ಪ್ರೀತಿಯ ಪುಸ್ತಕ : ಸಂಚಿಕೆ - 148
Saturday, February 1, 2025
Edit
ಪ್ರೀತಿಯ ಪುಸ್ತಕ
ಸಂಚಿಕೆ - 148
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.... ಗೀಜಗನ ಗೂಡು ನೋಡಿದ್ದೀರಾ? ಇದು ಒಂದು ಪುಟ್ಟ ಮರಿ ಗೀಜಗ ಹಕ್ಕಿಯಾಗಿ ಬೆಳೆಯುವ ಕಥೆ. ಟ್ವಂಕಲ್ ಹೆಸರಿನ ಕಿನ್ನರಿ ಅವಳು. ಗುಲಾಬಿ ಹೂವಿನ ಮೃದುವಾದ ದಳಗಳ ಹಾಸಿಗೆಯಲ್ಲಿ ಆಕೆ ವಾಸಿಸುತ್ತಿದ್ದಳು. ತನಗಾಗಿ ಮನೆ ಕಟ್ಟುವ ಯೋಚನೆಯೇ ಇಲ್ಲ ಅವಳಿಗೆ. ಒಂದು ಕಡೆ ಜೇಡ ಬಲೆ ಹೆಣೆಯುತ್ತಿರುತ್ತದೆ; ಮತ್ತೊಂದು ಕಡೆ ಟುಂಟುನಿ ಜೋಡಿ ಉಯಿಲಕ್ಕಿಗಳು ಹೊಸ ಗೂಡು ಕಟ್ಟುತ್ತಿವೆ. ಚಿಟ್ಟೆಗಳಿಗೂ ಜೇನ್ನೊಣಗಳಿಗೂ ಬಿಡುವಿಲ್ಲದ ಕೆಲಸ. ಕಂಬಳಿ ಹುಳಗಳೂ ಆತುರದಲ್ಲಿ ಇವೆ. ಅಳಿಲುಗಳು, ಇಲಿಗಳು ಆಹಾರ ಸಂಗ್ರಹಿಸುತ್ತಿವೆ. ನಮ್ಮ ಟ್ವಂಕಲ್ ಮಾತ್ರ ಯಾವುದೇ ಗೊಡವೆಯಿಲ್ಲದೆ ಇರುತ್ತಾಳೆ. ವಸಂತ ಋತು ದಾಟಿ ಎಲ್ಲಾ ಒಣಗಿ ಹೋದಾಗ ಮಾತ್ರ ಟ್ವಿಂಕಲ್ ಗೆ ದಿಗಿಲಾಗುತ್ತದೆ. ಇರಲು ಜಾಗವಿಲ್ಲ. ಬೇರೆ ಯಾರೂ ಆಶ್ರಯ ನೀಡುವುದಿಲ್ಲ. ಕೊನೆಗೂ ಮನೆ ಕಟ್ಟುತ್ತಾಳೆ. ಮನೆ ಕಟ್ಟಲು ಯಾರ್ಯಾರು ಯಾವ ರೀತಿ ಸಹಕರಿಸುತ್ತಾರೆ ಅಂತ ಓದಿ ನೋಡುವಿರಾ?
ಲೇಖಕರು: ದಿಪಾನ್ವಿತಾ ರಾಯ್
ಚಿತ್ರಗಳು: ಅನೂಪ್ ರಾಯ್
ಅನುವಾದ: ದೇವಕಿ ಧರ್ಮಿಷ್ಠೆ
ಪ್ರಕಾಶಕರು: ನ್ಯಾಶನಲ್ ಬುಕ್ ಟ್ರಸ್ಟ್, ಇಂಡಿಯಾ
ಬೆಲೆ: ರೂ.90/-
5-6 ತರಗತಿಯ ಮಕ್ಕಳು ಓದಬಹುದು; ಚಿಕ್ಕ ಮಕ್ಕಳಿಗೂ ಓದಿ ಹೇಳಬಹುದು
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: www.nbtindia.gov.in
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************