-->
ಮಕ್ಕಳ ನಾಟಕ : ತಾಯಿ - ರಚನೆ : ಗೌತಮಿ ಶೆಟ್ಟಿಗಾರ್, 9ನೇ ತರಗತಿ

ಮಕ್ಕಳ ನಾಟಕ : ತಾಯಿ - ರಚನೆ : ಗೌತಮಿ ಶೆಟ್ಟಿಗಾರ್, 9ನೇ ತರಗತಿ

ಮಕ್ಕಳ ನಾಟಕ : ತಾಯಿ
(ವಾತ್ಸಲ್ಯ ಕಳೆದುಕೊಂಡ ತಾಯಂದಿರಿಗೆ)
ರಚನೆ : ಗೌತಮಿ ಶೆಟ್ಟಿಗಾರ್ 
9ನೇ ತರಗತಿ 
ಲಿಟಲ್ ಫ್ಲವರ್ ಪ್ರೌಢಶಾಲೆ, ಕಿನ್ನಿಗೋಳಿ
ಮಂಗಳೂರು ಉತ್ತರ ವಲಯ. 
ದಕ್ಷಿಣ ಕನ್ನಡ ಜಿಲ್ಲೆ 



           
            (ವಾತ್ಸಲ್ಯ ಕಳೆದುಕೊಂಡ ತಾಯಂದಿರಿಗೆ)

[ಒಂದು ಊರಿನಲ್ಲಿ ಒಬ್ಬಳು ಅದ್ಭುತವಾದ ಕಲೆ ಇರುವ ಭರತನಾಟ್ಯ ನರ್ತಕಿ ಇದ್ದಳು. ಅವಳ ಗುರುವಿನ ಎದುರು ನೃತ್ಯ ಮಾಡುತ್ತಿರುವಾಗ ಬದಿಯಲಿ ಇದ್ದ ಮೇಜು ತಾಗಿ ಬೀಳುತ್ತಾಳೆ) ಸುಧಾರಾಣಿ : ಅಯ್ಯೋ… ಅಮ್ಮ.   
ಗುರು : ಏನಾಯಿತು… ಏನಾಯಿತು ಮಗ. 
ಸುಧಾರಾಣಿ : ಗುರುಗಳೇ ಕಾಲಿಗೆ ಸ್ವಲ್ಪ ಪೆಟ್ಟಾಯಿತು ಅಷ್ಟೇ ಬೇರೇನು ಆಗಿಲ್ಲ ಗುರುಗಳೇ… (ನೋವನ್ನು ಗುರುಗಳ ಎದುರು ನುಂಗುವಳು.)
ಗುರು : ಅಲ್ಲ ಮಗಳೇ, ಕಾಲಿನಲ್ಲಿ ರಕ್ತ ಬರುತ್ತಿದೆ ನೋವಾಗಿಲ್ಲ ಎಂದು ಹೇಳುತ್ತಿದ್ದೀಯ…!!
ಸುಧಾರಾಣಿ : ಹಾಗೇನು… ಆಗಿಲ್ಲ ಗುರುಗಳೇ... ಮನೆಗೆ ಹೋಗಿ ವಿಶ್ರಾಂತಿ ತೆಗೆದುಕೊಂಡರೆ ಸರಿ ಹೋಗುತ್ತೆ.
ಗುರು : ಇಷ್ಟು ರಾತ್ರಿ ಆಯ್ತು ನೀನು ಈ ಕಾಲು ನೋವು ಇಟ್ಟುಕೊಂಡು ಹೇಗೆ ಹೋಗುತ್ತೀಯ... ನಿಲ್ಲು ನಾನೇ ಬಿಟ್ಟು ಬರುತ್ತೇನೆ.
ಸುಧಾರಾಣಿ : ನಾನೇ ಹೋಗುತ್ತೇನೆ… ಗುರುಗಳೇ. ಹಾಗೇನು ಆಗಿಲ್ಲ. ನಿಮಗೆ ಕಷ್ಟ ಕೊಡುವುದಕ್ಕೆ ಇಷ್ಟ ಇಲ್ಲ.
ಗುರು : ಜಾಗೃತೆಯಿಂದ ಹೋಗು ಮಗಳೇ..

 ದೃಶ್ಯ -2
(ರಸ್ತೆಯಲ್ಲಿ ಹೋಗುತ್ತಿರುವಾಗ ಕಾಲು ನೋವು ಜಾಸ್ತಿ ಆಯಿತು. ಆವಾಗ ಅಲ್ಲಿ ಒಬ್ಬ ಹುಡುಗ ಇವಳು ಕಾಲು ನೋವಿನಿಂದ ನರಳುತ್ತಿದ್ದುದನ್ನು ನೋಡಿ ಅವಳ ಬಳಿ ಹೋದನು.)
ಸುಧಾರಾಣಿ : ಅಯ್ಯೋ… ಅಮ್ಮ 
ಕಿಶನ್ : ಏನಾಯಿತು… ಏನಾಯಿತು ಅಮ್ಮ 
ಸುಧಾರಾಣಿ : ಕಾಲು ನೋವು ಕಾಲು ನೋವಾಗುತ್ತಿದೆ.... 
ಕಿಶನ್ : ನಿಲ್ಲಿ ಅಮ್ಮ ಒಂದು ನಿಮಿಷ ಬಂದೆ… 
(ಎಂದು ಹೇಳಿ ರಸ್ತೆಯ ಬದಿಯಲ್ಲಿ ಇದ್ದ ಔಷಧಿ ಎಲೆಯನ್ನು ತಂದು ಗಾಯಕ್ಕೆ ಕಟ್ಟಿ ಅವನಲ್ಲಿ ಇದ್ದ ಚಿಕ್ಕ ಬಟ್ಟೆಯನ್ನು ಹರಿದು ಗಾಯಕ್ಕೆ ಕಟ್ಟಿದನು ಮತ್ತು ಅವಳನ್ನು ಹಿಡಿದುಕೊಂಡು ಹೋಗಿ ಪಕ್ಕದಲ್ಲಿನ ಅಂಗಡಿಯ ಬೆಂಚಿನ ಮೇಲೆ ಕೂರಿಸಿದ)
ಕಿಶನ್ :- ಈಗ ಹೇಗಿದೆ, ನೋವಾಗುತ್ತದೆಯೇ?
ಸುಧಾರಾಣಿ :- ಈಗ ಪರವಾಗಿಲ್ಲ ಈಗ ಸರಿ ಹೋಯಿತು ಹೌದು ನೀನು ಯಾರು? ಇಲ್ಲಿ ಏನು ಮಾಡುತ್ತಿದ್ದೀಯಾ? ಇಷ್ಟು ರಾತ್ರಿಯಲ್ಲಿ ನಿನ್ನ ಅಪ್ಪ ಅಮ್ಮ ಎಲ್ಲಿ?...... 
ಕಿಶನ್ :- ಆಂಟಿ ನನಗೆ ಅಪ್ಪ ಅಮ್ಮ ಇಲ್ಲ. ನಾನೊಬ್ಬ ಅನಾಥ, ನನ್ನ ಅಪ್ಪ ಅಮ್ಮ ಅಪಘಾತದಿಂದ ನನ್ನನ್ನು ಬಿಟ್ಟು ಹೋದರು… (ಬೇಸರದಿಂದ)
 ಸುಧಾರಾಣಿ: ಯಾಕೆ ಬೇಸರ ಮಾಡುತ್ತಿದ್ದೀಯಾ ಅಪ್ಪ ಅಮ್ಮ ಇಲ್ಲ ಅಂತ ಬೇಸರ ಮಾಡಬೇಡ ನಾನಿದ್ದೀನಿ ನಾನೇ ನಿನಗೆ ಅಮ್ಮ. ನೀನು ಕಾಲಿನ ಗಾಯವಾಸಿ ಮಾಡಿದ್ದೀಯ. ನಿನ್ನ ಮನಸ್ಸಿನ ಗಾಯ ನಾನು ವಾಸಿ ಮಾಡಲು ಪ್ರಯತ್ನಿಸುತ್ತೇನೆ. ನಾನು ನಿನ್ನನ್ನು ಮನೆಗೆ ಕರೆದುಕೊಂಡು ಹೋಗುತ್ತೇನೆ ಬರುತ್ತೀಯಾ. ಬರುತ್ತೀಯ ಅಲ್ಲ ಬರಬೇಕು....
ಕಿಶನ್ : ಆಯ್ತು ಆಂಟಿ
ಸುಧಾರಾಣಿ : ಆ.. ಆಂಟಿ.. ಆಂಟಿಯಲ್ಲ ಅಮ್ಮ ಎಂದು ಕರೆಯಬೇಕು.
ಕಿಶನ್ : ಅಮ್ಮ… ಅಮ್ಮ… ಅಮ್ಮ… 
[ಹೀಗೆ ಆ ಮಗುವಿಗೆ ಉಳಿಯಲು ಅವಳ ಮನೆಯಲ್ಲಿ ಆಶ್ರಯ ನೀಡುವಳು. ಅಮ್ಮನ ಪ್ರೀತಿ ತೋರಿಸುವಳು. ಒಂದು ಮಗುವಿಗೆ ಹೆತ್ತ ತಾಯಿಯ ಪ್ರೀತಿಯೇ ಬೇಕು ಅಂತ ಇಲ್ಲ. ತಾಯಿಯ ಪ್ರೀತಿ ವಾತ್ಸಲ್ಯ ತೋರಿಸುವ ಹೆಣ್ಣಿದ್ದರೆ ಸಾಕು. ಆ ಮಗುವಿಗೆ ತಾಯಿಯ ಪ್ರೀತಿಗೆ ಕೊರತೆ ಇರುವುದಿಲ್ಲ ತುಂಬಾ ಪ್ರೀತಿಯಿಂದ ಮಗುವನ್ನು ಸಾಕಿದಳು. ಆ ಮಗುವಿಗೆ ಹೆಸರನ್ನು ಇಟ್ಟಳು. ಒಬ್ಬರನ್ನು ಒಬ್ಬರು ಬಿಟ್ಟು ಇರಲಾರದಷ್ಟು ಪ್ರೀತಿ ನೀಡಿ ಸಾಕಿದಳು.]

 ದೃಶ್ಯ-3
[ಒಂದು ದಿನ ಅವಳ ಗುರುವಿನ ಬಳಿ ಮಾತನಾಡುತ್ತಿರುವಾಗ ಅವಳ ಮಗ ಬಂದು ಕೇಳುತ್ತಾನೆ]
ಕಿಶನ್ : ಅಮ್ಮ…..ಅಮ್ಮ ನನಗೆ ಆ ಚಿಟ್ಟೆ ಬೇಕು. ನಾನು ಅದನ್ನು ಹಿಡಿಯಬಹುದ.
ಸುಧಾರಾಣಿ :- ಸರಿ ಹೋಗು ಜಾಗೃತೆ.
ಕಿಶನ್ : ಸರಿ ಆಯ್ತು. 
ಸುಧಾರಾಣಿ : ನಿಧಾನ, ಮೆಲ್ಲ ಹೋಗು. 
(ಸ್ವಲ್ಪ ಹೊತ್ತಿನ ನಂತರ ಅವಳಿಗೆ ಫೋನ್ ಕರೆ ಬರುತ್ತದೆ. ಮಾತನಾಡಿದಾಗ ಅಲ್ಲೇ ಕುಸಿಯುತ್ತಾ ಅಳುತ್ತಾಳೆ)
ಗುರು :- ಏನಾಯಿತು ಅಮ್ಮ. ಯಾಕೆ ಅಳುತ್ತಿದ್ದೀಯ? ಫೋನ್ ಮಾಡಿದ್ದು ಯಾರು? ಏನಂತ ಹೇಳಿದ್ರು…..
ಸುಧಾರಾಣಿ :- ಅಳುತ್ತಾ ಹೇಳುತ್ತಾಳೆ.. ನನ್ನ ನನ್ನ ಮಗ ಕಿಶನ್.. ಅಪಘಾತದಿಂದ.. ಅವನು ನನ್ನನ್ನು ಬಿಟ್ಟು ಹೋದ.
(ಅವಳ ಮಗನ ದೇಹವನ್ನು ತೆಗೆದುಕೊಂಡು ಬರುತ್ತಾರೆ.. ಬಟ್ಟೆ ಮುಚ್ಚಿದ್ದು ಅದನ್ನು ತೆಗೆದು ನೋಡುವಳು)
ಸುಧಾರಾಣಿ : ಕಂದಾ… ಕಿಶನ್ ನನ್ನ ಬಂಗಾರ (ನೋಡಿ ಪ್ರಜ್ಞೆ ತಪ್ಪುತ್ತಾಳೆ, ಅವಳ ಮುಖಕ್ಕೆ ನೀರು ಹಾಕುವರು )
ಗುರು : ಸಮಾಧಾನ ಮಾಡಿಕೊಳ್ಳಿ
ಸುಧಾರಾಣಿ… ಕಣ್ಮುಂದೆ ನನ್ನ ಮಗನ ಈ ಪರಿಸ್ಥಿತಿಯನ್ನು ನೋಡಿ ಹೇಗೆ ಸಮಾಧಾನ ಮಾಡ್ಕೊಳ್ಳಲಿ…. (ಅಳುತ್ತಾಳೆ ಮತ್ತು ಪ್ರಜ್ಞೆ ತಪ್ಪುತ್ತಾಳೆ)

ದ್ರಶ್ಯ –4
(3 ತಿಂಗಳ ನಂತರ )
ಶೇಖರ :- ಮಗಳನ್ನು ನಾಳೆಯೇ ಸೇರಿಸುತ್ತೇನೆ, ನೀವು ಕಲಿಸಿಕೊಟ್ಟರೆ ಅವಳು ಖಂಡಿತವಾಗಿ ಕಲಿಯುತ್ತಾಳೆ. ಸರ್ ನನಗೆ ನಂಬಿಕೆ ಇದೆ.
ಗುರು :- ನಿಮ್ಮ ನಂಬಿಕೆ ಉಳಿಸುವ ಕರ್ತವ್ಯ ನನ್ನದು.
(ಅಲ್ಲಿ ಸುಧಾರಾಣಿ ತಿರುಗುತ್ತಾಳೆ)
ಶೇಖರ :- ಅವಳು ಅವಳು ನರ್ತಕಿ ಅಲ್ವಾ, ಅವಳಿಗೆ ಏನಾಗಿದೆ.
ಗುರು :- ನಿಲ್ಲು ಬಾ ಹೋಗಿ ನೋಡೋಣ. ಹೇ ಸುಧಾರಾಣಿ ನೀನೇನು ಇಲ್ಲಿ ಮತ್ತೆ ಇಲ್ಲಿ ಏನು ಮಾಡುತ್ತಿದ್ದೀಯಾ….
ಸುಧಾರಾಣಿ :- ನಾನು ಇಲ್ಲಿ ನಾನು ಇಲ್ಲಿ.. ಹೇಗೆ ಬಂದೆ.. ಹಾ ..ಹಾ ನನ್ನ ಮಗ ಈಗ ಬರುತ್ತಾನೆ ಅವನು ಚಿಟ್ಟೆ ಹಿಡಿಯಲಿಕ್ಕೆ ಹೋಗಿದ್ದಾನೆ, ನಾನು ಅಷ್ಟು ಹೊತ್ತಿನಿಂದ ಕಾಯುತ್ತಾ ಇದ್ದೇನೆ ಎಷ್ಟು ಸಲ ಹೇಳಿದರೂ… ಅಲ್ಲಿ ಇಲ್ಲಿ ಹೋಗಬೇಡ ಎಂದು ಹೇಳಿದರೂ ಕೇಳುವುದಿಲ್ಲ.
ಶೇಖರ : ಗುರುಗಳೇ ಅವಳು ಹುಚ್ಚು ಆಗಿದ್ಲ್ಲೇ. 
ಗುರು : ಹೇ ಹಾಗೆ ಹೇಳ್ಬೇಡ. ನಿನ್ನ ಮಗ ಅವತ್ತೇ ಸತ್ತು ಹೋಗಿದ್ದಾನೆ. 
ಸುಧಾರಾಣಿ : ಇಲ್ಲ ಇಲ್ಲ ಅವನು ಸತ್ತಿಲ್ಲ….. ಅವನು ಬರುತ್ತಾನೆ ಬರುತ್ತಾನೆ ಬರುತ್ತಾನೆ.. ಗುರುಗಳೇ ಅವನು ಬರುತ್ತಾನಲ್ಲ ಹೇಳಿ ಹೇಳಿ ಬರುತ್ತಾನಲ್ಲ.. ನನಗೆ ಗೊತ್ತು ನೀವು ಹೇಳಲ್ಲ ಅವನು ಕೂಡ ನನಗೆ ಸುಳ್ಳು ಹೇಳಿದ ಈಗ ಬರ್ತೀನಿ ಅಂತ ಹೇಳಿ ಬರಲೇ ಇಲ್ಲ.
ಗುರು : ನೀನು ಮನೆಗೆ ಬಾ.. ಇಲ್ಲಿ ಇರಬೇಡ ಅವನು ಬರುವುದಿಲ್ಲ. ನೀನು ನನ್ನ ಮನೆಯಲ್ಲಿ ಇರು.
ಸುಧಾರಾಣಿ : ಇಲ್ಲ ಇಲ್ಲ ನಾನು ಬರುವುದಿಲ್ಲ ಅವನು ಬರುತ್ತಾನೆ ನಾನು ಇಲ್ಲೇ ಇದ್ದು ಕಾಯುತ್ತೇನೆ. ಎಂದು ಹೇಳಿ ಅಲ್ಲಿ ಮಲಗುತ್ತಾಳೆ.
(ಸಂಜೆ ಹೊತ್ತಿನಲ್ಲಿ ತಾಯಿ ಮಗು ಅಲ್ಲಿಂದ ಹೋಗುತ್ತಾ ಇರುತ್ತಾರೆ. ಅವಳು ಮಗು ನೋಡಿ ಸಂತೋಷದಿಂದ ಆ ಮಗುವನ್ನು ಮುದ್ದಾಡಿ ನನ್ನ ಮಗು ನನ್ನ ಮಗು ಎಂದು ಹೇಳುತ್ತಾಳೆ)
ಸುಧಾರಾಣಿ : ಕಂದ ಬಂದಿಯಾ ಯಾವಾಗ ಬಂದೆ ನಿನ್ನನ್ನೇ ಕಾಯುತ್ತಿದ್ದೆ. ಎಷ್ಟು ದಿನ ನೀನು ನನ್ನನ್ನು ಬಿಟ್ಟು ಹೋಗಿದ್ದೀಯಾ.
(ಆಗ ಆ ಮಗು ಅಳುತ್ತದೆ)
ತಾಯಿ : ಯಾರು ನೀನು ನನ್ನ ಮಗುವನ್ನು ಹೀಗೆ ಗಟ್ಟಿ ಹಿಡಿದಿದ್ದೀಯಾ. ಊರಿನಲ್ಲಿ ಕೇಳಿದ್ದೆ ಕಳ್ಳರು ಮಕ್ಕಳನ್ನು ಕದಿಯುತ್ತಾರೆಂದು. ಆ ಕಳ್ಳಿ ಮಕ್ಕಳ ಕಳ್ಳಿ ನೀನು ಇರಬೇಕು. ನನ್ನ ಮಗುವನ್ನು ಕದ್ದುಕೊಂಡು ಹೋಗಲು ಬಂದಿದ್ದೀಯಾ?
(ಆ ತಾಯಿ ಎಲ್ಲರನ್ನು ಕರೆಯುತ್ತಾಳೆ, ಮಕ್ಕಳ ಕಳ್ಳಿ ನನ್ನ ಮಗುವನ್ನು ಕರೆದುಕೊಂಡು ಹೋಗಲು ಬಂದಿದ್ದಾಳೆ ಎಂದು)
ದಾರಿಹೋಕರು : ಮಕ್ಕಳು ಕದಿಯಲು ಬಂದಿದ್ದೀಯಾ? ಎಲ್ಲರೂ ಅವಳನ್ನು ಹೊಡಿಯಿರಿ.
(ಕಂಬಕ್ಕೆ ಕಟ್ಟಿ ಹೊಡೆಯಲು ಪ್ರಾರಂಭಿಸುವರು)
 ಎಲ್ಲರೂ : ದೊಣ್ಣೆಯಿಂದ ಹೊಡೆಯಲು ಪ್ರಾರಂಭಿಸುವರು.
ದಾರಿಹೋಕ : ಹೇ ಇವಳ ಪ್ರಾಣ ಹೋಯಿತು ಅನಿಸುತ್ತದೆ. ಪೊಲೀಸರು ನಮ್ಮನ್ನು ಹೊಡಿತಾರೆ ಇವಳನ್ನು ಎಲ್ಲಾದರೂ ಹೊತ್ತು ಹಾಕೋಣ.
ಗುರು : ಜಾಗ ಬಿಡಿ ಜಾಗ ಬಿಡಿ ಯಾರು? ಹೇ ಏನ್ ಮಾಡಿದ್ರಿ ಇವಳಿಗೆ ಏನಾಯ್ತು ಇವಳಿಗೆ.
ದಾರಿಹೋಕ : ಮಕ್ಕಳ ಕಳ್ಳಿ ಸರ್ ಮಕ್ಕಳನ್ನು ಕದಿಯಲು ಬಂದಿದ್ದಳು ಅದಕ್ಕೆ ಇವಳನ್ನು ಕಟ್ಟಿ ಹಾಕಿ, ಹೊಡೆದಿದ್ದಾರೆ.
ಗುರು : ಏನ್ರೋ ಇದು, ನೀವೆಲ್ಲ ಮನುಷ್ಯರ ನಿಮ್ಮಲ್ಲಿ ಮಾನವೀಯತೆ ಇಲ್ಲವಾ ಇವಳು ಮಕ್ಕಳ ಕಳ್ಳಿ ಅಲ್ಲ ತನ್ನ ಮಗುವನ್ನು ಕಳೆದುಕೊಂಡಂತಹ ಹುಚ್ಚಿ ತಾಯಿ. ಆ ಮಗುವನ್ನು ತನ್ನ ಮಗು ಎಂದು ಹಿಡಿದಿರಬೇಕು ನೀವು ಅವಳನ್ನು ಹೊಡೆದು ಅವಳ ಪ್ರಾಣವನ್ನೇ ತೆಗೆದಿರಲ್ಲ.
ದಾರಿಹೋಕ : ನಮ್ಮನ್ನು ಕ್ಷಮಿಸಿ ಗುರುಗಳೇ, ನಮಗೆ ಗೊತ್ತಿರಲಿಲ್ಲ ಇವಳು ತನ್ನ ಮಗುವನ್ನು ಕಳೆದು ಹುಚ್ಚಿ ಆಗಿದ್ದಾಳೆ ಎಂದು..!!
ಇನ್ನೊಬ್ಬ : ಇವಳ ಹಾಗೇನೇ ಎಷ್ಟೋ ತಾಯಂದಿರು ತಮ್ಮ ಮಕ್ಕಳನ್ನು ಕಳೆದುಕೊಂಡಿದ್ದಾರೆ. ಮಳೆ ನೀರಲ್ಲಿ ಮುಳುಗಿ, ಬೋರ್ವೆಲ್ ಗುಂಡಿಯಲ್ಲಿ ಬಿದ್ದು, ರಸ್ತೆ ದಾಟುವಾಗ ಅಪಘಾತದಿಂದ, ಅತಿಯಾದ ಮೊಬೈಲ್ ಬಳಕೆಯ ಗೀಳಿನಿಂದ, ಅನೇಕ ತಾಯಂದಿರು ಮಕ್ಕಳನ್ನು ಕಳೆದು ಅನಾಥರಾಗಿದ್ದಾರೆ. ಅವರ ತಾಯಿತನದ ಮಮತೆ ಅದು ಎಂದೂ ಕಡಿಮೆಯಾಗಲು ಸಾಧ್ಯವಿಲ್ಲ ಸರ್.
ಗುರು : ಹೌದು ಇನ್ನಾದರೂ ನಿಮ್ಮ ಮಕ್ಕಳನ್ನು ಸರಿಯಾಗಿ ಕಾಪಾಡಿಕೊಳ್ಳಿ ಮತ್ತೆ ಅವರ ತಾಯಂದಿರ ಮಮತೆಯನ್ನು ನೀವು ಅರಿತುಕೊಳ್ಳಿ. ಬಾಲ್ಯದಿಂದಲೇ ಮಕ್ಕಳಿಗೆ ಸರಿ ತಪ್ಪನ್ನು ಹೆತ್ತವರು ಕಲಿಸಿ. ಮಕ್ಕಳು ಸಹ ಬಾಲ್ಯದಿಂದಲೇ ತನ್ನ ತಂದೆ ತಾಯಿಯ ಮಾತನ್ನು ಕೇಳದೆ ಅವರನ್ನು ವಾತ್ಸಲ್ಯದಿಂದ ಚಡಪಡಿಸುವಂತೆ ಮಾಡಬೇಡಿ..
ಎಲ್ಲರೂ : ಬನ್ನಿ ಈ ಮಾತೆಯನ್ನು ಶಾಂತಿ ದೊರಕುವಂತೆ ಮಕ್ಕಳಿಂದಲೇ ಸಮಾಧಿ ಮಾಡಲು ವ್ಯವಸ್ಥೆ ಮಾಡೋಣ.. (ಪ್ರತಿ ವರ್ಷ ಆ ಮಾತೆಯ ಸಮಾಧಿಗೆ ಮಕ್ಕಳು ಬಂದು ಹೂ ಇಟ್ಟು ನಮಸ್ಕರಿಸುವರು)
....................................... ಗೌತಮಿ ಶೆಟ್ಟಿಗಾರ್ 
9ನೇ ತರಗತಿ 
ಲಿಟಲ್ ಫ್ಲವರ್ ಪ್ರೌಢಶಾಲೆ, ಕಿನ್ನಿಗೋಳಿ
ಮಂಗಳೂರು ಉತ್ತರ ವಲಯ. 
ದಕ್ಷಿಣ ಕನ್ನಡ ಜಿಲ್ಲೆ 
***************************************
ಮಾರ್ಗದರ್ಶಕ ಶಿಕ್ಷಕರು : ಐರಿನ್ ಫೆರ್ನಾಂಡಿಸ್
***************************************


Ads on article

Advertise in articles 1

advertising articles 2

Advertise under the article