-->
ಜಗಲಿ ಕಟ್ಟೆ : ಸಂಚಿಕೆ - 69

ಜಗಲಿ ಕಟ್ಟೆ : ಸಂಚಿಕೆ - 69

ಜಗಲಿ ಕಟ್ಟೆ : ಸಂಚಿಕೆ - 69
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 


ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ


     ಎಲ್ಲರಿಗೂ ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು... ಜಗಲಿಕಟ್ಟೆಯಲ್ಲಿ ಮಾತನಾಡಲು ಕೆಲವು ದಿನಗಳ ನಂತರ ಸೇರಿಕೊಳ್ಳುತ್ತಾ ಇದ್ದೇವೆ... 
       ಜಗಲಿಯ ಒಡನಾಡಿ ಶ್ರೀರಾಮ ಮೂರ್ತಿಯವರು ಪ್ರತಿವಾರ ಜಗಲಿಯಲ್ಲಿ ಬರುವ ಬರಹಗಳ ಕುರಿತಾಗಿ ಅನಿಸಿಕೆಯನ್ನು ವ್ಯಕ್ತಪಡಿಸುತ್ತಾ ತಾನು ಬರೆಯುವುದರ ಜೊತೆಗೆ ಬರೆಯುವ ಎಲ್ಲಾ ಬರಹಗಾರರನ್ನು ಪ್ರೋತ್ಸಾಹಿಸುತ್ತಾ ಇರುತ್ತಾರೆ. ಇದು ಸ್ಪೂರ್ತಿ ತುಂಬುವ ಹಾಗೆ ಎಲ್ಲರಿಗೂ ತಾನು ಮತ್ತೆ ಮತ್ತೆ ಬರೆಯಬೇಕೆನ್ನುವ ಹಂಬಲಕ್ಕೆ ಇನ್ನಷ್ಟು ಪುಷ್ಟಿ ದೊರೆತಂತಾಗುತ್ತದೆ. 
         ಜಗಲಿಯ ನಾಲ್ಕನೇ ವರ್ಷದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಗೆ ರಾಜ್ಯದಾದ್ಯಂತ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. 2025, ಜನವರಿ 26ರಂದು ಫಲಿತಾಂಶ ಪ್ರಕಟವಾಗಲಿದೆ. ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿಕೊಳ್ಳಲು ಜಗಲಿಯ ಬಂಧುಗಳಾದ ನೀವೆಲ್ಲರೂ ಸಾಕ್ಷಿಗಳಾಗಿದ್ದೀರಿ. ಜೊತೆಗೆ ಕರೆ ಮಾಡಿದಾಗ ಬಿಡುವು ಮಾಡಿ ಮಾಹಿತಿಗಳನ್ನು ನೀಡಿ ಸಹಕರಿಸಿದ ನನ್ನ ಆತ್ಮೀಯ ಮಿತ್ರರೂ ಕಾರಣರಾಗಿದ್ದಾರೆ.
          ಮಕ್ಕಳಿಗಾಗಿ ನಿರಂತರ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು ಮಕ್ಕಳಿಗಾಗಿ ಕೆಲಸ ಮಾಡುತ್ತಿರುವ ನಮಗೆ ಆಸಕ್ತಿಯ ವಿಷಯ. ಹಲವಾರು ಒತ್ತಡಗಳ ಮಧ್ಯೆ ಬಹಳ ಪ್ರೀತಿಯಿಂದ ಮಕ್ಕಳಿಗಾಗಿ ಸಮಯ ನೀಡುತ್ತಾ, ಮಕ್ಕಳ ಜಗಲಿಯನ್ನು ಮುಂದುವರಿಸುತ್ತಿರುವುದು ನಿಮ್ಮೆಲ್ಲರ ಪ್ರೀತಿಯ ಸಹಕಾರದಿಂದ. ಇಲ್ಲೊಂದು ವಿಷಯ ನಿಮ್ಮ ಮುಂದೆ ಪ್ರಸ್ತಾಪಿಸಲೇಬೇಕು. ಜಗಲಿ ಆರಂಭವಾದಾಗಿನಿಂದ ಹಲವಾರು ಮಹನೀಯರು ಜಗಲಿಯ ಸಹಕಾರಕ್ಕಾಗಿ ಮುಂದಾಗಿದ್ದನ್ನು ಪ್ರೀತಿಯಿಂದ ಸ್ಮರಿಸುತ್ತೇವೆ. 2025 ನೇ ನವೆಂಬರ್ 14ರಂದು ಜಗಲಿಯ ಐದನೇ ವರ್ಷದ ಸಂಭ್ರಮಾಚರಣೆಯನ್ನು ವಿಶಿಷ್ಟವಾಗಿ ಆಚರಿಸಬೇಕೆನ್ನುವ ಆಶಯವಿರುವುದರಿಂದ ಎಲ್ಲಾ ರೀತಿಯ ಸಹಕಾರಗಳನ್ನು ಆ ಸಮಯದಲ್ಲಿ ಸ್ವೀಕರಿಸುವ ಅವಕಾಶ ಒದಗಿಬರಲಿ ಎನ್ನುವ ಆಶಯ ಮಾತ್ರ ನಮ್ಮದು.    
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************


ಕಳೆದ ಸಂಚಿಕೆಯ ಜಗಲಿಕಟ್ಟೆ - 68 ಅಂಕಣದಲ್ಲಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ..... ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಕಳೆದ ವಾರಗಳಿಂದ ಪ್ರಕಟವಾದ ಜಗಲಿಯ ಬರಹಗಳ ಕುರಿತಾದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....


ನಮಸ್ಕಾರ ಸರ್, ನಾನು ಚಂದ್ರಶೇಖರ ಗಟ್ಟಿ ಅಂದಾಡಿ, ನಿವೃತ್ತ ಸರ್ಕಾರಿ ನೌಕರ. ನರಿಕೊಂಬು ಗ್ರಾಮ, ಪಾಣೆಮಂಗಳೂರು. 
     ಮಕ್ಕಳ ಜಗಲಿಯ ಅಭಿಮಾನಿ. ಮಕ್ಕಳ ಪೋಷಕರು ಇದರಲ್ಲಿ ಬರುವ ಎಲ್ಲಾ ಲೇಖನಗಳ ಬಗ್ಗೆ ತಮ್ಮ ಮಕ್ಕಳೊಂದಿಗೆ ಮುಕ್ತವಾಗಿ ಚರ್ಚಿಸುವ ಅವಶ್ಯಕತೆ ಇದೆ. ವಿದ್ಯಾ ಕಾರ್ಕಳ ಬರೆದ ಊಟದ ನಂತರ ಉಳಿದ ತ್ಯಾಜ್ಯ ನಿರ್ವಹಣೆಯ ಲೇಖನ ತುಂಬಾ ಚೆನ್ನಾಗಿತ್ತು. ಸಭೆ ಸಮಾರಂಭಗಳಲ್ಲಿ ಊಟೋಪಚಾರದ ವ್ಯವಸ್ಥೆಯನ್ನು ನಿಭಾಯಿಸುವ ಜವಾಬ್ದಾರಿಯ ತಲೆಬಿಸಿ ಯಾರಿಗೂ ಬೇಡ. ಅದೊಂದು ಸಲ ರಣರಂಗದ ಹಾಗೆ ಕಾಣಿಸುತ್ತದೆ. ಯಾರಿಗೂ ಪುರುಸೊತ್ತಿಲ್ಲ ಅವರವರ ಅವಶ್ಯಕತೆಯೇ ಮುಖ್ಯ ಎಂಬಲ್ಲಿಗೆ ಮುಟ್ಟಿದ್ದೇವೆ. ಅರ್ಧ ತಿಂದು ಅರ್ಧ ಬಿಸಾಡುವವರೇ ಕಂಡುಬರುತ್ತಾರೆ. ನಿಮ್ಮ ಪ್ರಯತ್ನಕ್ಕೆ ಧನ್ಯವಾದ ಹೇಳಲೇಬೇಕು. ಮಕ್ಕಳ ಜಗಲಿಯ ಚಟುವಟಿಕೆಯಲ್ಲಿ ಕಿಂಚಿತ್ ಆರ್ಥಿಕ ಸಹಾಯ ನೀಡುವ ಮನಸು ನನ್ನದು.. ವಂದನೆಗಳೊಂದಿಗೆ,
.........................ಚಂದ್ರಶೇಖರ ಗಟ್ಟಿ ಅಂದಾಡಿ
ನಿವೃತ್ತ ಹಿರಿಯ ಆರೋಗ್ಯ ನಿರೀಕ್ಷಕ. 
ಮೊಗರ್ನಾಡು ಮನೆ.
ನರಿಕೊಂಬು ಗ್ರಾಮ ಮತ್ತು ಅಂಚೆ ಪಾಣೆಮಂಗಳೂರು.
Mob: +91 83100 72605
*******************************************


ನಮಸ್ಕಾರಗಳು ಸರ್....
    ವಿಜಯಾ ಶೆಟ್ಟಿ ಸಾಲೆತ್ತೂರು ಬರೆದ ನಿಷ್ಪಾಪಿ ಸಸ್ಯದ ಕುರಿತಾಗಿ.... ತುರಿಕೆ ಬಳ್ಳಿಯನ್ನು ಕಂಡು ದೂರ ಸರಿಯುವುದೇ ಆಗಿತ್ತು. ಈ ಬಳ್ಳಿ ತನ್ನೊಡಲಲ್ಲಿ ಅಗಾಧವಾದ ಔಷಧೀಯ ಗುಣಗಳನ್ನು ಹೊಂದಿದೆ ಎಂದು ತಿಳಿದಿರಲಿಲ್ಲ. ಬಳ್ಳಿಯನ್ನು ಸ್ಪರ್ಶಿಸಿದಾಗ ತುರಿಕೆಗೆ ಕಾರಣವಾಗುವ ಹೈಪೋಡರ್ಮಿಕ್ ಸಿರಿಂಜ್ ಆಗಿ ಕಾರ್ಯನಿರ್ವಹಿಸುತ್ತದೆ ಎಂಬ ಮಾಹಿತಿ ಕುತೂಹಲಕರವಾಗಿದೆ. ಇದನ್ನು ಪಲ್ಯದಲ್ಲೂ ಬಳಸಬಹುದು ಎಂಬುದು ಮತ್ತೂ ಆಶ್ಚರ್ಯ..,! ಟ್ರಾಜಿಯ ಇನ್ವೊಲುಕ್ರಾಟ ಸಸ್ಯದ ಸವಿಸ್ತಾರ ಮಾಹಿತಿ ನೀಡಿದ್ದಾರೆ ವಿಜಯ ಮೇಡಂ. ಇನ್ನು ಮುಂದೆ ನಾವು ಈ ಸಸ್ಯವನ್ನು ನೋಡುವ ನೋಟವನ್ನೇ ಬದಲಾಯಿಸಿದ್ದೀರಿ. ಮುಂದಿನ ವಾರ ಯಾವ ಸಸ್ಯ ಎಂಬ ಕಾತರದ ನಿರೀಕ್ಷೆಯಲ್ಲಿ ರುವಂತೆ ಮಾಡುತ್ತೀರಿ ಧನ್ಯವಾದಗಳು ಮೇಡಂ. ದಿವಾಕರ ಸರ್ ಅವರ ವಿಜ್ಞಾನ ಸಂಚಿಕೆ ಉತ್ತಮವಾಗಿ ಮೂಡಿ ಬರುತ್ತಿದೆ. ಇದನ್ನೆಲ್ಲಾ ಓದಿ ಮನ ತುಂಬಿಸಿಕೊಳ್ಳುವ ಖುಷಿಯನ್ನು ನೀಡುತ್ತಿರುವ ಮಕ್ಕಳ ಜಗಲಿಗೆ ಧನ್ಯವಾದಗಳು.
......................... ಕವಿತಾ ಶ್ರೀನಿವಾಸ ದೈಪಲ 
'ಚೈತನ್ಯ ' ನೆಲ್ಯಡ್ಕ, ಅಂತರ, 
ನರಿಕೊಂಬು ಅಂಚೆ ಮತ್ತು ಗ್ರಾಮ  
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************



ಕಲಾಪರ್ಬ ನೋಡಿ ಖುಷಿಪಟ್ಟು ಅಷ್ಟಕ್ಕೇ ಸುಮ್ಮನಾಗದೇ ಆ ಖುಷಿಯನ್ನು ಪಸರಿಸುವ ಪ್ರಯತ್ನ ಮಾಡಿದ ತಾರಾನಾಥ ಕೈರಂಗಳರು ಈ ಬರಹದಲ್ಲಿ ಸೊಗಸಾಗಿ ತಾವು ಕಲಾಪರ್ಬಕ್ಕೆ ಸಾಕ್ಷಿಯಾದ ಖುಷಿಯನ್ನು ನಮ್ಮೆದುರು ತೆರೆದಿಟ್ಟಿದ್ದಾರೆ. ನಮಗೆಲ್ಲರಿಗೂ ತುಂಬಾ ದೂರವೇನಲ್ಲದ ಮಂಗಳೂರಿನ ಈ ಕಲಾಪರ್ಬ ಇಷ್ಟೊಂದು ವೈವಿಧ್ಯತೆಯ ಒಡಲಾಗಿದ್ದರೂ ಈ ಬಗ್ಗೆ ಪತ್ರಿಕೆ, ಮಾಧ್ಯಮಗಳಲ್ಲಿ ತುಂಬಾ ದೊಡ್ಡ ಮಟ್ಟಿಗೆ ಸುದ್ದಿಯಾಗಬೇಕಿತ್ತು ಅನ್ನಿಸಿತು. ಇಂಥಹ ಉತ್ತಮ ಆಯೋಜನೆಗಳಿಗೆ ನಿಜಕ್ಕೂ ಸಾಕಷ್ಟು ಪ್ರಚಾರ ಸಿಗಬೇಕು. ಈ ನಿಟ್ಟಿನಲ್ಲಿ ಕಲಾಪರ್ಬದ ಬಗ್ಗೆ ತಾರಾನಾಥ ಕೈರಂಗಳರ ಈ ವಿಶೇಷ ಲೇಖನ ಬಹಳ ಉತ್ತಮವಾಗಿದೆ. ಚಿತ್ರಪರ್ಬ, ಶಿಲ್ಪಪರ್ಬ, ನೃತ್ಯಪರ್ಬ ಇವೆಲ್ಲವುದರ ಜೊತೆಗೆ ಪರಿಸರ ಕಾಳಜಿಯ ಸ್ಥಬ್ಧಚಿತ್ರಗಳೂ ಇತ್ತು ಎಂದು ಕೇಳಿ ಮನಸ್ಸು ತುಂಬಿ ಬಂದಿತು. ಕಲಾಪರ್ಬ ನೋಡಿರದ ನಮಗೆ ಇದರ ನೋಟಗಳು ಕಣ್ಣಿಗೆ ಕಟ್ಟುವಂತೆ ವಿವರಿಸಿದ ತಾರಾನಾಥ ಕೈರಂಗಳರಿಗೆ ವಂದನೆಗಳು. ಬರುವ ವರ್ಷ ಈ ಕಲಾಪರ್ಬ ಆರಂಭಕ್ಕೂ ಮುನ್ನವೇ ಇದರ ವೈಶಿಷ್ಟ್ಯತೆಯ ಸುದ್ದಿ ಎಲ್ಲೆಡೆಯೂ ಹರಡಿ ಇನ್ನೂ ಸಾಕಷ್ಟು ಮಂದಿ ಇದರಲ್ಲಿ ಪಾಲ್ಗೊಳ್ಳುವಂತಾಗಲಿ.
.......................................... ವಿದ್ಯಾ ಕಾರ್ಕಳ
ಸಹಶಿಕ್ಷಕಿ, ದ. ಕ. ಜಿ. ಪಂ. ಕಿರಿಯ 
ಪ್ರಾಥಮಿಕ ಶಾಲೆ. ಹೊಸಪಟ್ಣ. 
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob: +91 94499 07371
*******************************************


 ನಮಸ್ತೇ,
     ಜ್ಞಾನ, ಕರ್ಮ, ಭಾವ ಇವು ಮೂರು ನಮ್ಮ ಬದುಕಿಗೆ ಪರಸ್ಪರ ಹೇಗೆ ಪೂರಕ ಅನ್ನುವುದನ್ನು ಶಿಕ್ಷಣಾಧಿಕಾರಿ ಜ್ಞಾನೇಶ್ ಸರ್ ರವರು ತಮ್ಮ ಸಂಚಿಕೆಯಲ್ಲಿ ಉದಾಹರಣೆಯೊಂದಿಗೆ ವಿವರವಾಗಿ ತಿಳಿಸಿದ್ದಾರೆ. ಉತ್ತಮ ಸಂಚಿಕೆ.
     ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಪೋಷಕರಾದ ಅಲ್ವಿನ್ ರವರ ತ್ಯಾಜ್ಯ ನಿರ್ವಹಣೆ ಕುರಿತಾದ ವಿದ್ಯಾರವರ ಲೇಖನ ತುಂಬಾ ಇಷ್ಟವಾಯಿತು. ಅಲ್ವಿನ್ ರವರು ಖಂಡಿತವಾಗಿ ಎಲ್ಲರಿಗೂ ಮಾದರಿಯಾಗಿದ್ದಾರೆ.
     ವೃಕ್ಷ ಮಾತೆ ತುಳಸಿ ಗೌಡರ ಬಗ್ಗೆ ಪೂರ್ಣ ಮಾಹಿತಿಯನ್ನು ನೀಡಿದ ಸಕಾಲಿಕ ಲೇಖನ ಅಶ್ವಿನ್ ರಾವ್ ರವರಿಂದ.
     ಈ ಸಲದ ವೈಜ್ಞಾನಿಕ ಸಂಚಿಕೆಯಲ್ಲಿ ವಿದ್ಯುತ್ಕಾಂತಿಯ ತರಂಗಗಳಾದ ಗಾಮಾ ವಿಕಿರಣ ಮತ್ತು ಎಕ್ಸ್ ವಿಕಿರಣಗಳ ಕುರಿತಾಗಿ ಸುಂದರ ವಿವರಣೆ ದಿವಾಕರ ಸರ್ ರವರಿಂದ.
     ಈ ವಾರದ ನಿಷ್ಪಾಪಿ ಸಸ್ಯಗಳ ಸಂಚಿಕೆಯಲ್ಲಿ ವಿಜಯ ಮೇಡಂರವರು ಇನ್ಸುಲಿನ್ ಗಿಡದ ಕುರಿತಾಗಿ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ಮಾಹಿತಿಯನ್ನು ನೀಡಿದ್ದಾರೆ. ಸಂಚಿಕೆ ಚೆನ್ನಾಗಿತ್ತು.
     ರಮೇಶ್ ಉಪ್ಪುಂದರವರ ಪಯಣ ಸಂಚಿಕೆಯಲ್ಲಿ ಲಕ್ಕುಂಡಿ ಪ್ರವಾಸಿ ತಾಣದ ಕುರಿತಾಗಿ ವಿವರವಾದ ಮಾಹಿತಿ ಲಭಿಸಿತು. 
      ಗೆಳೆತನಕ್ಕಾಗಿ ಎಲ್ಲವನ್ನೂ ಸಹಿಸುವ ಮಗುವಿನ ಕುರಿತಾದ ಅನುಭವದ ಬುತ್ತಿಯನ್ನು ರಮ್ಯಾ ಮೇಡಂ ರವರು ತಮ್ಮ ಶಿಕ್ಷಕರ ಡೈರಿಯಲ್ಲಿ ಸೊಗಸಾಗಿ ಹಂಚಿಕೊಂಡಿದ್ದಾರೆ.
     ಅಮ್ಮನ ಕುರಿತಾಗಿ ಎರಡು ಸುಂದರ ಕಥೆಗಳನ್ನು ಒಳಗೊಂಡಿರುವ 'ಅಮ್ಮ' ಎನ್ನುವ ಪುಸ್ತಕದ ಪರಿಚಯ ವಾಣಿಯಕ್ಕ ನವರಿಂದ ಉತ್ತಮವಾಗಿ ಮೂಡಿ ಬಂದಿದೆ.
     ರಮೇಶ್ ಉಪ್ಪುಂದರವರ ಪದದಂಗಳ ಸಂಚಿಕೆ 150ನ್ನು ತಲುಪಿದೆ. ಶುಭ ಹಾರೈಕೆಗಳು ಸರ್. ಇಂತಹ ಕಷ್ಟಕರ ಸಂಚಿಕೆಯನ್ನು ಮುನ್ನಡೆಸುತ್ತಿರುವ ನಿಮಗೆ ಅಭಿನಂದನೆಗಳು.
      ಜಗಲಿಯ ಬಳಗದ ಎಲ್ಲರಿಗೂ ಹೃತ್ಪೂರ್ವಕ ವಂದನೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************



ಎಲ್ಲರಿಗೂ ನಮಸ್ಕಾರಗಳು,
      ಸಮಾಜಕ್ಕೆ ಉಪಯುಕ್ತವಾಗುವ ರೀತಿಯಲ್ಲಿ ಮಾಡುವ ಕೆಲಸವೇ ಶ್ರೇಷ್ಠ ಕೆಲಸ. ಶಿಕ್ಷಣಾಧಿಕಾರಿಯವರಾದ ಶ್ರೀ ಜ್ಞಾನೇಶ್ ಸರ್ ರವರಿಂದ ಸುಂದರವಾದ ಕಥೆಯ ಮೂಲಕ ಉತ್ತಮವಾಗಿ ಮಾಡುವ ಕೆಲಸ ಯಾವುದು ಎಂಬುದನ್ನು ಬಹಳ ಸೊಗಸಾಗಿ ವಿವರಿಸಿದ್ದಾರೆ.
     ಅತಿಯಾದರೆ ಅಮೃತವೂ ವಿಷ ಎನ್ನುವ ಮಾತಿನಂತೆ ಪ್ರಾಕೃತಿಕ ವಿಕೋಪಗಳಿಗೆ ಮಾನವನ ಅತಿಯಾದ ದುರಾಸೆ ಹೇಗೆ ಕಾರಣ ಎಂಬುದನ್ನು ಎಳೆ ಎಳೆಯಾಗಿ ಬಿಚ್ಚಿಡುವ ಸುಂದರ ಸಕಾಲಿಕ ಲೇಖನ ರಮೇಶ್ ಸರ್ ರವರಿಂದ. ಧನ್ಯವಾದಗಳು ಸರ್.
     ಈ ಸಲದ ವೈಜ್ಞಾನಿಕ ಲೇಖನದಲ್ಲಿ ಬೆಳಕಿನ ವೇಗದ ಕುರಿತಾಗಿ ದಿವಾಕರ ಸರ್ ರವರು ಅತ್ಯಂತ ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ ತಿಳಿಸಿದ್ದಾರೆ. ವಿಜ್ಞಾನ ಶಿಕ್ಷಕರಿಗೆ ಉತ್ತಮವಾದ ಮಾಹಿತಿಯನ್ನು ಒದಗಿಸುತ್ತಿರುವ ತಮಗೆ ನನ್ನ ಹೃತ್ಪೂರ್ವಕ ನಮನಗಳು ಸರ್.
     ಈ ಸಲದ ಸಂಚಿಕೆಯಲ್ಲಿ ಪ್ರಮುಖ ಔಷಧೀಯ ಸಸ್ಯವಾದ ಪಾಷಾಣ ಭೇದಿಯ ಪರಿಚಯ ಉತ್ತಮವಾಗಿತ್ತು. ಧನ್ಯವಾದಗಳು ವಿಜಯ ಮೇಡಂ.
     ಶಿಲ್ಪ ಕಲಾ ವೈಭವದ ಸುಂದರ ಪ್ರವಾಸಿ ತಾಣವಾದ ಕನಕಗಿರಿಯ ಸಂಪೂರ್ಣ ಮಾಹಿತಿ ಈ ಸಲದ ಪಯಣ ಸಂಚಿಕೆಯಲ್ಲಿ ಲಭಿಸಿತು. ಧನ್ಯವಾದಗಳು ರಮೇಶ್ ಅವರಿಗೆ.
     ಪರಿಸರ ರಕ್ಷಣೆಯ ಕುರಿತಾಗಿರುವ ಕಿನ್ನರಿ ಜಲ ತರಂಗ್ ಎನ್ನುವ ಸುಂದರ ಪುಸ್ತಕದ ಪರಿಚಯ ವಾಣಿಯಕ್ಕ ನವರಿಂದ ಚೆನ್ನಾಗಿ ಮೂಡಿ ಬಂದಿದೆ.
     ಮಕ್ಕಳಿಗೆ ನೀಡುವ ಶಿಕ್ಷೆಯ ಕುರಿತಾಗಿ ಶಿಕ್ಷಕರ ಡೈರಿಯಲ್ಲಿ ರಮ್ಯಾ ಮೇಡಮ್ ರವರ ಅನುಭವದ ಮಾತು ಸೊಗಸಾಗಿತ್ತು.
      ರಮೇಶ್ ರವರ ಪದದಂಗಳ ಸಂಚಿಕೆ ಚೆನ್ನಾಗಿ ಮೂಡಿ ಬರುತ್ತಿದೆ.
      ಕೊನೆಯದಾಗಿ ಜಗಲಿಯ ಎಲ್ಲರಿಗೂ ಮನದಾಳದ ಕೃತಜ್ಞತೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************



ಎಲ್ಲರಿಗೂ ನಮಸ್ಕಾರಗಳು,
     ಇದ್ದುದರಲ್ಲಿ ತೃಪ್ತಿಪಟ್ಟುಕೊಳ್ಳುವುದೇ ಸಂತೃಪ್ತಿ. ಸಂತೃಪ್ತಿಯ ಕುರಿತಾಗಿ ವಿವರಣಾತ್ತ್ಮಕ ಸುಂದರ ಲೇಖನ ಶಿಕ್ಷಣಾಧಿಕಾರಿಯವರಾದ ಶ್ರೀ ಜ್ಞಾನೇಶ್ ಸರ್ ರವರಿಂದ.
     ಎಲ್ಲದಕ್ಕೂ ಮೂಲ - ಮನೋ ನಿಯಂತ್ರಣ. 'ನಿಯಂತ್ರಣ' ಸಮಯೋಚಿತ ಲೇಖನ ರಮೇಶ್ ಬಾಯಾರ್ ರವರಿಂದ.
     ಮಾನವನ ಜೀವ ಸಂರಕ್ಷಕ ಪದರವಾದ ಓಝೋನ್ ಪದರದ ಕುರಿತಾಗಿ ವಿವರವಾದ ಮಾಹಿತಿಯನ್ನು ನೀಡಿದ ವೈಜ್ಞಾನಿಕ ಲೇಖನಕ್ಕಾಗಿ ಧನ್ಯವಾದಗಳು ಸರ್.
     ಅತ್ಯುಪಯುಕ್ತ ಬಳ್ಳಿ ಸಸ್ಯ ಕೈರಾಟಿಯಾದ ಪರಿಚಯವನ್ನು ಸೊಗಸಾಗಿ ನೀಡಿದ್ದೀರಿ ಮೇಡಂ. ಅಳಿವಿನಂಚಿನಲ್ಲಿರುವ ಇಂತಹ ಅನೇಕ ಸಸ್ಯಗಳ ಉಳಿಸುವಿಕೆಗೆ ಗಮನ ನೀಡುವ ಬಗ್ಗೆ ಆಸಕ್ತಿ ತುಂಬುವುದು ಇಂದಿನ ಅಗತ್ಯತೆಯೂ ಹೌದು.
     ಮೇಲುಕೋಟೆಯ ಪ್ರವಾಸಿ ತಾಣದ ಕುರಿತಾದ ವಿವರವಾದ ಮಾಹಿತಿ ಈ ಸಲದ ಪಯಣ ಸಂಚಿಕೆಯಿಂದ ಲಭಿಸಿತು. ಧನ್ಯವಾದಗಳು ರಮೇಶ್ ಸರ್ .
     ಗಾಂಧಿ ತಾತನ ವಿವಿಧ ಪಾತ್ರಗಳ ಕುರಿತು ತಿಳುವಳಿಕೆ ನೀಡುವ ಸುಂದರ ಪುಸ್ತಕ 'ಬಹುರೂಪಿ ಗಾಂಧಿ' ಯ ಪರಿಚಯ ಚೆನ್ನಾಗಿತ್ತು ವಾಣಿಯಕ್ಕ.
     ರಮೇಶ್ ಉಪ್ಪುಂದರವರ ಪದದಂಗಳ ಸಂಚಿಕೆ ಸೊಗಸಾಗಿ ಮೂಡಿ ಬರುತ್ತಿದೆ. ಧನ್ಯವಾಗದಳು ರಮೇಶ್ ಸರ್.
     ಜಗಲಿ ಪರಿವಾರದ ಎಲ್ಲರಿಗೂ ನನ್ನ ಕೃತಜ್ಞತೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************




ನಮಸ್ತೇ,
     ಮಾಡುವ ಕೆಲಸದಲ್ಲಿ ಕುಶಲತೆ ಅಥವಾ ಕೌಶಲ್ಯವಿದ್ದಾಗ ಬದುಕು ಸುಂದರವಾಗಬಹುದು. ಶಿಕ್ಷಣಾಧಿಕಾರಿಯವರಾದ ಶ್ರೀ ಜ್ಞಾನೇಶ್ ಸರ್ ರವರಿಂದ ಕೌಶಲ್ಯದ ಕುರಿತಾದ ಉತ್ತಮ ಲೇಖನ.
     ಸಾವಯವ ಕೃಷಿಯು ಪರಿಸರ ಉಳಿಸುವಿಕೆಯ ಜೊತೆಗೆ ಮಾನವನ ಆರೋಗ್ಯಕ್ಕೆ ಪೂರಕ. ಸೌಮ್ಯ ಗುರು ಕಾರ್ಲೆಯವರ 'ನಿಮಗಿದರ ಅರಿವಿರಲಿ' ಎಂಬ ಸುಂದರ ಕವನವನ್ನು ವಿಮರ್ಶಿಸುವುದರ ಮೂಲಕ ಇಂದಿನ ಮಕ್ಕಳಲ್ಲಿ ರಾಸಾಯನಿಕ ಮುಕ್ತ ಕೃಷಿಯ ಕುರಿತು ಬೆಳಕು ಚೆಲ್ಲಿದ ಲೇಖನ. ಧನ್ಯವಾದಗಳು ಸರ್.
     ವಿಜ್ಞಾನಕ್ಕೆ ಎಲ್ಲವೂ ಬೇಕು. ಎಲ್ಲಾ ವಿಷಯಗಳನ್ನೊಳಗೊಂಡಾಗ ಮಾತ್ರ ಅದು ಪರಿಪೂರ್ಣ. ಅನುವಂಶೀಯತೆಯ ಪಿತಾಮಹ ಗ್ರೆಗರ್ ಮೆಂಡಲ್ ಉದಾಹರಣೆಯೊಂದಿಗೆ ಸಂಚಿಕೆ ಸೊಗಸಾಗಿ ಮೂಡಿ ಬಂದಿದೆ.
     ಅಲಂಕಾರಿಕ ಗಿಡಗಳಾಗಿ ಬಳಸುವ ಕ್ರೋಟನ್ ಗಿಡಗಳು ಅವುಗಳ ಬಗೆಗಳ ಕುರಿತಾದ ವಿವರವಾದ ಮಾಹಿತಿ ಈ ಸಲದ ನಿಷ್ಪಾಪಿ ಸಸ್ಯಗಳು ಸಂಚಿಕೆಯಲ್ಲಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಧನ್ಯವಾದಗಳು ವಿಜಯಾ ಮೇಡಂ.
     ರಮೇಶ್ ಉಪ್ಪುಂದರವರ ಪಯಣ ಸಂಚಿಕೆಯಲ್ಲಿ ಮಣಿಪಾಲದ ಕುರಿತಾದ ಮಾಹಿತಿ ಸೊಗಸಾಗಿ ಮೂಡಿಬಂದಿದೆ.
     ಚಿಕ್ಕ ಮಕ್ಕಳಿಗೆ ಇರುವ ಸುಂದರ ಪುಸ್ತಕ ಸ್ವತಂತ್ರ ಸೋದರಿಯರು ಪರಿಚಯ ತುಂಬಾ ಚೆನ್ನಾಗಿತ್ತು ವಾಣಿಯಕ್ಕ.
     ಪದದಂಗಳ ಸಂಚಿಕೆ ಸೊಗಸಾಗಿ ಮೂಡಿ ಬಂದಿದೆ. ಧನ್ಯವಾದಗಳು ರಮೇಶ್
      ಕೊನೆಯವಾಗಿ ಜಗಲಿಯ ಎಲ್ಲರಿಗೂ ಹೃತ್ಪೂರ್ವಕ ನಮನಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************


ಎಲ್ಲರಿಗೂ ನಮಸ್ಕಾರಗಳು,
     ನಿಸರ್ಗದಲ್ಲಿ ಎಲ್ಲವೂ ಇದೆ ಅದು ಎಲ್ಲವನ್ನು ನಮಗೆ ಕೊಡುತ್ತದೆ ಆದರೆ ಅನುಭವಿಸುವ ಮನಸ್ಸು ಚೆನ್ನಾಗಿದ್ದಾಗ ಮಾತ್ರ ಜೀವನ ಸುಂದರವಾಗಲು ಸಾಧ್ಯವಿದೆ. ಶಿಕ್ಷಣಾಧಿಕಾರಿಯವರಾದ ಶ್ರೀ ಜ್ಞಾನೇಶ್ ಸರ್ ರವರಿಂದ ಉತ್ತಮ ಲೇಖನ.
     ಮಂಗಳೂರಿನ ಕದ್ರಿಯಲ್ಲಿ ನಡೆದ ಕಲಾಪರ್ಬದ ಕುರಿತಾದ ವಿಶೇಷ ಲೇಖನ ಸುಂದರವಾಗಿ ಮೂಡಿ ಬಂದಿದೆ. ಧನ್ಯವಾದಗಳು ಸರ್. ಕಲಾ ಪರ್ಬವನ್ನು ಆಯೋಜನೆ ಮಾಡಿದ ಸಂಘಟಕರಿಗೆ ಅಭಿನಂದನೆಗಳು.
     ಕಾವ್ಯರವರ ಮಕರ ಸಂಕ್ರಾತಿ ಹಬ್ಬದ ಕುರಿತಾದ ಕವನ ಸೊಗಸಾಗಿದೆ. ಅಭಿನಂದನೆಗಳು ಕಾವ್ಯ.
     ಮಂಚಿ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ 23 ನೇ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮದ ಕುರಿತಾದ ತಮ್ಮ ಅನಿಸಿಕೆಗಳಿಗೆ ಧನ್ಯವಾದಗಳು ರಮೇಶ್ ಸರ್.
     ಅವಗೆಂಪು ವಿಕಿರಣಗಳ ಕುರಿತಾದ ಕುತೂಹಲಕಾರಿ ವಿಚಾರಗಳನ್ನು ಸೊಗಸಾದ ವಿಧಾನಗಳಿಂದ ತಿಳಿಸಿ ಕುತೂಹಲವನ್ನು ಮತ್ತಷ್ಟು ಕಾಯ್ದಿರಿಸಿದ್ದಾರೆ ದಿವಾಕರ ಸರ್ ತಮ್ಮ ಸಂಚಿಕೆಯಲ್ಲಿ. ಧನ್ಯವಾದಗಳು ಸರ್.
     ವಿದ್ಯಾರ್ಥಿನಿ ದೀಪ್ತಿಯವರ ಬದುಕು ಬದಲಿಸಿದ ಕಥೆಗಳು ಎನ್ನುವ ಸುಂದರ ಪುಸ್ತಕದ ವಿಮರ್ಶೆಯ ಜೊತೆಗೆ ಪರಿಚಯವನ್ನು ಮಾಡಿ ಮಕ್ಕಳ ಜಗಲಿಗೆ ಶುಭಕೋರಿದ ಶಾಂಭವಿ ಮೇಡಂರವರಿಗೆ ಧನ್ಯವಾದಗಳು.
     ಅತ್ಯಂತ ಹತ್ತಿರದಿಂದ ಗಿಡವೊಂದರ ಪರಿಚಯ ಈ ಸಲದ ನಿಷ್ಪಾಪಿ ಸಸ್ಯಗಳ ಸಂಚಿಕೆಯ ವಿಶೇಷತೆ. ಎಲ್ಲರಿಗೂ ಅದರಲ್ಲೂ ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಸಂಭಾಷಣೆಯ ರೂಪದಲ್ಲಿ ನಾಚಿಕೆ ಮುಳ್ಳಿನ ಗಿಡದ ಪರಿಚಯ ಸೊಗಸಾಗಿತ್ತು ವಿಜಯಾ ಮೇಡಂ.
     ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣದ ಕುರಿತಾದ ಮಾಹಿತಿ ಈ ಸಲದ ಪಯಣ ಸಂಚಿಕೆಯಲ್ಲಿ. ರಮೇಶ್ ಉಪ್ಪುಂದರವರ ಪಯಣ ಸಂಚಿಕೆ ಉತ್ತಮವಾಗಿ ಮೂಡಿಬರುತ್ತಿದೆ.
     'ಇರುವೆಗಳು ಮತ್ತು ಆಗಂತುಕರು' ಎನ್ನುವ ಸುಂದರ ಪುಸ್ತಕದ ಪರಿಚಯ ಸೊಗಸಾಗಿತ್ತು ವಾಣಿಯಕ್ಕ.
      'ತಾಯಿಯೇ ಮೊದಲ ಗುರು' ಎನ್ನುವಂತೆ ತರಗತಿಯ ವಿದಾರ್ಥಿನಿಯೋರ್ವಳು ಹೊಸ ವರ್ಷದ ಕುರಿತಾಗಿ ಅಮ್ಮನ ಕಲಿಸಿದ ವಿಚಾರಗಳನ್ನು ಭಾಷಣ ರೂಪದಲ್ಲಿ ಪ್ರಸ್ತುತ ಪಡಿಸಿದ ಸನ್ನಿವೇಶದ ಕುರಿತಾಗಿ ರಮ್ಯಾ ಮೇಡಂ ರವರ ಅನುಭವದ ಮಾತುಗಳಿಗೆ ಧನ್ಯವಾದಗಳು.
     ಮಕ್ಕಳ ಚಿತ್ರ ಸಂಚಿಕೆಯಲ್ಲಿ ಕ್ಷಿತಿ ಹಿಮಾನಿಯವರ ಚಿತ್ರಗಳು ಸೊಗಸಾಗಿವೆ. ಅಭಿನಂದನೆಗಳು ಕ್ಷಿತಿ.
     ಪದಗಳ ಹುಡುಕಾಟ ಹಾಗೂ ಜೋಡಣೆಗೆ ಸಹಾಯಕವಾದ ಪದದಂಗಳ ಸಂಚಿಕೆ ಸೊಗಸಾಗಿತ್ತು ರಮೇಶ್ ಸರ್. 
     ಹಲವಾರು ದಿನಗಳ ನಂತರ ಗುರುರಾಜ ಇಟಗಿಯವರ ಲೇಖನ ಮಕ್ಕಳ ಜಗಲಿಯಲ್ಲಿ. ನಾನೇನಾಗಬೇಕು ಎನ್ನುವ ಜೀವನ ಸಂದೇಶ ಸಾರುವ ಸುಂದರವಾದ ಕಥೆ ತುಂಬಾ ಇಷ್ಟವಾಯಿತು.
    ಕೊನೆಯದಾಗಿ ಜಗಲಿ ಬಳಗದ ಎಲ್ಲರಿಗೂ ವಂದನೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************


ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ಚಂದ್ರಶೇಖರ ಗಟ್ಟಿ ಅಂದಾಡಿ ನಿವೃತ್ತ ಹಿರಿಯ ಆರೋಗ್ಯ ನಿರೀಕ್ಷಕ, ಕವಿತಾ ಶ್ರೀನಿವಾಸ ದೈಪಲ, ವಿದ್ಯಾ ಕಾರ್ಕಳ ಸಹಶಿಕ್ಷಕಿ.... ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************


Ads on article

Advertise in articles 1

advertising articles 2

Advertise under the article