ಮಕ್ಕಳ ಕವನಗಳು : ಸಂಚಿಕೆ - 37 - ಜಗಲಿಯ ಮಕ್ಕಳ ಸ್ವರಚಿತ ಕವನಗಳು
Saturday, March 1, 2025
Edit
ಜಗಲಿಯ ಮಕ್ಕಳ ಸ್ವರಚಿತ ಕವನಗಳು
ಕವನ ರಚನೆ ಮಾಡಿರುವ ವಿದ್ಯಾರ್ಥಿಗಳು :
◾ ಕುಶಿ , 7ನೇ ತರಗತಿ
◾ ಸಿಂಧು ಜಿ ಭಟ್, 7ನೇ ತರಗತಿ
◾ ಕುಶಿ, 8ನೇ ತರಗತಿ
◾ ವಂದನ ಯಸ್ ಯಮ್, 9ನೇ ತರಗತಿ
◾ ಭೂಮಿಕಾ. ಎನ್. ಶೇಟ್, 8ನೇ ತರಗತಿ
◾ ಸೃಷ್ಟಿ ಎ. ಶೆಟ್ಟಿ, ಪ್ರಥಮ ಪಿಯುಸಿ
ಇವರ ಹೆಸರು ಕೇಳಲೇ ಅಂದ
ಏಳಿ ಎದ್ದೇಳಿ ಗುರಿ
ಮುಟ್ಟುವ ತನಕ ನಿಲ್ಲದಿರಿ
ಈ ವಾಕ್ಯವ ಕೇಳಿ ನೀ
ಮುಂದುವರಿ
ಬಾಲ್ಯದಲಿ ಅವರಿಗೆ
ಚೇಷ್ಟೆ ಮಾಡುವುದೆಂದರೆ ಇಷ್ಟ
ಅದನು ಸಹಿಸಿಕೊಳ್ಳುವುದು
ಅವರ ಮನೆಯವರಿಗೆ ತುಂಬಾ ಕಷ್ಟ
ಶಿವ ಶಿವಾ ಎಂಬಮಂತ್ರವು
ಅವರ ಚೇಷ್ಟೆಗೆ
ವಿರಾಮವಾದವು.
ಪುಸ್ತಕವನು ಮರೆಯದಿರಿ
ಎಂಬುದಕೆ ಇವರೇ ಮಾದರಿ
ಇವರ ಜನ್ಮ ದಿನ
ನಮ್ಮೆಲ್ಲರಿಗೂ ಯುವ ದಿನ
7ನೇ ತರಗತಿ
ಬಡಗಬೆಳ್ಳೂರು ಅನುದಾನಿತ
ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ
******************************************
ದಿನವಿಡೀ ಸುರಿಸುತ್ತಾಳೆ ಬೆವರು
ಅವಳಿಗೆ ಸಮನಿಲ್ಲ ದೇವರು
ಅವಳಂತಿಲ್ಲ ಉಳಿದ ಸಂಬಂದದವರು,
ಹಗಲಿರುಳು ದುಡಿಯುವ ಅವಳಿಗೆ
ಮಕ್ಕಳೇ ಪ್ರಪಂಚ
ಅಮ್ಮನಂತಿಲ್ಲ ಹೊರಗಿನ ಪ್ರಪಂಚ
ಅಮ್ಮನಲ್ಲಿಯೇ ಅಡಗಿರುವುದು ಭೂತಪಂಚ
ತಿಳಿಯಲಾರೆವು ಈ ಪ್ರಕೃತಿಯ ಅಂಚ.
ನಗುವಾಗಲೂ ನುಂಗುವಳು ಸಾವಿರ ನೋವ
ಅವಳು ಅಳುವುದು ನಾ ಕಾಣೆ ಭಾವ
ಅಮ್ಮ ಎನ್ನುವ ದೇವರಿಗೆ ಹರಕೆ ಏನು ಕೊಡಲಿ,
ಪ್ರಕೃತಿಯೆ ನನ್ನಮ್ಮ ನನ್ನ ಸೃಷ್ಟಿಸಿದಳವಳು
ದೇವರೆನ್ನುವರೆಲ್ಲ ನಾಕಾಣೆ ಅವನನ್ನು
ನನ್ನನ್ನು ಹರಸಿದಳು ಸುಖವಾಗಿರಲೆಂದು
ಬೇಡಿದರೂ ಬರಲಿಲ್ಲ ಆ ದೇವರು
ಬೇಡದೆಯೂ ನನಗಾಗಿ ಬಂದಳು
ನನ್ನ ನೋವ ಮರೆಸಿದಳು,
ಎಳು ಜನ್ಮವೂ ಸಾಲದು,
ನನ್ನಮ್ಮನನ್ನ ಹೊಗಳಲು
ಹೇಳುವುದೆಂತು ಅಮ್ಮನ ಪವಾಡಗಳನ್ನು
ಹಿರಿಯರಿಗೂ ಕಿರಿಯರಿಗೂ ಅಚ್ಚು ಮೆಚ್ಚು,
ನನಗಂತೂ ನನ್ನಮ್ಮ ಪ್ರೀತಿಯ ಬೆಲ್ಲದಚ್ಚು,
ಏಳನೇ ತರಗತಿ,
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ
******************************************
ಆದರೂ ಬಹಳ ಸಣ್ಣ
ತಿನ್ನುವುದಿದು ಬೆಲ್ಲ
ಯಾರಿಗೂ ಕಮ್ಮಿ ಇಲ್ಲ
ಸಾಲಾಗಿ ಹೋಗುವುದು ಇರುವೆ
ನಿನಗೆ ಬೆಲ್ಲ ಸಕ್ಕರೆ ನಾ ತರುವೆ
ಕೊಂಡು ಹೋಗುತ್ತದೆ ಸಕ್ಕರೆ
ತೋರಿಸಿ ಇದಕ್ಕೆ ಅಕ್ಕರೆ
8ನೇ ತರಗತಿ
ಸರಕಾರಿ ಪ್ರೌಢಶಾಲೆ, ಅಜ್ಜಿಬೆಟ್ಟು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
******************************************
ಬಂತು ನಗು ಮೊಗವ ತಾಳಿ
ಆಕಾಶದೆತ್ತರಕ್ಕೆ ಹಾರಬಲ್ಲ
ಮೋಡಗಳನ್ನು ತೇಲಿಸಬಲ್ಲ
ಬಾಹುಗಳನ್ನು ತನ್ನದಾಗಿಸಿ ಕೊಂಡಿಹ ಗಾಳಿ
ಕೊಂಬೆಗಳು ಬಾಗಿ
ಮರಗಳು ಅಲುಗಾಡುವಂತೆ ಮಾಡಿ
ಚಿಗುರೆಲೆ ಹುಟ್ಟಿ
ಎಲೆಗಳುದುರುವಂತೆ ಮಾಡಿ
ಎತ್ತರಕ್ಕೂ ಏರಲು ಅರಿತಿರುವ
ಕೆಳಕ್ಕೂ ಇಳಿಯಲರಿತಿರುವ
ಎಲ್ಲೆಲ್ಲೂ ಸೇರಿಕೊಂಡಿಹ ಗಾಳಿ
ವಿಶಾಲವಾದ ಸಾಗರದಲ್ಲೂ
ಆರ್ಭಟಗೈವ ಮೋಡವನ್ನು
ಘರ್ಷಿಸಿ ಕೋಲಾಹಲಗೈವ
ಸುಳಿಯಾಗಿ ಎಲ್ಲವನ್ನು ನಶಿಸಬಲ್ಲ
ತನ್ನ ಬಾಹುಬಲದಿಂದ
ಭುವಿಯನ್ನೇ ಕಂಪಿಸಬಲ್ಲ
ಅಜಾನು ಬಾಹುವಿನಂತಿಹುದು ಗಾಳಿ
9ನೇ ತರಗತಿ
ಶ್ರೀ ಸರಸ್ವತಿ ವಿದ್ಯಾಲಯ ಕನ್ಯಾನ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ತಂದೆ ತಂದಿತು ಹೊಸ ಹರುಷ
ಹಳೆಯ ತಪ್ಪುಗಳನು ಮರೆತು
ಹೊಸ ಅಧ್ಯಾಯವನು
ತೆರೆಯುವ ಸಮಯ
ಹೊಸ ವರುಷದಲಿ
ಹೊಸ ಕನಸುಗಳಾಗಲಿ ಉದಯ
ಸ್ನೇಹಿತರೊಂದಿಗೆ ಸೇರಿ
ಬೆಸೆಯುವ ಹಬ್ಬವನು
ನಗುವಿಂದ ಕೂಡಿ
ಸವಿಯುವ ಸುಖವನು
ಹೊಸ ವರುಷ ತರಲಿ ಹರುಷ
ಹೊಸ ಕನಸು ಆಗಲಿ ನನಸು
ಹಳೆ ಕಹಿಯನು ಮರೆತು
ಹೊಸ ಸಿಹಿಯನು ಸವಿಯೋಣ
ಈ ಹೊಸ ವರುಷವು ಬದುಕಲಿ
ಸಂತೋಷವನು ಸುಖವನು ತರಲಿ
ಹೊಸ ಆಕಾಂಕ್ಷೆಗಳು ಈಡೇರಲಿ
ಎಲ್ಲರ ಬದುಕು ಉಜ್ವಲವಾಗಲಿ
8ನೇ ತರಗತಿ
ಸರಕಾರಿ ಸಂಯುಕ್ತ ಪ್ರೌಢಶಾಲೆ,
ವಳಕಾಡು, ಉಡುಪಿ
******************************************
ಕಡಿದು ಆಯ್ತು ಕಟ್ಟಡಗಳ ನಾಡು
ಸುಂದರವಾದ ಕಟ್ಟಡಗಳ ನಾಡು
ಬಿದ್ದು ಆಯ್ತು ನರಕದ ಪಾಡು..
ಸೊಗಸಾದ ನದಿ ಜಲಗಳ ಹರಿದಾಟ
ಕಶ್ಮಲಗೊಂಡು ವಿಷ ಜಂತುಗಳ ಹಾರಾಟ
ಮಾನವ ಸ್ವಾರ್ಥಕ್ಕಾಗಿ ಕೊಟ್ಟ ಕಾಟ
ಪ್ರಾಣಕ್ಕಾಗಿ ಪಟ್ಟ ಪರದಾಟ..
ಶುದ್ಧ ಗಾಳಿಯ ಉಸಿರಾಟ,
ಅಶುದ್ಧ ಗಾಳಿಯ ಓಡಾಟ,
ಶುದ್ಧ ಶ್ವಾಸಕ್ಕಾಗಿ ಸೆಣಸಾಟ,
ಅಶುದ್ಧ ಶ್ವಾಸದಿಂದ ಒದ್ದಾಟ ..
ಸ್ಪಷ್ಟವಾದ ಶಬ್ದವಾಣಿ
ಹೆಚ್ಚಾದ ಶಬ್ದಹಾನಿ
ಸೃಷ್ಟಿಕರಿಸಲಾಗದು ಧ್ವನಿ,
ಸುರಿಯಿತು ಕಣ್ಣೀರ ಹನಿ...!
ಅದ್ಭುತವಾದ ಪರಿಸರ,
ಅತಿಯಾದ ಅವಸರ,
ಹೊಸತಾಗಿ ಕೊಟ್ಟರೂಪ,
ಹಿಂತಿರುಗಿದವರಿಗೆ ಪಾಪ...
ಉಳಿಸುವ ಬೆಳೆಸುವ,
ಸುಂದರವಾದ ಮರಗಿಡಗಳ,
ಸೊಗಸಾದ ನದಿಜಲಗಳ,
ಉಳಿಸುವ ಬೆಳೆಸುವ...
ಉಳಿಸುವ ಉಳಿಸುವ,
ಶುದ್ಧವಾದ ಗಾಳಿಯ,
ಉಸಿರಾಡಲು ಯೋಗ್ಯವಾದ ಗಾಳಿಯ
ಉಳಿಸುವ ಉಳಿಸುವ ...
ಉಳಿಸುವ ಬೆಳೆಸುವ ನಮ್ಮ ಪರಿಸರ
ಹಸಿರುಡುಗೆಯ ಭೂಮಿ ತಾಯಿಯ
ಉಳಿಸುವ ಬೆಳೆಸುವ...!
ಪ್ರಥಮ ಪಿಯುಸಿ
ಶ್ರೀ ದುರ್ಗಾಪರಮೇಶ್ವರಿ ದೇವಳ
ಪದವಿ ಪೂರ್ವ ಕಾಲೇಜು ಕಟೀಲು.
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
******************************************
ನೆನಪುಗಳ ಈ ಬಾರಿ
ನನ್ನ ಶಾಲೆಯಲ್ಲಿ ನಾ ಕಳೆದ
ನೆನಪುಗಳ ಪರಿ
ಜೀವಿಸಿದೆ ಪ್ರತಿಕ್ಷಣ
ಶಾಲೆಯಲ್ಲಿ
ನೆನೆಯುತ್ತಿರುವೆ ಪ್ರತಿಗಳಿಗೆ
ಮನೆಯಲ್ಲಿ
ಅಕ್ಕರೆಯ ಸ್ನೇಹಿತರ ತಂಡ
ಆತ್ಮೀಯ ಶಿಕ್ಷಕರ ಒಡನಾಟ,
ನನ್ನ ಪ್ರೀತಿಯ ಸ್ನೇಹಿತರು
ನನ್ನ ಮೇಲೆ ನಂಬಿಕೆ ಇಟ್ಟಿದ್ದ ಬಂಧುಗಳು,
ನನ್ನಲ್ಲಿ ಹಲವಾರು ವಿಷಯಗಳನ್ನು
ಹಂಚಿಕೊಳ್ಳುತ್ತಿದ್ದ ಮಿತ್ರರು,
ಹಲವಾರು ನೆನಪುಗಳ ಸುಂದರ
ಕಲಾಕೃತಿಯನ್ನು ಕೆತ್ತಿರುವ ಗೆಳತಿಯರು,
ನನ್ನ ಶಾಲೆ ಒಂದು ದೇವಾಲಯ
ಅಲ್ಲಿ ನಾ ಕಂಡೆ ಶಿಕ್ಷಕರೆಂಬ ದೇವರ,
ಪ್ರೀತಿಯನ್ನುತೋರುವ,
ವಿದ್ಯೆಯನ್ನು ನೀಡುವ ದೇವಾಲಯ
ಅಲ್ಲಿ ನಾ ಕಂಡೆ ನಮಗಾಗಿ
ಕಷ್ಟಪಡುವ ಶಿಕ್ಷಕರ,
ನಗುವಿನಲ್ಲಿ ಜೊತೆ ಇದ್ದ ಸ್ನೇಹಿತರು
ನಕ್ಕು ನಕ್ಕು ನಲಿದು
ಕೆಲವೊಮ್ಮೆ ಬೈಗುಳಗಳನ್ನು ತಿಂದು,
ನೆನಪಾಗುತ್ತಿದೆ ಆ ದಿನಗಳು
ಆದರೆ ನೆನೆದು ನಗುತ್ತಿರುವೆ, ನಾ ಒಬ್ಬಳಿಲ್ಲಿ
ನನ್ನ ಶಾಲೆಯ ನನ್ನ ನೆನಪುಗಳು
ಬರೆದರೆ ಹಾಳೆಗಳೇ ಸಾಲದಷ್ಟು
ಬರೆಯಲು ಹೋದರೆ
ಹಾಳೆಗಳೇ ಸಾಕೆನ್ನುವಷ್ಟು,
ಬರೆದೆ ನಾ ಇಷ್ಟು,
ಬರೆಯಲಿರುವುದು ಸಾಕಷ್ಟು,
ಪ್ರಥಮ ಪಿಯುಸಿ
ಶ್ರೀ ದುರ್ಗಾಪರಮೇಶ್ವರಿ ದೇವಳ
ಪದವಿ ಪೂರ್ವ ಕಾಲೇಜು ಕಟೀಲು.
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
******************************************