ನಾನು ಚಾಯ್ಸ್
....................................... ಮನಸ್ ಜೋಗಿ
3ನೇ ತರಗತಿ
ಸರಸ್ವತಿ ವಿದ್ಯಾಲಯ ಸಿದ್ದಾಪುರ
ಕುಂದಾಪುರ ತಾಲೂಕು ಉಡುಪಿ ಜಿಲ್ಲೆ
******************************************
ಅಮ್ಮನಿಗೆ ರಿಚಾರ್ಜ್ ಮಾಡಲು ಕಷ್ಟ
ಅಪ್ಪ ರಿಚಾರ್ಜ್ ಮಾಡಿದರೆ ನೋಡಲು ಇಷ್ಟ
ಇದರಿಂದ ಕಂಪನಿಗೆ ಇಲ್ಲ ಯಾವುದೇ ನಷ್ಟ
3ನೇ ತರಗತಿ
ಸರಸ್ವತಿ ವಿದ್ಯಾಲಯ ಸಿದ್ದಾಪುರ
ಕುಂದಾಪುರ ತಾಲೂಕು ಉಡುಪಿ ಜಿಲ್ಲೆ
******************************************
ಶುರುವೆ ಇನ್ನು ಪಟಾಕಿಯ ಹಾವಳಿ
ಹಚ್ಚೇವೆವು ನಾವು ಪ್ರೀತಿಯ ದೀಪ
ನಮ್ಮಲ್ಲಿಲ್ಲ ಕೋಪ ತಾಪ
ಹೊಸ ಹೊಸ ಬಟ್ಟೆಯ ಹಾಕೋಣ
ಸಿಹಿ ತಿಂಡಿ ಹಂಚುತ ಬಾಳೋಣ
ಚಟ್ ಪಟ್ ಎನ್ನುತ ಪಟಾಕಿ ಹಚ್ಚುವ.
ದೀಪದಿಂದ ದೀಪಕೆ ಮಮತೆಯ ಹಂಚುವ
7ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕನ್ಯಾನ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************