ಪ್ರೀತಿಯ ಪುಸ್ತಕ : ಸಂಚಿಕೆ - 149
Friday, February 7, 2025
Edit
ಪ್ರೀತಿಯ ಪುಸ್ತಕ
ಸಂಚಿಕೆ - 149
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.. ಪುಟ್ಟ ಹುಡುಗನೊಬ್ಬ ದಿನನಿತ್ಯದ ಓಡಾಟದಲ್ಲಿ ಆಸುಪಾಸಿನ ಪ್ರಕೃತಿಯನ್ನು ಪ್ರೀತಿಸಲು ತೊಡಗುವ ಸುಂದರವಾದ ವಿವರಣೆ ಇದು. ಆದಿತ್ಯ ಅಮ್ಮನ ಜೊತೆಗೆ ಪಕ್ಕದ ಹಳ್ಳಿಯಲ್ಲಿದ್ದ ಅಜ್ಜ-ಅಜ್ಜಿ ಮನೆಗೆ ಹೊರಟ. ದಾರಿ ಹತ್ತು ನಿಮಿಷ. ಆದರೆ ಅವರು ಅವಸರ ಮಾಡದೆ ನಿಧಾನವಾಗಿ ಅವರಿವರ ಅಂಗಳದಲ್ಲಿ ಕಾಣುವ ಸುಂದರ ನೋಟಗಳನ್ನು ಗಮನಿಸುತ್ತಾ ಆನಂದಿಸುತ್ತಾ ನಡೆದರು. ಲಕ್ಕಿ ಅತ್ತೆ ಮನೆ ಅಂಗಳದಲ್ಲಿ ಪಾರಿಜಾತ ಹೂವಿನ ಸುಗಂಧ ತೇಲಿ ಬಂತು. ಅಮ್ಮ ತನಗೆ ಇಷ್ಟವಾದ ಮೊದಲ ಮಳೆಯ ಮಣ್ಣಿನ ಸುಗಂಧವನ್ನು ನೆನಪಿಸಿದಳು. ರಾಮಣ್ಣನ ಗದ್ದೆ ಪಕ್ಕ ನೇರಳೆ ಹಣ್ಣು ತಿಂದರು. ಮುಂದೆ ಬಣ್ಣದ ಹೂಗಳನ್ನು ನೋಡಿದರು. ತಮಗೆ ಇಷ್ಟವಾದ ರುಚಿ, ಬಣ್ಣ, ಧ್ವನಿಗಳನ್ನು ನೆನಪಿಸಿಕೊಂಡರು. ಎಂತಹಾ ಸುಂದರವಾದ ಪಯಣ ಅಲ್ಲವೇ? ನಿಮಗೂ ಇದರ ಅನುಭವ ಆಗಿರಬಹುದು. ದಿನನಿತ್ಯ ನೋಡುತ್ತಿದ್ದರೂ ವಿಶೇಷವಾಗಿ ಗಮನಿಸಿದರೆ ಇನ್ನೇನೋ ಅನುಭವ ಸಿಗುತ್ತದೆ. ಓದಿ, ಸುತ್ತಮುತ್ತ ನೋಡಿ, ಖುಶಿ ಪಡಿ.
ಲೇಖಕರು: ಸ್ವಾತಿ ಭಟ್
ಚಿತ್ರಗಳು: ಮೈತ್ರೇಯಿ ನಾರಾಯಣ್
ಪ್ರಕಾಶಕರು: ಎಲ್ಲರ ಪುಸ್ತಕ
ಬೆಲೆ: ರೂ200/-
4-5 ನೇ ತರಗತಿಯ ಮಕ್ಕಳು ಓದಬಹುದು. ಚಿಕ್ಕ ಮಕ್ಕಳಿಗೂ ಓದಿ ಹೇಳಬಹುದು.
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: ಎಲ್ಲರ ಪುಸ್ತಕ ellarapusthaka@gmail.com; 9141184535
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************