ಮಕ್ಕಳ ಕವನಗಳು : ಸಂಚಿಕೆ - 31
Wednesday, October 2, 2024
Edit
ಮಕ್ಕಳ ಕವನಗಳು : ಸಂಚಿಕೆ - 31
ಜಗಲಿಯ ಮಕ್ಕಳ ಸ್ವರಚಿತ ಕವನಗಳು
ಕವನ ರಚನೆ ಮಾಡಿರುವ ವಿದ್ಯಾರ್ಥಿಗಳು :
◾ ದಿಯಾ ಉದಯ್ ಡಿ ಯು, 6ನೇ ತರಗತಿ
◾ ಪ್ರಾಪ್ತಿ, 9ನೇ ತರಗತಿ
◾ ಸಿದ್ವಿಕ್ ಪೂಜಾರಿ, 7ನೇ ತರಗತಿ
◾ ಸಾತ್ವಿ ಡಿ, 8ನೇ ತರಗತಿ
◾ ಪ್ರಾರ್ಥನಾ ಗೌಡ ಹೆಚ್ ಡಿ, 9ನೇ ತರಗತಿ
◾ ಶೃಷ್ಠಿ ಎ ಶೆಟ್ಟಿ , 10ನೇ ತರಗತಿ
◾ ಜನನಿ ಪಿ, 8ನೇ ತರಗತಿ
◾ ಮನಸ್ ಜೋಗಿ, 3ನೇ ತರಗತಿ
◾ ಜಯಶ್ರೀ, 8ನೇ ತರಗತಿ
ನಿನ್ನಯ ಮುಖವು ಹೀಗೇಕೆ?
ಜನರ ಹಾಗೆ ಅಂದದ ನಗುವು
ನಿನಗೆ ಇಲ್ಲ ಹೀಗೇಕೆ?
ಆನೆಯ ಸೊಂಡಿಲು ದಂತದ ಹಲ್ಲು
ಮೋದಕ ತಿನ್ನುವೆ ಹೇಗೆ?
ಇಲಿಯ ಮೇಲೆ ಕುಳಿತು ನೀನು
ಮಳೆಯಲಿ ಸುತ್ತುವೆ ಹೇಗೆ?
ಚಳಿಯು ಇರಲು ಅಮ್ಮ ನಿನಗೆ
ಟೋಪಿಯ ತೊಡಿಸುವುದು ಹೇಗೆ?
ನಮ್ಮಯ ಹಾಗೆ ಒಮ್ಮೊಮ್ಮೆ ನೀನು
ಚಾಕಲೇಟು ತಿನ್ನುವೆ ಹೇಗೆ?
ಅಮ್ಮ ನಿನಗೆ ಐಸ್ ಕ್ರೀಮ್ ಕೊಡಿಸಲು
ನೆಕ್ಕಿ ತಿನ್ನುವೆ ಹೇಗೆ?
ಬೆಕ್ಕನು ಕಂಡು ಇಲಿಯು ಓಡಲು
ಅದನ್ನು ಹಿಡಿಯುವೆ ಹೇಗೆ?
6ನೇ ತರಗತಿ
ಶ್ರೀ ವ್ಯಾಸ ಮಹರ್ಷಿ ವಿದ್ಯಾ ಪೀಠ,
ಕಿಲ್ಪಾಡಿ, ಮೂಲ್ಕಿ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
******************************************
ನನ್ನ ಬದುಕಲ್ಲಿ
ಸುಂದರವಾದ ಭಾವನೆಗಳನು
ತುಂಬಿದವ ನೀ
ಮನಸ್ಸಿನ ನೋವುಗಳನು
ಮರೆಸಿದವ ನೀ
ಸುಂದರ ಬದುಕನ್ನು
ಕಲ್ಪಿಸಿದವ ನೀ
ನನ್ನ ನಗುವನು
ಹುಡುಕಿದವ ನೀ
ನನ್ನ ಭಾರವನ್ನು
ಇಳಿಸಿದವ ನೀ
ನನ್ನೊಂದಿಗೆ ಇರಬೇಕೆಂದು
ಬಯಸುವೆ
ದೂರದಲ್ಲಿರುವ ನೀನು
ಬರಬಾರದೇ ನನ್ನೊಡನೆ
ಪ್ರತಿಕ್ಷಣ ನೆನೆಯುವೆ ನಿನ್ನನು
ಆದರೆ ನೀನು ಬರುತ್ತಿಲ್ಲ
ಮೌನವಾಗಿ ಕುಳಿತಿರುವೆ
ನಿನ್ನ ನೆನೆದರೆ
ತಂತನಗೆ ಬಂತು ನಗೆ
ನೀನು ಬರುವುದಿಲ್ಲ
ನೀ ಸೃಷ್ಟಿಸಿದ ನಗೆ
ನೀನಿಲ್ಲದೆ ಮರೆಯಾಗಿದೆ
ನನ್ನ ಜೀವನದ ಒಲವು
ನೀನಿರದೆ ಮನಸ್ಸು ಅಳುವುದು
ಕಣ್ಣಾಮುಚ್ಚಾಲೆ ಆಟ ಆಡುತ್ತಿರುವೆ ನೀನೇಕೆ
ನಿನ್ನ ಕಾಣದೆ ನಾನಿಲ್ಲಿ ಸೊರಗಿರುವೆ
ಮಿಂಚಿನ ಬದುಕನು ತೋರಿದ
ನೀನು ಬೇಗ ಬಾ
ನನ್ನೊಡನೆ
ಬೇಗ ಬಾ.......
9ನೇ ತರಗತಿ
ಎಸ್ ವಿ ಟಿ ವನಿತಾ ಪದವಿಪೂರ್ವ
ಕಾಲೇಜು ಕಾರ್ಕಳ (ಪ್ರೌಢ ಶಾಲಾ ವಿಭಾಗ)
ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ
******************************************
ನಮಗೆ ತಂಪನ್ನು ನೀಡುವೆಯ
ಕೃಷಿಕರಿಗೆ ನೀನೆಂದರೆ ತುಂಬಾ ಇಷ್ಟ
ಜೋರಾಗಿ ಬಂದರೆ ಅವರಿಗೆ ಕಷ್ಟ
ನೀನು ಬರುವುದೇ ವರ್ಷದಲ್ಲಿ ಒಂದು ಸಲ ನೀನು ಬರದಿದ್ದರೆ ತಂಪಾಗುವುದು ಹೇಗೆ ನೆಲ?
ನೀನು ಇಲ್ಲಿಗೆ ಬರುವಾಗ ಒಬ್ಬನೇ ಬರದೇ ನಿನ್ನೊಂದಿಗೆ ಗುಡುಗು ಮತ್ತು ಗಾಳಿ ಕೂಡ ತರುವೆ
ನೀನು ಬಂದು ನಮ್ಮ ಮರಗಳನ್ನು ಬೆಳೆಸುತ್ತೀಯ
ಕೆಲವೊಮ್ಮೆ ಸಂಗಮವನ್ನೇ ಮಾಡಿ ಬಿಡುತ್ತೀಯ
ನೀನು ಬಂದರೆ ಮಕ್ಕಳಿಗೆ ತುಂಬಾ ಮಜಾ
ಏಕೆಂದರೆ ಅವರ ಶಾಲೆಗೆ ರಜಾನೆ ರಜಾ....
7ನೇ ತರಗತಿ
ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ
ಶಾಲೆ, ಕುಂದಾಪುರ
ಉಡುಪಿ ಜಿಲ್ಲೆ
******************************************
ತಂಪಾದ ನೆಲದಿಂದ ರಂಗೇರಿತು ಕಳೆ
ಈ ಸುಂದರ ಪ್ರಕೃತಿಯ ನಾ ನೋಡ ಬಯಸುವೆ
ನಾ ನೋಡಿ ಮೈ ಮರೆತು ಈ ಸಾಲು ಹಾಡುವೆ
ಬಾನಾಡಿ ಹಕ್ಕಿಗಳು ಹಾರುತಿವೆ
ಮುದ್ದಾಗಿ ಮೃಗಗಳು ಓಡುತಿವೆ
ಹೊಳೆ ನದಿಗಳು ಹರಿಯುತಿದೆ
ಅದ ನೋಡಿ ನನ್ಮನ ಸೆಳೆಯುತಿದೆ
ಈ ಪ್ರಕೃತಿಯ ಬಗೆ ನಾ ಏನು ಹೇಳಲಿ
ಸ್ವಚ್ಛಂದವಾದ ಈ ವಾತವರಣದಲಿ
ಮನದಲ್ಲಿ ಬಂತು ಹರುಷ ಉಕ್ಕಿ
ಇಲ್ಲಿಗೆ ಇಡುತ್ತಿದ್ದೇನೆ ಒಂದು ಚುಕ್ಕಿ
8ನೇ ತರಗತಿ
ಸರ್ಕಾರಿ ಪ್ರೌಢಶಾಲೆ ಇರ್ದೆ ಉಪ್ಪಳಿಗೆ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಹೋಗುವಾಗ ನಿದ್ರೆಗೆ ಜಾರಿದಾಗ
ಅಪ್ಪ ತಕ್ಷಣವೇ ಎಚ್ಚರ ಮಾಡಿದ ನೆನಪು
ಅಪ್ಪನ ಜೊತೆ ತೋಟಕ್ಕೆ ಹೋದಾಗ
ಸಿಡಿಲಿನ ಶಬ್ದಕ್ಕೆ ಹೆದರಿ ಅಪ್ಪನೆಂದು
ಮರವೊಂದ ತಬ್ಬಿಕೊಂಡ ನೆನಪು
ನನ್ನನ್ನು ಸಲ್ಪ ದಿನ ನೋಡಿಕೊಳ್ಳಲು
ಬೇರೆಯವರ ಮನೆಯಲ್ಲಿ ಬಿಟ್ಟಾಗ
ಅಪ್ಪ ನನ್ನನ್ನು ನೋಡಲು ಬಂದಾಗ ನಾ
ಅವರೊಟ್ಟಿಗೆ ಹೊರಟಾಗ ಇನ್ನೆಂದೂ
ಬೇರೆಯವರ ಮನೆಗೆ ಬಿಡುವುದಿಲ್ಲ
ಎಂದ ಅಪ್ಪನ ನಿರ್ಧಾರದ ನೆನಪು
ನಮ್ಮ ತೋಟದಲ್ಲಿ ಬೆಳೆದ ವಸ್ತುಗಳನ್ನು
ಅಪ್ಪನೊಂದಿಗೆ ಮಾರಾಟ ಮಾಡಲು
ಪೇಟೆಗೆ ಹೋದಾಗ ಸರಿಯಾದ ಬೆಲೆ ಸಿಗದ್ದಿದ್ದಾಗ
ಅಪ್ಪ ಬೇಸರ ಮಾಡಿ ಕೊಂಡಾಗ
ಅವರ ಬೇಸರ ನನಗೆ ಹೇಳದಿದ್ದರೂ
ನನಗೆಲ್ಲಾ ಅರ್ಥ ಆಗಿ
ಮನಸಲ್ಲಿ ನೊಂದು ಕೊಂಡ ನೆನಪು.
9ನೇ ತರಗತಿ
ಮುರಾರ್ಜಿ ವಸತಿ ಶಾಲೆ, ಬ್ಯಾಕರವಳ್ಳಿ
ಸಕ್ಲೇಶಪುರ ತಾಲೂಕು, ಹಾಸನ ಜಿಲ್ಲೆ
******************************************
ತಂದೆ-ತಾಯಿಯರ ಪ್ರೀತಿ
ಅಕ್ಕ-ತಂಗಿಯರ ಪ್ರೀತಿ
ಬಂಧು-ಭಾಂದವರ ಪ್ರೀತಿ
ಪಡೆದವರು
ನೂರಾರು ಮಂದಿ,
ಪಡೆಯಲು ಹಂಬಲಿಸುತ್ತಿರುವವರು
ಸಾವಿರಾರು ಮಂದಿ,
ಅನುಭವಿಸಿದವರಿಗೆ
ತಿಳಿಯದು ಮಮತೆಯ ಸ್ಥಾನ
ಅನುಭವಿಸದವರಿಗೆ ತಿಳಿದರೂ
ಇರದು ಮಮತೆಯ ತಾಣ
ತಿಳಿದುಕೋ ಮಾನವ ತಿಳಿದುಕೋ,
ನಿನ್ನವರ ಮೌಲ್ಯವ ತಿಳಿದುಕೋ,
ಅರಿತುಕೋ ಮಾನವ
ಅರಿತುಕೋ,
ಅಮೂಲ್ಯ ಭಾಂದವ್ಯವ
ಅರಿತುಕೋ,
10ನೇ ತರಗತಿ
ಲಿಟ್ಲ್ ಫ್ಲವರ್ ಪ್ರೌಢಶಾಲೆ ಕಿನ್ನಿಗೋಳಿ
ಮಂಗಳೂರು ಉ. ವಲಯ, ದಕ್ಷಿಣ ಕನ್ನಡ ಜಿಲ್ಲೆ
******************************************
ನೋಡಿದಾಗ ಮನಸ್ಸು ಪಡೆಯುವ ಸಂತೃಪ್ತಿ
ಅನೇಕ ಪ್ರಾಣಿ-ಪಕ್ಷಿಗಳ ನಾಡು
ಮರ-ಗಿಡಗಳ ಬೀಡು
ಕೋಗಿಲೆಗಳ ಸುಂದರ ಸ್ವರದ ನಾದ
ಮನಸ್ಸಿಗೆ ನೀಡುವುದು ಅತ್ಯಾನಂದ
ಪತ್ರ ಪುಷ್ಪಗಳನ್ನು ನೀಡುವ ಬಳ್ಳಿಗಳು
ಹಣ್ಣು ಕಾಯಿಗಳನ್ನು ನೀಡುವ ಮರಗಳು
ಪ್ರಕೃತಿಯಿಂದ ಕಾಲಕ್ಕೆ ಸರಿಯಾಗಿ
ಸುರಿಯುವುದು ಮಳೆ
ಇದರಿಂದ ಸಂತೋಷ ಪಡುವುದು ಇಳೆ
ಪ್ರಕೃತಿ ಸಂಪತ್ತಿನೆಡೆಗೆ ನನ್ನ ಗಮನ
ಇವುಗಳನ್ನು ನೀಡಿದ
ಪ್ರಕೃತಿ ಮಾತೆಗೆ ನನ್ನ ನಮನ
8ನೇ ತರಗತಿ
ಶ್ರೀ ರಾಮಕುಂಜೇಶ್ವರ ಆಂಗ್ಲ
ಮಾಧ್ಯಮ ಶಾಲೆ, ರಾಮಕುಂಜ,
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಅದು ನೋಡಲಿಕ್ಕೆ ಲುಕ್ಕು
ಅವಳು ಕೊಡುವಳು ನನಗೆ ಡ್ರಾಪು
ಹೇಳದೆ ಕೇಳದೆ ಕೊಡಿಸುವಳು ಲಾಲಿ ಪಾಪು
......................................... ಮನಸ್ ಜೋಗಿ
3ನೇ ತರಗತಿ
ಸರಸ್ವತಿ ವಿದ್ಯಾಲಯ ಸಿದ್ದಾಪುರ
ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ
******************************************
ಅದಕ್ಕೆ ಇದೆ ದೊಡ್ಡದಾದ ಬಾಯಿ
ಅದರ ಹೆಸರು ಲಾಚಾ
ಅದು ನಮ್ಮ ಮನೆಯನ್ನು ಕಾಯುವ
ಸುರಕ್ಷಾ ಕವಚ
......................................... ಮನಸ್ ಜೋಗಿ
3ನೇ ತರಗತಿ
ಸರಸ್ವತಿ ವಿದ್ಯಾಲಯ ಸಿದ್ದಾಪುರ
ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ
******************************************
ನನ್ನ ಗೆಳೆಯನ ಹೆಸರು ಕನಸ್
ಅವನ ಗೆಳೆಯ ಯಶಸ್
ನಾನು ಬಯಸುವೆ ಅವರಿಗೆ ಶ್ರೇಯಸ್ಸು
......................................... ಮನಸ್ ಜೋಗಿ
3ನೇ ತರಗತಿ
ಸರಸ್ವತಿ ವಿದ್ಯಾಲಯ ಸಿದ್ದಾಪುರ
ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ
******************************************
ಅದು ಕುಡಿಯುತ್ತದೆ ಹಾಲು ನೆಕ್ಕು
ಅದಕ್ಕೆ ಇಲ್ಲ ಸ್ವಲ್ಪ ಸೊಕ್ಕು
ಅದು ನನ್ನ ಕುಚಿಕ್ಕು.
......................................... ಮನಸ್ ಜೋಗಿ
3ನೇ ತರಗತಿ
ಸರಸ್ವತಿ ವಿದ್ಯಾಲಯ ಸಿದ್ದಾಪುರ
ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ
******************************************
ಅವರು ಕೊಡುವ ಹೋಂವರ್ಕ್ ತುಂಬಾ ಕಷ್ಟ
ಹೇಳಿಕೊಡುತ್ತಾರೆ ಒಳ್ಳೆಯ ಲೆಕ್ಕ
ನಾವು ತೆಗೆಯುತ್ತೇವೆ ಒಳ್ಳೆಯ ಅಂಕ
3ನೇ ತರಗತಿ
ಸರಸ್ವತಿ ವಿದ್ಯಾಲಯ ಸಿದ್ದಾಪುರ
ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ
******************************************
ಬಂದಿತು ಮಳೆ ನೀ ನೋಡ
ಈ ಚಿಟಿ ಚಿಟಿ ಮಳೆಯ ಹನಿಗೆ
ಸೋರದೆ ನನ್ನ ಮನ ಮೆಲ್ಲಗೆ
ಎಲೆಗಳ ಮೇಲೆ ಬೀಳುವಾಗ ನೀರು
ಬೀಸಿತು ಗಾಳಿ ಜೋರು
ಬೀಳುವಾಗ ನೀರ ಹನಿ
ಎಷ್ಟು ಚೆನ್ನ ಅದರ ದನಿ
ಮಳೆಯ ಚಳಿ ಗಾಳಿಗೆ
ತಬ್ಬಿತು ಅಮ್ಮನ ಮಡಿಲ ಮೆಲ್ಲಗೆ
8ನೇ ತರಗತಿ
ಸರಕಾರಿ ಪ್ರೌಢ ಶಾಲೆ ಸರ್ವೆ
ಪುತ್ತೂರು ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************