ಮಕ್ಕಳ ಲೇಖನ : ಚೌತಿ - ಬರಹ : ಸಿಂಧು ಜಿ ಭಟ್ ಕಲ್ಕಾರ್, 7ನೇ ತರಗತಿ
Friday, September 6, 2024
Edit
ಮಕ್ಕಳ ಲೇಖನ : ಚೌತಿ
ಬರಹ : ಸಿಂಧು ಜಿ ಭಟ್ ಕಲ್ಕಾರ್
7ನೇ ತರಗತಿ
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ನನಗೆ ತುಂಬಾ ಇಷ್ಟವಾದ ಹಬ್ಬವಿದು ಶ್ರೀ ಗಣೇಶ ಚೌತಿ. ನನ್ನ ಅಮ್ಮ ನಮಗಾಗಿ ಎಲ್ಲಾ ಹಬ್ಬಗಳನ್ನು ತುಂಬಾ ಅಚ್ಚುಕಟ್ಟಾಗಿ ಎಲ್ಲಾ ಶಾಸ್ರ್ತ ಸಂಪ್ರದಾಯಗಳು ನಮಗೆ ತಿಳಿಯುವಂತೆ ಮಾಡುತ್ತಾಳೆ. ಅಂದರೆ ನಮ್ಮಿಂದ ಮಾಡಿಸುತ್ತಾರೆ. ಬಾದ್ರಪದ ಶುಕ್ಲಪಕ್ಷದ ತದಿಗೆಯಂದು ಗೌರಿ ಪೂಜೆ. ಅಂದು ನಾವೆಲ್ಲರೂ ಮಿಂದು ಹೊಸ ವಸ್ತ್ರಗಳನ್ನುಟ್ಟು ಅಪ್ಪ ಹೇಳಿದ ಸೂಕ್ತ ಮುಹೂರ್ತದಲ್ಲಿ ಬಾವಿಗೆ ಪೂಜೆ ಮಾಡಿ ಒಂದು ಅಲಂಕರಿಸಿದ ಬಿಂದಿಗೆಯಲ್ಲಿ ನೀರನ್ನು ಮನೆಯೊಳಗೆ ತರುವುದು, ಅವಳೇ ಗೌರಿ. ಅವಳಿಗಾಗಿ ಅಲಂಕರಿಸಿದ ಮಂಟಪದಲ್ಲಿ ಕೂರಿಸಿ ಮಖವಾಡವನ್ನಿರಿಸಿ ಚಿನ್ನಾಭರಣಗಳಿಂದ ಅಲಂಕರಿಸಿ ಪೂಜಿಸುವುದು. ಇದು ಹೆಣ್ಣುಮಕ್ಕಳ ಹಬ್ಬವಾದ್ದರಿಂದ ಅಮ್ಮ ಮತ್ತು ನಾನು ಹೆಚ್ಚು ಶ್ರಮಪಡಬೇಕಾಗುತ್ತದೆ. ಅಂದು ಹೋಳಿಗೆ, ಪಾಯಸ, ಕೋಸಂಬರಿ ಊಟ. ಗೌರಿಗೆ ನೈವೇದ್ಯ, ನಂತರ ಐದು ಜನ ಮುತ್ತೈದೆಯರಿಗೆ ಬಾಗೀನ ಅಮ್ಮ ಕೊಡುತ್ತಾಳೆ. (ಬಾಗೀನ : ಅರಶಿಣ, ಕುಂಕುಮ, ಬಳೆ, ಬಾಚಣಿಗೆ, ಕನ್ನಡಿ, ಅಕ್ಕಿ, ಬೆಲ್ಲ, ಬೇಳೆಕಾಳುಗಳು, ರವಿಕೆತುಂಡು ಇತ್ಯಾದಿ) ನಂತರ ಅವರಿಗೆ ಊಟ ಬಡಿಸಿ ನಾವು ಉಣ್ಣುವ ಸಂಭ್ರಮ ತುಂಬಾ ಮಜ.
ಮರುದಿನ ಚೌತಿಯಂದು ಅಪ್ಪ ತಮ್ಮ ಚೌತಿಯ ಮುಹೂರ್ತ ನೋಡಿ ನಮ್ಮಲ್ಲಿರುವ ಬೆಳ್ಳಿಗಣಪತಿಗೆ ಅಭಿಷೇಕಾದಿಗಳನ್ನು ಮಾಡಿ ವಿಷೇಶ ಪೂಜೆ ಮಾಡುತ್ತಾರೆ. ನನಗಂತೂ ಗರಿಕೆ ಹುಲ್ಲು ಕೊಯ್ಯುವ ಕಾಯಕ. ಅಮ್ಮ 108 ಮೋದಕ, ಖರ್ಜಿಕಾಯಿ, ಚಕ್ಕುಲಿ ಹೀಗೆ ತರತರವಾದ ನೈವೇದ್ಯ ತಯಾರಿಸ್ತಾಳೆ. ಗಣೇಶನಿಗೆ ನೈವೇದ್ಯ ಮಾಡಿ ಮದ್ಯಾಹ್ನದ ಹೊತ್ತಿಗೆ ತಿಂಡಿ ತಿಂದು ಗ್ರಾಮದ ಗಣಪತಿ ಪೆಂಡಾಲಿಗೆ ಹೋಗುವುದು. ಅಲ್ಲಿ ಕೂರಿಸಿರುವ ಕೈಲಾಸದಿಂದ ಭುವಿಗಿಳಿದ ಗಣೇಶನನ್ನು ಪೂಜಿಸುವುದು ಇನ್ನೂ ಖುಷಿ. ಅಲ್ಲಿ ಎಲ್ಲರೊಟ್ಟಿಗೆ ಸೇರಿ ಹಾಡು, ಭಜನೆ, ಆಟೋಟದಲ್ಲಿ ಸೇರುವುದೇ ದೊಡ್ಡ ಖುಷಿ. ಪ್ರತಿ ವರ್ಷ ಈ ದಿನ ನನಗೆ ತುಂಬಾ ಇಷ್ಟ. ಹೇಳಲು ತುಂಬಾ ಇದೆ. ಚಿಕ್ಕದಾಗಿ ವಿವರಿಸಿದ್ದೇನೆ. ಜೈ ಗಣೇಶ
7ನೇ ತರಗತಿ
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************