ಜಗಲಿ ಕಟ್ಟೆ : ಸಂಚಿಕೆ - 66
Monday, November 4, 2024
Edit
ಜಗಲಿ ಕಟ್ಟೆ : ಸಂಚಿಕೆ - 66
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
ಮಕ್ಕಳ ಜಗಲಿ
www.makkalajagali.com
ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ
'ಮಕ್ಕಳ ಜಗಲಿ' ನಾಲ್ಕರ ಹೊಸ್ತಿಲಿಗೆ ಕಾಲಿರಿಸುತ್ತದೆ. ಹೌದು ಬಂಧುಗಳೇ ಕೊರೊನಾ ಸಂಕಷ್ಟ ಕಾಲದಲ್ಲಿ ವಿದ್ಯಾರ್ಥಿಗಳ ಸೃಜನಾತ್ಮಕ ಚಟುವಟಿಕೆಗಳಿಗಾಗಿ ಬೆಳಕಿಗೆ ಬಂದ 'ಮಕ್ಕಳ ಜಗಲಿ' ಡಿಜಿಟಲ್ ಪತ್ರಿಕೆ ನವೆಂಬರ್ - 14 , 2024 ರಂದು ನಾಲ್ಕನೇ ವರ್ಷದ ಸಂಭ್ರಮವನ್ನು ಆಚರಿಸಲಿದೆ. ಮಕ್ಕಳ ಜಗಲಿಯ ಮೊದಲ ಹುಟ್ಟುಹಬ್ಬಕ್ಕೆ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಮಾತ್ರ ಹಮ್ಮಿಕೊಂಡಿದ್ದೆವು. ಎರಡನೇ ವರ್ಷದ ಹುಟ್ಟುಹಬ್ಬಕ್ಕೆ ರಾಜ್ಯಮಟ್ಟದ ಕಥೆ ಮತ್ತು ಕವನ ಸ್ಪರ್ಧೆಯನ್ನು ಆಯೋಜನೆ ಮಾಡಿದೆವು. ಆದರೆ ಚಿತ್ರಕಲಾ ಸ್ಪರ್ಧೆಯನ್ನು ಕೈ ಬಿಡಬಾರದೆಂದು ಯೋಚನೆ ಮಾಡಿ ಪ್ರತಿ ವರ್ಷ ಎರಡೂ ಸ್ಪರ್ಧೆಗಳನ್ನು ನಿರಂತರವಾಗಿ ಆಯೋಜನೆ ಮಾಡುತ್ತಿದ್ದೇವೆ.
ಈ ಸಾಲಿಗೆ 3ನೇ ವರ್ಷದ - ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆ - 2024 ಆಯೋಜಿಸಲಾಗಿದೆ. ಸ್ಪರ್ಧಾ ವಿಜೇತರಿಗೆ "ಮಕ್ಕಳ ಜಗಲಿ - ಕವನ ಸಿರಿ ಮತ್ತು ಕಥಾ ಸಿರಿ - ಪ್ರಶಸ್ತಿ -- 2024" ಪ್ರದಾನ ಮಾಡುತ್ತೇವೆ. ಈ ಸ್ಪರ್ಧೆಯ ಫಲಿತಾಂಶದ ನಂತರ 4ನೇ ವರ್ಷದ - ರಾಜ್ಯಮಟ್ಟದ "ಮಕ್ಕಳ ಜಗಲಿ ಕಲಾ ಪ್ರಶಸ್ತಿ -2024" ಚಿತ್ರಕಲಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಿದ್ದೇವೆ. ಜನವರಿ 26 ಕ್ಕೆ ಚಿತ್ರಕಲಾ ಸ್ಪರ್ಧೆಯ ಫಲಿತಾಂಶ ನೀಡಲಿದ್ದೇವೆ.
ಮಕ್ಕಳ ಜಗಲಿಯ ಒಟ್ಟು ಬೆಳವಣಿಗೆಯ ಹಿಂದೆ ಮಕ್ಕಳ ಜಗಲಿಯ ಬಳಗದ ಬೆಂಬಲವಿದೆ. ಮಕ್ಕಳ ಜಗಲಿಯ ಹಿತೈಷಿಗಳ ಪಾತ್ರವಿದೆ. ನಿರಂತರ ಪ್ರೋತ್ಸಾಹಿಸುತ್ತಾ ಬಂದಿರುವ ನಿಮ್ಮೆಲ್ಲರ ಪ್ರೀತಿಯ ಕಾಳಜಿ ಇದೆ. ಹಾಗಾಗಿ ಇದು ನಿಮ್ಮ ಮನೆಯ "ಮಕ್ಕಳ ಜಗಲಿ". ಇದು ಪ್ರಮುಖವಾಗಿ ಕಲೆ ಮತ್ತು ಸಾಹಿತ್ಯದ ವಿಚಾರದಲ್ಲಿ ಪ್ರತಿಯೊಂದು ಮಗುವನ್ನು ಪ್ರೋತ್ಸಾಹಿಸುವ ಕಾರ್ಯದಲ್ಲಿ ನಿರತವಾಗಿದೆ.
ಆಧುನಿಕ ತಂತ್ರಜ್ಞಾನದ ಪ್ರಭಾವ, ಈ ಸ್ಪರ್ಧಾತ್ಮಕ ಕಾಲಘಟ್ಟದಲ್ಲಿ ಪಠ್ಯ ಕಲಿಕೆಯ ಒತ್ತಡ, ಹೀಗೆ ಹಲವಾರು ಕ್ಲಿಷ್ಟತೆಯ ನಡುವೆ ಮಕ್ಕಳ ನೈತಿಕ ಮೌಲ್ಯ ಕುಸಿಯುತ್ತಿರುವ ಎಲ್ಲಾ ದೃಷ್ಟಾಂತಗಳನ್ನು ನಾವು ಕಾಣುತ್ತಿದ್ದೇವೆ. ಸಂಸ್ಕಾರಯುತವಾದ ನಡವಳಿಕೆಗಳು, ಭಾವನೆಗಳನ್ನು ಮಕ್ಕಳಲ್ಲಿ ಮೂಡಿಸುವ ಅನಿವಾರ್ಯತೆ ಇಂದಿನ ಅಗತ್ಯತೆಯಾಗಿದೆ. ಮಕ್ಕಳಲ್ಲಿ ಸದಭಿರುಚಿಯ ಹವ್ಯಾಸಗಳನ್ನು ಮೂಡಿಸಲು ಮಕ್ಕಳ ಜಗಲಿ ಸದಾ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ. ಆ ಮೂಲಕ ಅಂತರ್ಗತ ಮಕ್ಕಳ ಪ್ರತಿಭೆಯನ್ನು ಗುರುತಿಸಲು ಮಕ್ಕಳ ಜಗಲಿ ಒಂದು ವೇದಿಕೆಯಾಗಿದೆ.
3ನೇ ವರ್ಷದ - ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆ - 2024 ರ ಫಲಿತಾಂಶವನ್ನು ನವೆಂಬರ್ 14 ರಂದು ಪ್ರಕಟ ಮಾಡಲಿದ್ದೇವೆ. ಈ ಸ್ಪರ್ಧೆಗೆ ರಾಜ್ಯದ ಎಲ್ಲಾ ಭಾಗಗಳಿಂದ ಸಾಕಷ್ಟು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಈ ಮಧ್ಯೆ ಹಲವಾರು ರಜಾ ದಿನಗಳು ಇದ್ದುದರಿಂದ ನವೆಂಬರ್ -7 ತಾರೀಕಿನರವರೆಗೆ ಕಥೆ ಕವನಗಳನ್ನು ಕಳುಹಿಸಿಕೊಡಲು ಅವಕಾಶ ನೀಡಲಾಗಿದೆ. ಎಲ್ಲರೂ ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.
ನಿಮ್ಮೆಲ್ಲರ ಪ್ರೀತಿಯ ಸಹಕಾರ ಸದಾ ಇರಲಿ ವಂದನೆಗಳು..
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
Mob : 9844820979
******************************************
ಕಳೆದ ಸಂಚಿಕೆಯ ಜಗಲಿಕಟ್ಟೆ - 65 ಅಂಕಣದಲ್ಲಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ ..... ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಕಳೆದ ಮೂರು ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....
ಎಲ್ಲರಿಗೂ ನಮಸ್ಕಾರಗಳು,
ಹಬ್ಬವನ್ನು ಎಲ್ಲರೂ ಪರಸ್ಪರ ಸೇರಿಕೊಂಡು ಸಂತೋಷದಿಂದ ಆಚರಿಸುವಾಗ ಆಗುವ ಅನುಭವ ಆನಂದ ಅದ್ಭುತ. ಈ ಸಲದ ಸಂಚಿಕೆಯಲ್ಲಿ ಶಿಕ್ಷಣಾಧಿಕಾರಿ ಜ್ಞಾನೇಶ್ ಸರ್ ರವರಿಂದ ನವರಾತ್ರಿ ಹಬ್ಬ ಆಯುಧ ಪೂಜೆಯನ್ನು ಆಚರಿಸಿದ ಕುರಿತಾದ ಸುಂದರ ಲೇಖನ.
ಪ್ರಸ್ತುತ ಸಂಚಿಕೆಯಲ್ಲಿಸಾಹಿತ್ಯದ ನಿಜವಾದ ಆಶಯಗಳನ್ನು ಸರಳವಾಗಿ ಮನಮುಟ್ಟುವಂತೆ ವಿವರಿಸಿದ್ದಾರೆ ರಮೇಶ್ ಸರ್ ರವರು.
ಸಸ್ಯ ಹಾರ್ಮೋನ್ ಗಳಾದ ಆಕ್ಸಿನ್ ಗಳು ಸಸ್ಯಗಳು ಉದ್ದವಾಗಿ ಬೆಳೆಯಲು ಹೇಗೆ ಕಾರಣವಾಗುತ್ತವೆ ಅನ್ನುವುದನ್ನು ದಿವಾಕರ ಸರ್ ರವರು ತಮ್ಮ ಸಂಚಿಕೆಯಲ್ಲಿ ಸೊಗಸಾಗಿ ವಿವರಿಸಿದ್ದಾರೆ. ತಮ್ಮ 50 ನೇ ಸಂಚಿಕೆಗೆ ಅಭಿನಂದನೆಗಳೊಂದಿಗೆ ಹೃತ್ಪೂರ್ವಕ ಧನ್ಯವಾದಗಳು.
ಗರ್ಗ ಗಿಡದ ಕುರಿತಾದ ವಿವರವಾದ ಮಾಹಿತಿ ವಿಜಯಾ ಮೇಡಂರವರಿಂದ ಈ ಸಲದ ಸಂಚಿಕೆಯಲ್ಲಿ. ಈ ಗಿಡವು ಶ್ರಾದ್ಧ ಮುಂತಾದ ಅಪರಕ್ರಿಯೆ ಸಂಸ್ಕಾರಕ್ಕೆ ಅತೀ ಅವಶ್ಯವಾಗಿ ಬೇಕಾಗುವ ಒಂದು ಸಸ್ಯ. ಮಾಹಿತಿಗಾಗಿ ಧನ್ಯವಾದಗಳು ಮೇಡಂ.
ಸಾಮರಸ್ಯ ಬೆಸೆಯುವ ಶ್ರೀಕ್ಷೇತ್ರ ಬಪ್ಪನಾಡಿನ ಕುರಿತಾದ ವಿವರವಾದ ಲೇಖನ ರಮೇಶ ಉಪ್ಪಂದರವರಿಂದ ತಮ್ಮ ಪಯಣ ಸಂಚಿಕೆಯಲ್ಲಿ ಉತ್ತಮವಾಗಿ ಮೂಡಿ ಬಂದಿದೆ.
ವಾಣಿಯಕ್ಕನವರ 'ಬಟ್ಟೆ ಒಗೆಯಲೊಂದು ದಿನ' ಪುಸ್ತಕ ಪರಿಚಯ ಚೆನ್ನಾಗಿತ್ತು.
ರಮೇಶ ಉಪ್ಪಂದರವರ ಪದದಂಗಳ ಸಂಚಿಕೆ ಸೊಗಸಾಗಿತ್ತು.
ಮಕ್ಕಳ ಕವನ ಸಂಚಿಕೆಯಲ್ಲಿ ಎಲ್ಲ ಮಕ್ಕಳು ಚೆಂದದ ಕವನಗಳನ್ನು ರಚಿಸಿದ್ದಾರೆ. ಮಕ್ಕಳಿಗೆಲ್ಲರಿಗೂ ಅಭಿನಂದನೆಗಳು.
ಕೊನೆಯದಾಗಿ ಎಲ್ಲರಿಗೂ ಮನದಾಳದ ಕೃತಜ್ಞತೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************
ನಮಸ್ತೇ,
ವಿತರ್ಕ ಭಾವಗಳು ನಮ್ಮಲ್ಲಿ ಮೂಡಿದಾಗ ಅವನ್ನು ಪ್ರತಿಪಕ್ಷ ಭಾವದಿಂದ ದೂರಗೊಳಿಸುವ ವಿಧಾನವನ್ನು ಶಿಕ್ಷಣಾಧಿಕಾರಿ ಶ್ರೀ ಜ್ಞಾನೇಶ್ ಸರ್ ರವರು ತಮ್ಮ ಸಂಚಿಕೆಯಲ್ಲಿ ಸೊಗಸಾಗಿ ತಿಳಿಸಿದ್ದಾರೆ.
ರಮೇಶ್ ಸರ್ ರವರಿಂದ ಮಾನವನಲ್ಲಿ ಒತ್ತಡ ಉಂಟಾಗಲು ಕಾರಣಗಳು ಅದರಿಂದಾಗುವ ಪರಿಣಾಮಗಳ ಕುರಿತಾದ ವಿವರಣಾತ್ಮಕ ಲೇಖನ ತುಂಬಾ ಚೆನ್ನಾಗಿತ್ತು.
ಸಸ್ಯಗಳಲ್ಲಿ ಉಸಿರಾಟ ಪ್ರಕ್ರಿಯೆಯ ಕುರಿತಾಗಿ ವಿವರವಾದ ಮಾಹಿತಿ ದಿವಾಕರ ಸರ್ ರವರಿಂದ ಈ ಸಲದ ವೈಜ್ಞಾನಿಕ ಸಂಚಿಕೆಯಲ್ಲಿ ಉತ್ತಮವಾಗಿ ಮೂಡಿ ಬಂದಿದೆ.
ತುರಿಕೆ ಗಿಡಗಳನ್ನು ಹೆಚ್ಚಾಗಿ ಕಳೆಗಿಡ ಗಳೆಂದು ನಾಶಪಡಿಸಲಾಗುತ್ತದೆ. ಅದರಿಂದಾಗುವ ತುರಿಕೆ ತಾತ್ಕಾಲಿಕ ಆದರೆ ಅದರ ಲಾಭ ಅಪಾರ ಅನ್ನುವ ವಿಚಾರ ವಿಜಯಾ ಮೇಡಂರವರ ಈ ಸಂಚಿಕೆಯಿಂದ ತಿಳಿಯಿತು.
ಕಾವೇರಿ ನದಿಯ ಉಗಮಸ್ಥಾನ
ಭಾಗ ಮಂಡಲ ಕ್ಷೇತ್ರದ ಕುರಿತಾದ ವಿವರವಾದ ಮಾಹಿತಿ ರಮೇಶ್ ಉಪ್ಪುಂದರವರಿಂದ ಈ ಸಲದ ಪಯಣ ಸಂಚಿಕೆಯಲ್ಲಿ ಸೊಗಸಾಗಿ ಮೂಡಿ ಬಂದಿದೆ.
ವಾಣಿಯಕ್ಕನವರಿಂದ ಬೇಸಿಗೆ ರಜೆಯ ಮಜಾ ಎನ್ನುವ ಪುಸ್ತಕದ ಪರಿಚಯ ಚೆನ್ನಾಗಿತ್ತು.
ರಮೇಶ್ ಉಪ್ಪುಂದರವರ ಪದದಂಗಳ ಸಂಚಿಕೆ ಚೆನ್ನಾಗಿ ಮೂಡಿ ಬಂದಿದೆ.
ಎಲ್ಲರಿಗೂ ಮಾನದಾಳದ ಕೃತಜ್ಞತೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************
ಎಲ್ಲರಿಗೂ ನಮಸ್ಕಾರಗಳು,
ಅಹಿಂಸೆ, ಸತ್ಯ ಮತ್ತು ಆಸ್ತೇಯದ ಕುರಿತಾಗಿ ಶಿಕ್ಷಣಾಧಿಕಾರಿ ಜ್ಞಾನೇಶ್ ಸರ್ ರವರು ತಮ್ಮ ಈ ಸಲದ ಸಂಚಿಕೆಯಲ್ಲಿ ವಿವರಣಾತ್ಮಕವಾಗಿ ಸೊಗಸಾಗಿ ತಿಳಿಸಿದ್ದಾರೆ.
ಅದೃಷ್ಟದಿಂದ ನಮಗೆ ಎಲ್ಲವೂ ಸಿಗುತ್ತದೆ ಎಂದು ಭಾವಿಸಿ ಕೆಲಸ ನಿರ್ವಹಿಸಿದರೆ ಅದಕ್ಕಿಂತ ಮೂರ್ಖತನ ಬೇರಿಲ್ಲ. ಅದೃಷ್ಟದ ಕುರಿತಾದ ಸುಂದರ ಲೇಖನ ರಮೇಶ್ ಬಾಯಾರ್ ರವರಿಂದ.
ಸಸ್ಯಗಳಲ್ಲಿ ಜಲನಿಯಂತ್ರಣ ಭಾಷ್ಪವಿಸರ್ಜನೆಯ ಕುರಿತಾಗಿ ವಿವರವಾದ ಅರ್ಥ ಪೂರ್ಣ ಲೇಖನ ಈ ಸಲದ ವೈಜ್ಞಾನಿಕ ಸಂಚಿಕೆಯಲ್ಲಿ ದಿವಾಕರ ಸರ್ ರವರಿಂದ. ಉತ್ತಮ ಸಂಚಿಕೆ.
ವಿಜಯಾ ಮೇಡಂರವರ ಈ ಸಲದ ಸಂಚಿಕೆಯಲ್ಲಿ ಸುಂದರವಾದ ಹೂಗಳನ್ನು ಬಿಡುವ ಅನೆಗೋರಂಟಿ ಸಸ್ಯದ ಪರಿಚಯ ತುಂಬಾ ಚೆನ್ನಾಗಿ ಮೂಡಿ ಬಂದಿದೆ.
ರಮೇಶ್ ಉಪ್ಪುಂದರವರ ಪಯಣ ಸಂಚಿಕೆಯಲ್ಲಿ ಕವಿ ಕುವೆಂಪುರವರ ಕವಿಶೈಲದ ಕುರಿತಾದ ಸುಂದರ ಪರಿಚಯ.
ಕನ್ನಡ ರಾಜ್ಯೋತ್ಸವದ ಕುರಿತಾದ ಮಕ್ಕಳ ಕವನಗಳಲ್ಲಿ ಎಲ್ಲಾ ಕವನಗಳು ಚೆನ್ನಾಗಿವೆ. ಮಕ್ಕಳೆಲ್ಲರಿಗೂ ಅಭಿನಂದನೆಗಳು.
ಉಮಾ ಮತ್ತು ಉಪ್ಪಿಟ್ಟು ಎನ್ನುವ ಮಕ್ಕಳಿಗಾಗಿರುವ ಸುಂದರ ಪುಸ್ತಕದ ಪರಿಚಯ ವಾಣಿಯಕ್ಕ ರವರಿಂದ.
ಶಿಕ್ಷಕರ ಡೈರಿಯಲ್ಲಿ ರಮ್ಯಾ ಮೇಡಂ ರವರಿಂದ ಮುಗ್ಧ ಮನಸ್ಸಿನ ಮಕ್ಕಳಾದರೂ ಪ್ರೌಢಿಮೆಯನ್ನು ಮೆರೆಯುವ ರೀತಿಯ ಕುರಿತಾದ ಅನುಭವದ ಬರಹ ಸೊಗಸಾಗಿತ್ತು.
ರಮೇಶ್ ಉಪ್ಪುಂದರವರ ಪದಗಳನ್ನು ಜೋಡಿಸುವ ಹಾಗೂ ಹೊಸ ಪದಗಳ ಹುಡುಕಾಟದ ಪದದಂಗಳ ಸಂಚಿಕೆ ಚೆನ್ನಾಗಿತ್ತು.
ಜಗಲಿಯ ಎಲ್ಲರಿಗೂ ದೀಪಾವಳಿಯ ಹಾರ್ಧಿಕ ಶುಭಾಶಯಗಳೊಂದಿಗೆ ಹೃತ್ಪೂರ್ವಕ ನಮನಗಳು.
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************
ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ ಇವರಿಗೆ ಧನ್ಯವಾದಗಳು.
ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
Mob : 9844820979
******************************************