-->
ಪ್ರೀತಿಯ ಪುಸ್ತಕ : ಸಂಚಿಕೆ - 127

ಪ್ರೀತಿಯ ಪುಸ್ತಕ : ಸಂಚಿಕೆ - 127

ಪ್ರೀತಿಯ ಪುಸ್ತಕ
ಸಂಚಿಕೆ - 127
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ 
                 
               
                                   ದುಗ್ಗಾ 
ಪ್ರೀತಿಯ ಮಕ್ಕಳೇ.... ದುಗ್ಗಾ ಒಂದು ನಾಯಿ. ಅವಳಿಗೆ ಖುಶಿ ಖುಶಿಯಾಗಿ ಇರಬೇಕು. ಹೊಸ ಹೊಸತು ಬೇಕು. ತಿನ್ನುತ್ತಾಳೆ, ಆಡುತ್ತಾಳೆ.. ನಿದ್ದೆ ಮಾಡುತ್ತಾಳೆ. ಆದರೆ ಒಮ್ಮೆ ಅವಳ ಖುಶಿಯ ಜೀವನಕ್ಕೆ ಪೆಟ್ಟು ಬೀಳುತ್ತದೆ. ಬೆಂಗಳೂರಿನ ಬೀದಿಯೊಂದರಲ್ಲಿ ಅಪಘಾತಕ್ಕೆ ಒಳಗಾಗುತ್ತಾಳೆ. ತುಂಬಾ ಕಷ್ಟ ಪಡುತ್ತಾಳೆ. ಆದರೆ ಅಂತಹ ಬದುಕಿನಿಂದಲೂ ಅವಳು ಹೊರಗೆ ಬರುತ್ತಾಳೆ. ಪಶುವೈದ್ಯರೊಬ್ಬರು ಅವಳಿಗೆ ಸರಿಯಾದ ಚಿಕಿತ್ಸೆ ನೀಡುತ್ತಾರೆ. ಸಂತೋಷ, ಪ್ರೀತಿಯನ್ನು ದುಗ್ಗಾ ಮತ್ತೆ ಪಡೆಯುತ್ತಾಳೆ. ಈ ಪುಸ್ತಕ ಓದುವಾಗ ನಮಗೆ ನಮ್ಮ ಜವಾಬ್ದಾರಿಯ ಅರಿವಾಗುತ್ತದೆ. ನಗರ ಪ್ರದೇಶಗಳಲ್ಲಿ ಪ್ರಾಣಿಗಳಿಗೆ ಬಹಳ ಕಷ್ಟ. ವಾಹನಗಳ ಓಡಾಟ ಜೋರಾಗಿರುತ್ತದೆ. ನಮ್ಮಿಂದ ಪ್ರಾಣಿಗಳಿಗೆ ಅಪಾಯ ಆಗದ ಹಾಗೆ ನಾವು ನೋಡಿಕೊಳ್ಳಬೇಕು. ಎಲ್ಲಾದರೂ ಗಾಯಗೊಂಡ ಪ್ರಾಣಿಗಳು ಕಂಡು ಬಂದರೆ ಸಹಾಯ ಮಾಡುವ ದಾರಿಗಳನ್ನು ನಾವು ಹುಡುಕಲು ಸಾಧ್ಯವಾದರೆ ಎಷ್ಟು ಚೆನ್ನಾಗಿರುತ್ತದೆ. ಅಲ್ಲವೇ?  
ಲೇಖಕರು: ರಾಜೀವ್ ಐಪ್ 
ಚಿತ್ರಗಳು: ರಾಜೀವ್ ಐಪ್ 
ಅನುವಾದ: ತನುಜಾ ಜಕ್ಕಣ್ಣವರ್  
ಪ್ರಕಾಶಕರು: ಪ್ರಥಮ್ ಬುಕ್ಸ್
ಬೆಲೆ: ರೂ.105/-
ಇದು ಚಿತ್ರಕಥಾ ಪುಸ್ತಕ.. ಪ್ರಥಮ್ ನವರ ಪ್ರಕಾರ ಇದು ಹಂತ 3 ರ ಪುಸ್ತಕ. ಈಗಾಗಲೇ ಓದುವ ಸಾಮರ್ಥ್ಯ ಬೆಳೆಸಿಕೊಂಡ ಮಕ್ಕಳಿಗೆ ಸೂಕ್ತವಾಗಿದೆ. ಚಿತ್ರವನ್ನೆ ಓದುವ ಕಾರಣ ಆಸಕ್ತಿ ಇರುವ ಯಾರೂ ಓದಬಹುದು.
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: 080 – 42052574/41159009; www.prathambooks.org; www.storyweaver.org.in. 
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
****************************************** 


Ads on article

Advertise in articles 1

advertising articles 2

Advertise under the article