ಪ್ರೀತಿಯ ಪುಸ್ತಕ : ಸಂಚಿಕೆ - 147
Friday, January 24, 2025
Edit
ಪ್ರೀತಿಯ ಪುಸ್ತಕ
ಸಂಚಿಕೆ - 147
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಬರುವುದೆಲ್ಲಿಂದ ಎದ್ದು?
ಪ್ರೀತಿಯ ಮಕ್ಕಳೇ.... ಗುಡು ಗುಡು ಗುಡುಗು.. ಅಬ್ಬರದ ಸದ್ದು ಮಾಡಿಕೊಂಡು ಬರುವುದಲ್ಲಾ! ಅದು ಎಲ್ಲಿಂದ ಬರುತ್ತದೆ ಅಂತ ಗೊತ್ತಾ? ಈ ಪ್ರಶ್ನೆ ನಿಮಗೂ ಬಂದೇ ಬಂದಿರುತ್ತದೆ. ಇಲ್ಲಿ ಒಬ್ಬ ಪುಟ್ಟ ತಮ್ಮನಿಗೆ ಇದೊಂದು ಪ್ರಶ್ನೆ. ದಪ್ಪ ದಪ್ಪ ಪುಸ್ತಕ ಓದುವ ಅಕ್ಕನಿಗೆ ಉತ್ತರ ಗೊತ್ತಿರುತ್ತದೆ ಅಂತ ಅವನ ಅನಿಸಿಕೆ. ಆದರೂ ತನ್ನ ಪ್ರಶ್ನೆಗೆ ತಾನೇ ಉತ್ತರ ಹುಡುಕಿಕೊಳ್ಳಬೇಕು ಎಂಬ ಹಂಬಲ. ಏನೇನೋ ಊಹಿಸುತ್ತಾನೆ.. ದೈತ್ಯ ರಾಕ್ಷಸ ಇರಬಹುದಾ? ಮೋಟಾರ್ ಬೈಕ್ ಓಡಿಸುತ್ತಿರಬಹುದಾ? ಆದರೆ ಅಕ್ಕ ಹೇಳುತ್ತಾಳೆ ಪುಸ್ತಕದಲ್ಲಿ ಏನು ಬರೆದಿದೆ ಅಂತ. ಬಿಸಿ ಗಾಳಿಯ ಸ್ಪೋಟ ಹೇಗೆ ಉಂಟಾಗುತ್ತದೆ, ಅದನ್ನೇ ಗುಡುಗು ಅನ್ನುತ್ತಾರೆ ಎಂದು ವಿವರಿಸುತ್ತಾಳೆ. ಇದರಲ್ಲಿ ನೀವು ಮಾಡಬಹುದಾದ ಪ್ರಯೋಗವನ್ನೂ ವಿವರಿಸಿದ್ದಾರೆ. ಆಕರ್ಷಕ ಚಿತ್ರಗಳೂ ಇವೆ.
ಲೇಖಕರು: ರೂಪಾ ಪೈ
ಚಿತ್ರಗಳು: ಗ್ರೆಸ್ಟ್ರೋಕ್
ಅನುವಾದ: ವಸಂತ ಕಲ್ ಬಾಗಲ್
ಪ್ರಕಾಶಕರು: ಪ್ರಥಮ್ ಬುಕ್ಸ್
ಬೆಲೆ: ರೂ.90/-
ಪ್ರಥಮ್ ಪ್ರಕಾರ ಇದು 3ನೇ ಹಂತದ ಪುಸ್ತಕ. ಸ್ವಇಚ್ಛೆಯಿಂದ ಓದುವ ಮಕ್ಕಳಿಗಾಗಿ; ಇನ್ನೊಬ್ಬರ ಸಹಾಯ ಇಲ್ಲದೆ ತಾವೇ ಓದುವ ಮಕ್ಕಳಿಗಾಗಿ; 3-5 ನೇ ತರಗತಿಯ ಮಕ್ಕಳು ಓದಬಹುದು.
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: 080 – 42052574/41159009; www.prathambooks.org; www.storyweaver.org.in.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************