ಜಗಲಿ ಕಟ್ಟೆ : ಸಂಚಿಕೆ - 62
Tuesday, September 3, 2024
Edit
ಜಗಲಿ ಕಟ್ಟೆ : ಸಂಚಿಕೆ - 62
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
ಮಕ್ಕಳ ಜಗಲಿ
www.makkalajagali.com
ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ
ನಿಮ್ಮೂರ ಶಾಲೆಯ ಸುದ್ದಿಯಲ್ಲಿ ಶ್ರೇಯ, ಪ್ರಥಮ ಪಿಯುಸಿ, ಸರಕಾರಿ ಪದವಿಪೂರ್ವ ಕಾಲೇಜು ಅಳದಂಗಡಿ, ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ ಇವರು ಬರೆದಿರುವ ಶಿರ್ಲಾಲು ಪ್ರಾಥಮಿಕ ಶಾಲೆಯ ವೈಶಿಷ್ಟ್ಯಗಳ ಕುರಿತಾದ ಬರಹ ಅಚ್ಚುಮೆಚ್ಚಾಗಿತ್ತು.
ಶ್ರೀ ಕೃಷ್ಣಜನ್ಮಾಷ್ಟಮಿಯ ಕುರಿತಾಗಿ ಮಕ್ಕಳು ರಚಿಸಿದ ಶ್ರೀ ಕೃಷ್ಣನ ಕಲಾಕೃತಿಗಳ ಸಂಚಿಕೆ ಸೊಗಸಾಗಿ ಮೂಡಿಬಂದಿದ್ದವು. ಚಿತ್ರಗಳ ಸಂಚಿಕೆ 549ರಲ್ಲಿ ವಿದ್ಯಾರ್ಥಿಗಳಾದ ಐಶ್ವರ್ಯ ಸುರೇಶ್ ಅಣ್ವೇಕರ್, ಹಿಮಾಂಶು ವಿಶ್ವಕರ್ಮ, ಲಕ್ಷಿತ್ ಕುಮಾರ್, ಕೆ ಸ್ಪೂರ್ತಿ, ಅಕ್ಷಯ್ ಎಸ್ ಆಚಾರ್ಯ, ಸಮೃದ್ಧಿ ಮತ್ತು ಶ್ರೇಯಸ್, ರಾಜಶ್ರೀ, ಹಾಗೂ ಶ್ರಾವ್ಯ ಬಿ ಕೆ ತುಂಬಾ ಸುಂದರವಾದ ಚಿತ್ರಗಳನ್ನು ರಚಿಸಿದ್ದಾರೆ.
ಅದೇ ರೀತಿ ಶ್ರೀ ಕೃಷ್ಣನ ಕುರಿತಾಗಿ ಬರೆದಿರುವ ಕವನಗಳು ಕೂಡ ಶ್ರೀಕೃಷ್ಣನ ಲೀಲೆಯನ್ನು ಹಾಡಿಹೊಗಳುವ ಸುಂದರ ಕವನಗಳು ಪ್ರಕಟವಾಗಿದ್ದವು. ಕಾವ್ಯಶ್ರೀ, ದ್ವಿತೀಯ ಪಿಯುಸಿ (ವಿಜ್ಞಾನ), ಪಯಸ್ವಿನಿ. ಬಿ, 9ನೇ ತರಗತಿ ಮತ್ತು ಋತ್ವಿಕ್ ಮೊಳೆಯಾರ್, 7ನೇ ತರಗತಿ ಇವರುಗಳು ಶ್ರೀ ಕೃಷ್ಣನ ಕುರಿತಾಗಿ ತಮ್ಮ ಭಾವನೆಗಳನ್ನು ಕವನದ ಮೂಲಕ ಪ್ರಕಟಪಡಿಸಿದರು.
ಚಿತ್ರಗಳ ಸಂಚಿಕೆಗೆ 550ರ ಸಂಭ್ರಮ. ತನ್ನ ಪ್ರಾಥಮಿಕ ತರಗತಿಯಿಂದಲೇ ಮಕ್ಕಳ ಜಗಲಿಯಲ್ಲಿ ನಿರಂತರವಾಗಿ ಭಾಗವಹಿಸುತ್ತಿದ್ದ ಬಂಟ್ವಾಳ ತಾಲೂಕಿನ ವಾಮದಪದವು ಪ್ರೌಢಶಾಲೆಯ ಅನುಷಾ ವಾಲ್ಡರ್ ಇವರ ಸುಮಾರು 20ಕ್ಕಿಂತಲೂ ಅಧಿಕ ಚಿತ್ರಗಳು ಈ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ಸುಂದರವಾಗಿ ಚಿತ್ರಗಳನ್ನು ರಚನೆ ಮಾಡುವ ಇವರ ಕೌಶಲ್ಯ ಪ್ರಶಂಸನೀಯ.
551ರ ಮಕ್ಕಳ ಚಿತ್ರಗಳ ಸಂಚಿಕೆಯಲ್ಲಿ ಕಿರಿಯ ಪ್ರಾಥಮಿಕ ತರಗತಿಯ ಸುಮಾರು 9 ಪುಟಾಣಿ ವಿದ್ಯಾರ್ಥಿಗಳು ಚಿತ್ರ ರಚಿಸಿದ್ದರು. ಮಕ್ಕಳ ಚಿತ್ರಗಳನ್ನು ವಿಮರ್ಶಿಸುವುದಕ್ಕಿಂತ ನೋಡುವುದೆ ಚೆಂದ. ಸ್ವಾತಂತ್ರೋತ್ಸವ ಹಾಗೂ ಇನ್ನಿತರ ಸಂಭ್ರಮಗಳ ಕುರಿತಾದ ಚಿತ್ರಗಳು ಮನಮೋಹಕವಾಗಿತ್ತು.
552 ರ ಮಕ್ಕಳ ಚಿತ್ರಗಳ ಸಂಚಿಕೆಯಲ್ಲಿ ತನ್ವಿ ಜಿ ಸಾಲಿಯಾನ್, 3ನೇ ತರಗತಿ, ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ, ಪರಂಗಿಪೇಟೆ, ಅರ್ಕುಳ, ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ ಇವರ ವೈಯಕ್ತಿಕ ಚಿತ್ರಗಳ ಸಂಚಿಕೆ ಪ್ರಕಟವಾಗಿತ್ತು. ಸುಮಾರು 10 ಚಿತ್ರಗಳಿಗಿಂತ ಹೆಚ್ಚು ಅತ್ಯುತ್ತಮ ಚಿತ್ರಗಳನ್ನು ಕಳುಹಿಸುವ ವಿದ್ಯಾರ್ಥಿಗಳ ಪ್ರತ್ಯೇಕ ಸಂಚಿಕೆ ಮಾಡುತ್ತೇವೆ. ತನ್ವಿ ಇನ್ನೂ 3ನೇ ತರಗತಿ ಪುಟಾಣಿ. ಕಳೆದೆರಡು ವರ್ಷಗಳಿಂದ ನಿರಂತರವಾಗಿ ಭಾಗವಹಿಸುತ್ತಿದ್ದ ಈಕೆ ಸುಂದರ ಚಿತ್ರಗಳನ್ನು ಕಳುಹಿಸಿ ಎಲ್ಲರ ಮನ ಗೆದ್ದಿದ್ದಾಳೆ.
ಸ್ವರಚಿತ ಕಥೆ ಬರೆದಿರುವ ಮಕ್ಕಳ ಜಗಲಿಯ ಮಕ್ಕಳ ಕಥೆಗಳು ಸಂಚಿಕೆ -11ರಲ್ಲಿ ಪ್ರಕಟವಾಗಿದ್ದವು. ಜಯಶ್ರೀ, 8ನೇ ತರಗತಿ, ಸಿಂಧು ಜಿ ಭಟ್, ಕಲ್ಕಾರ್, 7ನೇ ತರಗತಿ, ದಿಶಾನ್ ರೈ, 9ನೇ ತರಗತಿ, ಪ್ರಾರ್ಥನಾ ಗೌಡ ಎಚ್ ಡಿ, 9ನೇ ತರಗತಿ, ವಚನ್ ಸಿ, 4ನೇ ತರಗತಿ, ರಶ್ಮಿ ಎಂ, 5ನೇ ತರಗತಿ ಇವರು ಬರೆದಿರುವ ಎಲ್ಲಾ ಕಥೆಗಳು ತನ್ನ ಕಲ್ಪನೆ, ಹಾಗೂ ಬರೆಯುವ ಪ್ರೌಢಿಮೆಯನ್ನು ಪ್ರಕಟಿಗೊಳಿಸಿದ್ದವು.
ಮಕ್ಕಳ ನಿರಂತರ ಭಾಗವಹಿಸುವಿಕೆ ಮಕ್ಕಳ ಜಗಲಿಯನ್ನು ಇನ್ನೂ ಸಂಭ್ರಮಗೊಳಿಸುತ್ತದೆ. ಅಭಿನಂದನೆಗಳು ಎಲ್ಲಾ ವಿದ್ಯಾರ್ಥಿಗಳಿಗೆ. ಹಿರಿಯರ ಬರಹಗಳಂತು ಒಂದನ್ನೊಂದು ಮೀರಿಸುವ ಹಾಗೆ ಮಾದರಿಯಾಗಿ ಜಗಲಿಯ ಎಲ್ಲರಿಗೂ ಪ್ರೇರಣೆಯಾಗಿದೆ. ಹಿರಿಯರ ದಾರಿಯಲ್ಲಿ ಮಕ್ಕಳು ಬೆಳೆಯಲು ಮಕ್ಕಳ ಜಗಲಿ ಒಂದು ಸುವರ್ಣಾವಕಾಶವಾಗಿದೆ.
ಎಂದಿನಂತೆ ಈ ಬಾರಿಯೂ ಮಕ್ಕಳ ಜಗಲಿಯಲ್ಲಿ ಮೂರನೇ ವರ್ಷದ ರಾಜ್ಯಮಟ್ಟದ ಕಥೆ ಮತ್ತು ಕವನ ಸ್ಪರ್ಧೆಗಳನ್ನು ಆಯೋಜಿಸಲಿದ್ದೇವೆ. ವಿವರಗಳನ್ನು ಸದ್ಯದಲ್ಲಿಯೇ ಕಳುಹಿಸುತ್ತೇವೆ. ತಾವೆಲ್ಲರೂ ಎಂದಿನಂತೆ ಸಹಕರಿಸಿ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವಂತಾಗಲಿ. ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
Mob : 9844820979
******************************************
ಕಳೆದ ಸಂಚಿಕೆಯ ಜಗಲಿಕಟ್ಟೆ - 61 ಅಂಕಣದಲ್ಲಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ರಮ್ಯಾ ಆರ್ ಭಟ್ - ಸಹ ಶಿಕ್ಷಕಿ..... ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಕಳೆದ ಎರಡು ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....
ಶಿಕ್ಷಕರ ಸ್ಕೂಲ್ ಡೈರಿ ಅಂಕಣದಲ್ಲಿ ರಮ್ಯಾ ಆರ್ ಭಟ್ , ಸಹ ಶಿಕ್ಷಕಿ, ಸರಸ್ವತಿ ವಿದ್ಯಾಲಯ ಸಿದ್ದಾಪುರ, ಕುಂದಾಪುರ, ಉಡುಪಿ ಜಿಲ್ಲೆ ಇವರು ಬರೆದಿರುವ 'ಶಿಕ್ಷಕಿಯನ್ನು ರಾವಣನಿಗೆ ಹೋಲಿಸಿದ ಬಾಲಕಿ' ಸುಂದರವಾದ ಅರ್ಥವತ್ತಾದ ಅನುಭವ ಓದಿ ತುಂಬಾ ಖುಷಿ ಆಯಿತು.... ಮಕ್ಕಳ ಮನಸ್ಸಿನಲ್ಲಿ ನಮ್ಮ ಬಗ್ಗೆ ಇರುವ ಕಲ್ಪನೆ ಕಲ್ಪನಾತೀತ ವಾಗಿದೆ. ನಮ್ಮ ಈ ಜಂಜಾಟದಲ್ಲಿ ನಾವು ಅದನ್ನು ಅರ್ಥ ಮಾಡಿಕೊಳ್ಳಲು ಸೋಲುತ್ತೇವೆ.
.............................................. ಶಾಂತಾ ಎಸ್
ಹಿಂದಿ ಭಾಷಾ ಶಿಕ್ಷಕರು
ಸರಕಾರಿ ಪ್ರೌಢಶಾಲೆ, ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು, ದ.ಕ ಜಿಲ್ಲೆ
******************************************
ಮಕ್ಕಳ ಜಗಲಿಯ ಪ್ರಿಯ ಓದುಗರಿಗೆಲ್ಲರಿಗೂ ನನ್ನ ನಮಸ್ಕಾರಗಳು.. ಓದಿ ಕಲಿ, ನೋಡಿ ತಿಳಿ, ಎನ್ನುವ ನಮ್ಮ ಹಿರಿಯರ ಗಾದೆ ಮಾತಿನಂತೆ, ಮಕ್ಕಳ ಜಗಲಿಯ ಬರಹಗಾರರ ಲೇಖನಗಳು, ಹಲವು ವಿಷಯಗಳ ಪರಿಚಯ ಹಾಗೂ ಅವುಗಳ ವಿಶ್ಲೇಷಣೆ ತುಂಬಾ ಸಹಾಯಕಾರಿಯಾಗಿವೆ..
ವಿಜಯ. ಬಿ. ಶೆಟ್ಟಿ. ಅವರು ಪರಿಚಯಿಸಿ ಕೊಡುವ ಸಸ್ಯ ಸಂಕುಲದ ಇತಿಹಾಸ ತುಂಬಾ ಚೆನ್ನಾಗಿದೆ. ನಾವು ಕಣ್ಣು ಹಾಯಿಸಿದ ಕಡೆ ಎಲ್ಲ ಸಸ್ಯಗಳು ಇವೆ, ಆದರೆ ಅವುಗಳ ಉಪಯೋಗ ಎಲ್ಲರಿಗೂ ತಿಳಿದಿರುವುದಿಲ್ಲ. ಅಂತಹ ಸಸ್ಯಗಳ ವಿಚಾರ ಹಾಗೂ ಅವುಗಳ ಪ್ರಯೋಜನಗಳನ್ನು ತುಂಬಾ ಅದ್ಭುತವಾಗಿ ನೀಡುತ್ತಾರೆ. ಕಳೆದ ವಾರದ ಲಾವಂಚ ಗಿಡದ ಮಹತ್ವ ಹಾಗೂ ಅದರ ಉಪಯೋಗಗಳು ಮತ್ತು ಈ ವಾರದ ಆನೆ ಪಾದ, ನೆಲಮುಚ್ಚಿಲು ಸಸ್ಯದ ಪರಿಚಯ, ಅವುಗಳ ಅನೇಕ ರೀತಿಯ ಹೆಸರುಗಳು ತಿಳಿಸಿಕೊಟ್ಟಿದ್ದಾರೆ. ಈ ಸಲಹೆಗಳು ತುಂಬಾ ಉಪಕಾರಿಯಾಗಿವೆ..
ಹಾಗೆ, ದಿವಾಕರ ಶೆಟ್ಟಿ ಹೆಚ್.. ಸರ್ ಇವರು ತಿಳಿಸಿಕೊಟ್ಟಿರುವ, ಕಣಜ ಮತ್ತು ಜೇನುಹುಳುಗಳ ವ್ಯತ್ಯಾಸ ಮತ್ತು ಅವುಗಳ ಗುಣ ಲಕ್ಷಣಗಳು ತುಂಬಾ ಉಪಯುಕ್ತವಾಗಿವೆ. ರಮೇಶ್ ಎಂ ಬಾಯಾರು ಸರ್ ಅವರ ಸ್ಫೂರ್ತಿಯ ಮಾತುಗಳಂತು ವಾಸ್ತವಿಕ ಸತ್ಯವನ್ನು ಹೇಳುತ್ತವೆ. ಅವರು ನೀಡಿರುವ ನಮ್ಮ ಹಿರಿಯರ ಆಹಾರ ಪದ್ಧತಿ ಹಾಗೂ ಈಗಿನ ನಮ್ಮ ಆಹಾರ ಪದ್ದತಿ ವಿಚಾರಗಳು ಮಾತ್ರ ನಾವು ಯೋಚಿಸಬೇಕಾದ ವಿಚಾರವೇ ಸರಿ. ನಮ್ಮ ಹಿರಿಯರ ಸಲಹೆಗಳನ್ನು ಎಲ್ಲವನ್ನು ಪಾಲಿಸಲು ಈಗಿನ ಜೀವನ ಶೈಲಿಯಲ್ಲಿ ಕಷ್ಟವಾದರೂ, ಕೆಲವು ಅಂಶಗಳನ್ನು ನಾವು ಪಾಲಿಸುವ ಪ್ರಯತ್ನ ಪಡುವುದು ಅಗತ್ಯ. ಕಾರಣ ಆರೋಗ್ಯವೇ ಭಾಗ್ಯ. ಇವರೆಲ್ಲರೂ ನೀಡಿರುವ ಸಲಹೆ ಸೂಚನೆಗಳಲ್ಲಿ ನಮ್ಮ ಆರೋಗ್ಯವೇ ಅಡಗಿದೆ. ಹೊಸ ಹೊಸ ವಿಚಾರಗಳನ್ನು ತಿಳಿಯಲು ಮನಸ್ಸಿಗೆ ತುಂಬಾ ಸಂತೋಷವಾಗುತ್ತದೆ. ಮಕ್ಕಳ ಜಗಲಿ ಬರೀ ಮಕ್ಕಳಿಗೆ ಮಾತ್ರವಲ್ಲ ದೊಡ್ಡವರಿಗೂ ಸಹ ಒಂದು ಪಾಠಶಾಲೆಯೇ ಆಗಿದೆ. ಧನ್ಯವಾದಗಳು
ಸಹ ಶಿಕ್ಷಕಿ.
ಸರಸ್ವತಿ ವಿದ್ಯಾಲಯ ಸಿದ್ದಾಪುರ
ಕುಂದಾಪುರ, ಉಡುಪಿ ಜಿಲ್ಲೆ
Mob: +91 96634 64621
*******************************************
ನಮಸ್ತೇ,
ಏನೇ ಕಷ್ಟಗಳು ಬಂದರೂ ಅದನ್ನು ಸಹಿಸುವ ಸಾಮರ್ಥ್ಯ ನಮ್ಮಲ್ಲಿದ್ದಾಗ ನಾವು ಮತ್ತಷ್ಟು ಸದೃಢರಾಗುತ್ತೇವೆ. ಇದು ತಪಸ್ಸು. ಪಾತಂಜಲ ಮಹರ್ಷಿಯ ತಪಸ್ಸಿನ ಕುರಿತಾದ ಸುಂದರ ವಿಶ್ಲೇಷಣೆ ಶಿಕ್ಷಣಾಧಿಕಾರಿ ಜ್ಞಾನೇಶ್ ಸರ್ ರವರಿಂದ. ಧನ್ಯವಾದಗಳು ಸರ್.
ತುಳುನಾಡಲ್ಲಿ ಆಟಿ ತಿಂಗಳು ವಿಶೇಷವಾದ ತಿಂಗಳು. ಹಿಂದಿನ ಕಾಲದಲ್ಲಿ ಆಟಿಯ ದಿನಗಳಲ್ಲಿ ಪಡುವ ಕಷ್ಟಗಳ ಕುರಿತು ಹಾಗೂ ಆಟಿ ತಿಂಗಳ ಮಹತ್ವದ ಕುರಿತಾಗಿ ಸೋಗಸಾದ ಲೇಖನ ರಮೇಶ್ ಸರ್ ರವರಿಂದ.
ಸಸ್ಯಗಳ ನೀರು ಮತ್ತು ಆಹಾರ ಸಾಗಾಣಿಕೆಯಲ್ಲಿ - ಪ್ಲೋಯಮ್ ಅಂಗಾಂಶದ ಮೂಲಕ ಆಹಾರ ಸಾಗಾಣಿಕಾ ವಿಧಾನವನ್ನು ದಿವಾಕರ ಸರ್ ರವರು ಅರ್ಥವತ್ತಾಗಿ ಸರಳವಾಗಿ ವಿವರಿಸಿದ್ದಾರೆ.
ಹುಲ್ಲು ಜಾತಿಯ ಗಿಡವಾದ ಲಾವಂಚದ ಕುರಿತಾದ ಸುಂದರ ಲೇಖನ. ಜೊತೆಗೆ ಹುಲ್ಲು ಜಾತಿಯ ಸಸ್ಯಗಳು ಫಲವತ್ತಾದ ಮೇಲ್ಮಣ್ಣನ್ನು ಸಂರಕ್ಷಿಸಲು ಹೇಗೆ ಸಹಾಯಕ ಎಂಬುದನ್ನು ತಿಳಿಸಿದ್ದಾರೆ ವಿಜಯಾ ಮೇಡಂರವರು ಈ ಸಲದ ಸಂಚಿಕೆಯಲ್ಲಿ.
ರಮೇಶ್ ಉಪ್ಪುಂದರ ಪಯಣ ಸಂಚಿಕೆಯಲ್ಲಿ ಬನವಾಸಿಯ ಕುರಿತಾದ ಪ್ರವಾಸ ಕಥನ ಸೊಗಸಾಗಿ ಮೂಡಿ ಬಂದಿದೆ.
ಜನರೊಂದಿಗೆ ವನ್ಯ ಜೀವ ಎನ್ನುವ ಒಂದು ಸುಂದರವಾದ ಪುಸ್ತಕದ ಪರಿಚಯ ಈ ಸಲ ವಾಣಿಯಕ್ಕನವರಿಂದ. ಧನ್ಯವಾದಗಳು ಮೇಡಂ.
ಶಿಕ್ಷಕರ ಡೈರಿಯಲ್ಲಿ ರಮ್ಯಾ ಮೇಡಂ ರವರು ಶಿಕ್ಷಕರ ಬಗ್ಗೆ ಮಗುವಿನ ಒಳ್ಳೆಯ ಭಾವನೆ ಕುರಿತಾದ ಅನುಭವ ತುಂಬಾ ಅದ್ಭುತವಾಗಿತ್ತು.
ರಮೇಶ್ ಉಪ್ಪುಂದ ರವರ ಈ ವಾರದ ಪದಗಳ ಹುಡುಕಾಟದ ಪದದಂಗಳ ಸೊಗಸಾಗಿ ಮೂಡಿ ಬಂದಿದೆ.
ಶ್ರೇಯಾರವರು ನಮ್ಮೂರ ಶಾಲೆಯ ಸುದ್ದಿ ಸಂಚಿಕೆಯಲ್ಲಿ ಅವಳ ಶಾಲೆಯ ಕುರಿತಾದ ವಿಚಾರಗಳನ್ನು ಚಿಕ್ಕದಾಗಿ ಚೊಕ್ಕವಾಗಿ ಹಂಚಿಕೊಂಡ್ಡಿದ್ದಾರೆ. ಅಭಿನಂದನೆಗಳು ಶ್ರೇಯಾ. ಮಕ್ಕಳ ಕವನಗಳಲ್ಲಿ ಎಲ್ಲಾ ಮಕ್ಕಳು ಚೆನ್ನಾಗಿ ಕವನ ರಚಿಸಿದ್ದಾರೆ. ಅಭಿನಂದನೆಗಳು ಎಲ್ಲಾ ಮಕ್ಕಳಿಗೆ.
ಕೊನೆಯದಾಗಿ ಎಲ್ಲರಿಗೂ ಮನದಾಳದ ಕೃತಜ್ಞತೆಗಳು.
.......................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************
ಎಲ್ಲರಿಗೂ ನಮಸ್ಕಾರಗಳು,
ಸ್ವತಃ ಓದುವ ಮೂಲಕ ಜ್ಞಾನಾರ್ಜನೆ ಹೇಗೆ ಸಾಧ್ಯ ಎನ್ನುವುದನ್ನು ಪಾತಂಜಲ ಮಹರ್ಷಿಯ ಸ್ವ- ಅಧ್ಯಾಯದ ಕುರಿತಾದ ವಿವರಣಾತ್ಮಕ ಲೇಖನದ ಮೂಲಕ ಪರಿಚಯಿಸಿದ್ದಾರೆ ಶಿಕ್ಷಣಾಧಿಕಾರಿ ಜ್ಞಾನೇಶ್ ಸರ್ ರವರು.
ಆಟಿಯ ಕುರಿತಾದ ಮುಂದುವರಿದ ಲೇಖನದಲ್ಲಿ ಆಟಿಯ ಆಹಾರ ಪದ್ಧತಿ, ಆಟಿ ಕಳೆಂಜ ವೇಷದ ವೈಶಿಷ್ಠ್ಯ ಮುಂತಾದ ಅನೇಕ ಆಟಿಯ ವಿಚಾರಗಳ ಕುರಿತಾಗಿ ಬೆಳಕು ಚೆಲ್ಲಿದ ಲೇಖನ ರಮೇಶ್ ಸರ್ ರವರಿಂದ. ಧನ್ಯವಾದಗಳು ಸರ್.
ದಿವಾಕರ ಸರ್ ರವರ ಈ ಸಲದ ವೈಜ್ಞಾನಿಕ ಸಂಚಿಕೆಯಲ್ಲಿ ಜೇನು ನೊಣ ಹಾಗೂ ಕಣಜದ ಕೀಟದ ಚುಚ್ಚುವಿಕೆಗೆ ಇರುವ ವ್ಯತ್ಯಾಸದ ಕುರಿತು ವಿವರವಾದ ಮಾಹಿತಿ ಸಿಕ್ಕಿತು.
ಹುಲ್ಲೆಂದೋ, ಕಳೆಗಿಡ ಎಂದೋ ಅನೇಕ ಸಸ್ಯಗಳು ನಾಶವಾಗಿ ಅಳಿವಿನಂಚಿಗೆ ಸೇರುವ ಸಂದರ್ಭದಲ್ಲಿ ನೆಲ ಸಂರಕ್ಷಕ ನೆಲಮುಚ್ಚಿಲು ಸಸ್ಯದ ಅರ್ಥ ಪೂರ್ಣ ವಿವರಣಾತ್ಮಕ ಲೇಖನ ವಿಜಯ ಮೇಡಂರವರಿಂದ. ಧನ್ಯವಾದಗಳು ಮೇಡಂ.
ರಮೇಶ್ ಉಪ್ಪುಂದರವರ ಪಯಣ ಸಂಚಿಕೆಯಲ್ಲಿ ಮಂಡಗದ್ದೆ ಪಕ್ಷಿಧಾಮದ ಕುರಿತಾದ ವಿವರವಾದ ಮಾಹಿತಿ ಸುಂದರ ಛಾಯಾ ಚಿತ್ರಗಳೊಂದಿಗೆ ಮುದ ನೀಡಿತು.
ಪ್ರಾಣಿಗಳ ಮನೆಗಳ ಕುರಿತಾದ ತುಂಬಾ ಕುತೂಹಲಕಾರಿ ಪುಸ್ತಕದ ಪರಿಚಯ ಈ ವಾರ ವಾಣಿಯಕ್ಕನವರಿಂದ.
ಈ ವಾರ ಮಕ್ಕಳ ಜಗಲಿಯಲ್ಲಿ ಮಕ್ಕಳ ಚಿತ್ರಗಳು, ಕವನಗಳು, ಕಥೆಗಳು ಪ್ರಕಟ ಗೊಂಡಿದ್ದು ತುಂಬಾ ಸಂತೋಷದ ವಿಚಾರ.
ಎಲ್ಲಾ ಮಕ್ಕಳಿಗೂ ಅಭಿನಂದನೆಗಳು.
ರಮೇಶ್ ಉಪ್ಪುಂದರವರ ಪದದಂಗಳ ಸಂಚಿಕೆ ಚೆನ್ನಾಗಿ ಮೂಡಿ ಬರುತ್ತಿದೆ.
ಜಗಲಿಯ ಎಲ್ಲರಿಗೂ ನನ್ನ ಮನದಾಳದ ಕೃತಜ್ಞತೆಗಳು.
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************
ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ಶಾಂತಾ ಎಸ್ ಹಿಂದಿ ಭಾಷಾ ಶಿಕ್ಷಕರು, ರಮ್ಯಾ ಆರ್ ಭಟ್ - ಸಹ ಶಿಕ್ಷಕಿ, ಇವರಿಗೆ ಧನ್ಯವಾದಗಳು.
ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
Mob : 9844820979
******************************************