-->
ಜಗಲಿ ಕಟ್ಟೆ : ಸಂಚಿಕೆ - 65

ಜಗಲಿ ಕಟ್ಟೆ : ಸಂಚಿಕೆ - 65

ಜಗಲಿ ಕಟ್ಟೆ : ಸಂಚಿಕೆ - 65
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 


ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ

      ದಸರಾ ರಜೆ ಕಳೆದು ಶಾಲಾರಂಭದ ಹೊತ್ತು. ನವರಾತ್ರಿಯ ಸುಂದರ ಕ್ಷಣಗಳ ನೆನಪುಗಳನ್ನು ಹೊತ್ತು ಶಾಲೆಗೆ ಹೊರಡಲು ತಾವೆಲ್ಲಾ ಸಜ್ಜಾಗಿದ್ದೀರಿ... ಈ ಶೈಕ್ಷಣಿಕ ಸಾಲಿನ ಇನ್ನರ್ಧ ವರ್ಷ ಬಾಕಿ ಉಳಿದಿದೆ. ಇನ್ನಂತೂ ಶಾಲೆಯಲ್ಲಿ ಗಮ್ಮತ್ತೆ ಗಮ್ಮತ್ತು. ಶಾಲಾ ಕ್ರೀಡಾಕೂಟ, ಶಾಲಾ ಪ್ರವಾಸ, ಶಾಲಾ ವಾರ್ಷಿಕೋತ್ಸವ ಹೀಗೆ ಜನವರಿ ತಿಂಗಳು ಬರುವವರೆಗೆ ಖುಷಿಯೋ ಖುಷಿ. ಹೀಗೆ ಶಾಲೆಯಲ್ಲಿ ಖುಷಿ ಪಡುವ ವಿಷಯಗಳನ್ನು ಸಂಭ್ರಮಿಸಿದಾಗ ಶಾಲೆ ಇನ್ನೂ ಆಪ್ತವಾಗುತ್ತದೆ.
        ಜಗಲಿಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ಉತ್ಸಾಹ ಕಂಡಾಗ ನಿಜಕ್ಕೂ ಹೆಮ್ಮೆಯೆನಿಸುತ್ತದೆ. ಬೇರೆ ಬೇರೆ ಕಡೆಗಳಲ್ಲಿ ಸಿಕ್ಕಾಗ ವಿದ್ಯಾರ್ಥಿಗಳು ಪೋಷಕರು ತಾವಾಗಿಯೇ ಬಂದು ಪರಿಚಯಿಸಿದಾಗ ತುಂಬಾ ಖುಷಿಯಾಗುವುದು. ಇತ್ತೀಚೆಗೆ ಸುಳ್ಯ ತಾಲೂಕಿನ ಪಂಜದಲ್ಲಿ ಚಿತ್ರಕಲಾ ಸ್ಪರ್ಧೆಯೊಂದನ್ನು ಆಯೋಜನೆ ಮಾಡಿದ್ದರು. ಅಲ್ಲಿಗೆ ಆಗಮಿಸಿದ್ದ ಅನೇಕ ವಿದ್ಯಾರ್ಥಿಗಳು ಜಗಲಿಯ ಕಾರಣದಿಂದ ಆತ್ಮೀಯರಾದವರು. ಹೀಗೆ ಜಗಲಿ ಭಾವನಾತ್ಮಕ ಸಂಬಂಧದ ಕೊಂಡಿಯಾಗಿರುವುದರಿಂದ ನಮ್ಮ ನಿಮೆಲ್ಲರ ಆತ್ಮೀಯತೆಯನ್ನು ಗಟ್ಟಿಗೊಳಿಸಿದೆ.
           ಜಗಲಿಯು ಆಯೋಜಿಸುತ್ತಿರುವ ರಾಜ್ಯಮಟ್ಟದ ಕಥೆ ಮತ್ತು ಕವನ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಾದ ತಾವೆಲ್ಲಾ ಭಾಗವಹಿಸಿ. ಪೋಷಕರು ಹಾಗೂ ಶಿಕ್ಷಕರು ಈ ನಿಟ್ಟಿನಲ್ಲಿ ಎಂದಿನಂತೆ ಪೋತ್ಸಾಹಿಸಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರೇರಣೆ ನೀಡುವಿರೆಂಬ ವಿಶ್ವಾಸ ನಮ್ಮಲ್ಲಿದೆ. ಜಗಲಿಯಿಂದ ಕೊಡ ಮಾಡುವ ಪ್ರಶಸ್ತಿಯು ಒಂದು ವಿಭಾಗದಲ್ಲಿ ಒಬ್ಬ ವಿದ್ಯಾರ್ಥಿಗೆ ಒಂದು ಬಾರಿ ಮಾತ್ರ. ಒಂದು ಬಾರಿ ಕಥಾಸಿರಿ ಪ್ರಶಸ್ತಿ ಅಥವಾ ಕವನಸಿರಿ ಪ್ರಶಸ್ತಿ ಪಡೆದ ಮಗು ಪ್ರತಿ ಬಾರಿ ಆ ವಿಭಾಗದಲ್ಲಿ ಪ್ರಶಸ್ತಿ ಪಡೆಯಲು ಅವಕಾಶ ಗಳಿರುವುದಿಲ್ಲ. ಹಾಗಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಜನಲಿಯ ಪ್ರಶಸ್ತಿಗಳನ್ನು ಪಡೆಯಲು ವಿಪುಲ ಅವಕಾಶಗಳನ್ನು ಒದಗಿಸಿದ್ದೇವೆ. ಪ್ರಶಸ್ತಿ, ಮೆಚ್ಚುಗೆ ಬಹುಮಾನಗಳು ವಿದ್ಯಾರ್ಥಿಗಳ ಅತ್ಮವಿಶ್ವಾಸವನ್ನು ಬಲಗೊಳಿಸುವುದರಿಂದ ಹೆಚ್ಚೆಚ್ಚು ವಿದ್ಯಾರ್ಥಿಗಳು ಈ ಹಾದಿಯಲ್ಲಿ ಸಾಗುವಂತೆ ಪ್ರಯತ್ನಶೀಲರಾಗಿದ್ದೇವೆ.
       ಇಂದಿನ ಸಮಾಜದ ಈ ಸ್ಪರ್ಧಾಯುಗದಲ್ಲಿ ಆಧುನಿಕ ತಂತ್ರಜ್ಞಾನಗಳಿಗೆ ಬಲಿಯಾಗಿ ಓದುವ ಮತ್ತು ಬರೆಯುವ ಸಂಪ್ರದಾಯದಿಂದ ವಿಮುಖರಾಗುತ್ತಿದ್ದಾರೆ ಅನ್ನೋದು ಪ್ರಸ್ತುತ ಸವಾಲು. ಮಕ್ಕಳಲ್ಲಿ ಓದುವ ಮತ್ತು ಬರೆಯುವ ಆಸಕ್ತಿಯನ್ನು ಬೆಳೆಸಬೇಕಾದದ್ದು ನಾವೇ.... ಈ ನಿಟ್ಟಿನಲ್ಲಿ ಇಂತಹ ಒಂದು ಪ್ರಯತ್ನ ಮಕ್ಕಳ ಜಗಲಿಯಿಂದ ಕಳೆದ ನಾಲ್ಕು ವರ್ಷಗಳ ಹಿಂದೆ ಕೊರೊನ ಕಾಲಘಟ್ಟದಿಂದ ಆರಂಭವಾಗಿದೆ. ನಿಮ್ಮೆಲ್ಲರ ಸಹಕಾರ ನಿರಂತರವಾಗಿದೆ. ಸಾಗುವ ಹಾದಿಯಲ್ಲಿ ಕಲೆ, ಸಾಹಿತ್ಯದ ಅಭಿರುಚಿಯನ್ನು ಬೆಳೆಸೋಣ... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************


ಕಳೆದ ಸಂಚಿಕೆಯ ಜಗಲಿಕಟ್ಟೆ - 64 ಅಂಕಣದಲ್ಲಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ವಿದ್ಯಾಕಾರ್ಕಳ ಸಹ ಶಿಕ್ಷಕಿ ..... ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಕಳೆದ ಎರಡು ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....

ನಮಸ್ತೇ,
     ಎಲ್ಲದಕ್ಕೂ ಕಾರಣೀಭೂತವಾದ ಶಕ್ತಿಯೊಂದಿದೆ ಅದೇ ಈಶ್ವರ. ಶಿಕ್ಷಣಾಧಿಕಾರಿ ಜ್ಞಾನೇಶ್ ಸರ್ ರವರಿಂದ ಪಾತಂಜಲ ಮಹರ್ಷಿಯ ಈಶ್ವರ ಪ್ರಣೀದಾನದ ಕುರಿತಾದ ವಿವರಣಾತ್ಮಕ ಲೇಖನ ಸೊಗಸಾಗಿ ಮೂಡಿ ಬಂದಿದೆ.
     ಕುಡಿತದ ಚಟದಿಂದಾಗುವ ದುಷ್ಪರಿಣಾಮಗಳನ್ನು ಉದಾಹರಣೆ ಸಹಿತವಾಗಿ ಬಹಳ ಸೊಗಸಾಗಿ ರಮೇಶ್ ಸರ್ ರವರು ತಿಳಿಸಿದ್ದಾರೆ. ಪ್ರಸ್ತುತ ಕಾಲಘಟ್ಟಕ್ಕೆ ಈ ಬರಹ ಅಗತ್ಯವಿತ್ತು. ಉತ್ತಮ ಸಂಚಿಕೆ ಸರ್.
      ಸಸ್ಯಹಾರ್ಮೋನ್ ಗಳು ಹಾಗೂ ಅವುಗಳ ಕಾರ್ಯಗಳ ಕುರಿತಾಗಿ ಸೊಗಸಾದ ಲೇಖನ ದಿವಾಕರ ಸರ್ ರವರಿಂದ.
      ವಿಜಯ ಮೇಡಂರವರ ಈ ಸಲದ ಸಂಚಿಕೆ ನನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ನೆನಪಿಸಿತು. ಬಹುಶಃ ಈ ಸಂಚಿಕೆ ಗ್ರಾಮೀಣ ಭಾಗದ ಅನೇಕ ವರ್ಷಗಳ ಹಿಂದಿನ ವಿದ್ಯಾಭ್ಯಾಸದ ನೆನಪನ್ನು ನನ್ನಲ್ಲಿ ಮಾತ್ರವಲ್ಲ ಎಲ್ಲರಲ್ಲೂ ಮೂಡಿಸಿರಬಹುದು. ನಾವು ಸ್ಲೇಟು ಉಜ್ಜಲು ಬಳಸಿದ ಗಿಡದ ಉಪಯೋಗ ನೋಡಿದಾಗ ತುಂಬಾ ಅಚ್ಚರಿಯಾದುದಂತೂ ನಿಜ. ಧನ್ಯವಾದಗಳು ಮೇಡಂ.
     ನವರಾತ್ರಿಯ ವಿಶೇಷತೆಯೊಂದಿಗೆ ಈ ಸಲದ ಪಯಣ ಸಂಚಿಕೆಯಲ್ಲಿ ಶ್ರೀ ಕ್ಷೇತ್ರ ಕೊಲ್ಲೂರಿನ ಕುರಿತಾದ ವಿವರವಾದ ಮಾಹಿತಿ ಸಿಕ್ಕಿತು. ಧನ್ಯವಾದಗಳು ರಮೇಶ್ ಸರ್.
      ಕುಂಬಾರನ ಹಂದಿ ನೈಜ ಕಥೆಯ ಸುಂದರ ಪುಸ್ತಕದ ಪರಿಚಯ ವಾಣಿಯಕ್ಕನರಿಂದ.
      ಈ ವಾರದ ಮಕ್ಕಳ ಕವನಗಳಲ್ಲಿ ಅನೇಕ ಮಕ್ಕಳು ಸುಂದರ ಕವನಗಳನ್ನು ರಚಿಸಿದ್ದಾರೆ. ಮಕ್ಕಳೆಲ್ಲರಿಗೂ ಅಭಿನಂದನೆಗಳು.
      ರಮೇಶ್ ಉಪ್ಪುಂದರವರ ಪದದಂಗಳ ಸಂಚಿಕೆ ಚೆನ್ನಾಗಿ ಮೂಡಿಬರುತ್ತಿದೆ.
     ಜಗಲಿಯ ಎಲ್ಲರಿಗೂ ನವರಾತ್ರಿ ಹಬ್ಬದ
ಶುಭಾಶಯಗಳೊಂದಿಗೆ ಪ್ರೀತಿಯ ನಮನಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************


ನಮಸ್ತೇ,
     ಜೀವನವನ್ನು ಸವಿಯಾಗಿಸುವುದು ಅಥವಾ ಕಹಿಯಾಗಿಸುವುದು ನಮ್ಮ ಕೈಯಲ್ಲೇ ಇದೆ. ಜೀವನ ಸುಮಧುರವಾಗಿಸುವುದು, ಸುಂದರವಾಗಿಸುವುದು ಹೇಗೆ ಎನ್ನುವು ಎನ್ನುವುದನ್ನು ವಿವರವಾಗಿ ತಿಳಿಸಿದ್ದಾರೆ ಶಿಕ್ಷಣಾಧಿಕಾರಿ ಜ್ಞಾನೇಶ್ ಸರ್ ರವರು.
      ಮಾನವನ ದೇಹರಚನೆ ಮುಖ್ಯವಲ್ಲ. ಆದರೆ ಆತನ ಗುಣ ನಡತೆ ಸ್ವಭಾವ ಮುಖ್ಯ. ದೇಹ ಸರಿಯಾಗಿದ್ದರೂ ಸದ್ಗುಣಗಳಿಲ್ಲದಿದ್ದಲ್ಲಿ ಎಲ್ಲವೂ ವ್ಯರ್ಥ. ದೇಹರಚನೆಯನ್ನು ಹೀಯಾಳಿಸುವವರಿಗೆ ಕಣ್ತೆರೆಸುವ ಲೇಖನ.
      ಸಸ್ಯ ಹಾರ್ಮೋನ್ ಗಳನ್ನು ಉಪಯೋಗಿಸಿ ತಂತ್ರಜ್ಞಾನದ ಮೂಲಕ ಇಳುವರಿಯನ್ನು ಹೆಚ್ಚಿಸುವುದರ ಜೊತೆಗೆ ಅವುಗಳ ಸಂರಕ್ಷಣೆ ಹೇಗೆ ಅನ್ನುವುದನ್ನು ಬಹಳ ಸೊಗಸಾಗಿ ದಿವಾಕರ ಸರ್ ತಮ್ಮ ಸಂಚಿಕೆಯಲ್ಲಿ ತಿಳಿಸಿದ್ದಾರೆ.
      ನಮ್ಮ ಹಿತ್ತಿಲಲ್ಲೇ ಇದ್ದರೂ ಈ ಗಿಡದ ಸವಿಸ್ತಾರವಾದ ಪರಿಚಯ ಆದದ್ದು ಈ ಸಲದ ಸಂಚಿಕೆಯಲ್ಲಿ. ಕನಕಾಂಬರ ಸಸ್ಯದ ಪರಿಚಯದ ಜೊತೆಗೆ ಉಪಯೋಗದ ಕುರಿತಾಗಿ ಉಪಯುಕ್ತ ಮಾಹಿತಿ ವಿಜಯಾ ಮೇಡಂರವರಿಂದ.
      ರಮೇಶ ಉಪ್ಪುಂದರವರ ಪಯಣ ಸಂಚಿಕೆಯಲ್ಲಿ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರದ ಕುರಿತಾದ ವಿವರಣೆ ಚೆನ್ನಾಗಿ ಮೂಡಿ ಬಂದಿದೆ.
      ಅಪಾಯ ಎದುರಾದಾಗ ಪ್ರಾಣಿಗಳು ಹೂಡುವ ಅಸ್ತ್ರಗಳ ಕುರಿತಾದ ಪುಸ್ತಕ ಗುಬ್ಬಿಯ ಬ್ರಹ್ಮಾಸ್ತ್ರ ಪರಿಚಯ ಚೆನ್ನಾಗಿ ಮೂಡಿ ಬಂದಿದೆ.
     ಮಕ್ಕಳ ಚಿತ್ರಗಳ 3 ಸಂಚಿಕೆಗಳು ಪ್ರಕಟವಾಗಿದ್ದು ಮಕ್ಕಳಿಂದ ಸುಂದರ ಚಿತ್ರಗಳು ಮೂಡಿ ಬಂದಿವೆ. ಚಿತ್ರ ರಚಿಸಿದ ಮಕ್ಕಳೆಲ್ಲರಿಗೂ ಅಭಿನಂದನೆಗಳು.
      ರಮೇಶ್ ರವರ ಪದದಂಗಳ ಸಂಚಿಕೆ ಬಹಳ ಚೆನ್ನಾಗಿ ಮೂಡಿ ಬರುತ್ತಿದೆ.
     ಶಿಕ್ಷಕರ ಡೈರಿಯಲ್ಲಿ ರಮ್ಯಾ ಮೇಡಂ ರವರು ತಮ್ಮ ಅನುಭವವನ್ನು ಸೊಗಸಾಗಿ ಹಂಚಿಕೊಂಡಿದ್ದಾರೆ.
      ಕೊನೆಯದಾಗಿ ಜಗಲಿಯ ಎಲ್ಲರಿಗೂ ನನ್ನ ಹೃತ್ಪೂರ್ವಕ ನಮನಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************


ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************


Ads on article

Advertise in articles 1

advertising articles 2

Advertise under the article