-->
ನಾನು ಓದಿದ ಪುಸ್ತಕ : ಸಂಚಿಕೆ - 03

ನಾನು ಓದಿದ ಪುಸ್ತಕ : ಸಂಚಿಕೆ - 03

ನಾನು ಓದಿದ ಪುಸ್ತಕ : ಸಂಚಿಕೆ - 03
ಪುಸ್ತಕ : ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಕ್ಷೇತ್ರ ಮಹಿಮೆಗಳು
ಓದು ಮತ್ತು ಬರಹ : ಪ್ರೇಮಾ ಆರ್ ಶೆಟ್ಟಿ ಮೂಲ್ಕಿ
ಸಹಶಿಕ್ಷಕಿ
ಸರಕಾರಿ ಪದವಿ ಪೂರ್ವ ಕಾಲೇಜು ಮೂಲ್ಕಿ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob : +91 99013 27499

          ಈ ವರ್ಷ ನಾನು ಓದಿದ ಉತ್ತಮ ಪುಸ್ತಕ
ಇದೊಂದು ಪುಸ್ತಕ ನನಗೆ ದಕ್ಕಿದ್ದು ಮೂಲ್ಕಿ ರೋಟರಿ ಕ್ಲಬ್ನವರು ರೋಟರಿ ಇಂಟರಾಕ್ತ್ ಶಿಕ್ಷಕರಿಗೆಲ್ಲ ಸನ್ಮಾನ ಮಾಡಿ ಒಂದೊಂದು ಪುಸ್ತಕ ಕೊಟ್ಟರು. ಅದರಲ್ಲಿ ನನಗೆ ಸಿಕ್ಕಿದ ಪುಸ್ತಕ ನಾಗರಾಜ್ ಹೆಜಮಾಡಿ ಮತ್ತು ಅದಮಾರು ರಾಮಕೃಷ್ಣ ಭಟ್ ಅವರು ಜಂಟಿಯಾಗಿ ಬರೆದ ಮತ್ತು ಸಂಗ್ರಹಿಸಿ ಬರೆದ ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಕ್ಷೇತ್ರ ಮಹಿಮೆಗಳು ಎಂಬ ಪುಸ್ತಕದ ವಿಚಾರ. ಸಾಯಿ ಸೇವಕ ಮತ್ತು ಪರಬ್ರಹ್ಮ ವಿಠಲ ದಾಸ ಎಂಬ ಹೆಸರಿನಲ್ಲಿ ಇವರಿಬ್ಬರೂ ಜೊತೆಯಾಗಿ ಬರೆದ ಪುಸ್ತಕ ಬಪ್ಪನಾಡು ದೇವಸ್ಥಾನದ ಇತಿಹಾಸ ಮತ್ತು ಸ್ಥಳ ಪುರಾಣವನ್ನು ತಿಳಿಸಿ ಕೊಡುವ ಹೆಮ್ಮೆಯ ಕಾರ್ಯ ಇದಾಗಿದೆ. ಮೂಲ್ಕಿ ಎಂಬ ಊರಿಗೆ ಹೊಸದಾಗಿ ಆಗಮಿಸಿದ ನಮ್ಮಂತಹ ಅನೇಕರಿಗೆ ಇಲ್ಲಿನ ಬಪ್ಪನಾಡು ದೇವಿಯ ಬಗ್ಗೆ ಈ ಹೊತ್ತಿಗೆಯನ್ನು ಓದಿದ ಬಳಿಕ ಭಕ್ತಿ ಬಾರದೆ ಇರದು. 
    ಬಪ್ಪನಾಡಿನ ಪೂರ್ವ ಐತಿಹ್ಯದ ಕಥೆಗಳ ಸಂಗ್ರಹದ ಜೊತೆ ಜೊತೆಗೆ ದೇವಿಯ ಸುಪ್ರಭಾತ, ಅಷ್ಟೋತ್ತರ ಶತ ನಾಮಾವಳಿ, ದೇವಿಯ ಸ್ತೋತ್ರ, ತಾಯಿ ದುರ್ಗೆಯ ಭಜನೆಗಳು ಮತ್ತು ಶ್ರೀ ದುರ್ಗಾ ಪಾರಾಯಣದ ಬಗ್ಗೆ ಮಾಹಿತಿ ಕೂಡಾ ಈ ಪುಸ್ತಕದಲ್ಲಿದೆ. ಶ್ರೀ ಪ್ರೇಮ ಸಾಯಿ ಪ್ರಿಂಟರ್ಸ್ ಮತ್ತು ಪಬ್ಲಿಷರ್ಸ್ ಮಂಗಳೂರು ಇವರಿಂದ ಮುದ್ರಿಸಲ್ಪಟ್ಟ ಈ ಕೃತಿ 111 ಪುಟಗಳೊಂದಿಗೆ ಹೊರ ಬಂದಿದ್ದು ಬೆಲೆ ಕೇವಲ 25 ರೂಪಾಯಿಗಳು. ಪ್ರಕಾಶಕರು ಬಪ್ಪನಾಡು ದುರ್ಗಾ ಪಾರಾಯಣ ಗ್ರೂಪ್ ಮೂಲ್ಕಿ ಇವರು. ಈ ಗುಂಪಿನ ಸದಸ್ಯರೆಲ್ಲ ಸೇರಿ ಈ ಗ್ರಂಥವು ಕಡಿಮೆ ಬೆಲೆಗೆ ದೊರೆಯಬೇಕು ಎಂಬ ಉದ್ದೇಶದಿಂದ ಆರ್ಥಿಕ ಸಹಾಯ ಮಾಡಿರುವುದಾಗಿ ಪುಸ್ತಕದಲ್ಲಿ ಹೇಳಲಾಗಿದೆ.
   
ಅದಮಾರು ರಾಮಕೃಷ್ಣ ಭಟ್ಟರ ಮುನ್ನುಡಿ ಓದಿಸಿಕೊಂಡು ಹೋಗುತ್ತದೆ. ಅಲ್ಲಲ್ಲಿ ಸ್ವಾಮಿ ವಿವೇಕಾನಂದರ ಉತ್ತಮ ಪ್ರೇರಣದಾಯಕ ಮಾತುಗಳನ್ನು ಉಲ್ಲೇಖಿಸಲಾಗಿದೆ. ಬಪ್ಪನಾಡಿಗೆ ಬರುವ ಭಕ್ತರಿಗೆ ವಿಶೇಷ ಸೂಚನೆಗಳನ್ನು ಕೂಡಾ ಈ ಪುಸ್ತಕದಲ್ಲಿ ನೀಡಲಾಗಿದೆ. ಬಪ್ಪಬ್ಯಾರಿಯ ಕನಸಿನಲ್ಲಿ ದೇವಿ ಬಂದು ತನಗೆ ಒಂದು ದೇವಾಲಯವನ್ನು ಸಾಮಂತ ಅರಸರ ಸಹಾಯದೊಂದಿಗೆ ನಿರ್ಮಿಸ ಬೇಕೆಂದು ಕೇಳಿಕೊಂಡಾಗ ಅದನ್ನು ಒಪ್ಪಿ ನಿರ್ಮಿಸಿದ ಬಳಿಕದ ಕಥೆ, ದಾರಿಕಾಸುರ ಎಂಬ ರಾಕ್ಷಸನು ವಿಷ್ನುವಿನ ಸುದರ್ಶನ ಚಕ್ರ ಕದ್ದಾಗ ಬೇಸರಗೊಂಡ ವಿಷ್ಣುವಿನ ಕಣ್ಣೀರ ಹನಿಗಳಿಂದ ಹುಟ್ಟಿದ ಸಪ್ತ ದುರ್ಗೆಯರು, ಅವನನ್ನು ವಧಿಸಿ ದಕ್ಷಿಣಾಭಿಮುಖವಾಗಿ ಬಂದು ಕಿರಿಯ ದೇವಿ ಚಿತ್ರಪುರದಲ್ಲಿ ನಿಂತ ಕಿರಿಯ ದೇವಿ, ಮಲಯಾಳಿ ಬಿಲ್ಲವನಿಂದ ಬಾಯಾರಿಕೆ ನೀಗಿಸಿಕೊಂಡು ಸಸಿಹಿತ್ತಿಲಿನಲ್ಲಿ ನೆಲೆಸಿದ ದೇವಿಯರ ಹೊರತಾಗಿ ಉಳಿದ ಪಂಚ ದುರ್ಗೇಯರು ಲೀನವಾಗಿ ಪಂಚ ಲಿಂಗ ಸ್ವರೂಪಿಯಾಗಿ ಬಪ್ಪನಾಡು ಕ್ಷೇತ್ರದಲ್ಲಿ ನೆಲೆಸಿದ ವಿವಿಧ ಲೇಖಕರು, ಶಾಸನಗಳ ಬರಹಗಳು, ಸಂಶೋಧಕರ ಅಭಿಪ್ರಾಯವನ್ನು ಕೂಡ ಇಲ್ಲಿ ಸಂಗ್ರಹಿಸಿ ಕೊಡಲಾಗಿದೆ. ಒಟ್ಟಿನಲ್ಲಿ ಬಪ್ಪನಾಡು ದೇವಾಲಯದ ಇತಿಹಾಸದ ಬಗೆಗಿನ ಪೂರ್ಣ ಮಾಹಿತಿ ತಿಳಿಯುವ ಗ್ರಂಥ ಇದಾಗಿದೆ ಎಂದು ನನ್ನ ಅನಿಸಿಕೆ. ಧನ್ಯವಾದಗಳು. 
......................... ಪ್ರೇಮಾ ಆರ್ ಶೆಟ್ಟಿ ಮೂಲ್ಕಿ
ಸಹಶಿಕ್ಷಕಿ
ಸರಕಾರಿ ಪದವಿ ಪೂರ್ವ ಕಾಲೇಜು ಮೂಲ್ಕಿ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob : +91 99013 27499
******************************************** 


Ads on article

Advertise in articles 1

advertising articles 2

Advertise under the article