ಮಕ್ಕಳ ಕವನಗಳು : ಸಂಚಿಕೆ - 38
Tuesday, March 11, 2025
Edit
ಮಕ್ಕಳ ಕವನಗಳು : ಸಂಚಿಕೆ - 38
ಜಗಲಿಯ ಮಕ್ಕಳ ಸ್ವರಚಿತ ಕವನಗಳು
ಕವನ ರಚನೆ ಮಾಡಿರುವ ವಿದ್ಯಾರ್ಥಿಗಳು :
◾ ದಿಯಾ ಉದಯ್ ಡಿ ಯು, 6ನೇ ತರಗತಿ
◾ ನಿಸರ್ಗ, 8ನೇ ತರಗತಿ
◾ ಬಾಲಕೃಷ್ಣ ಬಿ, 10ನೇ ತರಗತಿ
◾ ಸೃಜನಾ ಜಿ ಪೂಜಾರಿ, 8ನೇ ತರಗತಿ
◾ ಫಾತಿಮತ್ ಜಸೀಲ, 8ನೇ ತರಗತಿ
◾ ಶ್ರೇಯಾ ನಾಯ್ಕ್, 8ನೇ ತರಗತಿ
ನಿನ್ನಯ ಮುಖವು ಹೀಗೇಕೆ?
ಜನರ ಹಾಗೆ ಅಂದದ ನಗುವು
ನಿನಗೆ ಇಲ್ಲ ಹೀಗೇಕೆ?
ಆನೆಯ ಸೊಂಡಿಲು ದಂತದ ಹಲ್ಲು
ಮೋದಕ ತಿನ್ನುವೆ ಹೇಗೆ?
ಇಲಿಯ ಮೇಲೆ ಕುಳಿತು ನೀನು
ಮಳೆಯಲಿ ಸುತ್ತುವೆ ಹೇಗೆ?
ಚಳಿಯು ಇರಲು ಅಮ್ಮ ನಿನಗೆ
ಟೋಪಿಯ ತೊಡಿಸುವುದು ಹೇಗೆ?
ನಮ್ಮಯ ಹಾಗೆ ಒಮ್ಮೊಮ್ಮೆ ನೀನು
ಚಾಕಲೇಟು ತಿನ್ನುವೆ ಹೇಗೆ?
ಅಮ್ಮ ನಿನಗೆ ಐಸ್ ಕ್ರೀಮ್ ಕೊಡಿಸಲು
ನೆಕ್ಕಿ ತಿನ್ನುವೆ ಹೇಗೆ?
ಬೆಕ್ಕನು ಕಂಡು ಇಲಿಯು ಓಡಲು
ಅದನ್ನು ಹಿಡಿಯುವೆ ಹೇಗೆ?
6ನೇ ತರಗತಿ.
ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ,
ಕಿಲ್ಪಾಡಿ, ಮೂಲ್ಕಿ.
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
******************************************
ಅದಕ್ಕೆ ನನ್ನ ಕಂಡರೆ ಸೊಕ್ಕು,
ಪ್ರತಿದಿನ ಅದಕ್ಕೆ ನಾ ಹಾಕುವೆ ಹಾಲು,
ಅದಾಗಿದೆ ಈಗ ನನ್ನ ಪಾಲು!
ಬೆಕ್ಕನು ನಾ ಮುದ್ದಾಡುವೆ ಪ್ರೀತಿಯಿಂದ,
ಅದು ನನಗೆ ಪರಚುತ್ತದೆ ಕಿಚ್ಚಿನಿಂದ,
ಬೆಕ್ಕಿಗೆ ಆಟ,
ಇಲಿಗೆ ಪ್ರಾಣ ಸಂಕಟ!
ಕೊನೆಗೂ ಇಲಿಮರಿ ಬೆಕ್ಕಿನ ಪಾಲಾಯಿತು,
ನನ್ನ ಮನಕ್ಕೆ ತುಂಬಾ ನೋವಾಯಿತು,
ಕೊನೆಗೂ ಬೆಕ್ಕಿನ ಆಸೆ ತೀರಿತು
ಇಲಿಮರಿ ಪ್ರಾಣ ಹೋಯಿತು.
8ನೇ ತರಗತಿ,
ಸರ್ಕಾರಿ ಸಂಯುಕ್ತ ಪ್ರೌಢಶಾಲೆ,
ವಳಕಾಡು, ಉಡುಪಿ.
ಉಡುಪಿ ಜಿಲ್ಲೆ
******************************************
ಹೊಸದೊಂದು ಸೃಷ್ಟಿಯಾಯಿತು
ಭಾವನೆಯ ಅಬ್ಬರವ
ಮಳೆಯೊಂದು ಶುರುವಾಯಿತು
ನನ್ನ ಕಾಲುಗಳು ತಂಪಾಯಿತು
ಆಗ ಅನಿಸಿತು ಕವನದ ಶೀರ್ಷಿಕೆ
ಬರೆಯುತ್ತಾ ಹೋದೆ ಪ್ರಕೃತಿಯ ವಯ್ಯಾರವ
ಬರೆಯುತ್ತಾ ಹೋದೆ
ಮಳೆರಾಯನ ಹನಿಗಳ
ಮುತ್ತು ಮುತ್ತಾಗಿ ಹರಿಯಿತು
ಹೊತ್ತು ಹೊತ್ತಾಗಿ ಕಲಿಸಿತು
ಪ್ರಕೃತಿಯ ರಸಭಾವನೆಯ
ನೋಡಿ ನನಗೆ ಖುಷಿಯಾಯಿತು
ಕೊನೆಗೆ ನನ್ನ ಬರಹವು ಮುಕ್ತಾಯಗೊಂಡಿತು...
ಆಹಾ! ಇದೆ ಎನ್ನ ಬರಹ
ಪ್ರಕೃತಿ ಸುಂದರ ಕುಟೀರ....!!
10ನೇ ತರಗತಿ
ಬೆಥನಿ ಪದವಿಪೂರ್ವ ಕಾಲೇಜು
ನೂಜಿಬಾಳ್ತಿಲ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಕಳೆದು ಹೋದೀತೇನೋ ಅದರ ಹೊಳಪು,
ಬಾಲ್ಯದಲ್ಲಿ ಆಡಿದ ಆ ಮಣ್ಣಿನಾಟ,
ಎಲ್ಲರೊಡಗೂಡಿದ ಗೆಳೆಯರ ಒಡನಾಟ!
ಅಂದು ನಾ ಆಡಿದ ಮರಕೋತಿ ಆಟ,
ಮರದಿಂದ ಕೆಳ ಬಿದ್ದು ಕಲಿತಂತಾ ಪಾಠ,
ಎಲ್ಲರಿಂದ ನನ್ನನ್ನ ಬಚ್ಚಿಟ್ಟು ಕಣ್ಣಮುಚ್ಚಾಲೆಯಲಿ,
ಗೆಳೆಯರ ಕಣ್ತಪ್ಪಿಸಿ ಗುರಿಮುಟ್ಟಿದ ಸಂತಸದಲಿ.
ಅಂದು ದೀಪಾವಳಿಗೆ ಕೈ ಸುಟ್ಟ ಹಣತೆ,
ಅದ ಹೇಳಿ ಅಮ್ಮನಲ್ಲಿ ಪಡೆದಂತ ಮಮತೆ,
ತಪ್ಪು ಲೆಕ್ಕ ಮಾಡಿ ತಿಂದಂತಹ ಪೆಟ್ಟು,
ಒಳ್ಳೆ ಹಾಡು ಹೇಳಿ ಪಡೆದಂತಹ ಗಿಫ್ಟು,
ಓ ನನ್ನ ಬಾಲ್ಯವೇ ಮತ್ತೆ ಬರಲಾರೆಯಾ?!
8ನೇ ತರಗತಿ,
ಸರ್ಕಾರಿ ಸಂಯುಕ್ತ ಪ್ರೌಢಶಾಲೆ,
ವಳಕಾಡು, ಉಡುಪಿ.
ಉಡುಪಿ ಜಿಲ್ಲೆ
******************************************
ಪರ್ವತಗಳ ಸಾಲು,
ಗರಿ ಬಿಚ್ಚಿ ಕುಣಿಯುತ್ತಿದೆ
ನೋಡಲ್ಲಿ ನವಿಲು..
ಈ ಪ್ರಕೃತಿಯೇ ಒಂದು
ಚೆಲುವಿನ ನಂದನವನ
ರಾಗದಿ ಹಾಡುತಿಹ ಕೋಗಿಲೆಯ
ಕುಹೂ ಕುಹೂ ಗಾನ...
ನೋಡಲು ಎರಡು ಕಣ್ಣು ಸಾಲದು
ಹಚ್ಚ ಹಸಿರಲಿ ಕಂಗೊಳಿಸುವ
ಮಲೆನಾಡ ಬೀಡಿದು....
8ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕನ್ಯಾನ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************
ಆ ಸೂರ್ಯನಿಗೊಂದು ಪ್ರೀತಿಯ ಸಂಜೆ
ಪ್ರತಿ ಸಂಜೆಗೊಂದು ಸಿಹಿ ಅನುಭವ
ಆ ಅನುಭವಗಳೊಂದಿಗೆ ಸುಂದರ ಬದುಕು
ತಂದೆ ಹೆಸರು ಕೊಡುತ್ತಾರೆ
ಗುರುಗಳು ಉಸಿರು ಇರುವರೆಗೂ
ಹೆಸರು ಉಳಿಸಿಕೊಳ್ಳುವ
ವಿದ್ಯೆ ಬುದ್ಧಿ ಕೊಡುತ್ತಾರೆ
....................................... ಶ್ರೇಯಾ ನಾಯ್ಕ್
8ನೇ ತರಗತಿ,
ಸರ್ಕಾರಿ ಸಂಯುಕ್ತ ಪ್ರೌಢಶಾಲೆ,
ವಳಕಾಡು, ಉಡುಪಿ.
ಉಡುಪಿ ಜಿಲ್ಲೆ
******************************************