ಪ್ರೀತಿಯ ಪುಸ್ತಕಸ : ಸಂಚಿಕೆ - 128
Friday, September 13, 2024
Edit
ಪ್ರೀತಿಯ ಪುಸ್ತಕ
ಸಂಚಿಕೆ - 128
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.... ಇದೊಂದು ಜನಪದ ಕಥೆ. ಹೆಸರು ಕೇಳುವಾಗಲೇ ಇದೊಂದು ಕಾಲ್ಪನಿಕ ಜಗತ್ತನ್ನು ತೋರಿಸುತ್ತದೆ ಅಂತ ಗೊತ್ತಾಗುತ್ತದೆ. ಮ್ಯಾಜಿಕ್ ಲೋಕ. ಅಪ್ಪನ ಆಸ್ತಿಯಲ್ಲಿ ಚಿಕ್ಕ ಮಗನಾದ ತಮ್ಮಣ್ಣನಿಗೆ ಅವನ ಅಣ್ಣಂದಿರು ಕೊಡುವುದು ಒಂದು ‘ಹರಿದ ಕಂಬಳಿ’ ಮಾತ್ರ. ಆ ಹರಿದ ಕಂಬಳಿಗೆ ಇರುವ ಅದ್ಭುತ ಮಾಂತ್ರಿಕ ಶಕ್ತಿಯಿಂದ ತಮ್ಮಣ್ಣ ಇರುವೆ ಲೋಕಕ್ಕೆ ಹೋಗುತ್ತಾನೆ. ಇರುವೆ ರಾಜಕುಮಾರಿಯ ಸ್ನೇಹ ಆಗುತ್ತದೆ. ಅವನ ಬದುಕು ಚೆನ್ನಾಗಿ ಆಗುತ್ತದೆ. ಅಣ್ಣಂದಿರು ಅವನಿಗೆ ಕೆಟ್ಟದು ಮಾಡಿದ್ದರೂ ಕೂಡಾ ಅವನಿಗೆ ಅಣ್ಣಂದಿರ ಬಗ್ಗೆ ಕಾಳಜಿ ಇರುತ್ತದೆ. ಅವರಿಗೆ ಒಳ್ಳೆಯದು ಮಾಡಲು ಏನೇನೋ ಸಾಹಸಕ್ಕೆ ಕೈಹಾಕುತ್ತಾನೆ. ಈ ಸಾಹಸದ ದಾರಿಯಲ್ಲಿ ಅವನು ಎದುರಿಸುವ ಅಪಾಯಗಳೇನು? ಅವನಿಗೆ ಯಾರೆಲ್ಲಾ ಸಹಾಯ ಮಾಡುತ್ತಾರೆ.. ಎಂಬ ರೋಚಕ ಕಥೆಯನ್ನು ಓದಿ ನೋಡಿ.. ಪುಟ್ಟ ಪುಸ್ತಕ, ದೊಡ್ಡ ಅಕ್ಷರಗಳು ಅಲ್ಲಲ್ಲಿ ಒಂದಷ್ಟು ಚಿತ್ರಗಳು ಇವೆ.
ಲೇಖಕರು: ಮತ್ತೂರು ಸುಬ್ಬಣ್ಣ
ಚಿತ್ರಗಳು: ಗೌರವ ಬಸು, ಮೋಹನ್ ಮೈಸೂರು
ಪ್ರಕಾಶಕರು: ಅನು ಪ್ರಕಾಶನ, ಬೆಂಗಳೂರು
ಬೆಲೆ: ರೂ.120/-
6-7ನೇ ತರಗತಿಯವರು ಓದಿಕೊಳ್ಳಬಹುದು.
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: ಅನು ಪ್ರಕಾಶನ, ಬೆಂಗಳೂರು 9448205956, basu1101@gmail.com
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************