ತೀರ್ಪುಗಾರರ ಅನಿಸಿಕೆಗಳು : ಮಕ್ಕಳ ಜಗಲಿ ಕಲಾ ಪ್ರಶಸ್ತಿ - 2024
Saturday, January 25, 2025
Edit
ತೀರ್ಪುಗಾರರ ಅನಿಸಿಕೆಗಳು - 2024
4ನೇ ವರ್ಷದ
ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ
ಮಕ್ಕಳ ಜಗಲಿ ಕಲಾ ಪ್ರಶಸ್ತಿ - 2024
ಆತ್ಮೀಯ ಜಗಲಿಯ ಎಲ್ಲಾ ಬಂಧುಗಳೇ... ಮಕ್ಕಳ ಜಗಲಿ ಬಳಗದಿಂದ ಆಯೋಜಿಸಲಾಗಿರುವ 4ನೇ ವರ್ಷ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಗೆ ದೇಶಾದ್ಯಂತ ಪ್ರೀತಿಯ ಸ್ಪಂದನೆ ಸಿಕ್ಕಿದೆ. ಸಾವಿರಕ್ಕೂ ಮಿಕ್ಕಿ ಕಲಾಕೃತಿಗಳು ಸ್ಪರ್ಧೆಯಲ್ಲಿ ಪಾಲು ಪಡೆದಿವೆ. ಕರ್ನಾಟಕದ ನಾನಾ ಜಿಲ್ಲೆಗಳಿಂದ ಹಾಗೂ ದೇಶದ ವಿವಿಧ ರಾಜ್ಯಗಳಿಂದ ವಿದ್ಯಾರ್ಥಿಗಳು ಭಾಗವಹಿಸಿರುವುದು ತುಂಬಾ ಸಂತೋಷದ ವಿಷಯ. ಮಕ್ಕಳ ಜಗಲಿಯಲ್ಲಿ ಆತ್ಮೀಯ ಮಕ್ಕಳು ಎಲ್ಲಾ ಆಯಾಮಗಳನ್ನು ಸಂತೋಷವಾಗಿ ಸ್ವೀಕರಿಸುವಿರಿ ಎಂಬುದು ನಮ್ಮ ನಂಬಿಕೆ... ಮಕ್ಕಳ ಜಗಲಿ ಕಲಾ ಪ್ರಶಸ್ತಿಯು ಒಬ್ಬ ವಿದ್ಯಾರ್ಥಿಗೆ ಒಂದು ಬಾರಿ ಮಾತ್ರ ನೀಡಲಾಗುವುದು. ಚಿತ್ರಕಲೆಯಲ್ಲಿ ನಿರಂತರ ಶ್ರಮ, ತೊಡಗಿಸಿಕೊಳ್ಳುವಿಕೆಯನ್ನು ಕಾಯ್ದಿಟ್ಟುಕೊಂಡು ತಮ್ಮ ಪ್ರತಿಭೆಯನ್ನು ಇನ್ನಷ್ಟು ವಿಸ್ತರಿಸಿಕೊಂಡು ಐದು ವರ್ಷಗಳ ಬಳಿಕ ಮತ್ತೆ ಪ್ರಶಸ್ತಿಯನ್ನು ತನ್ನದಾಗಿಸಿಕೊಳ್ಳುವಲ್ಲಿ ಪ್ರತಿಯೊಬ್ಬ "ಮಕ್ಕಳ ಜಗಲಿ ಕಲಾಪ್ರಶಸ್ತಿ" ವಿಜೇತರು ಶ್ರಮಿಸಬೇಕೆಂಬುದು ನಮ್ಮ ಆಶಯ...... ತಾರಾನಾಥ್ ಕೈರಂಗಳ
4ನೇ ವರ್ಷದ
ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ
ಮಕ್ಕಳ ಜಗಲಿ ಕಲಾ ಪ್ರಶಸ್ತಿ - 2024
ಫಲಿತಾಂಶ ದಿನಾಂಕ 26.01.2025
ಸಾಯಂಕಾಲ 6:00 ಗಂಟೆಗೆ
ನಾಲ್ಕು ವಿಭಾಗಗಳಲ್ಲಿ ಮಕ್ಕಳು ರಚಿಸಿದ ಚಿತ್ರಗಳನ್ನು ವೀಕ್ಷಣೆ ಮಾಡುವ ಅವಕಾಶ ದೊರೆಯಿತು. ಇಂದಿನ ದಿನಗಳಲ್ಲಿ ಮಕ್ಕಳಿಗೆ ಚಿತ್ರ ರಚಿಸಲು ಸಾಕಷ್ಟು ಪ್ರೋತ್ಸಾಹ ಇದೆ ಎಂಬ ಅಭಿಪ್ರಾಯ ಈ ಸಂದರ್ಭದಲ್ಲಿ ತಿಳಿಯಿತು.
ಹಲವು ಮಕ್ಕಳು ರಚಿಸಿದ ಚಿತ್ರಗಳು ಈ ಮೊದಲೇ ರಚಿಸಿದ ಚಿತ್ರಗಳ ಪ್ರತಿಯಂತಿದ್ದವು. ಆದರೂ ರಚನೆಯಲ್ಲಿ, ಬಣ್ಣದಲ್ಲಿ, ಸ್ವಚ್ಛತೆಯಲ್ಲಿ, ಪೂರ್ತಿಗೊಳಿಸುವಲ್ಲಿ ಉತ್ತಮವಾಗಿತ್ತು.
ರಾಜ್ಯಮಟ್ಟದ ಸ್ಪರ್ಧೆ ಎಂದಾಗ ವಿವಿಧೆಡೆಗಳಿಂದ ಬಂದಂತಹ ಮಕ್ಕಳ ಚಿತ್ರಗಳನ್ನು ವೀಕ್ಷಣೆ ಮಾಡಿದಾಗ ಉತ್ತಮ ಕೃತಿಗಳನ್ನು ಕಾಣುವಂತಾಯಿತು. ಮಕ್ಕಳ ಕೈಚಳಕ ಮೆಚ್ಚುವಂತಹುದೇ... ಅವರಿಗೆ ಅವರ ಹೆತ್ತವರ ಪ್ರೋತ್ಸಾಹ ಅತೀ ಅಗತ್ಯ.
ಚಿತ್ರರಚನೆಯಿಂದ ಯಾವುದೇ ಮಕ್ಕಳು ಇತರರನ್ನು ಗಮನಿಸುವುದು, ಚಿತ್ರಗಳನ್ನು, ಪ್ರಕೃತಿಯನ್ನು, ನೆನಪಿನ ಶಕ್ತಿಯನ್ನು, ತಾಳ್ಮೆಯನ್ನು, ಏಕಾಗ್ರತೆಯನ್ನು, ಹೊಸತನವನ್ನು ಬೆಳೆಸಿಕೊಳ್ಳುತ್ತಾರೆ. ಮುಂದೆ ಅವರು ಯಾವುದೇ ವೃತ್ತಿಯಲ್ಲಿ ಮುಂದುವರಿದರೂ ಅವರಲ್ಲಿ ಮೇಲಿನ ಎಲ್ಲಾ ಗುಣಗಳು ಚಿತ್ರಕಲೆಯಿಂದ ಲಭಿಸುವುದರಲ್ಲಿ ಯಾವುದೇ ಸಂಶಯ ಇಲ್ಲ. ಅವರನ್ನು ಪ್ರೋತ್ಸಾಹಿಸುವುದೇ ಅತಿ ಅಗತ್ಯವಾಗಿದೆ.
ಮಕ್ಕಳ ಪ್ರತಿಭೆಯನ್ನು ಚಿತ್ರಕಲೆಯ ಮೂಲಕ ಬೆಳಕಿಗೆ ತರಲು ಪ್ರೋತ್ಸಾಹಿಸುವ ತಾರಾನಾಥ್ ಕೈರಂಗಳ ಅವರಿಗೆ ನಿವೃತ್ತ ಚಿತ್ರಕಲಾ ಶಿಕ್ಷಕನಾಗಿ 45 ವರ್ಷಗಳ ಸೇವೆ ಅನುಭವದ ಮೂಲಕ ಅಭಿನಂದನೆಯನ್ನು ಸಲ್ಲಿಸುತ್ತೇನೆ... ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಅಭಿನಂದನೆಗಳು.
ರಾಜ್ಯ ಪ್ರಶಸ್ತಿ ಪುರಸ್ಕೃತ
ನಿವೃತ್ತ ಚಿತ್ರಕಲಾ ಶಿಕ್ಷಕರು
ಕಲಾಶ್ರೀ ನಿಲಯ, ಶ್ರೀರಾಮಪೇಟೆ, ಸುಳ್ಯ
ಸುಳ್ಯ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Cell: +919449893800
*******************************************
ಮಕ್ಕಳ ಚಿತ್ರಕಲೆ ಮನಸ್ಸಿಗೆ ತುಂಬ ಮುದ ನೀಡಿತು. ಈ ಸ್ಪರ್ಧೆಯು ಪ್ರಥಮ ಸೋಪಾನವಷ್ಟೇ. ಸೋಲು ಗೆಲುವುಗಳಿಗಿಂತ ಪ್ರಯತ್ನವೆಂಬುದು ಬಹು ಮುಖ್ಯ. ಅದನ್ನು ಉಳಿಸಿ ಕೊಳ್ಳಿ. ಮುಂದುವರಿಸಿರಿ. ಮಕ್ಕಳಿಗೆ ಒಂದು ಕಿವಿ ಮಾತು.... ಗೆದ್ದವರಲ್ಲಿ ಹಮ್ಮು ಸೋತವರಲ್ಲಿ ನಿರಾಸೆ -- ಎರಡೂ ಬೆಳವಣಿಗೆಗೆ ಮಾರಕ. ದೇವಿ ಸರಸ್ವತಿಯ ಅನುಗ್ರಹ ಎಲ್ಲರ ಮೇಲಿರಲಿ.
ಎಲ್ಲಾ ಚಿತ್ರಗಳು ಸುಂದರವೂ ಉತ್ತಮವೂ ಆಗಿದ್ದವು. ಆದರೆ ಆಯ್ಕೆ ಮಾಡುವಾಗ ಕೆಲವೊಂದು ಬಿಂದುಗಳನ್ನು ಮನಸ್ಸಲ್ಲಿಟ್ಟುಕೊಂಡು ಆಯ್ಕೆ ಮಾಡಲಾಗಿದೆ. ಚಿತ್ರಗಳಲ್ಲಿನ ವಿಶಿಷ್ಟತೆ, ವಿಷಯದಲ್ಲಿನ ಸಂಯೋಜನೆ, ಜಲವರ್ಣದ ಪಾರದರ್ಶಕತೆ, ಅಚ್ಚು ಕಟ್ಟುತನ ಮತ್ತು ಪರಿಪೂರ್ಣತೆ.
ಸ್ಪರ್ಧೆ ಗೆದ್ದವರಿಗೆ ಹಾಗೂ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಶುಭಾಶಯ.
Kaavi Kale Artist
"SRINIVAS", 14-6-941/1, Panchavati Lane,
K S Rao Road,
Mangalore - 575 001.
Mobile : +91 98454 17777
*******************************************
ಮಕ್ಕಳ ಜಗಲಿ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯ ತೀರ್ಪುಗಾರರಾಗಿ ಭಾಗವಹಿಸಿದ ನನ್ನ ಅನಿಸಿಕೆ ಮತ್ತು ಸಲಹೆಗಳು....
ಮಕ್ಕಳ ಜಗಲಿ ಆಯೋಜಿಸುವ ಈ ವಿದ್ಯಾರ್ಥಿಗಳ ಚಿತ್ರಕಲಾ ಸ್ಪರ್ಧೆ ಒಂದು ಉತ್ತಮ ಯಶಸ್ಸು ಪಡೆದ ಕಾರ್ಯಕ್ರಮವಾಗಿದೆ. ಒಂದನೇ ತರಗತಿಯಿಂದ 12ನೇ ತರಗತಿಯವರೆಗೆ ಪ್ರತ್ಯೇಕ ನಾಲ್ಕು ವಿಭಾಗಗಳಲ್ಲಿ ಆಯೋಜಿಸಿದ ಈ ಸ್ಪರ್ಧೆಯು ಮಕ್ಕಳು ತಮ್ಮ ಕಲ್ಪನೆ, ಕೌಶಲ್ಯ, ಮತ್ತು ಸೃಜನಶೀಲತೆಯನ್ನು ಮೂಡಿಸುವ ಒಂದು ಅದ್ಭುತ ವೇದಿಕೆಯನ್ನು ಒದಗಿಸಿತು.
ಒಂದನೇ ತರಗತಿಯಿಂದ ಮೂರನೇ ತರಗತಿಯ ವಿದ್ಯಾರ್ಥಿಗಳಿಗೆ ಮುಕ್ತ ವಿಷಯ. ಚಿಕ್ಕ ಮಕ್ಕಳ ಕಲ್ಪನೆಗೆ ಯಾವುದೇ ಸೀಮೆ ಇರಲಿಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮದೇ ಆದ ಅಂದವಾದ ಆಲೋಚನೆಗಳನ್ನು ಕಾಗದದ ಮೇಲೆ ಮೂಡಿಸಿದರು. ಮಕ್ಕಳ ವೈವಿಧ್ಯಮಯ ಚಿತ್ರಗಳು ಅವರ ಸೃಜನಶೀಲತೆಯನ್ನು ಪ್ರತಿಬಿಂಬಿಸುವಂತಾಗಿದ್ದವು.
ನಾಲ್ಕರಿಂದ ಆರನೇ ತರಗತಿಯಲ್ಲಿಯೂ ಮುಕ್ತ ವಿಷಯವಾಗಿತ್ತು. ಈ ವಿಭಾಗದಲ್ಲಿಯೂ ಮಕ್ಕಳಿಗೆ ಯಾವುದೇ ನಿರ್ದಿಷ್ಟ ವಿಷಯದ ಬಾಧ್ಯತೆ ಇರಲಿಲ್ಲ. ಅದು ಅವರ ಕಲಾ ಪ್ರವೃತ್ತಿ ಮತ್ತು ನವೀನ ಆಲೋಚನೆಗಳಿಗೆ ಒಂದು ದೊಡ್ಡ ಅವಕಾಶ ನೀಡಿತು. ಚಿತ್ರಗಳನ್ನು ಪರಿಸರ, ಕುಟುಂಬ, ಸ್ನೇಹಿತರ ಭಾವನೆಗಳು, ಹಬ್ಬ, ಆಚರಣೆಗಳು ಮುಂತಾದ ವಿಷಯಗಳು ಬಣ್ಣ ಹೊತ್ತಿದ್ದವು.
7ರಿಂದ 9ನೇ ತರಗತಿ ವಿಭಾಗದಲ್ಲಿ "ಪ್ರವಾಸಿ ತಾಣದಲ್ಲಿ ನಾನು" ಎಂಬ ವಿಷಯದಲ್ಲಿ ಚಿತ್ರರಚಿಸುವ ಅವಕಾಶ ಮಕ್ಕಳದಾಗಿತ್ತು. ಈ ವಿಭಾಗವು ವಿಶೇಷವಾಗಿ ಮನನೀಯವಾಗಿತ್ತು. ವಿದ್ಯಾರ್ಥಿಗಳು ತನ್ನ ದೈನಂದಿನ ಪ್ರಯಾಣಗಳು, ನಿಸರ್ಗದೊಂದಿಗೆ ಕಳೆದ ಕ್ಷಣಗಳು, ಪ್ರೇಕ್ಷಣೀಯ ಸ್ಥಳಗಳು ಮತ್ತು ತಮ್ಮ ಕಣ್ಣುಗಳ ಮೂಲಕ ಕಾಣಿಸಿದ ಪ್ರಪಂಚವನ್ನು ಚಿತ್ರಗಳ ಮೂಲಕ ವ್ಯಕ್ತಪಡಿಸಿದರು. ಪ್ರವಾಸದ ವೈವಿಧ್ಯತೆಗಳನ್ನು ತೋರಿಸುವ ಚಿತ್ರಗಳು ಚೆನ್ನಾಗಿ ಮೂಡಿಬಂದಿವೆ.
10ರಿಂದ 12ನೇ ತರಗತಿಯ ವಿದ್ಯಾರ್ಥಿಗಳು "ಮಾತೃ ವಾತ್ಸಲ್ಯ - ತಾಯಿಯ ಪ್ರೇಮ" ಈ ವಿಷಯದ ಮೇಲೆ ಚಿತ್ರಗಳನ್ನು ರಚಿಸಿದ್ದರು. ಹಿರಿಯ ವಿದ್ಯಾರ್ಥಿಗಳು ತಾಯಿಯ ಮಹತ್ವ ಮತ್ತು ಮಮತೆಯನ್ನು ಮನಮುಟ್ಟುವ ರೀತಿಯಲ್ಲಿ ಚಿತ್ರಿಸಿದ್ದರು. ಅವರ ರಚನೆಗಳಲ್ಲಿ ತಾಯಿಯ ಕನಸುಗಳು, ಕಷ್ಟಗಳು, ಪ್ರೀತಿ ಸ್ಪಷ್ಟವಾಗಿ ಮೆರೆದಿದ್ದವು.
ಈ ಸ್ಪರ್ಧೆಯಲ್ಲಿ ನಾನು ಬಹಳ ಮುಖ್ಯವಾಗಿ ಗಮನಿಸಿದ ಒಂದು ವಿಷಯ ವೆಂದರೆ ಹೆಚ್ಚಿನ ಚಿತ್ರಗಳು ನಕಲು ಚಿತ್ರಗಳು. ಬೇರೆ ಕಡೆ ನೋಡಿರುವಂತಹ ಚಿತ್ರಗಳನ್ನು ಪುನಃ ರಚಿಸಿರುತ್ತಾರೆ. ಇದನ್ನು ಈ ಕಲಿಯುವ ಹಂತದಲ್ಲಿ ಆದಷ್ಟು ಕಡಿಮೆ ಮಾಡಬೇಕು. ಸೃಜನಶೀಲತೆಗೆ ಹೆಚ್ಚು ಒತ್ತು ಕೊಡಬೇಕು. ಅಂತರ್ಜಾಲದಿಂದ ತೆಗೆದ ಚಿತ್ರಗಳನ್ನು ನಕಲು ಮಾಡುವ ಬದಲು ಅದರಿಂದ ಪ್ರೇರೇಪಣೆ ತೆಗೆದುಕೊಂಡು ನಾನು ನನ್ನ ಕಲೆಯನ್ನು, ವಿಚಾರಗಳನ್ನು ವ್ಯಕ್ತಪಡಿಸಲು ಮುಂದಾಗಬೇಕು. ಇದಕ್ಕೆ ವಿದ್ಯಾರ್ಥಿಗಳ ಪೋಷಕರು ಮತ್ತು ಅವರ ಶಿಕ್ಷಕರು ಪ್ರೇರೇಪಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ತನ್ನದೇ ಆದ ಅನನ್ಯವಾದ ಸೃಜನಶೀಲತೆ ಇರುತ್ತದೆ. ಅದನ್ನು ಪ್ರಸ್ತುತಪಡಿಸಲು ಪ್ರಯತ್ನಿಸಬೇಕು.
ಮುಂದಿನ ದಿನಗಳಲ್ಲಿ ಸ್ಪರ್ಧೆಗಳಿಗಾಗಿ ಕಲಾಕೃತಿ ರಚನೆ ಮಾಡಿದಾಗ ನಕಲು ರಚನೆಗಳಿಗೆ ಹೆಚ್ಚು ಆಸ್ಪದ ನೀಡದೆ ಹೆಚ್ಚು ಹೆಚ್ಚು ಹೊಸ ಆಲೋಚನೆಗಳಲ್ಲಿ ಹೊಸ ವಿಚಾರಗಳಲ್ಲಿ ಹೊಸ ಕಲಾಕೃತಿಗಳು ಮೂಡಿ ಬರಲಿ ಎಂದು ಆಶಿಸುತ್ತೇನೆ.
ಮಕ್ಕಳ ಜಗಲಿ ಆಯೋಜಿಸಿದ ಈ ಸ್ಪರ್ಧೆ ಸೃಜನಶೀಲತೆಗೆ ಒತ್ತು ನೀಡುವುದರ ಜೊತೆಗೆ ಮಕ್ಕಳಿಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಪ್ರೇರೇಪಣೆಯಾಯಿತು. "ಇದು ಕಲಾವಿದರ ಮುಂದಿನ ಪೀಳಿಗೆಯನ್ನು ರೂಪಿಸುವ ಹಾದಿಯಲ್ಲಿ ಒಂದು ಉತ್ತಮ ಹೆಜ್ಜೆಯಾಗಿದೆ." ಎಲ್ಲಾ ವಿದ್ಯಾರ್ಥಿಗಳ ಆಕರ್ಷಕ ಚಿತ್ರಗಳು ಮತ್ತು ಅವರನ್ನು ಪ್ರೋತ್ಸಾಹಿಸಿದ ಶಿಕ್ಷಕರು ಮತ್ತು ಪೋಷಕರ ಪಾತ್ರ ಸಹ ಪ್ರಶಂಸನೀಯವಾಗಿದೆ.
ಈ ಸ್ಪರ್ಧೆಯು ಕಲೆಯನ್ನು ಪ್ರೀತಿಸುವ ವಿದ್ಯಾರ್ಥಿಗಳಿಗಾಗಿ "ಮಕ್ಕಳ ಜಗಲಿ" ಒಂದು ಸ್ಪೂರ್ತಿದಾಯಕ ಪಾಠಶಾಲೆಯಂತಿದೆ. ಮಕ್ಕಳ ಜಗಲಿಯಲ್ಲಿ ತಂಡ ಈ ರೀತಿಯ ಇನ್ನಷ್ಟು ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಿ ಎಂದು ಆಶಿಸುತ್ತಾ ಧನ್ಯವಾದಗಳು....
Visual Artist
Puttur, Karnataka.
Mob : 95916 57792
E-mail : umeshvm2133 @gmail.com
*******************************************
ಮಕ್ಕಳ ಜಗಲಿ ಕಲಾ ಪ್ರಶಸ್ತಿ 2024
ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸುವಲ್ಲಿ ನೆರವಾದವರು....
ದೇವರು ನಮಗೆ ಕರುಣಿಸಿರುವ ಪ್ರತಿಭೆಗಳನ್ನು ಪ್ರತಿಯೊಬ್ಬರೂ ನಮ್ಮ ಜೀವನದಲ್ಲಿ ಸಂಪೂರ್ಣವಾಗಿ ಬಳಸಿದರೆ ಮಾತ್ರ ಅವುಗಳನ್ನು ಅಭಿವೃದ್ಧಿಪಡಿಸಬಹುದು. ಜನಿಸಿರುವ ಪ್ರತಿಯೊಂದು ಮಗು ಕೂಡ ವೈವಿಧ್ಯಮಯ ಕೌಶಲ್ಯವನ್ನು ಹೊಂದಿರುವವರು. ಇಂತಹ ಪ್ರತಿಭಾನ್ವಿತ ಮಕ್ಕಳ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಲು ಮಕ್ಕಳ ಜಗಲಿ ಆನ್ಲೈನ್ ಪತ್ರಿಕೆಯೊಂದು ಸಾಧನವಾಗಿದೆ... ಈ ತರಹದ ವೇದಿಕೆಯ ಜೊತೆ ನಾವೂ ಭಾಗವಾಗಿರುವುದು ಖುಷಿಯ ವಿಚಾರ.
NATTIHITHLU CONSTRUCTIONS
MUDIPU , BANTWALA
Mob ; +91 6366 189 549
*******************************************
ಮಕ್ಕಳ ಜಗಲಿ ಮೂಲಕ ನಡೆಯುವ ಕವನ, ಕಥೆ, ಚಿತ್ರಕಲಾ ಸ್ಪರ್ಧೆಗಳು ಮಕ್ಕಳಲ್ಲಿನ ಪ್ರತಿಭೆಗಳನ್ನು ಹೊರತರಲು ಉತ್ತಮ ವೇದಿಕೆ. ಇದನ್ನು ಚೆನ್ನಾಗಿ ನಡೆಸಿಕೊಂಡು ಬರುತ್ತಿರುವ ಮಕ್ಕಳ ಜಗಲಿ ಬಳಗದವರೊಂದಿಗೆ ಹೈಸ್ಕೂಲ್ ಸಹಪಾಠಿಗಳಾದ ನಮಗೂ ಅವಕಾಶ ನೀಡಿರುವುದು ತುಂಬಾ ಖುಷಿಯನ್ನು ನೀಡಿದೆ. ಧನ್ಯವಾದಗಳು
SMK DEVELOPERS
KONAJE MANGALORE
Mob ; +91 98449 93975
*******************************************
ವಿದ್ಯಾರ್ಥಿಗಳ ಪ್ರತಿಭೆಗೆ ಪ್ರೋತ್ಸಾಹದಾಯಕ ಕೆಲಸ ಮಾಡುತ್ತಿರುವ ಮಕ್ಕಳ ಜಗಲಿಯಲ್ಲಿ ದೇಶದ ಹೊರ ದೇಶದ ವಿದ್ಯಾರ್ಥಿಗಳು ಭಾಗವಹಿಸುತ್ತಿರುವುದು ಅಭಿಮಾನದ ಸಂಗತಿ. ಸಾಹಿತ್ಯಿಕ ಹಾಗೂ ಕಲಾ ಚಟುವಟಿಕೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಕೊಡಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯ. ನಮ್ಮ ಜಾಗೃತಿ ಮನಸ್ಸು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾದರೆ ಸಮಾಜದಲ್ಲಿ ಉತ್ತಮ ಕಾರ್ಯಗಳು ನೆರವೇರುತ್ತದೆ.
BRIGHT CONSTRUCTIONS
MUDIPU BANTWALA
Mob ; +91 98864 95252
*******************************************
ಬಾಲ್ಯದಲ್ಲಿ ನಾವು ಕಳೆದುಕೊಂಡಿರುವ ಅವಕಾಶಗಳನ್ನು ಇಂದಿನ ಮಕ್ಕಳಿಗೆ ನೀಡಬೇಕಾದುದು ಹಿರಿಯರಾದ ನಮ್ಮೆಲ್ಲರ ಕರ್ತವ್ಯ. ಮಗುವಿಗೆ ಐಷಾರಾಮ ದ ವಸ್ತುಗಳನ್ನು ಕೊಡುವುದಕ್ಕಿಂತ ಬದುಕಿನಲ್ಲಿ ಸಂತಸ ಪಡುವ ಕಲೆಗಳನ್ನು ಮೈಗೂಡಿಸಲು ಅವಕಾಶ ಒದಗಿಸಬೇಕು. ಪ್ರತಿಯೊಬ್ಬ ತಂದೆ ತಾಯಿ ಈ ನಿಟ್ಟಿನಲ್ಲಿ ಆಲೋಚಿಸಿದರೆ, ಎಲ್ಲಾ ಮಕ್ಕಳು ಪ್ರತಿಭಾ ಸಂಪನ್ನರಾಗಿ ಈ ದೇಶಕ್ಕೆ ಕೊಡುಗೆಯಾಗಬಲ್ಲರು. ಮಕ್ಕಳ ಜಗಲಿಯ ಈ ಕಾರ್ಯಕ್ಕೆ ನಮ್ಮೆಲ್ಲರ ಸಹಕಾರ ಇದೆ.
SRI VASU SHYAM VENTURE
BALMATA MANGALORE
Mob ; +91 99647 58023
*******************************************
ಮಕ್ಕಳ ಜಗಲಿ ಕಲಾ ಪ್ರಶಸ್ತಿ 2024
ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಸಹಕಾರ
ಆನ್ ಲೈನ್ ಪ್ರಮಾಣ ಪತ್ರ ಕಳುಹಿಸಲಾಗಿದೆ....
ಸ್ಪರ್ಧೆಗೆ ಬಂದಿರುವ ಎಲ್ಲಾ ಕಲಾಕೃತಿಗಳನ್ನು ಪರಿಶೀಲಿಸಿ ಪ್ರತಿಯೊಬ್ಬರಿಗೂ ಆನ್ ಲೈನ್ ಮೂಲಕ ಭಾಗವಹಿಸುವಿಕೆಯ ಪ್ರಮಾಣ ಪತ್ರವನ್ನು ಆಯಾ ವಾಟ್ಸಪ್ ನಂಬರ್ ಗಳಿಗೆ ಕಳುಹಿಸಿ ಕೊಡಲಾಗಿದೆ. ಈ ಕಾರ್ಯವನ್ನು ಮಕ್ಕಳ ಜಗಲಿಯ ತುಳಸಿ ಕೈರಂಗಳ, ನವ್ಯಾ, ಹಾಗೂ ಅಶ್ವಿತಾ ಇವರು ನಿರ್ವಹಿಸಿದ್ದಾರೆ.
ಸರಿಯಾಗಿ ನಮೂದಿಸದ ವಾಟ್ಸಪ್ ನಂಬರ್, ಹೆಸರು ಬರೆಯದೆ ಕಳಿಸಿರುವುದು ಹಾಗೂ ಇನ್ನಿತರ ಕಾರಣಗಳಿಗೆ ಕೆಲವು ವಿದ್ಯಾರ್ಥಿಗಳಿಗೆ ತಲುಪದೆ ಇದ್ದಲ್ಲಿ ತಿಳಿಸಬಹುದು.
◾ ಸ್ಪರ್ಧೆಯ ಕುರಿತು ಸಕಾಲಕ್ಕೆ ಮಾಹಿತಿಯನ್ನು ನೀಡಿ ಸಹಕರಿಸಿದ ಆತ್ಮೀಯರು :
◾ತುಳಸಿ ಕೈರಂಗಳ
MOB : 9480288214
◾ಪ್ರಸನ್ನ ಐವರ್ನಾಡು
MOB : 9449331609
◾ಝುಬೈರ್ ಖಾನ್ ಕುಡ್ಲ
MOB : 6363417394
◾ಶ್ರೀಮತಿ ಜಯಶ್ರೀ
MOB : 94804 87241
◾ಅನಿಲ್ ಕುಮಾರ್ ಎಚ್. ಪಿ.
MOB : 9964912411
◾ಪ್ರಕಾಶ್ ವಿಟ್ಲ
MOB : 9901325219
◾ಜಗದೀಶ ಪಾಟೀಲ
MOB : 9901502224
◾ಬಾಲಕೃಷ್ಣ ಶೆಟ್ಟಿ
MOB : 9902196309
ಸಹಕಾರ : ಮಕ್ಕಳ ಜಗಲಿ ಬಳಗ ಮತ್ತು ಕರ್ನಾಟಕ ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘ, ಬೆಂಗಳೂರು ಹಾಗೂ ದ. ಕ. ಜಿಲ್ಲಾ ಘಟಕ
ಇದು ನಿಮ್ಮ ಮನೆಯ
ಮಕ್ಕಳ ಜಗಲಿ
www.makkalajagali.com
ಕೊರೋನ ಸಮಯದ ಸಂಧಿಗ್ಧತೆಯು ನಮಗೆ ಅನೇಕ ಪಾಠಗಳನ್ನು ಕಲಿಸಿದೆ. ನಮ್ಮ ನಿತ್ಯದ ಚಟುವಟಿಕೆಗಳಲ್ಲಿ ಅನೇಕ ಬದಲಾವಣೆಗಳಾಗಿವೆ. ಒಟ್ಟಾಗಿ ಹೇಳುವುದಾದರೆ ಹೊಸತೊಂದು ಹುಡುಕಲು ಅಥವಾ ಪರ್ಯಾಯವಾಗಿ ಶೋಧಿಸಲು ಕಾರಣವಾಗಿದೆ.
ಮಕ್ಕಳ ಶೈಕ್ಷಣಿಕ ವ್ಯವಸ್ಥೆಯಲ್ಲಿ ಏರು ಪೇರುಗಳಾಗಿ ಡಿಜಿಟಲ್ ಪದ್ಧತಿ ಸಾಧಕ ಬಾಧಕಗಳ ನಡುವೆಯೇ ಪಾಠ ಬೋಧನೆಗಳನ್ನು ನಡೆಸಬೇಕಾದ ಅನಿವಾರ್ಯತೆ ಎದುರಾದಂತಹ ಸಂದರ್ಭದಲ್ಲಿ ಮಕ್ಕಳು ನಿತ್ಯ ಕಲಿಕಾ ಚಟುವಟಿಕೆಯಿಂದ ಇರಬೇಕಾದುದನ್ನು ಮನಗಂಡು ಕಂಡುಕೊಂಡ ಫಲವೇ ಮಕ್ಕಳ ಜಗಲಿ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸರಕಾರಿ ಪ್ರೌಢ ಶಾಲೆ ಮಂಚಿ ಕೊಳ್ನಾಡು, ಈ ಗ್ರಾಮೀಣ ಭಾಗದ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳನ್ನು ಕ್ರಿಯಾಶೀಲರನ್ನಾಗಿಸುವ ಯೋಜನೆಯನ್ನು ರೂಪಿಸಲಾಯಿತು. ವಿವಿಧ ಸ್ಪರ್ಧೆಗಳ ಮೂಲಕ ಹಾಗೂ ವೀಕೆಂಡ್ ಟಾಸ್ಕ್ ಅನ್ನುವ ವೈವಿಧ್ಯ ಚಟುವಟಿಕೆಯ ಮೂಲಕ ಮಕ್ಕಳು ನಿರಂತರವಾಗಿ ಭಾಗವಹಿಸುವುದನ್ನು ಗಮನಿಸಿಕೊಳ್ಳಲಾಯಿತು. ಮಕ್ಕಳ ಆಸಕ್ತಿ ಕುತೂಹಲಗಳನ್ನು ಗಮನಿಸಿ ಒಂದು ಹೆಜ್ಜೆ ಮುಂದುವರಿದಂತೆ ಮಕ್ಕಳ ಪತ್ರಿಕೆಯನ್ನು ನಡೆಸುವ ಚಿಂತನೆ ಆರಂಭವಾಯಿತು. ಮಕ್ಕಳ ಸೃಜನಶೀಲ ಅಭಿವ್ಯಕ್ತಿಗಳಿಗೆ ಪೂರಕವಾಗುವಂತೆ ಮಕ್ಕಳ ಜಗಲಿ ಪತ್ರಿಕೆಯನ್ನು ಆರಂಭಿಸುವ ಎಲ್ಲಾ ನಿರ್ಧಾರಗಳು ಸರಿಯಾದ ದಿಕ್ಕಿನಲ್ಲೇ ಸಾಗಿತು.
ಮಕ್ಕಳ ಜಗಲಿ ಇದು ಮಕ್ಕಳಿಗಾಗಿ ಮೀಸಲಾದ ಇ-ಪತ್ರಿಕೆ. ಮಕ್ಕಳ ಮನಸ್ಸಿನ ಭಾವನೆಗಳನ್ನು ವೈವಿಧ್ಯ ಪ್ರಾಕಾರಗಳಲ್ಲಿ ಪ್ರಕಟ ಪಡಿಸಲು ಇರುವಂತಹ ವೇದಿಕೆ. ಮಕ್ಕಳ ಸ್ವರಚಿತ ಕಥೆ, ಲೇಖನ, ಕವನ, ಆರ್ಟ್ ಮತ್ತು ಕ್ರಾಪ್ಟ್ ಹೀಗೆ ಹಲವಾರು ಮಕ್ಕಳ ಸೃಜನಾತ್ಮಕ ಸಾಹಿತ್ಯ ಮತ್ತು ಕಲಾ ಚಟುವಟಿಕೆಗಳಿಗೆ ಪ್ರೇರಣೆ ನೀಡಲು ಸಹಕಾರಿಯಾಗಬಲ್ಲುದು.
ಹಳೆ ಶೈಲಿ ಮನೆಗಳಲ್ಲಿ ಹೆಚ್ಚಾಗಿ ಮನೆ ಮುಂದೆ ಜಗಲಿ ಇರುತ್ತಿತ್ತು. ಮನೆಮಕ್ಕಳೆಲ್ಲಾ ಜಗಲಿ ಮೇಲೆ ಕುಳಿತು ಬರೆಯುವುದು, ಓದುವುದು, ಹಾಡುವುದು, ರಂಗೋಲಿ ಬಿಡಿಸುವುದು, ಕಲ್ಲಾಟವಾಡುವುದು ಹೀಗೆ ಹಲವು ಚಟುವಟಿಕೆಗಳಿಗೆ ಅದುವೇ ವೇದಿಕೆ. ನನ್ನಂತಹ ಅನೇಕರಿಗೆ ಜೀವನದ ಹಲವು ಮೈಲುಗಲ್ಲುಗಳನ್ನು ಯಶಸ್ವಿಯಾಗಿ ದಾಟಲು ಮನೆ ಜಗಲಿ ಪ್ರೇರಣೆ ನೀಡಿದೆ. ಜಗಲಿ ಮಾಯವಾಗಬಾರದು, ಅದನ್ನು ಮತ್ತೆ ಕಟ್ಟಬೇಕೆಂದು ಕನಸು.
ಮಂಚಿ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುಶೀಲ ವಿಟ್ಲ, ವಿಜ್ಞಾನ ಶಿಕ್ಷಕರಾದ ಶ್ರೀ ವಿ. ಶ್ರೀರಾಮಮೂರ್ತಿ, ಸಹೋದ್ಯೋಗಿ ಬಂಧುಗಳು, ಶಾಲಾ ಎಸ್.ಡಿ.ಎಂ.ಸಿ, ಶಾಲಾ ಮಕ್ಕಳು, ಜಗಲಿಯ ಕನಸಿಗೆ ಸಾಕ್ಷಿಗಳು. ಸೃಜನಶೀಲ ಚಿಂತನೆಗಳಿಗೆ ರೂಪ ಕೊಟ್ಟಂತಹ ಶಿಕ್ಷಣ ಚಿಂತಕ ಗೋಪಾಡ್ಕರ್, ಸ್ಪೂರ್ತಿಯಾಗಿರುವ ರಂಗ ನಿರ್ದೇಶಕ ಜೀವನ್ ರಾಮ್ ಸುಳ್ಯ, ಪ್ರೇರಣೆಯನ್ನು ನೀಡುತ್ತಾ ಬಂದಿರುವ ಕಲಾವಿದ, ಸಾಹಿತಿ ದಿನೇಶ ಹೊಳ್ಳ, ತಾಂತ್ರಿಕ ಸಹಕಾರ ನೀಡುತ್ತಿರುವ ಪತ್ರಕರ್ತ ಮಿತ್ರರಾದ ವಿನೋದ್ ಪುದು, ದ.ಕ. ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರಾದ ಶ್ರೀ ಮಲ್ಲೇಸ್ವಾಮಿ, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಯಾದ ಶ್ರೀ ಜ್ಞಾನೇಶ್, ಮಾರ್ಗದರ್ಶಕರಾದ ಶ್ರೀ ವೈ ಶಿವರಾಮಯ್ಯ, ಶಿವಪ್ರಕಾಶ ಎನ್, ಮಕ್ಕಳ ಜಗಲಿಯಲ್ಲಿ ಬರೆಯುತ್ತಿರುವ ಎಲ್ಲಾ ಅಂಕಣಕಾರರು ಹಾಗೂ ನಿರಂತರವಾಗಿ ಪಾಲ್ಗೊಳ್ಳುವ ಮಕ್ಕಳು, ಓದುಗರು ಇವರೆಲ್ಲ ಕನಸಿನ ಜಗಲಿಯ ಪಾಲುದಾರರು.
ಮಕ್ಕಳ ಜಗಲಿಯನ್ನು ಎಲ್ಲರ ಮನ ಮನೆಗಳಿಗೆ ತಲುಪಿಸಬೇಕೆಂದು ನಮ್ಮ ಗುರಿಯಾಗಿದೆ. ಈ ಸಂದರ್ಭದಲ್ಲಿ ಶೀರ್ಷಿಕೆ ಗೀತೆಯನ್ನು ನಿರ್ಮಿಸಿ ಪ್ರಸಾರ ಮಾಡುವ ಆಲೋಚನೆ ಮೂಡಿತು. ಸಾಹಿತಿ ಚಂದ್ರಶೇಖರ ಪಾತೂರು ಬರೆದ ಸಾಹಿತ್ಯಕ್ಕೆ ಮಂಗಳೂರಿನ ಕೋಣಾಜೆ ವಿಶ್ವ ಮಂಗಳ ಪ್ರೌಢ ಶಾಲೆಯ ೯ನೇ ತರಗತಿ ವಿದ್ಯಾರ್ಥಿನಿ ಶ್ರೀರಕ್ಷಾ ಎಸ್ ಎಚ್ ಪೂಜಾರಿ ಅದ್ಭುತವಾಗಿ ಹಾಡಿದಳು. ಪುತ್ತೂರಿನ ಮಕ್ಕಳ ಮಂಟಪದ ಅನೇಕ ಪುಟಾಣಿಗಳು ಈ ದೃಶ್ಯ ಸಂಯೋಜನೆಯಲ್ಲಿ ಹಾಡಿ ನಲಿದರು. ಮಕ್ಕಳ ಜಗಲಿಯ ಹಾಡು ಎಲ್ಲರನ್ನು ತಲುಪುವ ಮೂಲಕ ಜಗಲಿಗೆ ಬರೆಯುವ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಿತು.
ಮಕ್ಕಳ ಜಗಲಿ ಅದು ನಿಮ್ಮ ಮನೆಯ ಮಕ್ಕಳ ಜಗಲಿ. ಇಲ್ಲಿ ಸಣ್ಣ ಮಕ್ಕಳಿಂದ ಪಿ.ಯು.ಸಿವರೇಗೆ ಕಲಿಯುತ್ತಿರುವ ಮಕ್ಕಳಿಗೆ ಅವಕಾಶ ನೀಡುತ್ತಿದ್ದೇವೆ. ಎಲ್ಲಾ ಮನೆಯ ಮಕ್ಕಳೂ ಶ್ರೇಷ್ಠರೇ. ಅವರಿಗೆ ಅವಕಾಶ ಕೊಡಬೇಕಾಧದ್ದು ಹಿರಿಯರಾದ ನಮ್ಮ ಕರ್ತವ್ಯ. ಆ ಮೂಲಕ ಪ್ರತಿಯೊಂದು ಮನೆಯ ಮಕ್ಕಳನ್ನು ಜಗಲಿಯಲ್ಲಿ ಸ್ವತಂತ್ರವಾಗಿ ಬೆಳೆಯಲು ಬಿಡಿ ಎಂದು ನಮ್ಮ ಬೇಡಿಕೆ.
2020ನೇಯ ನವೆಂಬರ್ 14ರ ಮಕ್ಕಳದಿನಾಚರಣೆಯಂದು ಉದ್ಘಾಟನೆಗೊಂಡು ಮಕ್ಕಳ ಪ್ರತಿಭಾ ವೇದಿಕೆಯಾಗಿ ಗುರುತಿಸಿಕೊಂಡಿತು. ದ.ಕ. ಜಿಲ್ಲೆಯಿಂದ ವಿಸ್ತಾರಗೊಂಡು ರಾಜ್ಯದ ವಿವಿಧ ಜಿಲ್ಲೆಗಳಿಗೂ ವ್ಯಾಪಿಸಿದೆ. ಹೊರ ರಾಷ್ಟದಲ್ಲಿ ವಾಸವಿರುವ ಭಾರತೀಯ ವಿದ್ಯಾರ್ಥಿಗಳೂ ಮಕ್ಕಳ ಜಗಲಿಗೆ ಬೆರೆಯುತ್ತಿದ್ದಾರೆ. ಇದೊಂದು ಒಳ್ಳೆಯ ಬೆಳವಣಿಗೆ. ಪ್ರತಿಭಾನ್ವಿತ ಮಕ್ಕಳು ಬೆಳೆಯಬೇಕೆಂದು ನಮ್ಮ ಉದ್ದೇಶ. ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಪ್ರೋತ್ಸಾಹದ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳಿಗೆ ಮಕ್ಕಳ ಜಗಲಿ ಸದಾ ಸಿದ್ದವಾಗಿದೆ.
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
Mob : 9844820979
******************************************