-->
ಎಸ್ ಎಸ್ ಎಲ್ ಸಿ ಪರೀಕ್ಷಾ ಸಿದ್ಧತೆ : ವಿಶೇಷ ಲೇಖನ ಸಂಚಿಕೆ - 05

ಎಸ್ ಎಸ್ ಎಲ್ ಸಿ ಪರೀಕ್ಷಾ ಸಿದ್ಧತೆ : ವಿಶೇಷ ಲೇಖನ ಸಂಚಿಕೆ - 05

ಎಸ್ ಎಸ್ ಎಲ್ ಸಿ ಪರೀಕ್ಷಾ ಸಿದ್ಧತೆ : ವಿಶೇಷ ಲೇಖನ ಸಂಚಿಕೆ - 05
ಲೇಖನ : ನನ್ನ ಅನುಭವ
ಲೇಖಕಿ : ಅಂಕಿತ ಬಸಪ್ಪ ಕೊಣ್ಣೂರ
ಪ್ರಥಮ ಪಿಯುಸಿ (PCMC)
ಆಳ್ವಾಸ್ ಪದವಿ ಪೂರ್ವ ಕಾಲೇಜು
ಮೂಡಬಿದಿರೆ, ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
                
 
ನಾನು ಅಂಕಿತ ಬಸಪ್ಪ ಕೊಣ್ಣೂರ. ಪ್ರಸ್ತುತ ನಾನು ಪ್ರಥಮ ಪಿಯುಸಿ ವಿದ್ಯಾರ್ಥಿನಿ. ಮೂಡಬಿದ್ರೆಯ ಆಳ್ವಾಸ್ ಪದವಿಪೂರ್ವ ಕಾಲೇಜಿನಲ್ಲಿ ಓದುತ್ತಿದ್ದೇನೆ. 

ನನ್ನ ಶಿಕ್ಷಕರ ಹಾಗೂ ಪಾಲಕರ ಸತತ ನೆರವಿನಿಂದ, ಮಾರ್ಗದರ್ಶನದಿಂದ 2023-24ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ರಲ್ಲಿ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಬರಲು ಸಾಧ್ಯವಾಯಿತು. ಮುಂದೆ ಗುರಿಯಿರಬೇಕು ಹಿಂದೆ ಗುರುವಿರಬೇಕು ಎಂಬಂತೆ ನನ್ನ ಗುರಿಯನ್ನು ನನಗೆ ತೋರಿಸಿ, ನನ್ನ ಬೆನ್ನ ಹಿಂದೆ ನಿಂತು ಮಾರ್ಗದರ್ಶನವನ್ನು ನೀಡಿದ ನನ್ನ ಗುರುಗಳಿಗೆ ಸದಾ ಋಣಿಯಾಗಿರುತ್ತೇನೆ.

ಪರೀಕ್ಷೆಗಳೇ ಜೀವನವಲ್ಲ. ಆದರೆ ಜೀವನದಲ್ಲಿ ಬರುವ ಎಲ್ಲಾ ಪರೀಕ್ಷೆಗಳನ್ನು ಎದುರಿಸಲು ಮಾನಸಿಕ ಹಾಗೂ ದೈಹಿಕ ಸದೃಢತೆ, ಧೈರ್ಯ, ಆತ್ಮವಿಶ್ವಾಸ ಬಹುಮುಖ್ಯ ಪಾತ್ರ ವಹಿಸುತ್ತವೆ. ಇನ್ನೇನು ಎಸ್ ಎಸ್ ಎಲ್ ಸಿ ಪರೀಕ್ಷೆಗಳ ಸಮಯ ಹತ್ತಿರ ಬರುತ್ತಿದೆ. ಪರೀಕ್ಷೆಗೆ ಭಯ ಬೇಡ. ಹೆದರದೆ ಆತ್ಮಸ್ಥೈರ್ಯದಿಂದ ಎಲ್ಲಾ ಪರೀಕ್ಷೆಗಳನ್ನು ಎದುರಿಸಿ. ಕಡೆಯ ಸಮಯದಲ್ಲಿ ಗೊಂದಲಗಳು, ನಿಮ್ಮ ಬಗ್ಗೆ ನಿಮಗೆ ಅನುಮಾನ ಕಂಡು ಬರುವ ಸಾಧ್ಯತೆಗಳು ಹೆಚ್ಚು. ಆದರೆ ಅವುಗಳಿಗೆ ಕುಗ್ಗದೆ ಧೈರ್ಯವಾಗಿರಿ. ಆದಷ್ಟು ಈ ಸಮಯದಲ್ಲಿ ಪೌಷ್ಟಿಕ ಆಹಾರದೊಂದಿಗೆ ನಿಮ್ಮ ಆರೋಗ್ಯದ ಕಡೆ ಗಮನಹರಿಸಿ. ಇಡೀ ವರ್ಷ ಓದಿದ ನೀವು ಈಗ ಧೃತಿಗೆಡುವುದು ಬೇಡ.

ಪರೀಕ್ಷೆಯ ಕೊಠಡಿಯಲ್ಲಿ ಪರೀಕ್ಷೆ ಪ್ರಾರಂಭಕ್ಕೂ ಮುನ್ನ "ನಾನು ಅದು ಓದಲಿಲ್ಲ, ಈ ಕಾನ್ಸೆಪ್ಟ್ ಬಿಟ್ಟು ಬಿಟ್ಟೆ, ಅರ್ಥವಾಗಿಲ್ಲ ಎಂಬ ಗೊಂದಲಗಳು, ಒತ್ತಡಗಳು ಬೇಡ." ನಿಮಗೆ ಎಲ್ಲವೂ ಅರ್ಥವಾಗಿದೆ ಎಂಬ ಧನಾತ್ಮಕ ಭಾವದಿಂದ ಪರೀಕ್ಷೆಯನ್ನು ಎದುರಿಸಿ. ಎಲ್ಲವೂ ಒಳ್ಳೆಯದಾಗುತ್ತದೆ.

All the best for your examination. Don't be afraid of result.....

"Don't run behind the success, Run behind knowledge, Success automatically comes to you."
............................... ಅಂಕಿತ ಬಿ ಕೊಣ್ಣೂರ
ಪ್ರಥಮ ಪಿಯುಸಿ (PCMC)
ಆಳ್ವಾಸ್ ಪದವಿ ಪೂರ್ವ ಕಾಲೇಜು
ಮೂಡಬಿದಿರೆ, ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
******************************************


Ads on article

Advertise in articles 1

advertising articles 2

Advertise under the article