ಪ್ರೀತಿಯ ಪುಸ್ತಕ : ಸಂಚಿಕೆ - 137
Friday, November 15, 2024
Edit
ಪ್ರೀತಿಯ ಪುಸ್ತಕ
ಸಂಚಿಕೆ - 137
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.... ತಾತ್ವಿಕವಾಗಿ ಚಿಂತನೆ ಮಾಡಲು ಕಲಿಸುವ ಒಂದು ಅಪರೂಪದ ಪುಸ್ತಕ ಇದು. ಇದು ಯೋಚನೆ ಮಾಡುವ ಒಂದು ಮಾರ್ಗ. ನಮ್ಮ ಜಗತ್ತಿನ ಕುರಿತು ಯೋಚಿಸುವ ಮತ್ತು ಮನುಷ್ಯರಾಗಿ ನಾವು ಯಾರು ಎಂದು ಅರ್ಥ ಮಾಡಿಕೊಳ್ಳುವ ಒಂದು ಮಾರ್ಗ ಈ ತಾತ್ವಿಕ ಚಿಂತನೆ ಎಂಬುದು. ನಾವು ಕಲಿಯುವ ಉಳಿದ ಎಲ್ಲಾ ವಿಷಯಗಳ ಅಡಿಪಾಯ ತತ್ವಶಾಸ್ತ್ರ. ಪ್ರಾಚೀನ ಕಾಲದಲ್ಲಿ ಮೊತ್ತಮೊದಲು ವಿಕಾಸಗೊಂಡ ಚಿಂತನೆ ಇದು ಎಂದು ಹೇಳುತ್ತಾರೆ. ಇಂಗ್ಲಿಷಿನಲ್ಲಿ ಇದಕ್ಕೆ ಫಿಲಾಸಫಿ ಅಂತ ಹೇಳುತ್ತಾರೆ. ಸತ್ಯ ಸುಳ್ಳುಗಳ ಬಗ್ಗೆ ವಿವೇಚನೆ ಮಾಡುವಾಗಲೂ ನಾವು ತತ್ವಶಾಸ್ತ್ರದ ಬಗ್ಗೆ ನಮಗೇ ಗೊತ್ತಿಲ್ಲದಂತೆ ಮಾತಾಡುತ್ತೇವೆ. ಓದಿ ನೋಡಿ.. ಬದುಕಿಗೆ ತುಂಬಾ ಅಗತ್ಯವಾದ ವಿಚಾರಗಳನ್ನು ಅರ್ಥಮಾಡಿಕೊಳ್ಳಬಹುದು.
ಲೇಖಕರು: ಸುಂದರ್ ಸರುಕೈ
ಚಿತ್ರಗಳು: ಪ್ರಿಯಾ ಕುರಿಯನ್
ಅನುವಾದ: ಮಾಧವ ಚಿಪ್ಪಳಿ
ಪ್ರಕಾಶಕರು: ಅಕ್ಷರ ಪ್ರಕಾಶನ
ಬೆಲೆ: ರೂ.260
7-8 ತರಗತಿಯ ಸ್ವಂತ ಓದುವ ಸಾಮರ್ಥ್ಯ ಇರುವ ಮಕ್ಕಳಿಗೆ ಸೂಕ್ತ. ದೊಡ್ಡವರು ಓದಿ ಹೇಳಿ ಅರ್ಥಮಾಡಿಸುವ ಕೆಲಸ ಕೂಡಾ ಮಾಡಬಹುದು.
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: ಅಕ್ಷರ ಪ್ರಕಾಶನ, ಹೆಗ್ಗೋಡು, ಸಾಗರ, ಅಂತರ್ಜಾಲ ತಾಣದಲ್ಲಿ ಇದು ಲಭ್ಯವಿದೆ www.aksharaprakashana.com
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************