ಪ್ರೀತಿಯ ಪುಸ್ತಕ : ಸಂಚಿಕೆ - 130
Friday, September 27, 2024
Edit
ಪ್ರೀತಿಯ ಪುಸ್ತಕ
ಸಂಚಿಕೆ - 130
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಬಾಪು ಎಂಬ ಮಾನವಪ್ರೀತಿಯ ಮಕ್ಕಳೇ.... ಬಾಪೂ.. ಮೋಹನದಾಸ ಕರಮಚಂದ ಗಾಂಧಿ ಬಗ್ಗೆ ಅನೇಕ ಪುಸ್ತಕಗಳು ಇವೆ. ಒಂದೊಂದು ಪುಸ್ತಕ ಓದುವಾಗಲೂ ಅವರ ಬಗ್ಗೆ ಹೆಚ್ಚಿನ ಅರಿವು, ಚಿಂತನೆ ಸಿಗುತ್ತದೆ. ಬಾಪೂ ಹೇಗೆ ‘ಅಹಿಂಸೆ’ ಮತ್ತು ‘ಸತ್ಯ’ ವನ್ನು ಅಚಲವಾಗಿ ನಂಬಿದ್ದರು ಮತ್ತು ತಮ್ಮ ಜೀವನದಲ್ಲಿ ತೋರಿಸಿಕೊಟ್ಟರು ಎಂಬ ಸುಂದರವಾದ ವಿವರ ಈ ಪುಸ್ತಕದಲ್ಲಿ ಸಿಗುತ್ತದೆ. ಗಾಂಧಿಗಿರಿಯನ್ನು ಜಗತ್ತಿನಾದ್ಯಂತ ಅನುಸರಿಸಿದ ಅನೇಕ ಮಹಾನ್ ವ್ಯಕ್ತಿಗಳ ಪರಿಚಯವನ್ನೂ ಈ ಪುಸ್ತಕದ ಕೊನೆಯಲ್ಲಿ ಕೊಟ್ಟಿದ್ದಾರೆ. ಈ ಗಾಂಧಿಗಿರಿ ಅಂದರೆ ಏನು, ನಮ್ಮ ಬದುಕಿನಲ್ಲಿ ಅವನ್ನು ನಾವು ಹೇಗೆ ಅಳವಡಿಸಬಹುದು ಎಂಬುದನ್ನೂ ನೀವು ಯೋಚಿಸಬಹುದು. ಹಿಂಸೆ, ದ್ವೇಷ ಹೆಚ್ಚುತ್ತಿರುವ ಈ ಕಾಲದಲ್ಲಿ ಬಾಪೂ ಜೊತೆಗೆ ಮಕ್ಕಳು ಒಡನಾಡುವುದು ಬಹಳ ಅಗತ್ಯ. ಅದಕ್ಕಾಗಿ ಅವರ ಬಗೆಗಿನ ಬೇರೆ ಬೇರೆ ಪುಸ್ತಕಗಳನ್ನು ಓದಬೇಕು.
ಲೇಖಕರು: ಸುಭದ್ರಾ ಸೆನ್ ಗುಪ್ತಾ
ಚಿತ್ರಗಳು: ನೀತಾ ಗಂಗೋಪಾಧ್ಯಾಯ
ಅನುವಾದ: ಜಯಶ್ರೀ ದೇಶಪಾಂಡೆ
ಪ್ರಕಾಶಕರು: ಪ್ರಥಮ್ ಬುಕ್ಸ್
ಬೆಲೆ: ರೂ.25/- (2008ರಲ್ಲಿ ಈ ಬೆಲೆ ಇತ್ತು, ಈಗ ಬದಲಾಗಿರಬಹುದು)
6-7ನೇ ತರಗತಿಯವರು ಓದಿಕೊಳ್ಳಬಹುದು. ಇನ್ನೂ ದೊಡ್ಡ ಮಕ್ಕಳಿಗೂ ಆಸಕ್ತಿ ಹುಟ್ಟಿಸುವ ಹಾಗೆ ಇದೆ. ಚಿಕ್ಕ ಮಕ್ಕಳಿಗೂ ಓದಿ ಹೇಳಬಹುದು.
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: 080 – 42052574/41159009; www.prathambooks.org; www.storyweaver.org.in.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************